ಗೂಗಲ್ ಅಸಿಸ್ಟಂಟ್‌ನಿಂದ ಪಿಸಿ ಕಂಟ್ರೋಲ್ ಮಾಡುವುದು ಹೇಗೆ ಗೊತ್ತೆ?

By Gizbot Bureau
|

ವಿಂಡೋಸ್ 10 ಬಳಕೆದಾರರಿಗೆ ಅದರದೇ ಆದ ವಾಯ್ಸ್ ಅಸಿಸ್ಟಂಟ್ ಕೊರ್ಟಾನಾ ಲಭ್ಯವಿದೆ. ಆದರೆ ಬಹುತೇಕ ಬಳಕೆದಾರರು ಗೂಗಲ್ ಅಸಿಸ್ಟಂಟ್ ಅನ್ನೇ ಬಳಸಲು ಇಷ್ಟಪಡುತ್ತಾರೆ. ಹತ್ತಾರು ವೈಶಿಷ್ಟ್ಯತೆಗಳು, ಯಾವುದೇ ವಾತಾವರಣದಲ್ಲಿಯೂ ಸೂಕ್ತವಾಗಿ ಸ್ಪಂದಿಸುವ ಗುಣದಿಂದ ಗೂಗಲ್ ಅಸಿಸ್ಟಂಟ್ ಬಹುತೇಕರಿಗೆ ಅಚ್ಚುಮೆಚ್ಚಿನದಾಗಿದೆ. ಆದರೆ ಕ್ರೋಮ್‌ಬುಕ್ ಹೊರತುಪಡಿಸಿದರೆ ಇತರ ಯಾವುದೇ ಡೆಸ್ಕಟಾಪ್ ಕಂಪ್ಯೂಟರ್‌ಗಳಲ್ಲಿ ಗೂಗಲ್ ಅಸಿಸ್ಟಂಟ್ ಇಲ್ಲ ಎಂಬುದು ಸತ್ಯ. ಆದರೂ ಹಾಗಂತ ನೀವೀಗ ನಿರಾಶರಾಗಬೇಕಿಲ್ಲ.

ಗೂಗಲ್ ಅಸಿಸ್ಟಂಟ್

ಗೂಗಲ್ ಅಸಿಸ್ಟಂಟ್ ಮೂಲಕ ನಿಮ್ಮ ಪಿಸಿಯನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ನಾವಿಲ್ಲಿ ವಿಸ್ತೃತವಾಗಿ ತಿಳಿಸಿಕೊಡುತ್ತಿದ್ದೇವೆ. ನಿಮ್ಮ ಯಾವುದೇ ಅಂಡ್ರಾಯ್ಡ್ ಸ್ಮಾರ್ಟ್‌ಫೋನ್, ಗೂಗಲ್ ಹೋಂ, ಮಿನಿ, ನೆಸ್ಟ್ ಹಬ್ ಮುಂತಾದುವುಗಳ ಮೂಲಕ ನಿಮ್ಮ ಪಿಸಿಯನ್ನು ನಿಯಂತ್ರಿಸುವ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಹಾಗಾದರೆ ಮತ್ತೇಕೆ ತಡ... ಗೂಗಲ್ ಅಸಿಸ್ಟಂಟ್ ಮೂಲಕ ನಿಮ್ಮ ಪಿಸಿಯನ್ನು ಕಂಟ್ರೋಲ್ ಮಾಡುವುದು ಹೇಗೆಂದು ಈಗಲೇ ಕಲಿತುಕೊಳ್ಳಿ.

ಇದಕ್ಕಾಗಿ ನಿಮ್ಮಲ್ಲಿರಬೇಕು ಅಂಡ್ರಾಯ್ಡ್ ಫೋನ್

ಇದಕ್ಕಾಗಿ ನಿಮ್ಮಲ್ಲಿರಬೇಕು ಅಂಡ್ರಾಯ್ಡ್ ಫೋನ್

ವಿಂಡೋಸ್ 10 ಪಿಸಿಯನ್ನು ಕಂಟ್ರೋಲ್ ಮಾಡುವ ಸಲುವಾಗಿ ನಾವೀಗ ಅಂಡ್ರಾಯ್ಡ್ ಸ್ಮಾರ್ಟಫೋನ್ ಒಂದನ್ನು ಬಳಸಲಿದ್ದೇವೆ. ಇದಕ್ಕಾಗಿ ಫೋನಿನಲ್ಲಿ ಪುಶ್‌ಬುಲೆಟ್ (Pushbullet) ಮತ್ತು (IFTTT) ಐಎಫ್‌ಟಿಟಿಟಿ ಆಪ್‌ಗಳನ್ನು ಹಾಗೂ ಪಿಸಿಯಲ್ಲಿ ಪುಶ್ ಟು ರನ್ (Push2Run) ಆಪ್‌ಗಳನ್ನು ಇನಸ್ಟಾಲ್ ಮಾಡಿಕೊಳ್ಳಿ.

ರಾಬ್ ಲ್ಯಾಟೋರ್ ಎಂಬುವರು ತಯಾರಿಸಿರುವ Push2Run ಆಪ್ ಸಂಪೂರ್ಣ ಉಚಿತವಾಗಿದ್ದು, ವಾಯ್ಸ್ ಕಮಾಂಡ್‌ಗಳ ಮೂಲಕ ಕೆಲಸಗಳನ್ನು ಅಟೊಮೇಟ್ ಮಾಡಲು ಇದು ಅತ್ಯಂತ ಸೂಕ್ತವಾಗಿದೆ. ಮುಂದೆ ನಾವು ಮಾಡಲಿರುವ ಕೆಲಸದ ಕ್ರಮಾನುಗತಿ ಹೀಗಿದೆ: Voice command through Google Assistant -> IFTTT -> Pushbullet -> Push2Run on PC -> Final execution of the task on PC. ಏನು ಮಾಡಬೇಕಿದೆ ಎಂಬುದರ ಸಂಕ್ಷಿಪ್ತ ಐಡಿಯಾ ನಿಮಗೀಗ ಸಿಕ್ಕಿರಬಹುದು. ಹಾಗಾದರೆ ಪ್ರಾರಂಭಿಸೋಣ ಬನ್ನಿ.

1. ಎಲ್ಲಕ್ಕೂ ಮೊದಲು Pushbullet (ಉಚಿತ) ಮತ್ತು IFTTT (ಉಚಿತ) ಆಪ್‌ಗಳನ್ನು ನಿಮ್ಮ ಅಂಡ್ರಾಯ್ಡ್ ಫೋನಲ್ಲಿ ಇನಸ್ಟಾಲ್ ಮಾಡಿಕೊಳ್ಳಿ. ನಂತರ ಎರಡೂ ಆಪ್‌ಗಳಲ್ಲಿ ನಿಮ್ಮ ಗೂಗಲ್ ಅಕೌಂಟಿನಿಂದ ಲಾಗಿನ್ ಮಾಡಿ ಪರ್ಮಿಶನ್‌ಗಳನ್ನು ಸೆಟ್ ಮಾಡಿ. ಎಲ್ಲ ಆಪ್ ಹಾಗೂ ಪ್ಲಾಟಫಾರ್ಮಗಳ ಮೇಲೆ ಒಂದೇ ಗೂಗಲ್ ಅಕೌಂಟ್ ಬಳಸಲು ಮರೆಯಬೇಡಿ.

2. ತದನಂತರ, ಪಿಸಿಯಲ್ಲಿ Pushbullet ಮತ್ತು IFTTT ವೆಬ್‌ಸೈಟ್ ಓಪನ್ ಮಾಡಿ ಅವುಗಳಲ್ಲಿ ಅದೇ ಗೂಗಲ್ ಅಕೌಂಟಿನಿಂದ ಲಾಗಿನ್ ಆಗಿ.

3. ಈಗ ಪಿಸಿಯಲ್ಲಿ install the Push2Run (ಉಚಿತ) ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಇನಸ್ಟಾಲ್ ಮಾಡಿಕೊಳ್ಳಿ. ಇಷ್ಟಾದರೆ ಆರಂಭಿಕ ಕೆಲಸಗಳೆಲ್ಲವೂ ಮುಗಿದಂತೆಯೇ.

4. ಈಗ ಈ ಲಿಂಕ್ link ಕ್ಲಿಕ್ ಮಾಡಿ ನಿಮ್ಮ Pushbullet ಅಕೌಂಟ್ ಪೇಜ್ ಓಪನ್ ಮಾಡಿ. ಈಗ ಕೆಳಗೆ ಸ್ಕ್ರೋಲ್ ಮಾಡಿ "Access Tokens" ಹುಡುಕಿ. ಇದರಲ್ಲಿ ಅಡಿeಚಿಣe "Create Access Token" ಬಟನ್ ಕ್ಲಿಕ್ ಮಾಡಿ. ಈಗ ನಿಮಗೆ ಕೆಲ ವಿಶಿಷ್ಟ ಸಂಕೇತಾಕ್ಷರಗಳು ಮೂಡುತ್ತವೆ. ಈ ಟೋಕನ್ ಕಾಪಿ ಮಾಡಿಕೊಳ್ಳಿ ಹಾಗೂ ಇದನ್ನು ಬೇರೆ ಯಾರೊಂದಿಗೂ ಶೇರ್ ಮಾಡಬೇಡಿ.

5. ಈಗ ನಿಮ್ಮ ಪಿಸಿಯಲ್ಲಿ Push2Run ಅಪ್ಲಿಕೇಶನ್ ಓಪನ್ ಮಾಡಿಕೊಂಡು ಆರಂಭಿಕ ಸೆಟಿಂಗ್‌ಗಳನ್ನು ಮುಗಿಸಿ. ಮೊದಲ ಡೈಲಾಗ್ ಬಾಕ್ಸ್‌ನಲ್ಲಿ ಎಡಗಡೆ ಮೆನುವಿನಲ್ಲಿ "Pushbullet" ಆಯ್ಕೆ ಮಾಡಿಕೊಂಡು "Enable Pushbullet" ಇರುವಂತೆ ನೋಡಿಕೊಳ್ಳಿ. ನಂತರ Pushbullet API ಬಾಕ್ಸ್‌ನಲ್ಲಿ ಕಾಪಿ ಮಾಡಿಕೊಂಡಿರುವ (4ನೇ ಸ್ಟೆಪ್) ಟೋಕನ್ ಪೇಸ್ಟ್ ಮಾಡಿ. ಈಗ "Title Filter" ಬಾಕ್ಸ್‌ನಲ್ಲಿ ಕಾಣಿಸುತ್ತಿರುವುದನ್ನು ಕಾಪಿ ಮಾಡಿಕೊಳ್ಳಿ ಹಾಗೂ "Ok" ಬಟನ್ ಕ್ಲಿಕ್ ಮಾಡಿ.

6. ಈಗ IFTTT ಟಾಸ್ಕ್‌ಗಾಗಿ ಈ ಲಿಂಕ್ link ಮೇಲೆ ಕ್ಲಿಕ್ ಮಾಡಿ. ಈಗ "+" ಬಟನ್ ಮೇಲೆ ಕ್ಲಿಕ್ ಮಾಡಿ ಅದರಲ್ಲಿ "Google Assistant" ಹುಡುಕಿ. ಇದರ ಮೇಲೆ ಕ್ಲಿಕ್ ಮಾಡಿದ ನಂತರ "Say a phrase with a text ingredient" ಆಯ್ಕೆ ಮಾಡಿಕೊಳ್ಳಿ.

7. ಈಗ ಮುಂದಿನ ಪುಟದಲ್ಲಿ ನೀವು ನಿಮ್ಮ ಪಿಸಿ ಕನೆಕ್ಟ್ ಮಾಡಲು ಉಪಯೋಗಿಸುವ ವಾಯ್ಸ್ ಕಮಾಂಡ್‌ಗಳನ್ನು ಎಂಟರ್ ಮಾಡಿ. ಇಲ್ಲಿ ನನಗೆ ಬೇಕಾಗಿರುವ ಕಮಾಂಡ್‌ಗಳನ್ನು ನಾನು ಆಯ್ಕೆ ಮಾಡಿಕೊಂಡಿದ್ದು, ನಿಮಗೆ ಬೇಕಾದಂತೆ ನೀವು ಮಾಡಿಕೊಳ್ಳಬಹುದು. ಆದರೂ ಸದ್ಯಕ್ಕೆ ಕಲಿಕೆಯಲ್ಲಿ ಯಾವುದೇ ಸಮಸ್ಯೆ ಬಾರದಂತಿರಲು ನನ್ನ ಆಯ್ಕೆಯ ಕಮಾಂಡಗಳೊಂದಿಗೇ ನೀವು ಮುಂದುವರಿಯುವುದು ಸೂಕ್ತ. "$" ಚಿಹ್ನೆಯು ನೀವು ನಿಮ್ಮ ಕಂಪ್ಯೂಟರ್‌ಗೆ ಹೇಳುವ ಟಾಸ್ಕ್ ಆಗಿರುತ್ತದೆ. ಕೊನೆಯಲ್ಲಿ "Create Trigger" ಬಟನ್ ಮೇಲೆ ಕ್ಲಿಕ್ ಮಾಡಿ.

ಸೂಚನೆ: ಗೂಗಲ್ ಅಸಿಸ್ಟಂಟ್‌ಗೆ ಸಂಬಂಧಿಸಿದಂತೆ ಏನಾದರೂ error ಮೆಸೇಜುಗಳು ಬಂದಲ್ಲಿ ಈ ಪುಟ IFTTT Settings page ಓಪನ್ ಮಾಡಿ ಅದರಲ್ಲಿ "Edit" ಬಟನ್ ಕ್ಲಿಕ್ ಮಾಡಿ. ಈಗ ನಿಮ್ಮ ಅಕೌಂಟಿನಿಂದ ಹೊಸ ಗೂಗಲ್ ಯೂಸರ್ ಸ್ಥಾಪಿಸಿ.

8. ಈಗ ಮುಂದಿನ ಪುಟದಲ್ಲಿ ವಾಕ್ಯದ "then that" ಮೇಲೆ ಕ್ಲಿಕ್ ಮಾಡಿ. ಇಲ್ಲಿ "Pushbullet" ಗಾಗಿ ಸರ್ಚ್ ಮಾಡಿ ಮತ್ತು ಅದನ್ನು ಓಪನ್ ಮಾಡಿ. ನಂತರ "Push a Note" ಮೇಲೆ ಕ್ಲಿಕ್ ಮಾಡಿ. ನಂತರ "Title" ಬಾಕ್ಸ್‌ನಲ್ಲಿ ಕಾಪಿ ಮಾಡಿಕೊಂಡ (5ನೇ ಹಂತ) ಟೆಕ್ಸ್ಟ್ ಅನ್ನು ಪೇಸ್ಟ್ ಮಾಡಿ. ಕೊನೆಯಲ್ಲಿ "Create Action" ಬಟನ್ ಕ್ಲಿಕ್ ಮಾಡಿ.

9. ಇಲ್ಲಿಗೆ ಬಹುತೇಕ ಕೆಲಸ ಮುಗಿದಂತೆ. ಈಗ ನೀವು "OK Google tell my computer to open the calculator" ಎನ್ನುವ ಮೂಲಕ ಪರಿಶೀಲನೆ ಮಾಡಬಹುದು. ಹೀಗೆ ಹೇಳಿದ ನಂತರ ಯಾವುದೇ ಸಮಸ್ಯೆ ಇಲ್ಲದೆ ಕ್ಯಾಲ್ಕುಲೇಟರ್ ಓಪನ್ ಆಗಬೇಕು. ಹಾಗೆಯೇ ಎಲ್ಲವೂ ಸರಿಯಾಗಿದೆ ಎಂದಾದಲ್ಲಿ "Pushbullet connection is good" ಎಂಬುದು ನಿಮಗೆ Push2Run ಅಪ್ಲಿಕೇಶನ್‌ನ ಬಾಟಮ್ ಬಾರ್‌ನಲ್ಲಿ ಕಾಣಿಸುತ್ತದೆ.

Push2Run ಟಾಸ್ಕ್‌ಗಳನ್ನು ಸ್ಥಾಪಿಸುವುದು

Push2Run ಟಾಸ್ಕ್‌ಗಳನ್ನು ಸ್ಥಾಪಿಸುವುದು

ನಿಮ್ಮ ಪಿಸಿಯಲ್ಲಿ ಯಶಸ್ವಿಯಾಗಿ ಗೂಗಲ್ ಅಸಿಸ್ಟಂಟ್ ಸ್ಥಾಪಿಸಿದ ನಂತರ ಈಗ ವಾಯ್ಸ್ ಕಮಾಂಡ್‌ಗಳ ಮೂಲಕ ನೀವು ಮಾಡಬಯಸುವ ಟಾಸ್ಕ್‌ಗಳನ್ನು ಸ್ಥಾಪಿಸಬೇಕು. ಉದಾಹರಣೆಗೆ- ಗೂಗಲ್ ಅಸಿಸ್ಟಂಟ್ ಬಳಸಿ ಪಿಸಿಯಲ್ಲಿ kannada.gizbot.com ಓಪನ್ ಮಾಡುವುದು ಹೇಗೆಂಬುದನ್ನು ನಾನಿಲ್ಲಿ ತೋರಿಸುತ್ತೇನೆ.

1. Push2Run ಅಪ್ಲಿಕೇಶನ್ ಓಪನ್ ಮಾಡಿ ಅದರಲ್ಲಿ "Actions" ನಂತರ "Add" ಕ್ಲಿಕ್ ಮಾಡಿ.

2. ಇಲ್ಲಿ ಕಾಣಿಸುವ ವಿಂಡೋದಲ್ಲಿಯೇ ನೀವು ಎಲ್ಲವನ್ನೂ ಡಿಫೈನ್ ಮಾಡಬೇಕಾಗುತ್ತದೆ. ಇಲ್ಲಿ ಟಾಸ್ಕ್ ಬಗ್ಗೆ ವಿವರ ತುಂಬಬಹುದು. ಉದಾಹರಣೆಗೆ - open gizbot, open gizbot.com, open gizbot website ಎಂದೆಲ್ಲ ಮಾಹಿತಿ ತುಂಬಿಸಬಹುದು. ಒಟ್ಟಾರೆಯಾಗಿ ನಿಮಗೆ ಬೇಕಾದಂತೆ ಕಮಾಂಡ್ ಕೊಡಬಹುದು. ನಂತರ "Open" ಸೆಕ್ಷನ್‌ನಲ್ಲಿ ನೇರವಾಗಿ URL ತುಂಬಬಹುದು. ಆದರೆ URL ಗಳು HTTP ಅಥವಾ www ಗಳಿಂದ ಆರಂಭವಾಗಲಿ. ಇಷ್ಟಾದ ಮೇಲೆ 'ಓಕೆ' ಕ್ಲಿಕ್ ಮಾಡಿ.

3. ಈಗ ಮೇನ್ ವಿಂಡೊದಲ್ಲಿ toggle ಆನ್ ಮಾಡಿಕೊಂಡು ಅದರಲ್ಲಿ Google Assistant ಸಮನ್ ಮಾಡಿ. ಈಗ "tell my computer to open gizbot" ಎಂದು ಹೇಳಿದಾಕ್ಷಣ ಡಿಫಾಲ್ಟ್ ಬ್ರೌಸರ್‌ನಲ್ಲಿ ವೆಬ್‌ಸೈಟ್ ಓಪನ್ ಆಗುತ್ತದೆ.

ಸೂಚನೆ: ನಾವು ಗೂಗಲ್ ಕ್ರೋಮ್‌ನಲ್ಲಿ ಕೆಲ ವೆಬ್‌ಸೈಟ್‌ಗಳನ್ನು ಓಪನ್ ಮಾಡಲು ಪ್ರಯತ್ನಿಸಿದಾಗ Push2Run ಅಥವಾ Windows 10 ನಲ್ಲಿನ ಬಹುಶಃ ಯಾವುದೋ ಬಗ್ ಕಾರಣದಿಂದ ಕೆಲಸ ಮಾಡಲಿಲ್ಲ. ಹೀಗಾಗಿ ಮೈಕ್ರೊಸಾಫ್ಟ್ ಎಡ್ಜ್ ಅನ್ನು ಡಿಫಾಲ್ಟ್ ಬ್ರೌಸರ್ ಆಗಿ ಮಾಡಿದ ನಂತರ ಎಲ್ಲವೂ ಸುಸೂತ್ರವಾಗಿ ಕೆಲಸವಾಗಲಾರಂಭಿಸಿತು. Settings -> Apps -> Default Apps -> Web Browser ವಿಧಾನದ ಮೂಲಕ ನಿಮ್ಮ ವಿಂಡೋಸ್‌ನಲ್ಲಿನ ಡಿಫಾಲ್ಟ್ ಬ್ರೌಸರ್ ಬದಲಾಯಿಸಬಹುದು.

ಯಾವುದೋ ಒಂದು ವೆಬ್‌ಸೈಟ್ ಬದಲಾಗಿ ಇನ್ನೇನೋ ವಿಷಯವನ್ನು ನೀವು ಹುಡುಕಲು ಬಯಸುವಿರಾದರೆ ನೀವು ಇನ್ನೊಂದು ಟಾಸ್ಕ್ ಅನ್ನು ಅಸೈನ್ ಮಾಡಬಹುದು. "listen for" ಕಮಾಂಡ್‌ನಲ್ಲಿ look for $, search for $ ಎಂದು ಸೇರಿಸಬಹುದು. ಇದರಲ್ಲಿ $ ಎಂಬುದು ನೀವು ಹುಡುಕುತ್ತಿರುವ ವಿಷಯವನ್ನು ಸೂಚಿಸುತ್ತದೆ. ಹಾಗೆಯೇ ಔಠಿeಟಿ ಸೆಕ್ಷನ್‌ನಲ್ಲಿ ಇದನ್ನು ಪೇಸ್ಟ್ ಮಾಡಿ: http://www.google.com/search?q=$ . ಹೀಗೆ ಮಾಡಿದಲ್ಲಿ ಗೂಗಲ್ ಸರ್ಚ ಫಲಿತಾಂಶಗಳು ದೊರಕಲು ಸಾಧ್ಯವಾಗುತ್ತದೆ. ಈಗ ಗೂಗಲ್ ಅಸಿಸ್ಟಂಟ್‌ಗೆ ಏನೇ ಹೇಳಿದರೂ ಅದನ್ನು ಹುಡುಕಾಡುತ್ತದೆ.

Most Read Articles
Best Mobiles in India

Read more about:
English summary
How To Control Your Windows PC Using Google Assistant.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more