ಯೂಟ್ಯೂಬ್ ವೀಡಿಯೋ ಡೌನ್ಲೋಡ್ ಮಾಡೋದ್ಹೇಗೆ?

Posted By: Staff
ಯೂಟ್ಯೂಬ್ ವೀಡಿಯೋ ಡೌನ್ಲೋಡ್ ಮಾಡೋದ್ಹೇಗೆ?

ಅಣ್ಣಾವ್ರ ಬಬ್ರುವಾಹನ ಚಿತ್ರದ "ಯಾರು ತಿಳಿಯರು ನಿನ್ನ ಭುಜ ಬಲದ ಪರಾಕ್ರಮ" ಹಾಡು ಕಲಿತ್ಕೋ ಬೇಕು ಅಂತ ಇಟ್ಕೊಳಿ, ಇಲ್ಲಾ ಸಚಿನ್ ನ 100 ನೆ ಶತಕ ಮತ್ತೆ ನೋಡಿ ಆಟದ ಮಜಾ ಮಾಡಬೇಕು ಅನ್ಕೋಳಿ ಅಥವಾ ಬೇಜಾರು ಹೋಗಲು ಯಾವುದಾದರೂ ಕಾಮೆಡಿ ವೀಡಿಯೋ ನೋಡಬೇಕು ಅಂದ್ರೆ ನಮ್ಮ ಕೈ ಮೊದಲು ಹೋಗೋದು ಯೂಟ್ಯೂಬ್ ಗೆ ತಾನೇ?

ಜಗತ್ತಿನ ಆನ್ಲೈನ್ ಟಿವಿ ಅಂದರೆ ಅದು ಯೂಟ್ಯೂಬ್. ಅದರ ಹತ್ತಿರ ಇರುವ ಆನ್ಲೈನ್ ವೀಡಿಯೋಗಳ ಸಂಗ್ರಹ ಇನ್ಯಾರ ಹತ್ತಿರವೂ ಇಲ್ಲ. ಒಂದು ಮೂಲದ ಪ್ರಕಾರ, ಪ್ರತಿ ಒಂದು ಸೆಕೆಂಡಿಗೆ ಎರಡು ಗಂಟೆಗೆ ಆಗುವಷ್ಟು ವೀಡಿಯೋ ಅಪ್ಲೋಡ್ ಆಗುತ್ತದೆಯಂತೆ.

ಆದರೆ ಈ ವೀಡಿಯೋಗಳನ್ನು ನೀವು ನೋಡಬೇಕಾದರೆ ಜಾಸ್ತಿ ಡೇಟಾ ಖರ್ಚು ಆಗುವುದರಿಂದ ಹಾಗು ಡೌನ್ಲೋಡ್ ಮಾಡಲು ಆಗದಿರುವುದರಿಂದ ಮತ್ತೆ ನಿಮ್ಮ ನೆಚ್ಚಿನ ವೀಡಿಯೋ ನೋಡಬೇಕಾದರೆ ಮತ್ತೆ ಯೂಟ್ಯೂಬ್ ಗೆ ಹೋಗಬೇಕು.

ನಿಮಗೆ ಇಷ್ಟವಾಗುವ ವೀಡಿಯೋವನ್ನ ನಿಮ್ಮ ಕಂಪ್ಯೂಟರ್ ಗೆ ಸೇವ್ ಮಾಡಿಕೊಂಡು ಯಾವಾಗ ಬೇಕು, ಆಗ ನೋಡಬಹುದಾದ ಸೌಲಭ್ಯ ಯೂಟ್ಯೂಬ್ ನಲ್ಲಿ ಇಲ್ಲದಿದ್ದರೂ ಕೂಡ ನೀವು ಉಚಿತವಾದ ಯೂಟ್ಯೂಬ್ ಕನ್ವರ್ಟರ್ ತಂತ್ರಾಂಶವನ್ನು ಇನ್ಸ್ಟಾಲ್ ಮಾಡಿಕೊಂಡು ನೀವು ಆರಾಮಾಗಿ ಸೇವ್ ಮಾಡಬಹುದು.

ಯೂಟ್ಯೂಬ್ ಕನ್ವರ್ಟರ್ ಮೂಲಕ ನೀವು ಯೂಟ್ಯೂಬ್ ನಷ್ಟೇ ಅಲ್ಲದೆ ವಿಮೆಒ, ಫೇಸ್ ಬುಕ್ ಹಾಗು ಇತರೆ ವೀಡಿಯೋ ಶೇರಿಂಗ್ ವೆಬ್ಸೈಟ್ ಗಳಿಂದಲೂ ಡೌನ್ಲೋಡ್ ಮಾಡಿ MP4, 3GP, MOV, AVI ಹಾಗು  MP3 ಫಾರ್ಮ್ಯಾಟ್ ಗಳಿಗೆ ಕನ್ವರ್ಟ್ ಮಾಡಬಹುದಾಗಿದೆ.

ಯೂಟ್ಯೂಬ್ ಡೌನ್ಲೋಡರ್ ಅನ್ನು ಡೌನ್ಲೋಡ್ ಮಾಡಿಕೊಂಡ ಮೇಲೆ ಯೂಟ್ಯೂಬ್ ನ ವೀಡಿಯೋ ವನ್ನು ನಿಮ್ಮ ಕಂಪ್ಯೂಟರ್ ಗೆ ಡೌನ್ಲೋಡ್ ಮಾಡಲು ಈ ಹಂತಗಳನ್ನು ಪಾಲಿಸಿ.

1) ಡೌನ್ಲೋಡ್ ಮಾಡಬೇಕಿರುವ ವೀಡಿಯೋದ URL ಅನ್ನು copy ಮಾಡಿಕೊಂಡು  ಯೂಟ್ಯೂಬ್ ಡೌನ್ಲೋಡರ್ open ಮಾಡಿ.

2) open ಮಾಡಿದ ತಕ್ಷಣ URL ಅದೇ ಬೇಕಾದ ಜಾಗದಲ್ಲಿ paste ಆಗುತ್ತದೆ.

3) ನಮಗೆ ಬೇಕಾದ ಕ್ವಾಲಿಟಿ ಹಾಗು ಕಂಪ್ಯೂಟರ್ ನಲ್ಲಿ ಎಲ್ಲಿ save ಮಾಡಬೇಕೋ ಆ Folder ಅನ್ನು ಕ್ಲಿಕ್ ಮಾಡಿ.

4) ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ.

5) ಡೌನ್ಲೋಡ್ ಆದ ಮೇಲೆ ಕ್ಲಿಕ್ ಮಾಡಿ ಪ್ಲೇ ಮಾಡಬಹುದು.

ಯೂಟ್ಯೂಬ್ ಕನ್ವರ್ಟರ್ ಅನ್ನು ಡೌನ್ಲೋಡ್ ಮಾಡಲು ಇಲ್ಲಿ ಹೋಗಿ-  http://youtubedownload.altervista.org/

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot