ಯೂಟ್ಯೂಬ್ ವಿಡಿಯೊಗಳನ್ನು ಬಲ್ಕ್ ಆಗಿ ಡೌನ್‌ಲೋಡ್ ಮಾಡುವುದು ಹೇಗೆ ಗೊತ್ತಾ?

|

ಗೂಗಲ್ ಮಾಲೀಕತ್ವದ ಯೂಟ್ಯೂಬ್ ಅಪ್ಲಿಕೇಶನ್ ಬೆಸ್ಟ್ ವಿಡಿಯೊ ಕಂಟೆಂಟ್ ಪ್ಲಾಟ್‌ಫಾರ್ಮ್ ಆಗಿ ಗುರುತಿಸಿಕೊಂಡಿದೆ. ಪ್ರಸ್ತುತ ನೆಕ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ನಂತಹ ವಿಡಿಯೊ ಸ್ಟ್ರೀಮಿಂಗ್ ತಾಣಗಳು ಟ್ರೆಂಡಿಂಗ್‌ನಲ್ಲಿದ್ದರೂ, ಯೂಟ್ಯೂಬ್ ಇನ್ನೂ ತನ್ನ ಜನಪ್ರಿಯತೆ ಉಳಿಸಿಕೊಂಡು ಮುನ್ನಡೆಯುತ್ತಿದೆ. ಹಾಗೆಯೇ ಬಳಕೆದಾರರು ಯೂಟ್ಯೂಬ್ ಅಪ್ಲಿಕೇಶನ್‌ನಿಂದ ವಿಡಿಯೊಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಯೂಟ್ಯೂಬ್

ಹೌದು, ಯೂಟ್ಯೂಬ್ ಪ್ಲಾಟ್‌ಫಾರ್ಮ್ ನಲ್ಲಿ ವಿಡಿಯೊಗಳನ್ನು ಡೌನ್‌ಲೋಡ್ ಮಾಡುವ ಅವಕಾಶ ಇದೆ. ಬಳಕೆದಾರರು ಒಂದೊಂದೇ ವಿಡಿಯೊ ಡೌನ್‌ಲೋಡ್ ಮಾಡಬಹುದಾಗಿದೆ. ಇದರೊಂದಿಗೆ ಬೇಕಿದ್ದರೇ ಬಲ್ಕ ಆಗಿಯೂ ಸಹ ವಿಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಹಾಗಾದರೇ ಯೂಟ್ಯೂಬ್ ವಿಡಿಯೊಗಳನ್ನು ಬಲ್ಕ್ ಆಗಿ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

4K Video

ಕಂಪ್ಯೂಟರ್‌ನಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ಬಲ್ಕ್ ಆಗಿ ಡೌನ್‌ಲೋಡ್ ಮಾಡಬಹುದಾಗಿದೆ. ಅದಕ್ಕಾಗಿ 4K Video Downloader ಥರ್ಡ್‌ಪಾರ್ಟಿ ಅಪ್ಲಿಕೇಶನ್ ಸೂಕ್ತ ವೇದಿಕೆ ನೀಡುತ್ತದೆ. ಈ ಆಪ್‌ ಮೂಲಕ ಬಳಕೆದಾರರು YouTube ವಿಡಿಯೊಗಳನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಹಾಗೆಯೇ ವಿಂಡೋಸ್ ಅಥವಾ ಮ್ಯಾಕ್‌ನಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ಬಲ್ಕ್ ಆಗಿ ಡೌನ್‌ಲೋಡ್ ಮಾಡಲು ಅವಕಾಶವಿದೆ.

ಆಪ್‌ ಮೂಲಕ YouTube ವಿಡಿಯೊಗಳನ್ನು ಬಲ್ಕ್ ಡೌನ್‌ಲೋಡ್‌ ಮಾಡಲು ಈ ಕ್ರಮ ಅನುಸರಿಸಿ:

ಆಪ್‌ ಮೂಲಕ YouTube ವಿಡಿಯೊಗಳನ್ನು ಬಲ್ಕ್ ಡೌನ್‌ಲೋಡ್‌ ಮಾಡಲು ಈ ಕ್ರಮ ಅನುಸರಿಸಿ:

* 4K ವಿಡಿಯೋ ಡೌನ್‌ಲೋಡರ್ ಆಪ್ ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಹಾಗೂ ಆಪ್‌ ಅನ್ನು ತೆರೆಯಿರಿ.

* ಈಗ ನಿಮ್ಮ ಕಂಪ್ಯೂಟರ್‌ನಲ್ಲಿ ಯಾವುದೇ YouTube ಚಾನಲ್ ತೆರೆಯಿರಿ> Playlists ಕ್ಲಿಕ್ ಮಾಡಿ> ಯಾವುದೇ Playlists ಬಲಭಾಗ ಕ್ಲಿಕ್ ಮಾಡಿ ಮತ್ತು ಲಿಂಕ್ ಕಾಪಿ ಮಾಡಿ ಕ್ಲಿಕ್ ಮಾಡಿ.

* 4K ವಿಡಿಯೋ ಡೌನ್‌ಲೋಡರ್ ಅಪ್ಲಿಕೇಶನ್‌ಗೆ ಬದಲಾಯಿಸಿ ಮತ್ತು ಪೇಸ್ಟ್‌ ಲಿಂಕ್ ಅನ್ನು ಒತ್ತಿರಿ. ನಂತರ ಡೌನ್‌ಲೋಡ್ Playlists ಕ್ಲಿಕ್ ಮಾಡಿ.

ವೆಬ್‌ಸೈಟ್‌ ಮೂಲಕ ಯೂಟ್ಯೂಬ್ ವಿಡಿಯೊ ಡೌನ್‌ಲೋಡ್ ಮಾಡಲು ಹೀಗೆ ಮಾಡಿರಿ:

ವೆಬ್‌ಸೈಟ್‌ ಮೂಲಕ ಯೂಟ್ಯೂಬ್ ವಿಡಿಯೊ ಡೌನ್‌ಲೋಡ್ ಮಾಡಲು ಹೀಗೆ ಮಾಡಿರಿ:

* ನಿಮ್ಮ ಕಂಪ್ಯೂಟರ್‌ನಲ್ಲಿ ಯಾವುದೇ YouTube ಚಾನಲ್ ತೆರೆಯಿರಿ> Playlists ಕ್ಲಿಕ್ ಮಾಡಿ> ಯಾವುದೇ Playlistsನ ಬಲಭಾಗ ಕ್ಲಿಕ್ ಮಾಡಿ ಮತ್ತು ಲಿಂಕ್ ಕಾಪಿ ಕ್ಲಿಕ್ ಮಾಡಿ.

* ಹೊಸ ಟ್ಯಾಬ್‌ನಲ್ಲಿ, YouTubePlaylist.cc ಗೆ ಭೇಟಿ ನೀಡಿ ಮತ್ತು ಹೊಸ ಖಾತೆಯನ್ನು ರಚಿಸಿ.

* ಅದು ಮುಗಿದ ನಂತರ, YouTube ಪ್ಲೇಪಟ್ಟಿ ವೆಬ್‌ಸೈಟ್‌ನಲ್ಲಿನ ಹುಡುಕಾಟ ಪಟ್ಟಿಯಲ್ಲಿ YouTube ಲಿಂಕ್ ಅನ್ನು ಪೇಸ್ಟ್ ಮತ್ತು ಎಂಟರ್ ಒತ್ತಿರಿ.

* ವೆಬ್‌ಸೈಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿ. ಅದು ಮುಗಿದ ನಂತರ, ಎಲ್ಲಾ ಫೈಲ್‌ಗಳು ಡೌನ್‌ಲೋಡ್ ಮಾಡಲು ಸಿದ್ಧವಾಗುತ್ತವೆ. ನೀವು ಮಾಡಬೇಕಾಗಿರುವುದು ಎಲ್ಲಾ ಶೀರ್ಷಿಕೆ ವೀಡಿಯೊವನ್ನು ಟಿಕ್ ಮಾಡುವುದು ಮತ್ತು ನೀವು ಹೊಂದಿಸಿರುವಿರಿ.

Most Read Articles
Best Mobiles in India

English summary
There are a bunch of options that let you download multiple videos from YouTube at once.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X