Google Chrome ನಲ್ಲಿ ಸೈಟ್ ನೋಟಿಫಿಕೇಶನ್‌ಗಳನ್ನು ಬ್ಲಾಕ್‌ ಮಾಡುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಜನರು ಬಳಸುವ ವೆಬ್‌ ಬ್ರೌಸರ್‌ಗಳಲ್ಲಿ ಗೂಗಲ್ ಕ್ರೋಮ್ ಕೂಡ ಒಂದಾಗಿದೆ. ಸುರಕ್ಷತೆಯ ವಿಚಾರದಲ್ಲಿ ಗೂಗಲ್‌ ಕ್ರೋಮ್‌ ಬಳಕೆದಾರರ ಮನಗೆದ್ದಿದೆ. ಇನ್ನು ಗೂಗಲ್ ಕ್ರೋಮ್‌ ಬ್ರೌಸರ್ ಬಳಕೆಯನ್ನು ಉತ್ತಮಗೊಳಿಸಲು ಹಲವಾರು ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಿಂದಾಗಿ ಹೆಚ್ಚಿನ ಜನರು ಇಂಟರ್‌ನೆಟ್ ಬ್ರೌಸಿಂಗ್‌ಗಾಗಿ ಬೇರೆ ಪ್ಲಾಟ್‌ಫಾರ್ಮ್‌ ಕಡೆಗೆ ಹೋಗುವುದಕ್ಕೆ ಇಷ್ಟ ಪಡುವುದಿಲ್ಲ.

ಗೂಗಲ್‌

ಹೌದು, ವೆಬ್‌ ಬ್ರೌಸರ್‌ಗಳಲ್ಲಿ ಗೂಗಲ್‌ ಕ್ರೋಮ್‌ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಬಳಕೆದಾರ ಸ್ನೇಹಿ ಫೀಚರ್ಸ್‌ಗಳನ್ನು ಪರಿಚಯಿಸುವ ಮೂಲಕ ಸೈ ಎನಿಸಿಕೊಂಡಿದೆ. ಇದಲ್ಲದೆ ಗೂಗಲ್‌ ಕ್ರೋಮ್‌ನಲ್ಲಿ ನೀವು ಭೇಟಿ ನೀಡುವ ವೆಬ್‌ಸೈಟ್‌ಗಳಿಂದ ನೋಟಿಫಿಕೇಶನ್‌ಗಳನ್ನು ನಿರ್ಬಂಧಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ವೆಬ್‌ ಬ್ರೌಸರ್‌ಗಳಲ್ಲಿ ನೋಟಿಫಿಕೇಶನ್‌ಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿ ಆಗಿದೆ. ನಿಮಗೆ ಈ ನೋಟಿಫಿಕೇಶನ್‌ಗಳು ಕಿರಿಕಿರಿ ಎನಿಸಿದರೆ ಅವುಗಳನ್ನು ಸ್ಟಾಪ್‌ ಮಾಡಬಹುದು. ಹಾಗಾದ್ರೆ ಗೂಗಲ್‌ ಕ್ರೋಮ್‌ ಸೈಟ್‌ನಲ್ಲಿ ನೋಟಿಫಿಕೇಶನ್‌ಗಳನ್ನು ಬ್ಲಾಕ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Google Chrome ನಲ್ಲಿ ಸೈಟ್ ನೋಟಿಫಿಕೇಶನ್‌ಗಳನ್ನು ಬ್ಲಾಕ್‌ ಮಾಡುವುದು ಹೇಗೆ? (ವೆಬ್)

Google Chrome ನಲ್ಲಿ ಸೈಟ್ ನೋಟಿಫಿಕೇಶನ್‌ಗಳನ್ನು ಬ್ಲಾಕ್‌ ಮಾಡುವುದು ಹೇಗೆ? (ವೆಬ್)

ಹಂತ 1: ನಿಮ್ಮ ಪಿಸಿ ಅಥವಾ ಲ್ಯಾಪ್‌ಟಾಪ್‌ನಲ್ಲಿ Google Chrome ಗೆ ಹೋಗಿ.

ಹಂತ 2: ಬಲಗಡೆಯಲ್ಲಿ ಮೂರು-ಚುಕ್ಕೆಗಳ ಮೆನು ಆಯ್ಕೆಮಾಡಿ.

ಹಂತ 3: ಸೆಟ್ಟಿಂಗ್ಸ್‌ ಆಯ್ಕೆಯನ್ನು ಪಡೆಯಲು ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಿ. ಅದರ ಮೇಲೆ ಟ್ಯಾಪ್ ಮಾಡಿ.

ಹಂತ 4: ಈಗ, ಮತ್ತಷ್ಟು ಕೆಳಗೆ ಸ್ಕ್ರಾಲ್ ಮಾಡಿ ಅಲ್ಲಿ ನೀವು ‘ಗೌಪ್ಯತೆ ಮತ್ತು ಭದ್ರತಾ ವಿಭಾಗವನ್ನು ಕಾಣಬಹುದು. ಸೈಟ್ ಸೆಟ್ಟಿಂಗ್ಸ್‌ ಆಯ್ಕೆಯನ್ನು ಆರಿಸಿ.

ಹಂತ 5: ನಂತರ ನೀವು ಅಧಿಸೂಚನೆಗಳ ಆಯ್ಕೆಯನ್ನು ಕಾಣಬಹುದು. ‘Sites can ask to send notifications' ಆಯ್ಕೆ ಇರುತ್ತದೆ. Google Chrome ನಲ್ಲಿ ಸೈಟ್ ಅಧಿಸೂಚನೆಗಳನ್ನು ತೆಗೆದುಹಾಕುವ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ.

Google Chrome ನಲ್ಲಿ ಸೈಟ್ ನೋಟಿಫಿಕೇಶನ್‌ ನಿರ್ಬಂಧಿಸುವುದು ಹೇಗೆ? (ಆಂಡ್ರಾಯ್ಡ್)

Google Chrome ನಲ್ಲಿ ಸೈಟ್ ನೋಟಿಫಿಕೇಶನ್‌ ನಿರ್ಬಂಧಿಸುವುದು ಹೇಗೆ? (ಆಂಡ್ರಾಯ್ಡ್)

ಹಂತ 1: ನಿಮ್ಮ Android ಸಾಧನದಲ್ಲಿ Google Chrome ಗೆ ಹೋಗಿ.

ಹಂತ 2: ನಂತರ, ಮೇಲಿನ ಬಲ ಮೂಲೆಯಲ್ಲಿ ಮೂರು-ಚುಕ್ಕೆಗಳ ಮೆನು ಆಯ್ಕೆಮಾಡಿ.

ಹಂತ 3: ಅಲ್ಲಿಂದ, ಸೆಟ್ಟಿಂಗ್ಸ್‌ ಆಯ್ಕೆಯನ್ನು ಆರಿಸಿ ಮತ್ತು ನಂತರ ನೋಟಿಫಿಕೇಶನ್‌ಗಳನ್ನು ಟ್ಯಾಪ್ ಮಾಡಿ.

ಹಂತ 4: ಈಗ, ಸೈಟ್‌ಗಳ ಆಯ್ಕೆಯನ್ನು ಪಡೆಯಲು ನೀವು ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಬೇಕಾಗುತ್ತದೆ. Chrome ನಲ್ಲಿ ಸೈಟ್ ನೋಟಿಫಿಕೇಶನ್‌ಗಳನ್ನು ತೆಗೆದುಹಾಕಲು "All Sites Notifications" ಆಯ್ಕೆಯನ್ನು ಆರಿಸಿ.

Google Chrome ನಲ್ಲಿ ಸೈಟ್ ಅಧಿಸೂಚನೆಗಳನ್ನು ನಿರ್ಬಂಧಿಸುವುದು ಹೇಗೆ? (ಐಒಎಸ್)

Google Chrome ನಲ್ಲಿ ಸೈಟ್ ಅಧಿಸೂಚನೆಗಳನ್ನು ನಿರ್ಬಂಧಿಸುವುದು ಹೇಗೆ? (ಐಒಎಸ್)

ಹಂತ 1: ನಿಮ್ಮ ಐಫೋನ್ ಅಥವಾ ಐಪ್ಯಾಡ್‌ನಲ್ಲಿ Google Chrome ಅಪ್ಲಿಕೇಶನ್ ತೆರೆಯಿರಿ.

ಹಂತ 2: ಕೆಳಗಿನ ಬಲ ಮೂಲೆಯಲ್ಲಿ ‘ಇನ್ನಷ್ಟು' ಆಯ್ಕೆ ಇರುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ.

ಹಂತ 3: ಈಗ, ಸೆಟ್ಟಿಂಗ್‌ಗಳ ಆಯ್ಕೆಯನ್ನು ಮತ್ತು ನಂತರ ವಿಷಯ ಸೆಟ್ಟಿಂಗ್‌ಗಳ ಆಯ್ಕೆಯನ್ನು ಆರಿಸಿ.

ಹಂತ 4: Google Chrome ಅಧಿಸೂಚನೆಗಳ ಸ್ಪ್ಯಾಮ್ ಅನ್ನು ನಿಲ್ಲಿಸಲು ನೀವು ಆಫ್ ಮಾಡಬೇಕಾದ ‘ಪಾಪ್-ಅಪ್‌ಗಳನ್ನು ನಿರ್ಬಂಧಿಸಿ'.

Best Mobiles in India

English summary
If notifications from various websites annoy you and affect your internet browsing, here's how you can block them for better usage.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X