ಜಿಯೋಪೋಸ್ ಪ್ಲಸ್ ಆಪ್ಡೇಟ್‌ ಆವೃತ್ತಿಯ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ!

|

ಇತ್ತೀಚಿನ ದಿನಗಳಲ್ಲಿ ದೇಶದ ಟೆಲಿಕಾಂ ವಲಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇನ್ನು ಟೆಲಿಕಾಂ ಸಂಸ್ಥೆಗಳು ಕಡಿಮೆ ದರದ ಡೇಟಾ ಸೌಲಭ್ಯ, ಅನಿಯಮಿತ ವಾಯ್ಸ್‌ ಕಾಲ್‌, ಎಸ್‌ಎಂಎಸ್‌ ಸೇವೆಗಳನ್ನ ನೀಡಿ ಗ್ರಾಹಕರನ್ನ ಆಕರ್ಷಿಸಿವೆ. ಅಲ್ಲದೆ ಎಲ್ಲಾ ಟೆಲಿಕಾಂ ಆಪರೇಟರ್‌ಗಳು ತಮ್ಮದೇ ಆದ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ರೀಚಾರ್ಜಿಂಗ್ ಸೌಲಭ್ಯಗಳನ್ನು ನೀಡುತ್ತಿವೆ. ಯಾವುದೇ ಆಪರೇಟರ್‌ಗಳನ್ನು ಬಳಸದ ಗ್ರಾಹಕರಿಗೆ ಸಹಾಯ ಮಾಡುವುದಕ್ಕಾಗಿಯೇ ಟೆಲಿಕಾಂ ಆಪರೇಟರ್‌ಗಳು ತಮ್ಮ ರಿಚಾರ್ಜಿಂಗ್‌ ಅಪ್ಲಿಕೇಶನ್‌ನಲ್ಲಿ ವಿಶೇಷ ಫೀಚರ್ಸ್‌ಗಳನ್ನು ಸಹ ಪರಿಚಯಿಸಿವೆ. ಇವುಗಳಲ್ಲಿ ಜಿಯೋ ಸಂಸ್ಥೆಯ ರಿಲಯನ್ಸ್ ಜಿಯೋ ಜಿಯೋಪೋಸ್ ಪ್ಲಸ್ ಆಪ್‌ ಕೂಡ ಒಂದಾಗಿದೆ.

 ರಿಲಯನ್ಸ್ ಜಿಯೋ ಸಂಸ್ಥೆ

ಹೌದು, ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಗ್ರಾಹಕರು ಅಪ್ಲಿಕೇಶನ್‌ ಮೂಲಕವೇ ರೀಚಾರ್ಜಿಂಗ್‌ ಮಾಡಿಕೊಳ್ಳುವುದಕ್ಕಾಗಿದೆ. ಜಿಯೋ ಪೋಸ್ ಲೈಟ್ ಅಪ್ಲಿಕೇಶನ್ ಅನ್ನು ಸಹ ಪ್ರಾರಂಭಿಸಿದೆ, ಇದು ಯಾವುದೇ ಬಳಕೆದಾರರಿಗೆ ಪಾಲುದಾರರಾಗಲು ಮತ್ತು ಇತರರಿಗೆ ರೀಚಾರ್ಜ್ ಮಾಡುವ ಮೂಲಕ ಕಮಿಷನ್‌ ಅನ್ನು ಗಳಿಸಲು ಅನುವು ಮಾಡಿಕೊಡುತ್ತದೆ. ಈ ವರ್ಚುವಲ್ ಅಪ್ಲಿಕೇಶನ್ ಮೂಲಕ ನೀವು ಇತರರಿಗೆ ರೀಚಾರ್ಜ್‌ ಮಾಡಿದರೆ 4.16% ಕಮಿಷನ್‌ ಗಳಿಸಲು ನಿಮಗೆ ಅನುಮತಿಸುತ್ತದೆ. ಈ ಅಪ್ಲಿಕೇಶನ್‌ನ ಹೊರತಾಗಿ, ರಿಲಯನ್ಸ್ ಜಿಯೋ ಜಿಯೋಪೋಸ್ ಪ್ಲಸ್ ಎಂಬ ಆಪ್‌ ಅನ್ನು ಬಿಡುಗಡೆ ಮಾಡಿದೆ, ಇದು ಚಿಲ್ಲರೆ ವ್ಯಾಪಾರಿಗಳಿಗೆ ಅನುಕೂಲಕರ ಆಗಿದೆ. ಹಾಗಾದ್ರೆ ಈ ಅಪ್ಲಿಕೇಶನ್‌ ವಿಶೇಷತೆ ಏನು ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಜಿಯೋಪೋಸ್ ಪ್ಲಸ್ ಅಪ್ಲಿಕೇಶನ್ ಎಂದರೇನು?

ಜಿಯೋಪೋಸ್ ಪ್ಲಸ್ ಅಪ್ಲಿಕೇಶನ್ ಎಂದರೇನು?

ಚಿಲ್ಲರೆ ವ್ಯಾಪಾರಿಗಳಿಗೆ ತಮ್ಮ ಸಿಮ್, ಕೆವೈಸಿ ಮತ್ತು ಗ್ರಾಹಕರಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸಲು ಈ ಅಪ್ಲಿಕೇಶನ್ ಅನುಮತಿಸುತ್ತದೆ. ಈ ಅಪ್ಲಿಕೇಶನ್ ಅನ್ನು ಮೂಲತಃ 2019 ರಲ್ಲಿ ಪ್ರಾರಂಭಿಸಲಾಯಿತು, ಆದರೆ ಇದನ್ನು ಕಂಪನಿಯು ಇತ್ತೀಚೆಗೆ ಆಪ್ಡೇಟ್‌ ಮಾಡಿದೆ. ನೀವು ಹೊಸ ಅಥವಾ ಆಪ್ಡೇಟ್‌ ಮಾಡಿದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಬಯಸಿದರೆ, ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಜಿಯೋಪೋಸ್ ಆಪ್ ಡೌನ್‌ಲೋಡ್ ಮಾಡುವುದು ಹೇಗೆ?

ಜಿಯೋಪೋಸ್ ಆಪ್ ಡೌನ್‌ಲೋಡ್ ಮಾಡುವುದು ಹೇಗೆ?

ಹಂತ 1: ನೀವು ಜಿಯೋ ಪೋಸ್ ಪ್ಲಸ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಹಂತ 2: ನಂತರ, ನೀವು ಕೆಳಗೆ ಸ್ಕ್ರಾಲ್ ಮಾಡಿ ಹೊಸ APK ಆವೃತ್ತಿಯನ್ನು ಡೌನ್‌ಲೋಡ್ ಮಾಡಬೇಕು.
ಹಂತ 3: ಅದರ ನಂತರ, ನಿಮ್ಮನ್ನು ಇನ್ನೊಂದು ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ ಮತ್ತು ನೀವು ಅದನ್ನು ಮತ್ತೆ ಡೌನ್‌ಲೋಡ್ ಮಾಡಬೇಕು.
ಹಂತ 4: ಇದಾದ ನಂತರ ಹೊಸ ಆವೃತ್ತಿಯು ನಿಮ್ಮ ಡಿವೈಸ್‌ ನಲ್ಲಿ ಡೌನ್‌ಲೋಡ್ ಆಗಲಿದೆ.

ಇಂಟೆಲಿಜೆಂಟ್ ಹಬ್ ಅಪ್ಲಿಕೇಶನ್‌ ಮೂಲಕ ಜಿಯೋಪೋಸ್ ಆಪ್ ಡೌನ್‌ಲೋಡ್ ಮಾಡುವುದು ಹೇಗೆ?

ಇಂಟೆಲಿಜೆಂಟ್ ಹಬ್ ಅಪ್ಲಿಕೇಶನ್‌ ಮೂಲಕ ಜಿಯೋಪೋಸ್ ಆಪ್ ಡೌನ್‌ಲೋಡ್ ಮಾಡುವುದು ಹೇಗೆ?

ನೀವು ಗೂಗಲ್ ಪ್ಲೇ ಸ್ಟೋರ್‌ನಿಂದ ಇಂಟೆಲಿಜೆಂಟ್ ಹಬ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ, ನೀವು ಅಪ್ಲಿಕೇಶನ್ ಅನ್ನು ತೆರೆಯಬೇಕು. ಅಲ್ಲಿ ನಿಮ್ಮ ಪಾಲುದಾರರ ID ಯೊಂದಿಗೆ ನೀವು ಇಮೇಲ್ ವಿಳಾಸವನ್ನು ನಮೂದಿಸಬೇಕು ಮತ್ತು ನೆಕ್ಸ್ಟ್‌ ಗುಂಡಿಯನ್ನು ಟ್ಯಾಪ್ ಮಾಡಿ. ನಂತರ, ನೀವು ಎಲ್ಲಾ ಅನುಮತಿಯನ್ನು ನೀಡಬೇಕು ಮತ್ತು ಖಾತೆಗೆ ಲಾಗಿನ್ ಆಗಬೇಕು. ಅದು ಮುಗಿದ ನಂತರ, ನೀವು ಅಪ್ಲಿಕೇಶನ್‌ನ ಮುಖಪುಟವನ್ನು ನೋಡಬೇಕು. ನಂತರ, ಬ್ರೌಸರ್‌ನಲ್ಲಿ ಪಾಪ್ ಕಾಣಿಸುತ್ತದೆ ಮತ್ತು ನೀವು ಬ್ರೌಸರ್ ಅನ್ನು ಕ್ಲಿಕ್ ಮಾಡಬೇಕು. ಹೊಸ ಲಿಂಕ್ ಕಾಣಿಸುತ್ತದೆ, ಅಲ್ಲಿ ನೀವು ಎಲ್ಲಾ ಅಪ್ಲಿಕೇಶನ್‌ಗಳನ್ನು ಜಿಯೋಪೋಸ್ ಪ್ಲಸ್ ಅಪ್ಲಿಕೇಶನ್‌ನೊಂದಿಗೆ ಕಾಣಬಹುದು. ನೀವು ಡೌನ್‌ಲೋಡ್ ಬಟನ್ ಅನ್ನು ಟ್ಯಾಪ್ ಮಾಡಬೇಕು. ನಂತರ, ನಿಮ್ಮ ಸ್ಮಾರ್ಟ್‌ಫೋನ್ ಅದನ್ನು ಬಳಸಲು ಅನುಮತಿಸುತ್ತದೆಯೆ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬೇಕು. ನಂತರ, ನೀವು ಅದನ್ನು ಅಪ್‌ಗ್ರೇಡ್ ಮಾಡಲು ಟ್ಯಾಪ್ ಮಾಡಬೇಕು.

Best Mobiles in India

Read more about:
English summary
Reliance Jio has also launched a JioPos Lite application, which will enable any user to become a partner and earn commission by recharging to others.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X