ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ ಬ್ಯಾಕ್‌ಗ್ರೌಂಡ್‌ ಬಣ್ಣ ಬದಲಾಯಿಸಲು ಹೀಗೆ ಮಾಡಿರಿ!

|

ಇನ್‌ಸ್ಟಾಗ್ರಾಮ್‌ (Instagram) ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ಫೋಟೋ ಮತ್ತು ವೀಡಿಯೊ ಹಂಚಿಕೆ ಪ್ಲಾಟ್‌ಫಾರ್ಮ್ ಗಳಲ್ಲಿ ಒಂದಾಗಿದೆ. ಇನ್‌ಸ್ಟಾಗ್ರಾಮ್‌ನ ಕೆಲವು ಫೀಚರ್ಸ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡಿತ್ತಿವೆ. ಆ ಪೈಕಿ ಸ್ಟೋರಿಸ್‌, ಪೋಸ್ಟ್‌ಗಳು ಮತ್ತು ರೀಲ್ ಆಯ್ಕೆಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ ಬ್ಯಾಕ್‌ಗ್ರೌಂಡ್‌ ಕಲರ್‌ ಅನ್ನು ಬದಲಾಯಿಸಲು ಅವಕಾಶ ಇದೆ.

ಬದಲಾಯಿಸಬಹುದು

ಹೌದು, ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್‌ ಪ್ಲಾಟ್‌ಫಾರ್ಮ್ ನಲ್ಲಿ ಸ್ಟೋರಿಸ್‌ ಪೋಸ್ಟ್ ಮಾಡುವಾಗ ಕೆಲವು ಅಸ್ಟಮೈಸ್‌ ಆಯ್ಕೆಗಳು ಲಭ್ಯವಾಗುತ್ತದೆ. ಹಾಗೆಯೇ ಸ್ಟೋರಿಸ್‌ ಬ್ಯಾಕ್‌ಗ್ರೌಂಡ್‌ ಬಣ್ಣವನ್ನು ಬದಲಾಯಿಸಬಹುದು. ಇನ್ನು ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ 24 ಗಂಟೆಗಳ ಕಾಲ ಲಭ್ಯವಿರುತ್ತದೆ. ಅದಾದ ಬಳಿಕ ಆಟೋಮ್ಯಾಟಿಕ್‌ ಆಗಿ ಡಿಲೀಟ್ ಆಗುತ್ತವೆ. ಆದ್ರೆ, ಇನ್‌ಸ್ಟಾಗ್ರಾಮ್‌ ರೀಲ್ಸ್‌ ಗಳು ಖಾತೆಯಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಹಾಗಾದರೆ ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ ಬ್ಯಾಕ್‌ಗ್ರೌಂಡ್‌ ಬಣ್ಣವನ್ನು ಬದಲಾಯಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ ಬ್ಯಾಕ್‌ಗ್ರೌಂಡ್‌ ಬಣ್ಣವನ್ನು ಬದಲಿಸುವುದು ಹೇಗೆ?

ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ ಬ್ಯಾಕ್‌ಗ್ರೌಂಡ್‌ ಬಣ್ಣವನ್ನು ಬದಲಿಸುವುದು ಹೇಗೆ?

ಇನ್‌ಸ್ಟಾಗ್ರಾಮ್‌ (Instagram) ಸ್ಟೋರಿಸ್‌ ಫೋಟೋಗಳು ಮತ್ತು ವೀಡಿಯೊಗಳನ್ನು ಒಳಗೊಂಡಿರಬಹುದು, ನೀವು ಫೋನ್‌ನ ಗ್ಯಾಲರಿಯಿಂದ ನೇರವಾಗಿ ಚಿತ್ರವನ್ನು ಅಪ್‌ಲೋಡ್ ಮಾಡಬಹುದು ಅಥವಾ ಸ್ಥಳದಲ್ಲೇ ಶಾಟ್ ಕ್ಲಿಕ್ ಮಾಡಬಹುದು. ಇನ್ನು ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ ಬ್ಯಾಕ್‌ಗ್ರೌಂಡ್‌ ಬಣ್ಣವನ್ನು ಬದಲಾಯಿಸಬಹುದು. ಅದಕ್ಕಾಗಿ ಈ ಮುಂದಿನ ಕ್ರಮಗಳನ್ನು ಫಾಲೋ ಮಾಡಿರಿ.

ಟ್ಯಾಪ್

* ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ತೆರೆಯಿರಿ.
* ಸ್ಟೋರಿಸ್‌ ವಿಭಾಗವನ್ನು ತೆರೆಯಲು ಬಲಕ್ಕೆ ಸ್ವೈಪ್ ಮಾಡಿ.
* ಫೋಟೋ ಕ್ಲಿಕ್ ಮಾಡಿ.
* ಸ್ಕ್ರೀನಿನ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ ಮೇಲೆ ಮತ್ತು ನಂತರ ಡ್ರಾ ಆಯ್ಕೆಯ ಮೇಲೆ ಟ್ಯಾಪ್ ಮಾಡಿ.
* ಮೊದಲ ಪೆನ್ ಮತ್ತು ನಿಮ್ಮ ಆಯ್ಕೆಯ ಯಾವುದೇ ಬಣ್ಣವನ್ನು ಆರಿಸಿ.
* ಈಗ, ಫೋಟೋದ ಯಾವುದೇ ವಿಭಾಗದಲ್ಲಿ ಚಿತ್ರವನ್ನು 3-4 ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ ಮತ್ತು ಅದನ್ನು ಇಡೀ ಸ್ಟೋರಿಸ್‌ ಗೆ ಅನ್ವಯಿಸಲಾಗುತ್ತದೆ.
* ಅಷ್ಟೆ, ನಿಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ ಬ್ಯಾಕ್‌ಗ್ರೌಂಡ್‌ ಬದಲಾಗಿದೆ. ಅಂತೆಯೇ, ನೀವು ಇತರ ಬಣ್ಣ ಆಯ್ಕೆಗಳೊಂದಿಗೆ ಇದನ್ನು ಪ್ರಯತ್ನಿಸಬಹುದು.

ಕ್ರಿಯೆಟ್‌ ಆಯ್ಕೆಯ ಮೂಲಕ:

ಕ್ರಿಯೆಟ್‌ ಆಯ್ಕೆಯ ಮೂಲಕ:

ಇನ್‌ಸ್ಟಾಗ್ರಾಮ್‌ ತನ್ನ ಸ್ಟೋರಿಸ್‌ ಮೆನುವಿನಲ್ಲಿ ರಚಿಸಿ (ಕ್ರಿಯೆಟ್‌) ವಿಭಾಗವನ್ನು ಹೊಂದಿದೆ. ಇದರಿಂದ ನೀವು ಅನೇಕ ಟೆಂಪ್ಲೇಟ್‌ಗಳು ಮತ್ತು ಬಣ್ಣ ಗ್ರೇಡಿಯಂಟ್‌ಗಳನ್ನು ಪ್ರವೇಶಿಸಬಹುದು. ಕ್ರಿಯೇಟ್ ಟೂಲ್ ಅನ್ನು ಬಳಸಿಕೊಂಡು ಇನ್‌ಸ್ಟಾಗ್ರಾಮ್‌ ಸ್ಟೋರಿಸ್ ಬ್ಯಾಕ್‌ಗ್ರೌಂಡ್‌ ಬಣ್ಣವನ್ನು ಬದಲಾಯಿಸಲು ಈ ಹಂತಗಳನ್ನು ಅನುಸರಿಸಿ.

ಅಪ್ಲಿಕೇಶನ್

* ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ತೆರೆಯಿರಿ.
* ಸ್ಟೋರಿ ಮೆನು ತೆರೆಯಲು ಬಲಕ್ಕೆ ಸ್ವೈಪ್ ಮಾಡಿ.
* ಸ್ಕ್ರೀನಿನ ಬಲಭಾಗದಲ್ಲಿ, ರಚಿಸು ಆಯ್ಕೆ ಇರುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ.
* ಈಗ, ಇದು ವರ್ಣರಂಜಿತ ಗ್ರೇಡಿಯಂಟ್ ಪರದೆಯನ್ನು ತೆರೆಯುತ್ತದೆ. ಕೆಳಗಿನ ಬಲ ಮೂಲೆಯಲ್ಲಿರುವ ಬಣ್ಣಗಳ ವೃತ್ತದ ಮೇಲೆ ಟ್ಯಾಪ್ ಮಾಡುವ ಮೂಲಕ ನೀವು ಹಿನ್ನೆಲೆ ಬಣ್ಣಗಳನ್ನು ಬದಲಾಯಿಸಬಹುದು.
* ಲಭ್ಯವಿರುವ ಟೆಂಪ್ಲೇಟ್‌ಗಳಿಂದ ಅದನ್ನು ಉತ್ತಮವಾಗಿ ಕಾಣುವಂತೆ ನೀವು ಆಯ್ಕೆ ಮಾಡಬಹುದು.

ಇನ್‌ಸ್ಟಾಗ್ರಾಮ್‌ ಇನ್‌ಬಾಕ್ಸ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಬಣ್ಣವನ್ನು ಬದಲಾಯಿಸುವುದು ಹೇಗೆ?

ಇನ್‌ಸ್ಟಾಗ್ರಾಮ್‌ ಇನ್‌ಬಾಕ್ಸ್‌ನಲ್ಲಿ ಬ್ಯಾಕ್‌ಗ್ರೌಂಡ್‌ ಬಣ್ಣವನ್ನು ಬದಲಾಯಿಸುವುದು ಹೇಗೆ?

* ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ.
* DM ವಿಭಾಗಕ್ಕೆ ಹೋಗಿ ಮತ್ತು ಯಾವುದೇ ವ್ಯಕ್ತಿಯ ಇನ್‌ಬಾಕ್ಸ್ ತೆರೆಯಿರಿ.
* ಪರದೆಯ ಮೇಲಿನ ಬಲ ಮೂಲೆಯಲ್ಲಿರುವ 'i' ಐಕಾನ್ ಮೇಲೆ ಟ್ಯಾಪ್ ಮಾಡಿ.
* ಥೀಮ್ ಆಯ್ಕೆಯ ಮೇಲೆ ಟ್ಯಾಪ್ ಮಾಡಿ ಮತ್ತು ಅದು ನಿಮಗೆ 15 ಚಾಟ್ ಥೀಮ್‌ಗಳು ಮತ್ತು 21 ಹಿನ್ನೆಲೆ ಬಣ್ಣದ ಥೀಮ್ ಆಯ್ಕೆಗಳನ್ನು ತೋರಿಸುತ್ತದೆ.
* ಈಗ, ನಿಮ್ಮ ಆಯ್ಕೆಯ ಪ್ರಕಾರ ಸೂಕ್ತವಾದ ಥೀಮ್ ಅನ್ನು ಆಯ್ಕೆಮಾಡಿ ಮತ್ತು ಅದನ್ನು ಆ ವ್ಯಕ್ತಿಯೊಂದಿಗೆ ನಿಮ್ಮ ಇನ್‌ಸ್ಟಾಗ್ರಾಮ್‌ ಇನ್‌ಬಾಕ್ಸ್‌ಗೆ ಅನ್ವಯಿಸಲಾಗುತ್ತದೆ.

ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ ಬಳಕೆದಾರರು ತಮ್ಮ ರೀಲ್ಸ್‌ಗಳನ್ನು ಐಫೋನ್‌ನಲ್ಲಿ ಡೌನ್‌ಲೋಡ್‌ ಮಾಡಬೇಕಾದರೆ ಆಪ್ ಸ್ಟೋರ್‌ನಿಂದ Instadp ಅಥವಾ Igram.io ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಆದರೆ ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ರೀಲ್ಸ್ ಡೌನ್‌ಲೋಡರ್ ಅನ್ನು ಡೌನ್‌ಲೋಡ್‌ ಮಾಡಬೇಕಾಗುತ್ತದೆ. ಈ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್‌ ಮಾಡಿದ ನಂತರ ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.

ಇನ್‌ಸ್ಟಾಗ್ರಾಮ್‌

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ವಿಭಾಗಕ್ಕೆ ಹೋಗಿ.
ಹಂತ:3 ನಂತರ, ನಿಮ್ಮ ಡಿವೈಸ್‌ನಲ್ಲಿ ನೀವು ಡೌನ್‌ಲೋಡ್ ಮಾಡಲು ಬಯಸುವ ರೀಲ್‌ಗಳ ಲಿಂಕ್ ಅನ್ನು ಕಾಪಿ ಮಾಡಿ.
ಹಂತ:4 ಇದೀಗ ರೀಲ್ಸ್ ಡೌನ್‌ಲೋಡರ್ ಅಪ್ಲಿಕೇಶನ್ ತೆರೆಯಿರಿ ಮತ್ತು ನೀವು ಡೌನ್‌ಲೋಡ್ ಮಾಡಲು ಬಯಸುವ ರೀಲ್‌ನ ಲಿಂಕ್ ಅನ್ನು ಪೇಸ್ಟ್‌ ಮಾಡಿರಿ.
ಹಂತ:5 ಇದಾದ ನಂತರ ನೀವು ಡೌನ್‌ಲೋಡ್ ಬಟನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.

ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಳನ್ನು ಕ್ರಿಯೆಟ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಳನ್ನು ಕ್ರಿಯೆಟ್‌ ಮಾಡುವುದು ಹೇಗೆ?

ಹಂತ:1 ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ಬಲಕ್ಕೆ ಸ್ವೈಪ್ ಮಾಡಿ ಮತ್ತು ಸ್ಕ್ರೀನ್‌ ಕೆಳಭಾಗದಲ್ಲಿರುವ ರೀಲ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:2 ನಂತರ ನೀವು ರೀಲ್ ಅನ್ನು ರೆಕಾರ್ಡ್ ಮಾಡಲು, ವೀಡಿಯೊ ಪ್ಲೇಯರ್ ಐಕಾನ್ ಅನ್ನು ಹಿಡಿದಿಟ್ಟುಕೊಳ್ಳಿರಿ.
ಹಂತ:3 ಇದೀಗ ನೀವು ಸೂಕ್ತವಾದ ವೇಗವನ್ನು ಆಯ್ಕೆ ಮಾಡಬೇಕಾಗುತ್ತದೆ, ಚಿತ್ರಗಳು, ಸ್ಟಿಕ್ಕರ್‌ಗಳು ಮತ್ತು ಮ್ಯೂಸಿಕ್‌ ಅನ್ನು ರೀಲ್ಸ್‌ಗೆ ಆಡ್‌ ಮಾಡಿರಿ.
ಹಂತ:4 ರೀಲ್ಸ್‌ ಶೇರ್‌ ಮಾಡುವ ಮೊದಲು ರೀಲ್ ಅನ್ನು ವೀಕ್ಷಿಸಲು ಪ್ರಿವ್ಯೂ ಬಟನ್ ಅನ್ನು ಕ್ಲಿಕ್ ಮಾಡಿ ರೀಲ್ ಅನ್ನು ಪ್ರಿವ್ಯೂ ಮಾಡಿ.
ಹಂತ:5 ಇದೀಗ ನಿಮ್ಮ ರೀಲ್ಸ್‌ ಶೇರ್‌ ಮಾಡಲು ಶೇರ್‌ ಬಟನ್ ಅನ್ನು ಕ್ಲಿಕ್ ಮಾಡಿ.

Best Mobiles in India

English summary
How to Change Instagram Background Image on Mobile and PC: Follow these steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X