ಗೂಗಲ್ ಅಸಿಸ್ಟೆಂಟ್ ನ ವಾಯ್ಸ್ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ?

By Gizbot Bureau
|

ಗೂಗಲ್ ಅಸಿಸ್ಟೆಂಟ್ ನ ಪ್ರಸಿದ್ಧತೆಯು ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಜನರು ಸಾಕಷ್ಟು ಕಾರ್ಯಗಳನ್ನು ಗೂಗಲ್ ಅಸಿಸ್ಟೆಂಟ್ ನ ಸಹಾಯದಿಂದ ಮಾಡುತ್ತಿದ್ದಾರೆ. ಅಲಾಂ ಸೆಟ್ ಮಾಡುವುದು, ಹವಾಮಾನವನ್ನು ಪರೀಕ್ಷಿಸುವುದು, ಹೊಸ ಸುದ್ದಿಗಳನ್ನು ಅಪ್ ಡೇಟ್ ಮಾಡಿಕೊಳ್ಳುವುದು, ಸ್ಮಾರ್ಟ್ ಹೋಮ್ ಡಿವೈಸ್ ಗಳನ್ನು ಕಂಟ್ರೋಲ್ ಮಾಡುವುದು ಮತ್ತು ಇತ್ಯಾದಿ ಕೆಲಸಗಳಿಗಾಗಿ ಬಳಕೆ ಮಾಡಲಾಗುತ್ತಿದೆ.ಆದರೆ ಇದರ ಪ್ರೈವೆಸಿಯ ಬಗ್ಗೆ ನೀವು ಚಿಂತಿತರಾಗಿದ್ದಲ್ಲಿ ಒಂದು ವಿಚಾರವನ್ನು ನೀವು ಮನಸ್ಸಿನಲ್ಲಿ ಇಟ್ಟುಕೊಳ್ಳಬಹುದು.

ಗೂಗಲ್ ಅಸಿಸ್ಟೆಂಟ್ ನ ವಾಯ್ಸ್ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ?

ಗೂಗಲ್ ನಿಮ್ಮ ಪ್ರತಿಯೊಂದು ಕಮಾಂಡಿನ ಲಾಗ್ ನ್ನು ಇಟ್ಟುಕೊಂಡಿರುತ್ತದೆ ಮತ್ತು ನೀವು ಅದರ ಬಳಿ ಹೇಳಿದ ಎಲ್ಲಾ ಆಕ್ಟಿವಿಟಿಗಳು ಮತ್ತು ರಿಪ್ಲೈ ಅಥವಾ ಪ್ರತಿಕ್ರಿಯೆಗಳ ಸಹಿತ ಎಲ್ಲಾ ಟಾಸ್ಕ್ ಗಳ ವಿವರಣೆಯೂ ಇರುತ್ತದೆ. ಬಳಕೆದಾರರು ತಮ್ಮ ವಾಯ್ಸ್ ರೆಕಾರ್ಡಿಂಗ್ ಗಳನ್ನು ಕೂಡ ಪ್ಲೇ ಮಾಡಿಕೊಳ್ಳಬಹುದು.

ಗೂಗಲ್ ತಿಳಿಸುವಂತೆ, ಹಿಂದಿನ ಎಲ್ಲಾ ವಾಯ್ಸ್ ಡಾಟಾ ಅಥವಾ ಆಕ್ಟಿವಿಟಿಯನ್ನು ಸೇವ್ ಮಾಡಿ ಇಟ್ಟುಕೊಳ್ಳುವುದರಿಂದಾಗಿ ಒಟ್ಟಾರೆ ಸೇವೆಯನ್ನು ಹೆಚ್ಚಿಸುವುದಕ್ಕೆ ಸಾಧ್ಯವಾಗುತ್ತದೆ.ಆದರೆ ಇದರಲ್ಲಿ ಒಳ್ಳೆಯ ವಿಚಾರವೇನೆಂದರೆ ಗೂಗಲ್ ನಲ್ಲಿ ಬಳಕೆದಾರರು ತಮ್ಮ ಕೆಲಸದ ರಿವ್ಯೂ ಮಾಡಬಹುದು ಅಥವಾ ಗೂಗಲ್ ಅಸಿಸ್ಟೆಂಟ್ ನ ಹಿಸ್ಟರಿಯನ್ನು ಡಿಲೀಟ್ ಮಾಡುವುದಕ್ಕೂ ಕೂಡ ಅವಕಾಶವಿರುತ್ತದೆ. ಹೇಗೆ ಎಂದು ಯೋಚಿಸುತ್ತಿದ್ದೀರಾ, ನಾವಿಲ್ಲಿ ಅದರ ಹಂತಹಂತವಾದ ಮಾಹಿತಿಯನ್ನು ನೀಡಿದ್ದೀವಿ. ಮುಂದೆ ಓದಿ.

1.ವೆಬ್ ಬ್ರೌಸರ್ ಬಳಸಿ ಗೂಗಲ್ ಹಿಸ್ಟರಿಯಿಂದ ವಾಯ್ಸ್ ಡಾಟಾವನ್ನು ಡಿಲೀಟ್ ಮಾಡುವುದು

1.ವೆಬ್ ಬ್ರೌಸರ್ ಬಳಸಿ ಗೂಗಲ್ ಹಿಸ್ಟರಿಯಿಂದ ವಾಯ್ಸ್ ಡಾಟಾವನ್ನು ಡಿಲೀಟ್ ಮಾಡುವುದು

- ‘myactivity.google.com.'ನ್ನು ತೆರೆಯಿರಿ

-ಸ್ಕ್ರೀನಿನ ಎಡಭಾಗದಲ್ಲಿರುವ ‘Delete activity by' ಆಯ್ಕೆಯನ್ನು ಕ್ಲಿಕ್ಕಿಸಿ.

- ಯಾವ ಸಮಯದ ಲಾಗ್ ಗಳನ್ನು ಡಿಲೀಟ್ ಮಾಡಬೇಕು ಎಂದು ಸಮಯವನ್ನು ಆಯ್ಕೆ ಮಾಡುವ ಅವಕಾಶವೂ ಇರುತ್ತದೆ. ಅಥವಾ ಎಲ್ಲಾ ಲಾಗ್ ಗಳನ್ನು ಡಿಲೀಟ್ ಮಾಡಬಹುದು ಎಲ್ಲವನ್ನು ಡಿಲೀಟ್ ಮಾಡಲು ‘All time' ಆಯ್ಕೆಯನ್ನು ಸೆಲೆಕ್ಟ್ ಮಾಡಿ.

- ಡ್ರಾಪ್ ಡೌನ್ ಮೆನುವಿನಿಂದ ‘Voice and audio ವನ್ನು ಸೆಲೆಕ್ಟ್ ಮಾಡಿ.

-ಇದೀಗ ಡಿಲೀಟ್ ಬಟನ್ ನ್ನು ಕ್ಲಿಕ್ಕಿಸಿ.

-ಇದೀಗ ಡಿಲೀಟ್ ಬಟನ್ ನ್ನು ಕ್ಲಿಕ್ಕಿಸಿ.

-ಪಾಪ್ ಅಪ್ ವಿಂಡೋದಲ್ಲಿ ಬರುವ ಡಿಲೀಟ್ ಬಟನ್ ನ್ನು ಮತ್ತೊಮ್ಮೆ ಹಿಟ್ ಮಾಡಿ ಡಿಲೀಟ್ ನ್ನು ಖಾತ್ರಿಗೊಳಿಸಿ.

2.ಸ್ಮಾರ್ಟ್ ಫೋನ್ ಬಳಸಿ ಗೂಗಲ್ ವಾಯ್ಸ್ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ?

2.ಸ್ಮಾರ್ಟ್ ಫೋನ್ ಬಳಸಿ ಗೂಗಲ್ ವಾಯ್ಸ್ ಹಿಸ್ಟರಿ ಡಿಲೀಟ್ ಮಾಡುವುದು ಹೇಗೆ?

- ಗೂಗಲ್ ಆಪ್ ನ್ನು ತೆರೆಯಿರಿ

-ಆಪ್ ಸ್ಕ್ರೀನಿನ ಕೆಳಭಾಗದಲ್ಲಿರುವ ಮೋರ್ ಆಯ್ಕೆಯನ್ನು ಟ್ಯಾಪ್ ಮಾಡಿ.

-ನಂತರ ‘Search activity'ಯನ್ನು ಟ್ಯಾಪ್ ಮಾಡಿ

- ನಂತರ ಇದು ಸ್ವಯಂಚಾಲಿತವಾಗಿ myactivity.google.com ವೆಬ್ ಪೇಜ್ ಗೆ ಕರೆದುಕೊಂಡು ಹೋಗುತ್ತದೆ.

-ಇಲ್ಲಿ ಮೂರು ಲಂಬಾಕೃತಿಯಲ್ಲಿರುವ ಬಾರ್ ನ್ನು ಟ್ಯಾಪ್ ಮಾಡಿ. ಸ್ಕ್ರೀನಿನ ಮೇಲ್ಬಾಗದಲ್ಲಿ ಇದು ಇರುತ್ತದೆ.

- ‘Delete activity by'ಆಯ್ಕೆಯನ್ನು ಕ್ಲಿಕ್ಕಿಸಿ.

- ಟೈಮ್ ನ್ನು ಸೆಲೆಕ್ಟ್ ಮಾಡಿ ಅಥವಾ ಇರುವ ಎಲ್ಲಾ ಲಾಗ್ ಗಳನ್ನು ಡಿಲೀಟ್ ಮಾಡಿ. ಎಲ್ಲಾ ಆಕ್ಟಿವಿಟಿಯನ್ನು ಡಿಲೀಟ್ ಮಾಡಲು ಆನ್ ಟೈಮ್ ನ್ನು ಸೆಲೆಕ್ಟ್ ಮಾಡಿ.

-ಡ್ರಾಪ್ ಡೌನ್ ಮೆನುವಿನಿಂದ ‘Voice and audio" ವನ್ನು ಸೆಲೆಕ್ಟ್ ಮಾಡಿ.

-ಡಿಲೀಟ್ ಬಟನ್ ನ್ನು ಕ್ಲಿಕ್ಕಿಸಿ ಡಿಲೀಟ್ ನ್ನು ಖಾತ್ರಿಗೊಳಿಸಿ.

Best Mobiles in India

English summary
How to delete Google Assistant voice history

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X