ಆಂಡ್ರಾಯ್ಡ್‌ನಲ್ಲಿ ನಿಮ್ಮದೇ ರಿಂಗ್‌ಟೋನ್‌ ಸೌಂಡ್‌ ಸೇರಿಸುವುದು ಹೇಗೆ?

By Suneel
|

ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್ ಪ್ರಖ್ಯಾತ ವೇದಿಕೆ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳು ಹೆಚ್ಚು ನಿಯಂತ್ರಣ ಫೀಚರ್‌ಗಳನ್ನು ಬಳಕೆದಾರರಿಗೆ ಒದಗಿಸುತ್ತವೆ. ಅಲ್ಲದೇ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ವಾಲ್‌ಪೇಪರ್‌ನಿಂದ ಹಿಡಿದು ಲಾಂಚರ್'ವರೆಗೂ ಸಹ ಬಳಕೆದಾರರೇ ಬದಲಿಸುವಂತಹ ಅವಕಾಶಗಳಿವೆ. ಆದರೆ ಇದುವರೆಗೂ ಸಹ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಸುವ ಎಕ್ಸ್‌ಪರ್ಟ್‌ಗಳಿಗೆ ತಿಳಿಯದ ಟ್ರಿಕ್ಸ್‌ ಎಂದರೆ ತಮ್ಮದೇ ಆದ ರಿಂಗ್‌ಟೋನ್‌ ಮತ್ತು ನೋಟಿಫಿಕೇಶನ್ ಸೌಂಡ್‌ ಸೇರಿಸುವುದು. ಆದ್ದರಿಂದ ಗಿಜ್‌ಬಾಟ್‌ ಲೇಖನದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ತಮ್ಮದೇ ಆದ ರಿಂಗ್‌ಟೋನ್‌ ಮತ್ತು ನೋಟಿಫಿಕೇಶನ್‌ ಸೌಂಡ್‌ ಸೇರಿಸುವುದು ಹೇಗೆ ಎಂದು ತಿಳಿಸುತ್ತಿದ್ದೇವೆ.

ಹಂತ 1

ಹಂತ 1

ಮೊದಲಿಗೆ ನೀವು ಸೇರಿಸಬೇಕು ಎಂದುಕೊಂಡ ಸಾಂಗ್ ಮತ್ತು ಸೌಂಡ್ ಬೀಟ್‌ಗಳ ಫೈಲ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. ಅಥವಾ ಈಗಾಗಲೇ ಅಂತಹ ಸೌಂಡ್‌ಬೀಟ್‌ಗಳು ಇದ್ದರೂ ಪರವಾಗಿಲ್ಲ. ಈ ಫೈಲ್‌ಗಳು mp3,m4a,wav ಫಾರ್ಮ್ಯಾಟ್‌ಗಳಲ್ಲಿ ಇರುಬೇಕು.

ಹಂತ 2

ಹಂತ 2

ನೀವು ಸಾಂಗ್‌ ಅಥವಾ ಸೌಂಡ್‌ ಬೀಟ್‌ಗಳಲ್ಲಿ ನಿರ್ಧಿಷ್ಟವಾದ ಸೌಂಡ್‌ ಬೇಕು ಎಂದಾದಲ್ಲಿ ಸೌಂಡ್‌ ಅನ್ನು 'ಸಾಂಗ್‌ ಕಟ್ಟರ್' ಆಪ್‌ ಬಳಸಿ ಕತ್ತರಿಸಿಕೊಳ್ಳಿ. ಕತ್ತರಿಸಿಕೊಂಡ ಸೌಂಡ್‌ ಅನ್ನು ಒಂದು ಫೋಲ್ಡರ್‌ನಲ್ಲಿ ಇಡಿ.
ಸಾಂಗ್ ಕಟ್ಟರ್ ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ.

 ಹಂತ 3

ಹಂತ 3

ಈ ಹಂತದಲ್ಲಿ ನಿಮ್ಮ ಡಿವೈಸ್‌ಗಳಲ್ಲಿ ರಿಂಗ್‌ಟೋನ್‌ ಮತ್ತು ನೋಟಿಫಿಕೇಶನ್‌ ಫೋಲ್ಡರ್ ಚೆಕ್‌ ಮಾಡಿ. ನಂತರ ಫೋಲ್ಡರ್‌ಗೆ ನೀವು ನಿಮ್ಮದೇ ಆದ ರಿಂಗ್‌ಟೋನ್‌ ಮತ್ತು ನೋಟಿಫಿಕೇಶನ್ ಸೌಂಡ್‌ಗಳನ್ನು ನಕಲಿಸಿ(COPY) ಮಾಡಿ ಪೇಸ್ಟ್‌(Paste) ಮಾಡಿ. "ರಿಂಗ್‌ಟೋನ್‌ ಮತ್ತು ನೋಟಿಫಿಕೇಶನ್‌" ಫೋಲ್ಡರ್ ಇಲ್ಲ ಎಂದಾದಲ್ಲಿ ಅದೇ ರೀತಿ ಹೆಸರು ನೀಡಿ ಫೋಲ್ಡರ್‌ ರಚಿಸಿ ಅದರಲ್ಲಿ ಸೌಂಡ್‌ ಕ್ಲಿಪ್‌ಗಳನ್ನ ಪೇಸ್ಟ್‌ ಮಾಡಿ.

ಹಂತ 4

ಹಂತ 4

ಫೋನ್‌ ರಿಬೂಟ್‌ ಮಾಡಿ ನಂತರ ಸೆಟ್ಟಿಂಗ್ಸ್‌ ಓಪನ್‌ ಮಾಡಿ ನೋಟಿಫೀಕೇಶನ್‌ ಅಥವಾ ರಿಂಗ್‌ಟೋನ್ಸ್‌ ಸೆಟ್ಟಿಂಗ್ಸ್‌ಗೆ ಹೋಗಿ. ಅಲ್ಲಿ ನಿಮ್ಮ ಡಿವೈಸ್ ಈಗ ಹಂತ- 3'ರಲ್ಲಿ ಸೇವ್‌ ಮಾಡಿದ ಸೌಂಡ್‌ ಕ್ಲಿಪ್‌ಗಳನ್ನ ಗುರುತಿಸುತ್ತದೆ. ಅಲ್ಲಿನ ಸೌಂಡ್‌ ಕ್ಲಿಪ್‌ಗಳಲ್ಲಿ ನಿಮಗೆ ಬೇಕೆನಿಸಿದ ಸೌಂಡ್‌ ಕ್ಲಿಪ್‌ಗಳನ್ನು ಆಯ್ಕೆ ಮಾಡಿ ನೋಟಿಫಿಕೇಶನ್‌ ಮತ್ತು ರಿಂಗ್‌ಟೋನ್‌ ಆಗಿ ಸೇರಿಸಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಸ್ಮಾರ್ಟ್‌ಫೋನ್‌ ಬಳಕೆದಾರರೇ ನಿಮ್ಮ ಕಣ್ಣುಗಳು ಜೋಪಾನ!!ಸ್ಮಾರ್ಟ್‌ಫೋನ್‌ ಬಳಕೆದಾರರೇ ನಿಮ್ಮ ಕಣ್ಣುಗಳು ಜೋಪಾನ!!

ಫೇಸ್‌ಬುಕ್‌ ಬಳಕೆದಾರರು ಬಾಯ್‌ ಹೇಳಲೇಬೇಕಾದ ಚಟುವಟಿಕೆಗಳುಫೇಸ್‌ಬುಕ್‌ ಬಳಕೆದಾರರು ಬಾಯ್‌ ಹೇಳಲೇಬೇಕಾದ ಚಟುವಟಿಕೆಗಳು

ಪ್ರಪಂಚದಾದ್ಯಂತ ಸುತ್ತಾಡಿ ಪ್ರತಿ ದೇಶದಲ್ಲಿ ತೆಗೆದ ಸುಂದರಿಯರ ಫೋಟೋಗಳುಪ್ರಪಂಚದಾದ್ಯಂತ ಸುತ್ತಾಡಿ ಪ್ರತಿ ದೇಶದಲ್ಲಿ ತೆಗೆದ ಸುಂದರಿಯರ ಫೋಟೋಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
How to Add your Own Ringtones and Notifications Sound on Android. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X