ಜಿಯೋ ಫೋನ್‌ನಲ್ಲಿ ಆಂಡ್ರಾಯ್ಡ್‌ ಆಪ್‌ಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ ?

|

ಟೆಲಿಕಾಂ ವಲಯದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ ರಿಲಾಯನ್ಸ್‌ ಜಿಯೋ . ಎಲ್ಲರಿಗೂ ಸಂಪರ್ಕ ಕ್ರಾಂತಿ ಸಾಧ್ಯವಾಗಬೇಕೆಂಬ ಉದ್ದೇಶದಿಂದ ಕಡಿಮೆ ಬೆಲೆಯಲ್ಲಿ ಲಬ್ಯವಾಗುವ ಜಿಯೋ ಫೋನ್‌ ಪರಿಚಯಸಿತ್ತು. ಇನ್ನು ಈ ಜಿಯೋ ಫೋನ್‌ಗಳು ಯುಟ್ಯೂಬ್‌, ವಾಟ್ಸಾಪ್, ಫೇಸ್‌ಬುಕ್‌ ಅನ್ನು ಬೆಂಬಲಿಸುತ್ತವೆ. 4G ಇಂಟರ್ನೆಟ್, ಮ್ಯೂಸಿಕ್, ಯೂಟ್ಯೂಬ್ ಎಲ್ಲವೂ ಕೂಡ ಇದರಲ್ಲಿ ಲಭ್ಯವಾಗಲಿದೆ. ಇದೇ ಕಾರಣಕ್ಕೆ ಜಿಯೋ ಫೀಚರ್‌ ಫೋನ್‌ ಬಡ ವರ್ಗದ ಜನರ ಕೈನಲ್ಲಿ ರಿಂಗಣಿಸುತ್ತಿವೆ. ಇನ್ನು ಜಿಯೋ ಫೋನ್‌ಗಳು KaiOS‌ನಲ್ಲಿ ಕಾರ್ಯನಿರ್ವಹಿಸುತ್ತವೆ.

ಜಿಯೋ

ಹೌದು, ಜಿಯೋ ಫೋನ್‌ಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಫೀಚರ್‌ಫೋನ್‌ ಆಗಿವೆ. ಇನ್ನು ಈ ಜಿಯೋ ಫೋನ್‌ KaiOSನಲ್ಲಿ ಕಾರ್ಯನಿರ್ವಹಿಸುತ್ತವೆ. ಈ ಕಾರಣಕ್ಕಾಗಿ ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ಆದರೆ ಜಿಯೋ ಫೋನ್‌ನಲ್ಲಿ, ಬಳಕೆದಾರರು ಓಮ್ನಿಸ್ಡ್ ಅಪ್ಲಿಕೇಶನ್ ಮೂಲಕ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಸಹ ಬಳಸಬಹುದಾಗಿದೆ. ಹಾಗಾದ್ರೆ ಈ ಓಮ್ನಿಸ್ಡ್‌ ಆಪ್‌ ಅಂದರೆ ಏನು? ಇದನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಓಮ್ನಿಸ್ಡ್ ಅಪ್ಲಿಕೇಶನ್ ಎಂದರೇನು?

ಓಮ್ನಿಸ್ಡ್ ಅಪ್ಲಿಕೇಶನ್ ಎಂದರೇನು?

ಓಮ್ನಿಸ್ಡ್ ಅಪ್ಲಿಕೇಶನ್ ನಿಮ್ಮ ಜಿಯೋ ಫೋನ್‌ನಲ್ಲಿ ವಿವಿಧ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಸಹಾಯ ಮಾಡುವ ಥರ್ಡ್‌ ಪಾರ್ಟಿ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್‌ನ ಸಹಾಯದಿಂದ, ಜಿಯೋ ಬಳಕೆದಾರರು ಜಿಯೋ ಸ್ಟೋರ್‌ನಲ್ಲಿ ಲಭ್ಯವಿಲ್ಲದ ಇತರ ಅಪ್ಲಿಕೇಶನ್‌ಗಳನ್ನು ಸಹ ಡೌನ್‌ಲೋಡ್‌ ಮಾಡಬಹುದಾಗಿದೆ.

ಜಿಯೋ ಫೋನ್‌ನಲ್ಲಿ ಓಮ್ನಿಸ್ಡ್ ಆಪ್‌ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಜಿಯೋ ಫೋನ್‌ನಲ್ಲಿ ಓಮ್ನಿಸ್ಡ್ ಆಪ್‌ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?

ನೀವು ನಿಮ್ಮ ಜಿಯೋ ಫೋನ್‌ನಲ್ಲಿ ನೇರವಾಗಿ ಓಮ್ನಿಸ್ಡ್‌ ಆಪ್‌ ಅನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ಓಮ್ನಿಸ್ಡ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ನಿಮಗೆ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಅಗತ್ಯವಿದೆ. ಇದಕ್ಕಾಗಿ ನೀವು ಓಮ್ನಿಸ್ಡ್‌ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಓಮ್ನಿಸ್ಡ್‌ ಆಪ್‌ ಡೌನ್‌ಲೋಡ್‌ ಮತ್ತು ಇನ್‌ಸ್ಟಾಲ್‌ ಮಾಡುವುದು ಹೇಗೆ?

ಓಮ್ನಿಸ್ಡ್‌ ಆಪ್‌ ಡೌನ್‌ಲೋಡ್‌ ಮತ್ತು ಇನ್‌ಸ್ಟಾಲ್‌ ಮಾಡುವುದು ಹೇಗೆ?

ಹಂತ 1: ನಿಮ್ಮ ಜಿಯೋ ಫೋನ್ ಅನ್ನು ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗೆ ಕನೆಕ್ಟ್‌ ಮಾಡಬೇಕು.
ಹಂತ 2: ನಿಮ್ಮ ಸಿಸ್ಟಂನಲ್ಲಿ ಓಮ್ನಿಸ್ಡ್ ಜಿಪ್ ಫೈಲ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ನಂತರ ಅದನ್ನು ನಿಮ್ಮ ಜಿಯೋ ಫೋನ್‌ಗೆ ವರ್ಗಾಯಿಸಬೇಕು.
ಹಂತ 3: ನಂತರ ಓಮ್ನಿಸ್ಡ್ ಜಿಪ್ ಫೈಲ್ ಅನ್ನು ಎಸ್ಡಿ ಕಾರ್ಡ್‌ಗೆ ವರ್ಗಾಯಿಸಬೇಕು.
ಹಂತ 4: ಇದೀಗ ನೀವು ನಿಮ್ಮ ಫೋನ್ ಆನ್ ಮಾಡಿ ಮತ್ತು SD ಕಾರ್ಡ್‌ನಿಂದ ಆಪ್ಡೇಟ್‌ ಕ್ಲಿಕ್ ಮಾಡಿ.
ಹಂತ 5: ಜಿಪ್ ಫೈಲ್ ಇರುವ ಫೋಲ್ಡರ್ ಅನ್ನು ಆಯ್ಕೆ ಮಾಡಿ ಮತ್ತು ಇನ್‌ಸ್ಟಾಲ್‌ ಮಾಡಲು ಬ್ಯಾಕ್‌ ಬಟನ್ ಕ್ಲಿಕ್ ಮಾಡಿ.

ಇದೀಗ ನಿಮ್ಮ ಜಿಯೋ ಫೋನ್‌ನಲ್ಲಿ ಓಮ್ನಿಸ್ಡ್‌ ಆಪ್ಲಿಕೇಶನ್ ಇನ್‌ಸ್ಟಾಲ್‌ ಆಗಿರುತ್ತದೆ. ನಂತರ ನೀವು ನಿಮ್ಮ ಜಿಯೋ ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್, ಹಾಟ್‌ಸ್ಪಾಟ್ ಅಪ್ಲಿಕೇಶನ್ ಅನ್ನು ಸಹ ನೀವು ಬಳಸಬಹುದು.

Most Read Articles
Best Mobiles in India

English summary
The Jio Phones run on KaiOS and users can't download the Android apps on their phones. However, users can also use android apps through the Omnisd app.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X