ಜಿಮೇಲ್‌ನಲ್ಲಿ ಅನಗತ್ಯ ಮೇಲ್‌ಗಳನ್ನು ಒಂದೇ ಸಲ ಡಿಲೀಟ್‌ ಮಾಡುವುದು ಹೇಗೆ?

|

ಗೂಗಲ್‌ನ ಜನಪ್ರಿಯ ಸೇವೆಗಳಲ್ಲಿ ಜಿಮೇಲ್‌ ಸೇವೆ ಕೂಡ ಒಂದಾಗಿದೆ. ಇನ್ನು ಗೂಗಲ್‌ನ ಜಿಮೇಲ್‌ ಸೇವೆ ಸಾಕಷ್ಟು ಜನಪ್ರಿಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಕೂಡ ಬಳಸುತ್ತಾರೆ. ತಮ್ಮ ಅಗತ್ಯ ಫೈಲ್‌ಗಳನ್ನು, ರಹಸ್ಯ ಮಾಹಿತಿಗಳನ್ನು ಜಿಮೇಲ್‌ ಮೂಲಕವೇ ರವಾನಿಸುತ್ತಾರೆ. ಅಷ್ಟೇ ಅಲ್ಲ ಗೂಗಲ್‌ ಜಿಮೇಲ್‌ ಸ್ಟೋರೇಜ್‌ಗಾಗಿ 15GB ಉಚಿತ ಸ್ಟೋರೇಜ್‌ ಆಯ್ಕೆಯನ್ನು ಸಹ ನೀಡಿದೆ. 15GB ಸ್ಟೋರೇಜ್‌ ಮುಗಿದು ಹೋದರೆ ಹೆಚ್ಚುವರಿ ಸ್ಟೋರೇಜ್‌ ಅನ್ನು ಚಂದಾದಾರಿಕೆಯಲ್ಲಿ ಖರೀದಿಸಬೇಕಾಗುತ್ತದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಜಿಮೇಲ್ ನಿಂದ ಗೂಗಲ್ ಡ್ರೈವ್ ವರೆಗೆ 15GB ಉಚಿತ ಸ್ಟೋರೇಜ್‌ ಆಯ್ಕೆಯನ್ನು ನೀಡಿದೆ. ಆದರೆ ಹೆಚ್ಚಿನ ಮೇಲ್‌ಗಳು, ಫೈಲ್‌ ವರ್ಗಾವಣೆ ಆದಂತೆ ಈ ಸ್ಟೋರೇಜ್‌ ಫುಲ್‌ ಆಗುವುದರಲ್ಲಿ ಆಶ್ಚರ್ಯ ಏನಿಲ್ಲ. ಅಂತಹ ಸಮಯದಲ್ಲಿ ಹೆಚ್ಚುವರಿ ಜಾಗಕ್ಕಾಗಿ ನೀವು ಗೂಗಲ್‌ ಒನ್‌ ಚಂದಾದಾರಿಕೆಗೆ ಪಾವತಿಸಬೇಖಾಗುತ್ತದೆ. ಆದರಿಂದ ಹೀಗೆ ಹಣ ಪಾವತಿಸುವ ಬದಲು ನಿಮ್ಮ ಜಿಮೇಲ್‌ನಲ್ಲಿ ಅಗತ್ಯವಿಲ್ಲದ ಮೇಲ್‌‌ಗಳನ್ನು ಡಿಲೀಟ್‌ ಮಾಡಿ ಸ್ಪೇಸ್‌ ಉಳಿಸುವುದು ಉತ್ತಮ. ಅದರಲ್ಲೂ ಪ್ರಮೋಷನಲ್‌ ಮೇಲ್‌‌ಗಳನ್ನು ಡಿಲೀಟ್‌ ಮಾಡುವುದು ಉತ್ತಮವಾಗಿದೆ. ಹಾಗಾದ್ರೆ ಜಿಮೇಲ್‌ನಲ್ಲಿ ಪ್ರಮೋಷನಲ್‌ ಮೇಲ್‌ಗಳನ್ನು ಡಿಲೀಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಮೇಲ್‌

ಗೂಗಲ್‌ನ ಜಿಮೇಲ್‌ ಒಳಗೊಂಡಿರುವ 15GB ಸ್ಟೋರೇಜ್‌ ಅನ್ನು ಉತ್ತಮವಾಗಿ ನಿರ್ವಹಣೆ ಮಾಡಿದರೆ ಯಾವುದೇ ಸ್ಪೇಸ್‌ನ ಕೊರತೆ ಉಂಟಾಗುವುದಿಲ್ಲ. ಏಕೆಂದರೆ ಗೂಗಲ್‌ನ ಪ್ರತಿ ಅಕೌಂಟ್‌ ಕೂಡ 15GB ಫ್ರೀ ಸ್ಟೋರೇಜ್‌ ಅನ್ನು ಹೊಂದಿರಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಗೂಗಲ್‌ನ ಜಿಮೇಲ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಸೊಶೀಯಲ್‌ ಮೀಡಿಯಾ ಮೇಲ್‌ಗಳು, ಪ್ರೋಷನಲ್‌ ಮೇಲ್‌ಗಳ ಸಂಖ್ಯೆ ಹೆಚ್ಚಿರುತ್ತದೆ. ಇದನ್ನು ಬಳಕೆದಾರರು ಕೂಡ ಡಿಲೀಟ್‌ ಮಾಡುವ ಗೋಜಿಗೆ ಹೋಗಿರುವುದಿಲ್ಲ. ಇದರಿಂದ ಬಳಕೆದಾರರ ಜಿಮೇಲ್‌ ಕಾತೆಯಲ್ಲಿರುವ 15GB ಸ್ಟೋರೇಜ್‌ ಸ್ಪೇಸ್‌ ಖಾಲಿಯಾಗಿಬಿಡುತ್ತದೆ.

ಡಾಕ್ಯುಮೆಂಟ್‌

ಅಷ್ಟೇ ಅಲ್ಲ ಕೆಲವು ಮೆಗಾಬೈಟ್‌ಗಳಲ್ಲಿ ಡಾಕ್ಯುಮೆಂಟ್‌ಗಳು, ಫೈಲ್‌ಗಳು ಮತ್ತು ಚಿತ್ರಗಳ ವ್ಯಾಪ್ತಿಯನ್ನು ಪರಿಗಣಿಸಿದರೆ, 15GB ಸ್ಟೋರೇಜ್‌ ಕೂಡ ಸಾಕಾಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ ನಿಮ್ಮ ಮೇಲ್‌ನಲ್ಲಿರುವ ಅನಗತ್ಯ ಮೇಲ್‌ಗಳನ್ನು ತೆಗೆದುಹಾಕುವುದೊಂದೆ ಮಾರ್ಗ. ಬಳಕೆದಾರರು Gmail ನಲ್ಲಿ ಅನಗತ್ಯವಾಗಿ ಸ್ಟೊರೇಜ್‌ ತೆಗೆದುಕೊಂಡಿರುವ ಎಲ್ಲಾ ಪ್ರಚಾರ, ಜಂಕ್ ಮತ್ತು ಸಾಮಾಜಿಕ ಇಮೇಲ್‌ಗಳನ್ನು ಒಂದೇ ಬಾರಿಗೆ ಡಿಲೀಟ್‌ ಮಾಡಬಹುದು. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.

ಜಿ-ಮೇಲ್‌ನಲ್ಲಿ ಅನಗತ್ಯವಾಗಿರುವ ಪ್ರಮೋಷನಲ್‌ ಮೇಲ್‌ಗಳನ್ನು ಡಿಲೀಟ್‌ ಮಾಡುವುದು ಹೇಗೆ?

ಜಿ-ಮೇಲ್‌ನಲ್ಲಿ ಅನಗತ್ಯವಾಗಿರುವ ಪ್ರಮೋಷನಲ್‌ ಮೇಲ್‌ಗಳನ್ನು ಡಿಲೀಟ್‌ ಮಾಡುವುದು ಹೇಗೆ?

ಹಂತ 1: Google ನಿಂದ Inbox ಎಂದು ಕರೆಯಲ್ಪಡುವ ಇಮೇಲ್ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಿ

ಹಂತ 2: ಈಗ ಅಪ್ಲಿಕೇಶನ್‌ ತೆರೆಯಿರಿ. ಆದ್ಯತೆಯ ಇನ್‌ಬಾಕ್ಸ್ ಅನ್ನು ಆಯ್ಕೆ ಮಾಡಿ

ಹಂತ 3: ಇದರಲ್ಲಿ, ನಿಮ್ಮ ಎಲ್ಲಾ ಮೇಲ್‌ಗಳನ್ನು ಸ್ವಯಂಚಾಲಿತವಾಗಿ ವಿವಿಧ ವರ್ಗಗಳ ಆಧಾರದಲ್ಲಿ ಗುರುತಿಸಲಾಗುತ್ತದೆ.

ಹಂತ 4: ಈಗ, ನೀವು ಪ್ರತ್ಯೇಕವಾಗಿ ಮೇಲ್‌ಗಳನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇಲ್ಲ. ಬದಲಿಗೆ ನಿಮಗೆ ಅಗತ್ಯವಿಲ್ಲದ ನಿಮ್ಮ ಎಲ್ಲಾ ಮೇಲ್‌ಗಳನ್ನು ಒಂದು ನಿರ್ದಿಷ್ಟ ವಿಭಾಗದಿಂದ ಡಿಲೀಟ್‌ ಮಾಡಬಹುದು.

ಇದಲ್ಲದೆ ಜಿಮೇಲ್ ಅಪ್ಲಿಕೇಶನ್‌ ಎಡಬದಿಯಲ್ಲಿರುವ 3 ಅಡ್ಡ ರೇಖೆಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಎಲ್ಲಾ ಇಮೇಲ್‌ಗಳನ್ನು ಆಯಾ ವರ್ಗಗಳಲ್ಲಿ ಟ್ರ್ಯಾಕ್ ಮಾಡಬಹುದು.

ಸ್ಟೋರೇಜ್‌

ಇನ್ನು ಜಿಮೇಲ್‌ನಲ್ಲಿರುವ ಎಲ್ಲಾ ಮೇಲ್‌ಗಳು ನಿಮಗೆ ಅಗತ್ಯ ಎನಿಸಿ ನಿಮ್ಮ ಸ್ಟೋರೇಜ್‌ ತುಂಬಿ ಹೋದರೆ ಗೂಗಲ್‌ ಒನ್‌ ಚಂದಾದರಿಕೆ ಖರೀದಿಸಬೇಕಾಗುತ್ತದೆ. ಗೂಗಲ್‌ ಒನ್‌ ಚಂದಾದರಿಕೆಯಲ್ಲಿ ಒಂದು ವರ್ಷಕ್ಕೆ 1,300ರೂ ಪಾವತಿಸಿದರೆ, ಗೂಗಲ್‌ ಡ್ರೈವ್‌ನಲ್ಲಿ 100 GB ಸ್ಟೋರೇಜ್‌ ಸಿಗಲಿದೆ. ಇದಲ್ಲದೆ ವರ್ಷಕ್ಕೆ 2,100ರೂ ಅಥವಾ ತಿಂಗಳಿಗೆ 210ರೂ ಪಾವತಿಸುವ ಮೂಲಕ 200GB ಗೆ ದ್ವಿಗುಣಗೊಳಿಸುವ ಆಯ್ಕೆ ಇದೆ. ಇದು ಸಾಕಾಗದಿದ್ದರೆ, 2TB ಶೇಖರಣಾ ಯೋಜನೆ ಇದ್ದು ಇದಕ್ಕಾಗಿ ನೀವು ವರ್ಷಕ್ಕೆ 6,500 ರೂ. ಗಳನ್ನು ಪಾವತಿಸಬೇಕಾಗುತ್ತದೆ.

Best Mobiles in India

English summary
From Gmail to Google Drive, Google offers 15GB of free space, but there is no surprise that many exceed this limit after some time.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X