ಏನಿದು ಲೈವ್‌ ಟೈಲ್ಸ್‌..?

By Super
|

ಏನಿದು ಲೈವ್‌ ಟೈಲ್ಸ್‌..?
ನೀವೆಲ್ಲಾ ಟೈಲ್ಸ್‌ ಬಗ್ಗೆ ಕೇಳಿರಬಹುದು. ಸಾಧರಣ ಎಲ್ಲರ ಮನೆಗಳಲ್ಲಿ ನೆಲಕ್ಕೆ ಟೈಲ್ಸ್‌ ಹಾಕುತ್ತಾರೆ. ಆದರೆ ಈಗ ಟೆಕ್‌ ಲೋಕದಲ್ಲೂ ಒಂದು ಟೈಲ್ಸ್‌ ಸುದ್ದಿ ಮಾಡುತ್ತಿದೆ.ವಿಂಡೋಸ್‌ -8 ಆವೃತ್ತಿಯ ಆಪರೇಟಿಂಗ್‌ ಸಿಸ್ಟಂನ್ನು ಮೈಕ್ರೋಸಾಫ್ಟ್‌ ಕಳೆದ ಆಕ್ಟೋಬರ್‌ ತಿಂಗಳಲ್ಲಿ ಬಿಡುಗಡೆ ಮಾಡಿದೆ. ಟಚ್ಸ್ಕ್ರೀನ್‌ನ್ನು ಸಪೋರ್ಟ್ ಮಾಡುವುದರಿಂದ ಇದು ಈಗಾಗ್ಲೇ ತುಂಬಾನೇ ಫೇಮಸ್‌ ಆಗಿಬಿಟ್ಟಿದೆ.ಇಷ್ಟೇ ಅಲ್ಲದೇ ಇದರಲ್ಲಿರುವ ಈ ಲೈವ್‌ ಟೈಲ್ಸ್‌ನಿಂದಾಗಿ ಈ ಆಪರೇಟಿಂಗ್‌ ಸಿಸ್ಟಂಮತ್ತಷ್ಟು ಫೇಮಸ್‌ ಆಗಿಬಿಟ್ಟಿದೆ.


ಈ ಲೈವ್‌ ಟೈಲ್ಸ್‌ ಕಲ್ಪನೆ ತುಂಬಾ ಸರಳ. ನೀವು ಕಂಪ್ಯೂಟರ್‌ನಲ್ಲಿ ಪ್ರತಿದಿನ ಮೈಕ್ರೋಸಾಫ್ಟ್‌ ವರ್ಡ್‌ನಲ್ಲಿ ಕೆಲಸ ಮಾಡುತ್ತಿರುತ್ತೀರಿ. ಪ್ರತಿದಿನ ನೀವು ಹೇಗೆ ಹೋಗ್ತೀರಿ ? ಮೊದಲನೆಯದಾಗಿ ಸ್ಟಾರ್ಟ್‌ ಮೆನುವಿಗೆ ಹೋಗೀ, ಪ್ರೋಗ್ರಾಮ್ಸ್‌ ಮೇನುವಿಗೆ ಸೆಲೆಕ್ಟ್‌ ಮಾಡಿ ಅಲ್ಲಿರುವ ಮೈಕ್ರೋಸಾಫ್ಟ್‌ ಆಫೀಸ್‌ಗೆ ಹೋಗ್ತಿರಿ. ಆಮೇಲೆ ಅಲ್ಲಿ ಮೈಕ್ರೋಸಾಫ್ಟ್‌ ವರ್ಡ್‌ನ್ನು ಆರಿಸಿಕೊಳ್ಳುತ್ತೀರಿ. . ನೀವು ಇದನ್ನು ಓದುವಾಗಲೇ ಕಷ್ಟಪಡುತ್ತೀರಿ ಇನ್ನು ಒಪನ್‌ ಮಾಡಬೇಕಾದ್ರೆ ಎಷ್ಟು ಕಷ್ಟಪಡುತ್ತೀರೋ ಏನೋ? ಇದು ಲಾಂಗ್‌ ಟರ್ಮ್ ಪ್ರೊಸೆಸ್‌ ಆದ್ದರಿಂದ ಅದನ್ನು ಶಾರ್ಟ್ ಕಟ್‌ ಮಾಡಿ ಎಂಸ್‌ವರ್ಡ್‌ನ್ನು ಡೆಸ್ಕ್‌ಟಾಪ್‌ಗೆ ಹಾಕಿಕೊಂಡಿರುತ್ತೀರಿ . ಇದ್ರಿಂದಾಗಿ ನೀವು ಡೈರೆಕ್ಟ್‌ ಆಗಿ ಎಂಸ್‌ವರ್ಡ್‌ನ್ನು ಒಪನ್‌ ಮಾಡಿಕೊಳ್ಳತ್ತಿರುತ್ತೀರಿ.

ಆದೇ ಮೂಲ ಕಲ್ಪನೆಯಲ್ಲೇ ಹುಟ್ಟುಕೊಂಡದ್ದು ಲೈವ್ ಟೈಲ್ಸ್‌ .ಇದರಲ್ಲಿ ನೀವು ಡೆಸ್ಕ್‌ಟಾಪ್‌ಗೆ ಅಪ್ಲಿಕೇಶನ್‌ ಹಾಕುವುದಲ್ಲ. ಬದಲಾಗಿ ಇಲ್ಲಿ ನೇರವಾಗಿ ಹೋಮ್‌ ಸ್ಕ್ರೀನ್‌ಗೆ ಅಪ್ಲಿಕೇಶನ್‌ ಹಾಕಬಹುದು. ಅದೇ ಇದರ ವಿಶೇಷತೆ. ಯಾವ ಅಪ್ಲಿಕೇಶನ್‌ ಹಾಕಿದ್ದಿರೋ ಅದು ಡೈರೆಕ್ಟ್ ಆಗಿ ಒಪನ್ ಆಗಿಬಿಡುತ್ತದೆ. ಉದಾಹರಣೆಗೆ ನೀವು ಫೇಸ್‌ಬುಕ್‌ನ್ನು ಲೈವ್‌ಟೈಲ್ಸ್‌ ಸೇರಿಸಿದ್ರೆ ನೀವು ನೇರವಾಗಿ ಸ್ಟಾರ್ಟ್‌ ಬಟನ್‌ ಇಲ್ಲದೇ ನಿಮ್ಮ ಫೇಸ್‌ಬುಕ್‌ ಅಕೌಂಟ್‌ಗೆ ಹೋಗಬಹುದು.

ಹೌದು. ಇಷ್ಟೆಲ್ಲಾ ಪೀಠಿಕೆ ಯಾಕೆ ಎಂದು ನೀವು ಕೇಳಬಹುದು. ನೀವು ಗಿಜ್ಬಾಟ್‌ ಓದಿರಬಹುದು. ನೋಕಿಯಾ ಲ್ಯೂಮಿಯಾ 920 ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದೇವೆ. ಈಗ ಇದರ ಇನ್ನೊಂದು ವೈಶಿಷ್ಟವೆನೆಂದರೆ ಇದರಲ್ಲಿ ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂ ಇರುವುದರಿಂದ ಇದರಲ್ಲೂ ಲೈವ್‌ ಟೈಲ್ಸ್‌ ಇದೆ. ಅದ್ರೆ ಲ್ಯೂಮಿಯಾ 920 ಖರೀದಿಸಿದ ಕೆಲ ಗ್ರಾಹಕರಿಗೆ ಈ ಲೈವ್‌ ಟೈಲ್ಸ್‌ ಬಗ್ಗೆ ಸಾಕಷ್ಟು ಗೊಂದಲವಿದೆ. ಸ್ಟಾರ್ಟ್ ಸ್ಕ್ರೀನ್‌ನಲ್ಲಿ ಲೈವ್‌ ಟೈಲ್ಸ್‌ ಕಾಣುವಂತೆ ಮಾಡುವುದು ಹೇಗೆ..? ಲೈವ್‌ ಟೈಲ್ಸ್‌ ರಿಸೈಜ್‌,ಮೂವ್‌ ಮತ್ತು ಅನ್‌ಪಿನ್‌ ಮಾಡುವುದು ಹೇಗೆ.? ಥೀಮ್' ಬಣ್ಣಗಳನ್ನು ಬದಲಾಯಿಸುವುದು ಹೇಗೆ..? ಇವುಗಳ ಬಗ್ಗೆ ಗೊಂದಲವಿದೆ. ಹಾಗಾಗಿ ಎಲ್ಲಾ ಓದುಗರಿಗೆ ಲೈವ್‌ ಟೈಲ್ಸ್‌ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಗಿಜ್ಬಾಟ್‌ ಅವುಗಳ ಬಗ್ಗೆಮಾಹಿತಿ ತಂದಿದೆ. ಒಂದೊಂದೆ ಪುಟ ತಿರುವಿ ನೋಡಿಕೊಂಡು ಹೋಗಿ. ಆಮೇಲೆ ಹೋಮ್‌ ಸ್ಕ್ರೀನ್‌ನಲ್ಲಿ ನಿಮ್ಮ ಇಷ್ಟದ ಲೈವ್‌ ಸ್ಟೈಲ್‌ ಅಪ್ಲಿಕೇಶನ್‌ ಹಾಕಿಕೊಳ್ಳಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X