ಟೆಲಿಗ್ರಾಮ್‌ನಲ್ಲಿ ಉಚಿತವಾಗಿ ಸಿನಿಮಾ ಡೌನ್‌ಲೋಡ್‌ ಮಾಡುವುದು ಅತೀ ಸುಲಭ!

|

ಪ್ರಸ್ತುತ ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್ ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಆ ಪೈಕಿ ಇತ್ತೀಚಿಗೆ ಟೆಲಿಗ್ರಾಮ್‌ ಆಪ್‌ ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತ ಮುನ್ನಡೆದಿದೆ. ಸೋಶಿಯಲ್‌ ಮೀಡಿಯಾಗಳು ಬಳಕೆದಾರರನ್ನು ಆಕರ್ಷಿಸಲು ಹಾಗೂ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ನೂತನ ಫೀಚರ್ಸ್‌ಗಳನ್ನು ನೀಡುತ್ತಿವೆ. ಈ ನಿಟ್ಟಿನಲ್ಲಿ ಟೆಲಿಗ್ರಾಮ್‌ ಆಪ್‌ ಟೆಕ್ಸ್ಟ್‌ ಮೆಸೆಜ್‌ ಜೊತೆಗೆ ಮೀಡಿಯಾ ಫೈಲ್‌ ಶೇರಿಂಗ್ ಆಯ್ಕೆ ಹೊಂದಿದೆ. ಇದರೊಂದಿಗೆ ಸಿನಿಮಾಗಳನ್ನು ವೀಕ್ಷಿಸಲು ಮತ್ತು ಡೌನ್‌ಲೋಡ್ ಮಾಡುವ ಆಯ್ಕೆ ಒಳಗೊಂಡಿದೆ.

ಬಳಕೆದಾರರು

ಹೌದು, ಟೆಲಿಗ್ರಾಮ್‌ ಆಪ್‌ನಲ್ಲಿ ಬಳಕೆದಾರರು ಸಿನಿಮಾಗಳನ್ನು ವೀಕ್ಷಿಸಬಹುದಾಗಿದೆ ಹಾಗೂ ಡೌನ್‌ಲೋಡ್‌ ಸಹ ಮಾಡಬಹುದಾಗಿದೆ. ಸಿನಿಮಾಗಳು ಉತ್ತಮ ಗುಣಮಟ್ಟದ ರೆಸಲ್ಯೂಶನ್ ನಲ್ಲಿ ಇರುತ್ತವೆ. ಬಳಕೆದಾರರು ಇಂಗ್ಲೀಷ್ ಮತ್ತು ಹಿಂದಿ ಸೇರಿದಂತೆ ಪ್ರಾದೇಶಿಕ ಭಾಷೆಗಳ ಸಿನಿಮಾಗಳನ್ನು ಸಹ ಸುಲಭವಾಗಿ ಡೌನ್‌ಲೋಡ್ ಮಾಡಬಹುದಾಗಿದೆ. ಹಾಗಾದರೇ ಟೆಲಿಗ್ರಾಮ್‌ ಆಪ್‌ನಲ್ಲಿ ಸಿನಿಮಾಗಳನ್ನು ಉಚಿತವಾಗಿ ಡೌನ್‌ಲೋಡ್‌ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಟೆಲಿಗ್ರಾಮ್ ಆಪ್ ಡೌನ್‌ಲೋಡ್

ಟೆಲಿಗ್ರಾಮ್ ಆಪ್ ಡೌನ್‌ಲೋಡ್

ನಿಮ್ಮ ಮೊಬೈಲ್‌ನಲ್ಲಿ ಮೊದಲಿಗೆ ಟೆಲಿಗ್ರಾಮ್‌ ಇನ್‌ಸ್ಟಾಲ್‌ ಇದ್ದರೇ ಸರಿ. ಇಲ್ಲದಿದ್ದರೇ ಟೆಲಿಗ್ರಾಮ್‌ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿರಿ. ಈ ಆಪ್‌ ಆಂಡ್ರಾಯ್ಡ್, ಐಒಎಸ್, ವಿಂಡೋಸ್ ಫೋನ್, ವೆಬ್ ಬ್ರೌಸರ್ ಮತ್ತು ಇತರೆ ವೇದಿಕೆಗಳಲ್ಲಿ ಲಭ್ಯವಿದೆ.

ಟೆಲಿಗ್ರಾಮ್‌ ಆಪ್‌ನಲ್ಲಿ ಸಿನಿಮಾ ಡೌನ್‌ಲೋಡ್ ಮಾಡಲು ಈ ಕ್ರಮ ಅನುಸರಿಸಿರಿ:

ಟೆಲಿಗ್ರಾಮ್‌ ಆಪ್‌ನಲ್ಲಿ ಸಿನಿಮಾ ಡೌನ್‌ಲೋಡ್ ಮಾಡಲು ಈ ಕ್ರಮ ಅನುಸರಿಸಿರಿ:

* ಟೆಲಿಗ್ರಾಮ್‌ ಆಪ್‌ ಡೌನ್‌ಲೋಡ್ ಮಾಡಿದ ನಂತರ ಖಾತೆ ತೆರೆಯಿರಿ.
* ನಂತರದಲ್ಲಿ ಚಾಟ್‌ ಲಿಸ್ಟ್‌ನ ಮೇಲೆ ಸರ್ಚ್ ಬಾರ್ ಕಾಣಿಸುತ್ತದೆ.
* ಸರ್ಚ್‌ ಬಾರ್‌ನಲ್ಲಿ ನೀವು ವೀಕ್ಷಿಸಬೇಕಾದ ಸಿನಿಮಾ ಸರ್ಚ್ ಮಾಡಿ.
* ಆಗ, ನೀವು ಸರ್ಚ್ ಮಾಡಿರುವ ಸಿನಿಮಾ ಇರುವ ಗ್ರೂಪ್‌ಗಳು ಕಾಣಿಸುತ್ತವೆ. ಸಿನಿಮಾ ಇರುವ ಒಂದು ಗ್ರೂಪ್‌ ಆಯ್ಕೆ ಮಾಡಿ.
* ಗ್ರೂಪ್‌ ತೆರೆದಾಗ ಸಾಕಷ್ಟು ಲಿಂಕ್‌ಗಳು ಕಾಣಿಸುತ್ತವೆ. ಡೌನ್‌ಲೋಡ್ ಮಾಡುವ ಲಿಂಕ್ ತಿಳಿಯದಿದ್ದರೇ, ಆ ಗ್ರೂಪ್‌ನ ಪ್ರೋಫೈಲ್‌ ಕ್ಲಿಕ್ ಮಾಡಿ.

ಫೈಲ್‌ಗಳು

* ಆಗ ಮೀಡಿಯಾ, ಫೈಲ್ಸ್‌, ಲಿಂಕ್ಸ್‌ ಆಯ್ಕೆಗಳು ಕಾಣಿಸುತ್ತವೆ.
* ಬಳಿಕ ಫೈಲ್ಸ್‌ ಆಯ್ಕೆ ಸೆಲೆಕ್ಟ್ ಮಾಡಿಕೊಳ್ಳಿರಿ.
* ಹಲವು ಸಿನಿಮಾಗಳು ಫೈಲ್‌ಗಳು ಕಾಣಿಸುತ್ತವೆ. ಅವುಗಳಲ್ಲಿ ನಿಮಗೆ ಬೇಕಾದ ಸಿನಿಮಾ ಹುಡುಕುವುದು ಕಷ್ಟ ಅನಿಸಿದರೇ, ಮೇಲ್ಭಾಗದ ಸರ್ಚ್ ಆಯ್ಕೆ ಕ್ಲಿಕ್ ಮಾಡಿ.
* ಸರ್ಚ್ ಬಾರ್‌ನಲ್ಲಿ ಸಿನಿಮಾ ಹೆಸರು ಟೈಪ್ ಮಾಡಿರಿ.
* ಸಿನಿಮಾ ಹೆಸರು ನಮೂದಿಸಿದ ಮೇಲೆ ಭಿನ್ನ ರೆಸಲ್ಯೂಶನ್ ಇರುವ ಕೆಲವು ಫೈಲ್‌ಗಳು ಕಾಣಿಸುತ್ತವೆ.
* ನಿಮಗೆ ಬೇಕಾದ ರೆಸಲ್ಯೂಶನ್ ಫೈಲ್‌ ಕ್ಲಿಕ್ ಮಾಡಿರಿ. ಡೌನ್‌ಲೋಡ್ ಮಾಡಬಹುದು.
* ಸಿನಿಮಾ ಫೈಲ್‌ ಮೇಲೆ ಕ್ಲಿಕ್ ಮಾಡಿ ಹೈಲೈಟ್‌ ಆದ ಮೇಲೆ, ಸೇವ್ಡ್‌ಗೆ ತಂದುಕೊಂಡು ನಂತರದಲ್ಲಿ ಡೌನ್‌ಲೋಡ್ ಮಾಡಬಹುದು.

ಟೆಲಿಗ್ರಾಮ್‌ನಲ್ಲಿ ಡೌನ್‌ಲೋಡ್‌ ಆದ ಸಿನಿಮಾ ಎಲ್ಲಿ ಸೇವ್ ಆಗಿರುತ್ತೆ?

ಟೆಲಿಗ್ರಾಮ್‌ನಲ್ಲಿ ಡೌನ್‌ಲೋಡ್‌ ಆದ ಸಿನಿಮಾ ಎಲ್ಲಿ ಸೇವ್ ಆಗಿರುತ್ತೆ?

ಬಳಕೆದಾರರು ಸೇವ್ಡ್ ಮೆಸೆಜ್‌ನಲ್ಲಿ ಬಲ ಭಾಗದ ಮೂರು ಡಾಟ್‌ ಆಯ್ಕೆಗಳಲ್ಲಿ ಸೇವ್ ಟು ಡೌನ್‌ಲೋಡ್ಸ್‌ ಮೂಲಕ ಡೌನ್‌ಲೋಡ್ ಮಾಡಿದರೇ, ನಿಮ್ಮ ಫೋನಿನ ವಿಡಿಯೋ ಪ್ಲೇಯರ್‌ನಲ್ಲಿ ಸಿನಿಮಾ ಕಾಣಿಸುತ್ತದೆ. ಒಂದು ವೇಳೆ ಹೀಗೆ ಮಾಡದಿದ್ದರೇ, ಡೌನ್‌ಲೋಡ್ ಆಗಿರುವ ಸಿನಿಮಾ ವಿಡಿಯೋ ಪ್ಲೇಯರ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಫೋನ್‌ ಫೈಲ್‌ ಮ್ಯಾನೇಜರ್‌ ಮೂಲಕ ವೀಕ್ಷಿಸಬಹುದು. ಅದಕ್ಕಾಗಿ ಹೀಗೆ ಮಾಡಿ.

ಟೆಲಿಗ್ರಾಮ್

* ನಿಮ್ಮ ಫೋನಿನಲ್ಲಿ ಫೈಲ್ ಮ್ಯಾನೇಜರ್ ತೆರೆಯಿರಿ.
* ನಂತರ ಟೆಲಿಗ್ರಾಮ್ ಫೋಲ್ಡರ್ ಕ್ಲಿಕ್ ಮಾಡಿರಿ.
* ಟೆಲಿಗ್ರಾಮ್ ಫೋಲ್ಡರ್ ತೆರೆದ ನಂತರ ಅಲ್ಲಿ ಟೆಲಿಗ್ರಾಮ್ ಡಾಕ್ಯುಮೆಂಟ್‌ ಆಯ್ಕೆ ಕ್ಲಿಕ್ ಮಾಡಿರಿ.
* ಅಲ್ಲಿ ಡೌನ್‌ಲೋಡ್ ಆಗಿರುವ ಫೈಲ್‌ ಸಿಗುತ್ತದೆ. (ಫೈಲ್ ಸಿಗದಿದ್ದರೇ ಸಾರ್ಟ್ ಬೈ ಡೇಟ್ ಮೂಲಕ ಹುಡುಕಬಹುದು)

Most Read Articles
Best Mobiles in India

English summary
How To Download Movies From Telegram: Follow These Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X