ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಇಲ್ಲದವರನ್ನು ವಾಟ್ಸ್ ಆಪ್ ಗ್ರೂಪಿಗೆ ಸೇರಿಸುವುದು ಹೇಗೆ ಗೊತ್ತಾ?

By Gizbot Bureau
|

ಫೇಸ್ ಬುಕ್ ಮಾಲೀಕತ್ವದ ಇನ್ಸೆಂಟ್ ಮೆಸೇಜಿಂಗ್ ಫ್ಲ್ಯಾಟ್ ಫಾರ್ಮ ವಾಟ್ಸ್ ಆಪ್ ಜಗತ್ತಿನಾದ್ಯಂತ ಅತೀ ಹೆಚ್ಚು ಮಂದಿ ಬಳಕೆ ಮಾಡುವ ಚಾಟ್ ಆಪ್ ಆಗಿದೆ.ಚಾಟ್ ನಲ್ಲಿ ಹಲವು ಫೀಚರ್ ಗಳಿಂದ್ದು ವಾಯ್ಸ್, ವೀಡಿಯೋ ಚಾಟ್ ಇತ್ಯಾದಿ ಆಯ್ಕೆಗಳಿವೆ.ಯಾವುದೇ ಮಾಹಿತಿಯನ್ನು ಹಲವು ಮಂದಿಯೊಂದಿಗೆ ಹಂಚಿಕೊಳ್ಳಬೇಕು ಎಂಬ ಸಂದರ್ಬದಲ್ಲಿ ಗ್ರೂಪ್ ಚಾಟ್ ಫೀಚರ್ ಬಹಳ ಪ್ರಯೋಜನಕಾರಿಯಾಗಿದೆ ಅಥವಾ ಯಾವುದೇ ಒಂದು ವಿಚಾರದ ಬಗ್ಗೆ ಸ್ನೇಹಿತರ ಜೊತೆಗೆ, ಕುಟುಂಬದ ಜೊತೆಗೆ, ಬ್ಯುಸಿನೆಸ್ ಸಹದ್ಯೋಗಿಗಳ ಜೊತೆಗೆ, ಸಹಪಾಠಿಗಳ ಜೊತೆಗೆ ಚರ್ಚಿಸುವುದಕ್ಕೆ ಈ ಫೀಚರ್ ಅನುಕೂಲಕರವಾಗಿದೆ.

ವಾಟ್ಸ್ ಆಪ್ ಗ್ರೂಪಿಗೆ ಕಾಂಟ್ಯಾಕ್ಟ್ ನಲ್ಲಿ ಇಲ್ಲದವರನ್ನು ಸೇರಿಸುವುದಕ್ಕೆ ಹೀಗೆ ಮ

ವಾಟ್ಸ್ ಆಪ್ ನಲ್ಲಿ ಗ್ರೂಪ್ ನಿರ್ಮಿಸುವುದು ಹೇಗೆ ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇದೆ. ಒಮ್ಮೆ ಗ್ರೂಪ್ ತಯಾರಿಸಿದ ನಂತರ ಅದಕ್ಕೆ ನೀವು ಸದಸ್ಯರನ್ನು ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಿಂದ ಸೇರಿಸಬೇಕು. ಅಂದರೆ ಗ್ರೂಪ್ ಅಡ್ಮಿನ್ ಮೊದಲು ಆ ಎಲ್ಲಾ ಸದಸ್ಯರ ಕಾಂಟ್ಯಾಕ್ಟ್ ನ್ನು ತಮ್ಮ ಲಿಸ್ಟ್ ನಲ್ಲಿ ಸೇವ್ ಮಾಡಿಕೊಳ್ಳಬೇಕು ಮತ್ತು ನಂತರ ಅವರನ್ನು ಗ್ರೂಪಿಗೆ ಸೇರಿಸಬೇಕು ಎಂಬುದು ನಿಜಕ್ಕೂ ಕಷ್ಟಕರವಾಗಿರುವ ಕೆಲಸ. ಒಂದು ವೇಳೆ ಗ್ರೂಪ್ ನಲ್ಲಿ ಅನೇಕ ಮಂದಿಯನ್ನು ಸೇರಿಸುವುದಾದರೆ ಖಂಡಿತ ಇದು ಕಠಿಣವಾಗಿರುವ ಕೆಲಸವಾಗಿದೆ.

ಒಂದು ವೇಳೆ ಕಾಂಟ್ಯಾಕ್ಟ್ ಮಾಹಿತಿಯನ್ನು ತಮ್ಮ ಕಾಂಟ್ಯಾಕ್ಟ್ ನಲ್ಲಿ ಸೇವ್ ಮಾಡಿಕೊಳ್ಳದೆಯೂ ಕೂಡ ಗ್ರೂಪಿಗೆ ಸೇರಿಸುವ ಅವಕಾಶವಿದ್ದರೆ ಹೇಗೆ? ಖಂಡಿತ ಅವಕಾಶವಿದೆ. ವಾಟ್ಸ್ ಆಪ್ ನಲ್ಲಿ ಇದನ್ನು ಸಾಧಿಸುವುದಕ್ಕೆ ಸಾಧ್ಯವಿದೆ. ಹೊಸದಾದ ಅಪ್ ಡೇಟ್ ನಲ್ಲಿ ವಾಟ್ಸ್ ಆಪ್ ಗ್ರೂಪ್ ಇನ್ವೈಟ್ ಲಿಂಕ್ ಫೀಚರ್ ನ್ನು ಸೇರಿಸಿದೆ. ಇದು ನಿಮಗೆ ಪ್ರತಿಯೊಬ್ಬ ವ್ಯಕ್ತಿಯ ಕಾಂಟ್ಯಾಕ್ಟ್ ಮಾಹಿತಿಯನ್ನು ಲಿಸ್ಟ್ ನಲ್ಲಿ ಸೇರಿಸಿಕೊಳ್ಳದೆಯೂ ಕೂಡ ಗ್ರೂಪ್ ಗೆ ಅವರನ್ನು ಸೇರಿಸುವುದಕ್ಕೆ ಅವಕಾಶ ನೀಡುತ್ತದೆ.

ಹಾಗಾದ್ರೆ ಇದನ್ನು ಮಾಡುವುದು ಹೇಗೆ ಎಂದು ಕೇಳುತ್ತಿದ್ದೀರಾ? ಅದಕ್ಕೆ ಹಂತಹಂತವಾಗಿರುವ ಉತ್ತರ ಇಲ್ಲಿದೆ ನೋಡಿ.

ಪ್ರಮುಖ ಅಗತ್ಯತೆಗಳು:

• ನಿಮ್ಮ ಡಿವೈಸ್ ನಲ್ಲಿ ವಾಟ್ಸ್ ಆಪ್ ನ ನೂತನ ವರ್ಷನ್ ಇನ್ಸ್ಟಾಲ್ ಆಗಿರಬೇಕು .

• ಇನ್ವೈಟ್ ಲಿಂಕ್ ನ್ನು ಕ್ರಿಯೇಟ್ ಮಾಡುವುದಕ್ಕಾಗಿ ಬಳಕೆದಾರರಿಗೆ ಅಡ್ಮಿನ್ ರೈಟ್ಸ್ ನಿರ್ಧಿಷ್ಟ ಗ್ರೂಪಿಗೆ ಇರಬೇಕಾಗುತ್ತದೆ.

ಅನುಸರಿಸಬೇಕಾಗಿರುವ ಹಂತಗಳು:

1. ಹೋಮ್ ಸ್ಕ್ರೀನ್ ನಿಂದ ಅಥವಾ ಲಾಂಚರ್ ಬಳಸಿ ವಾಟ್ಸ್ ಆಪ್ ಮೆಸೇಂಜರ್ ಆಪ್ ನ್ನು ಲಾಂಚ್ ಮಾಡಿ.

2. ಗ್ರೂಪ್ ಕಾನ್ವರ್ಸೇಷನ್ ವಿಂಡೋ ಗೆ ತೆರಳಿ.

3. ಸ್ಕ್ರೀನಿನ ಬಲಭಾಗದ ಕಾರ್ನರ್ ನಲ್ಲಿರುವ ಮೂರು ಚುಕ್ಕಿಗಳನ್ನು ಟ್ಯಾಪ್ ಮಾಡಿ.

4. ಗ್ರೂಫ್ ಇನ್ಫೋ ಆಯ್ಕೆಯನ್ನು ತೆರೆಯಿರಿ.

5. ಸ್ಕ್ರೋಲ್ ಡೌನ್ ಮಾಡಿ ಮತ್ತು “ಇನ್ವೈಟ್ ವಯಾ ಲಿಂಕ್” ಆಯ್ಕೆಯನ್ನು ಟ್ಯಾಪ್ ಮಾಡಿ.

6. ಇದು ನಿಮಗೆ ಈಗ ಇನ್ವೈಟ್ ಲಿಂಕ್ ನಿರ್ಮಿಸಲಾಗಿದೆ ಎಂಬ ಮೆಸೇಜ್ ನೀಡುತ್ತದೆ ಮತ್ತು ಅದರ ಕೆಳಗೆ ಆಯ್ಕೆ ಮಾಡುವುದಕ್ಕೆ ನಾಲ್ಕು ಆಪ್ಶನ್ ಗಳಿರುತ್ತದೆ—ವಾಟ್ಸ್ ಆಪ್ ಮೂಲಕ ಲಿಂಕ್ ಕಳುಹಿಸುವುದಕ್ಕೆ, ಲಿಂಕ್ ಕಾಪಿ ಮಾಡುವುದಕ್ಕೆ, ಲಿಂಕ್ ಶೇರ್ ಮಾಡುವುದಕ್ಕೆ ಮತ್ತು ಲಿಂಕ್ ನ್ನು ರಿವೋಕ್ ಮಾಡುವ ಆಯ್ಕೆ ಇರುತ್ತದೆ.

7. ನೀವು ಯಾರನ್ನು ಗ್ರೂಪಿಗೆ ಸೇರಿಸಬೇಕು ಅಂದುಕೊಳ್ಳುತ್ತಿರೋ ಅವರಿಗೆ ಈ ಲಿಂಕ್ ನ್ನು ಸೆಂಡ್ ಮಾಡಿ.

Best Mobiles in India

English summary
How to add people to WhatsApp groups without saving them on your contacts

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X