Subscribe to Gizbot

ಉಪಯೋಗಕಾರಿ ಫೀಚರ್ ಹೊಂದಿರುವ ಒಂಭತ್ತು ಡಿವೈಸ್‌ಗಳು

Written By:

ಸ್ಮಾರ್ಟ್‌ಫೋನ್‌ಗಳು ನಮ್ಮ ದಿನನಿತ್ಯದ ಜೀವನದಲ್ಲಿ ಹೆಚ್ಚು ಪ್ರಮುಖ ಅತ್ಯವಶ್ಯಕ ಸಾಧನವಾಗಿ ಮಾರ್ಪಟ್ಟಿದೆ. ಅದಾಗ್ಯೂ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ಅದ್ಭುತ ಫೀಚರ್‌ಗಳನ್ನೊಳಗೊಂಡು ಬರುತ್ತಿದ್ದು ಇದರಿಂದ ಬಳಕೆದಾರರು ಫೋನ್‌ಗಳಿಗೆ ಇನ್ನಷ್ಟು ಆಕರ್ಷಿತರಾಗುತ್ತಿದ್ದಾರೆ. ಹಾಗಿದ್ದರೆ ನಿಮಗೆ ಹೆಚ್ಚು ಉಪಯೋಗಕಾರಿಯಾಗಿರುವ ಫೀಚರ್‌ಗಳು ಯಾವ ಫೋನ್‌ನಲ್ಲಿದೆ ಎಂಬ ಗೊಂದವೇ? ಆ ಚಿಂತೆ ಬಿಡಿ ಇಂದಿನ ಲೇಖನದಲ್ಲಿ ಇದಕ್ಕೆ ಪರಿಹಾರವಿದೆ.

ಯಾವ ಸ್ಮಾರ್ಟ್‌ಫೋನ್‌ನಲ್ಲಿ ಎಂತಹ ಫೀಚರ್‌ಗಳು ಇವೆ ಎಂಬುದನ್ನೇ ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ತಿಳಿಸುತ್ತಿದ್ದು ಇದರಿಂದ ಆ ಫೋನ್ ನಿಮ್ಮ ಬಳಿ ಇದೆ ಎಂದಾದಲ್ಲಿ ನಿಜಕ್ಕೂ ನೀವು ಭಾಗ್ಯವಂತರೇ. ಬನ್ನಿ ಅದು ಏನು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಮ್ಯಾಕ್ಸ್ ಅನ್‌ಲಾಕ್

#1

ಭಾರತೀಯ ಸ್ಮಾರ್ಟ್‌ಫೋನ್ ಕಂಪೆನಿ ಉತ್ತಮ ಹಾರ್ಡ್‌ವೇರ್‌ನೊಂದಿಗೆ ಕಡಿಮೆ ಬೆಲೆಯಲ್ಲಿ ಫೋನ್‌ಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ. ಮೈಕ್ರೋಮ್ಯಾಕ್ಸ್‌ನ ಕ್ಯಾನ್‌ವಾಸ್ ಸಿರೀಸ್ ಹೆಚ್ಚು ಜನಪ್ರಿಯ ಎಂದೆನಿಸಿದೆ. ಕ್ಯಾನ್‌ವಾಸ್ 4 ನಲ್ಲಿ ಹೆಚ್ಚು ರೋಚಕವಾದ ಫೀಚರ್ ಒಂದನ್ನು ಇವರು ಪ್ರಸ್ತುತಪಡಿಸಿದ್ದು ಫೋನ್‌ನ ಕೆಳಭಾಗದಲ್ಲಿ ಊದಿಬಿಡುವುದರ ಮೂಲಕ ಇದನ್ನು ಅನ್‌ಲಾಕ್ ಮಾಡಬಹುದಾಗಿದೆ.

ಐಬಾಲ್ ಏಂಡಿ ಪ್ರಾಜೆಕ್ಟರ್ ಫೋನ್

#2

ಫೋನ್‌ನಲ್ಲಿ ಚಲನ ಚಿತ್ರಗಳನ್ನು ವೀಕ್ಷಿಸುವುದು ಸರ್ವೇಸಾಮಾನ್ಯವಾಗಿದೆ. ಆದರೆ ಪ್ರಾಜೆಕ್ಟರ್ ನೆರವಿನಿಂದ ಈ ವೀಕ್ಷಣೆಯನ್ನು ಇನ್ನಷ್ಟು ಆರಾಮದಾಯಕವಾಗಿ ಮಾಡಬಹುದು ಐಬಾಲ್ ಆಂಡಿ 4 ಎ ಪ್ರಾಜೆಕ್ಟರ್‌ನೊಂದಿಗೆ ಬಂದಿದ್ದು ವಿಜಿಎ ಪ್ರಾಜೆಕ್ಟರ್ ಅನ್ನು ಅನುಮತಿಸುತ್ತದೆ.

ಫ್ರೀಡಮ್ 251

#3

ಈ ಫೋನ್ ನಿಜಕ್ಕೂ ದಿಗ್ಙೂಢಗೊಳಿಸುವ ಬೆಲೆ ರೂ 250 ಕ್ಕೆ ಬಂದಿದ್ದು ಇನ್ನೂ ಇದು ಶಿಪ್ಪಿಂಗ್ ಅನ್ನು ಪ್ರಾರಂಭಿಸದೇ ಇದ್ದರೂ, ಪ್ರಿ ಬುಕ್ಕಿಂಗ್ ಮತ್ತು ಹೆಚ್ಚಿನ ವಿವಾದಗಳಿಗೆ ಸಿಲುಕಿದೆ.

ಯೋಟಾಫೋನ್ ಡ್ಯುಯಲ್ ಡಿಸ್‌ಪ್ಲೇ

#4

ರಷ್ಯಾದ ಫೋನ್ ತಯಾರಕರು ಫೋನ್ ಬ್ಯಾಟರಿ ಡ್ರೈ ಆಗುವುದಕ್ಕೆ ಪರಿಹಾರದೊಂದಿಗೆ ಬಂದಿದ್ದು ಹೆಚ್ಚುವರಿ ಬ್ಯಾಟರಿಯನ್ನು ಸೇರಿಸುವುದರ ಬದಲಿಗೆ ಇಲ್ಲವೇ ಫಾಸ್ಟ್ ಚಾರ್ಜಿಂಗ್ ಅನ್ನು ಮಾಡುವುದರ ಹೊರತಾಗಿ ಫೋನ್‌ನ ಹಿಂಭಾಗದಲ್ಲಿ ಡಿಸ್‌ಪ್ಲೇಯನ್ನು ಹೊಂದಿಸಿದ್ದಾರೆ. ಈ ಇ - ಇಂಕ್ ಡಿಸ್‌ಪ್ಲೇ ಪೂರ್ಣ ಬ್ಲೌನ್ ಆಂಡ್ರಾಯ್ಡ್ ಫೋನ್‌ನಂತೆ ಕಾಣುತ್ತಿದ್ದು ಎಲ್ಲರ ಗಮನವನ್ನೂ ಸೆಳೆದಿದೆ.

ನೋಕಿಯಾದ ಟಿಯರ್ ಆಕಾರದ ಫೋನ್

#5

ನೋಕಿಯಾ ಈ ಹಿಂದೆ ಅದ್ಭುತ ಹ್ಯಾಂಡ್‌ಸೆಟ್‌ಗಳನ್ನು ಪ್ರಸ್ತುತಪಡಿಸಿತ್ತು ಅಲ್ಲವೇ? 2003 ರಲ್ಲಿ ಕಂಪೆನಿ ನೋಕಿಯಾ 7600 ಅನ್ನು ಸಾದರಪಡಿಸಿದ್ದು ಇದರ ಕೀಬೋರ್ಡ್ ನಿಜಕ್ಕೂ ಅದ್ಭುತವಾಗಿತ್ತು.

ಸ್ಯಾಮ್‌ಸಂಗ್ ಐ ಸ್ಕ್ರಾಲಿಂಗ್

#6

ವಿಶ್ವದ ನಂಬರ್ 1 ಸ್ಮಾರ್ಟ್‌ಫೋನ್ ಕಂಪೆನಿ ತಮ್ಮ ಗ್ಯಾಲಕ್ಸಿ ಶ್ರೇಣಿಯಲ್ಲಿ ಸ್ಮಾರ್ಟ್ ಐ ಸ್ಕ್ರಾಲಿಂಗ್ ಎಂಬ ಫೀಚರ್ ಅನ್ನು ಪ್ರಸ್ತುತಪಡಿಸಿದ್ದಾರೆ. ಈ ಫೀಚರ್ ಬಳಸಿಕೊಂಡು, ಲೇಖನವನ್ನು ಮೇಲೆ ಕೆಳಗೆ ನೋಡುತ್ತಾ ಸ್ಕ್ರಾಲ್ ಮಾಡಬಹುದು. ಚಲನೆಯನ್ನು ಟ್ರ್ಯಾಕ್ ಮಾಡಲು ಅವರು ಮುಂಭಾಗದಲ್ಲಿ ಸೆನ್ಸಾರ್‌ಗಳನ್ನು ಬಳಸಿದ್ದಾರೆ.

ಮೈಕ್ರೋಮ್ಯಾಕ್ಸ್ ಮಿರರ್

#7

ಮೈಕ್ರೋಮ್ಯಾಕ್ಸ್ ಕ್ಯು55 ಕೋಡ್‌ನೇಮ್‌ನಲ್ಲಿ ಇದು ಫೋನ್ ಅನ್ನು ಹೊರತಂದಿದೆ. ಸ್ವರಾಸ್ಕೊ ಅಳವಡಿಸಲಾದ ಸಣ್ಣ ಸ್ಕ್ವೇರ್ ವಿನ್ಯಾಸವನ್ನು ಫೋನ್ ಹೊಂದಿದ್ದು ಮಹಿಳೆಯರಿಗೆ ಇದು ಅತ್ಯುತ್ತಮ ಫೀಚರ್ ಒಂದನ್ನು ನೀಡಿದೆ. ನೈಜ ಕನ್ನಡಿ ಇದಾಗಿದೆ. ಫೋನ್‌ನ ಹಿಂಭಾಗದಲ್ಲಿ ಸ್ಲೈಡರ್ ಹಾಕಿದಾಗ ಸ್ಕ್ರೀನ್‌ನ ಹಿಂಬದಿಯಲ್ಲಿ ಕನ್ನಡಿಯನ್ನು ನೋಡಬಹುದಾಗಿದೆ.

ಎಲ್‌ಜಿ ಜಿ ಫ್ಲೆಕ್ಸ್

#8

ಕರ್ವ್ ಆಗಿರುವ ಟಿವಿ ನಿಜಕ್ಕೂ ಉತ್ತಮ ಸಂಗತಿಯೇ. ಇದು ವೀಕ್ಷಣಾ ಅನುಭವವನ್ನು ಉತ್ತಮಗೊಳಿಸುತ್ತದೆ. ಆದರೆ ಫೋನ್‌ನಲ್ಲಿ ಈ ರೀತಿಯ ಫೀಚರ್ ಅದ್ಭುತ ಅಲ್ಲವೇ. ಎಲ್‌ಜಿ ಕಂಪೆನಿ ಎಲ್‌ಜಿ ಜಿ ಫ್ಲೆಕ್ಸ್ ಫೋನ್‌ನೊಂದಿಗೆ 2013 ರಲ್ಲಿ ಬಂದಿದ್ದು 2015 ರಲ್ಲಿ ಎಲ್‌ಜಿ ಜಿ ಫ್ಲೆಕ್ಸ್ 2 ನೊಂದಿಗೆ ಬಂದಿದೆ.

ಹೇರ್ ಪೆನ್ ಫೋನ್

#9

ಹೆಚ್ಚಿನ ಜನರಿಗೆ ತಮ್ಮ ಫೋನ ಹಗುರವಾಗಿದ್ದು ತಮ್ಮ ಪ್ಯಾಕೆಟ್‌ನಲ್ಲಿ ಕೂರುವಂತಿರಬೇಕು ಎಂಬ ಆಸೆ ಇರುತ್ತದೆ. ಹೇರರ್ ಕಂಪೆನಿ ಪಿ7 ಎಂಬ ಡಿವೈಸ್ ಅನ್ನು ಹೊರತಂದಿದ್ದು ಇದು ಪೆನ್ ಆಕಾರದಲ್ಲಿದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

'ಐಫೋನ್‌ 8' ಸಂಪೂರ್ಣ ಗಾಜಿನಿಂದ ಡಿಸೈನ್‌ ಆಗಲಿದೆ: ಹೇಗಿದೆ ನೋಡಿ!!
ಇಂಟರ್ನೆಟ್ ಸಂಪರ್ಕವಿಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?
ವಿಜ್ಞಾನ ವಿಸ್ಮಯ: 5,000 ವರ್ಷಗಳ ಹಿಂದಿನ ಮಮ್ಮಿಯ ಪುನರುಜ್ಜೀವನ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Smartphones have become an essential for life. Almost everyone carries a smartphone these days and they have plenty of useful features packed to make life simpler.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot