ಯಾವ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲಾಗಿದೆ ಎಂದು ತಿಳಿಯುವುದು ಹೇಗೆ?

By: Tejaswini P G

ಕೆಲ ಸಮಯದ ಹಿಂದೆ ಭಾರತ ಸರಕಾರವು ಬ್ಯಾಂಕ್ ಗಳ ಗ್ರಾಹಕರು ತಮ್ಮ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡುವುದು ಮತ್ತು ಖಚಿತ ಪಡಿಸಿಕೊಳ್ಳುವ ಕುರಿತು ಹಲವು ಬದಲಾವಣೆಗಳನ್ನು ತಂದಿದೆ. ಹೊಸ ಬ್ಯಾಂಕ್ ಖಾತೆ ತೆರೆಯುವವರು ತಪ್ಪದೆ ತಮ್ಮ ಆಧಾರ್ ಮಾಹಿತಿಯನ್ನು ಸಲ್ಲಿಸಿ ಕಡ್ಡಾಯವಾಗಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಿಸಬೇಕಾಗಿದೆ. ಸರಕಾರದ ಆದೇಶದ ಅನುಸಾರ ಹೀಗೆ ಮಾಡಲು ಗಡುವನ್ನು ಡಿಸೆಂಬರ್ 31,2017 ರಿಂದ ಮಾರ್ಚ್ 31,2018ಕ್ಕೆ ಮುಂದೂಡಲಾಗಿದೆ. ಅದರೆ ಈ ಗಡುವುಗಳ ಕುರಿತು ಈಲೇ ಏನನ್ನೂ ಖಚಿತವಾಗಿ ಹೇಳಲಾಗದು.

Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!
ಯಾವ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲಾಗಿದೆ ಎಂದು ತಿಳಿಯುವುದು ಹೇಗೆ?

ಇದರ ಫಲವಾಗಿ ಬ್ಯಾಂಕ್ಗಳು SMS, ನೆಟ್ ಬ್ಯಾಂಕಿಂಗ್ ಮತ್ತು ಇತರ ಮಾಧ್ಯಮಗಳ ಮೂಲಕ ತಮ್ಮ ಗ್ರಾಹಕರಿಗೆ ತಮ್ಮ ಖಾತೆಯೊಂದಿಗೆ ಆಧಾರ್ ಜೋಡಿಸುವಂತೆ ಸಂದೇಶ ಕಳುಹಿಸುತ್ತಲೇ ಇದೆ. ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆಯಾಗಿದೆಯೇ ಇಲ್ಲವೇ ಎಂದು ನೀವೀಗ ನಿಮ್ಮ ಡೆಸ್ಕ್ಟಾಪ್ ಅಥವಾ ಮೊಬೈಲ್ ಫೋನ್ ಮೂಲಕ ತಿಳಿಯಬಹುದಾಗಿದೆ. ನಿಮ್ಮ ಅನುಕೂಲಕ್ಕಾಗಿ ಈ ಎರಡೂ ವಿಧಾನಗಳನ್ನು ಈ ಲೇಖನದಲ್ಲಿ ನಿಮಗಾಗಿ ಸಂಪಾದಿಸಿದ್ದೇವೆ.

ಹಂತ 1: ಆಧಾರ್ ನ ಅಧಿಕೃತ ವೆಬ್ಸೈಟ್ "www.uidai.gov.in" ಗೆ ಹೋಗಿ

ಹಂತ 2: "ಚೆಕ್ ಆಧಾರ್ ಆಂಡ್ ಬ್ಯಾಂಕ್ ಅಕೌಂಟ್ ಲಿಂಕಿಂಗ್ ಸ್ಟೇಟಸ್" ಮೇಲೆ ಕ್ಲಿಕ್ ಮಾಡಿ

ಹಂತ 3: ಈಗ ಅದು ನಿಮ್ಮ ಆಧಾರ್ ಸಂಖ್ಯೆ ಮತ್ತು ಸೆಕ್ಯೂರಿಟಿ ಕೋಡ್ ಅನ್ನು ನಮೂದಿಸುವಂತೆ ನಿಮ್ಮನ್ನು ಕೇಳಿಕೊಳ್ಳುತ್ತದೆ.

ಹಂತ 4: ನಂತರ ಆಧಾರ್ ಡೇಟಾಬೇಸ್ನಲ್ಲಿ ನೋಂದಾವಣೆಗೊಂಡಿರುವ ನಿಮ್ಮ ಮೊಬೈಲ್ ಸಂಖ್ಯೆಗೆ OTP ಕೋಡ್ ಒಂದನ್ನು ಕಳುಹಿಸಲಾಗುತ್ತದೆ.

ಹಂತ 5: ಈಗ ನಿಮ್ಮ ಮೊಬೈಲ್ ಗೆ ಬಂದ OTP ಯನ್ನು ನಮೂದಿಸಿ ಲಾಗಿನ್ ಎಂದು ಕ್ಲಿಕ್ ಮಾಡಿ.

ಆಧಾರ್ ಸೇವೆಗಳನ್ನು ಪಡೆಯಲು ಹೊಸ ಮೊಬೈಲ್ ನಂಬರ್ ಅಟ್ಯಾಚ್ ಮಾಡುವುದು ಹೇಗೆ?

ನೀವು ನಿಮ್ಮ ಮೊಬೈಲ್ ಮೂಲಕ ಈ ಮಾಹಿತಿಯನ್ನು ತಿಳಿಯ ಬಯಸಿದರೆ ಹೀಗೆ ಮಾಡಿ

ಹಂತ 1: *99*99*1 ಎಂದು ಡಯಲ್ ಮಾಡಿ(ಮೆಸೇಜ್ ಒಂದಕ್ಕೆ 50 ಪೈಸೆ ಶುಲ್ಕ ವಿಧಿಸಲಾಗುತ್ತದೆ)

ಹಂತ 2: ಈಗ ಅದು ನಿಮ್ಮನ್ನು ನಿಮ್ಮ 12-ಅಂಕಿ ಯ ಆಧಾರ್ ಸಂಖ್ಯೆಯನ್ನು ನಮೂದಿಸುವಂತೆ ವಿನಂತಿಸುತ್ತದೆ.

ಹಂತ 3: ಆಧಾರ್ ಸಂಖ್ಯೆ ನಮೂದಿಸಿದ ನಂತರ ಅದು ನಿಮ್ಮನ್ನು ಆಧಾರ್ ಸಂಖ್ಯೆ ಸರಿಯಾಗಿದೆಯೇ ಎಂದು ದೃಢೀಕರಿಸುವಂತೆ ಕೇಳುತ್ತದೆ. ಆಧಾರ್ ಸಂಖ್ಯೆಯಲ್ಲಿ ಏನಾದರೂ ತಪ್ಪಾಗಿದ್ದರೆ ಈ ಹಂತದಲ್ಲಿ ಅದನ್ನು ಸರಿಪಡಿಸಿ ಮತ್ತು ದೃಢೀಕರಿಸಿ ಮುಂದಿನ ಹಂತಕ್ಕೆ ಹೋಗಬಹುದಾಗಿದೆ

ಹಂತ 4: ಈಗ ನಿಮ್ಮ ಆಧಾರ್ ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ವಿವರಗಳನ್ನು ನಿಮಗೆ ನೀಡುತ್ತದೆ.

ಈ ಮೇಲಿನ ವಿಧಾನಗಳ ಮೂಲಕ ನೀವು ಆಧಾರ್ ನೊಂದಿಗೆ ಜೋಡಿಸಿದ ಇತ್ತೀಚಿನ ಬ್ಯಾಂಕ್ ಖಾತೆಯ ವಿವರಗಳನ್ನಷ್ಟೇ ಪಡೆಯಬಹುದು. ನೀವು ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ನೀವು ಬ್ಯಾಂಕ್ ಸಿಬ್ಬಂದಿಗಳನ್ನು ಸಂಪರ್ಕಿಸಿ ಈ ಮಾಹಿತಿಯನ್ನು ಪಡೆಯಬಹುದಾಗಿದೆ. ಹಾಗೆಯೇ ಆಧಾರ್ ನೊಂದಿಗೆ ಮೊಬೈಲ್ ಸಂಖ್ಯೆ ಜೋಡಣೆ ಮಾಡಿರುವವರಿಗೆ ಮಾತ್ರ ಈ ಸೇವೆ ಲಭಿಸುತ್ತದೆ.

English summary
A few days back, the Indian government has made some mandatory changes to verify and link Aadhaar of their customers with their accounts on Banks. We have compiled both the ways below for your reference
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot