ಯೂಟ್ಯೂಬ್‌ ವೀಡಿಯೋಗಳ ಡೌನ್‌ಲೋಡ್‌ ಹೇಗೆ?

By Suneel
|

ಬಹುಸಂಖ್ಯಾತರು ಸಾಮಾಜಿಕ ಜಾಲತಾಣ ಬಳಸುತ್ತಾ ತಮಗೆ ಇಷ್ಟವಾದ ಎಷ್ಟೋ ವೀಡಿಯೋಗಳನ್ನು ಇತರರಿಗೂ ತೋರಿಸಬೇಕೆಂದು ಇಷ್ಟಪಡುತ್ತಾರೆ. ಆದ್ರೆ ವೀಡಿಯೋ ಡೌನ್‌ಲೋಡ್‌ ಮಾಡಲು ಬರುವುದಿಲ್ಲ. ಹಾಗೆ ಯೂಟ್ಯೂಬ್‌ನಲ್ಲೂ ಸಹ ಇಷ್ಟವಾದ ವೀಡಿಯೋಗಳನ್ನು ಇತರರಿಗೂ ತೋರಿಸಲು ಇಷ್ಟಪಡುತ್ತಾರೆ. ಆದರೆ ಯೂಟ್ಯೂಬ್‌ನಲ್ಲೂ ಸಹ ಎಲ್ಲಾ ವೀಡಿಯೋಗಳು ನೇರವಾಗಿ ಡೌನ್‌ಲೋಡ್‌ ಆಗುವುದಿಲ್ಲ.

ವೀಡಿಯೋ ಲಿಂಕ್‌ ಕಳುಹಿಸಿದರೆ ಆನ್‌ಲೈನ್ ಬಳಸುವ ಇತರರು ಸಹ ಮಾಹಿತಿ, ಮನರಂಜನೆಯುಳ್ಳ ವೀಡಿಯೋಗಳನ್ನು ನೋಡಬಹುದು. ಆದ್ರೆ ಆಫ್‌ಲೈನ್‌ ಇರುವವರಿಗೆ ವೀಡಿಯೋ ತೋರಿಸಲು ವೀಡಿಯೋಗಳನ್ನು ಡೌನ್‌ಲೋಡ್ ಮಾಡಲೇಬೇಕು. ಆದ್ದರಿಂದ ಯೂಟ್ಯೂಬ್‌ನಲ್ಲಿನ ಇಷ್ಟವಾದ ವೀಡಿಯೋಗಳನ್ನು ಡೌನ್‌ಲೋಡ್‌‌ ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಗಿಜ್‌ಬಾಟ್‌ ನಿಮಗೆ ತಿಳಿಸುತ್ತಿದೆ.

ಯೂಟ್ಯೂಬ್‌ ಡೌನ್‌ಲೋಡರ್‌ ಎಚ್‌ಡಿ

ಯೂಟ್ಯೂಬ್‌ ಡೌನ್‌ಲೋಡರ್‌ ಎಚ್‌ಡಿ

ಮೊದಲಿಗೆ "ಯೂಟ್ಯೂಬ್‌ ಡೌನ್‌ಲೋಡರ್‌ ಎಚ್‌ಡಿ" ಸಾಫ್ಟ್‌ವೇರ್‌ ಅನ್ನು ಡೌನ್‌ಲೋಡ್‌ ಮಾಡಿ. ಇನ್‌ಸ್ಟಾಲ್‌ ಮಾಡಿ, ಸಾಫ್ಟ್‌ವೇರ್ ಲಾಂಚ್‌ ಮಾಡಿ.
ಸಾಫ್ಟ್‌ವೇರ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ವೀಡಿಯೋ ಗುಣಮಟ್ಟ

ವೀಡಿಯೋ ಗುಣಮಟ್ಟ

ಯೂಟ್ಯೂಬ್‌ನಲ್ಲಿನ ಹಲವು ವೀಡಿಯೋಗಳು ಹಲವು ಗುಣಮಟ್ಟ (ಕ್ವಾಲಿಟಿ)ದಲ್ಲಿ ಇರುತ್ತದೆ. ಆದ್ದರಿಂದ ವೀಡಿಯೋ ಕ್ವಾಲಿಟಿಯನ್ನು ಡೌನ್‌ಲೋಡ್‌ ಡ್ರಾಪ್‌ಡೌನ್‌ ಮೆನುವಲ್ಲಿ ಆಯ್ಕೆ ಮಾಡಿ. ಉದಾಹರಣೆಗೆ: 240p, Full HD

 ವೀಡಿಯೋ ಕನ್ವರ್ಟ್‌

ವೀಡಿಯೋ ಕನ್ವರ್ಟ್‌

ಕೆಲವೊಂದು ವೀಡಿಯೋಗಳನ್ನು ನೀವು FLV ಮತ್ತು AVI ಅಥವಾ MP4 ಫಾರ್ಮ್ಯಾಟ್‌ಗೆ ಬದಲಿಸಬಹುದಾಗಿದೆ. ನಿಮ್ಮ ಕಂಪ್ಯೂಟರ್‌ನಲ್ಲಿನ ಪ್ಲೇಯರ್‌ ಯಾವ ಫಾರ್ಮ್ಯಾಟ್‌ ಸಪೋರ್ಟ್‌ ಮಾಡುತ್ತದೆ ಎಂದು ತಿಳಿಯಿರಿ.

ವೀಡಿಯೋ URL

ವೀಡಿಯೋ URL

ನೀವು ಡೌನ್‌ಲೋಡ್‌ ಮಾಡಬೇಕಾದ ವೀಡಿಯೋ ವಿಳಾಸವನ್ನು ನಕಲಿ ಮಾಡಿ (Copy) ಮಾಡಿಕೊಂಡು, ಲಾಂಚ್‌ ಮಾಡಿರುವ "ಯೂಟ್ಯೂಬ್‌ ಡೌನ್‌ಲೋಡ್‌ ಎಚ್‌ಡಿ" ಸಾಫ್ಟ್‌ವೇರ್‌ನಲ್ಲಿ Video URL ಕ್ಷೇತ್ರದಲ್ಲಿ ಪೇಸ್ಟ್‌ (paste) ಮಾಡಿ. 1 ನೇ ಸ್ಲೈಡರ್‌ ಚಿತ್ರ ನೋಡಿದರೆ ತಿಳಿಯುತ್ತದೆ.

ವೀಡಿಯೋ ಉಳಿಸಿ  (Save Video)

ವೀಡಿಯೋ ಉಳಿಸಿ (Save Video)

ಡೌನ್‌ಲೋಡ್‌‌ ಮಾಡುವ ವೀಡಿಯೋವನ್ನು ಯಾವುದಾದರೂ ಸ್ಥಳದಲ್ಲಿ ಉಳಿಸಲು Save to ಕ್ಷೇತ್ರವನ್ನು ತುಂಬಿರಿ. ಅಂದರೆ ವೀಡಿಯೋ ಎಲ್ಲಿ Save ಆಗಬೇಕು ಎಂದು ಟೈಪಿಸಿ.

ಡೌನ್‌ಲೋಡ್‌ ಬಟನ್‌

ಡೌನ್‌ಲೋಡ್‌ ಬಟನ್‌

ನೀವು ಆಯ್ಕೆ ಮಾಡಿದ ವೀಡಿಯೋ ಫಾರ್ಮ್ಯಾಟ್‌ ಸಪೋರ್ಟ್ ಮಾಡದಿದ್ದರೆ ಸಾಫ್ಟ್‌ವೇರ್‌ ನಂತರದ ಫಾರ್ಮ್ಯಾಟ್‌ನಲ್ಲಿ ಡೌನ್‌ಲೋಡ್‌ ತೆಗೆದುಕೊಳ್ಳುತ್ತದೆ. ಮೇಲಿನ ಹಂತಗಳನ್ನೆಲ್ಲ ಅನುಸರಿಸಿದ ನಂತರ ಕೊನೆಯಲ್ಲಿ ಡೌನ್‌ಲೋಡ್ ಬಟನ್‌ ಅನ್ನು ಕ್ಲಿಕ್‌ ಮಾಡಿ.

ಯೂಟ್ಯೂಬ್‌ ಡೌನ್‌ಲೋಡ್‌ ಎಚ್‌ಡಿ

ಯೂಟ್ಯೂಬ್‌ ಡೌನ್‌ಲೋಡ್‌ ಎಚ್‌ಡಿ

ಯೂಟ್ಯೂಬ್‌ ಡೌನ್‌ಲೋಡ್‌ ಎಚ್‌ಡಿ ಸಾಫ್ಟ್‌ವೇರ್‌ ಏಕಕಾಲದಲ್ಲಿ ಹಲವು ವೀಡಿಯೋಗಳನ್ನು ಡೌನ್‌ಲೊಡ್‌ ಮಾಡಲು ಅವಕಾಶ ನೀಡುತ್ತದೆ.

ವೀಡಿಯೋ ಡೌನ್‌ಲೋಡ್‌ ಇತರೆ ವಿಧಾನ

ವೀಡಿಯೋ ಡೌನ್‌ಲೋಡ್‌ ಇತರೆ ವಿಧಾನ

ಯೂಟ್ಯೂಬ್‌ನಲ್ಲಿ ಯಾವುದಾದರೂ ವೀಡಿಯೋ ಪ್ಲೇ ಮಾಡಿ. ವೀಡಿಯೋ URL ನಲ್ಲಿ ಉದಾಹರಣೆಗೆ "https://www.youtube.com/watch?v=lVrOnmh9PzE" ಹೀಗಿದ್ದರೆ ಈ ವಿಳಾಸದಲ್ಲಿ www ಅಕ್ಷರಗಳನ್ನು ತೆಗೆದು "ss" ಎಂದು ಟೈಪ್‌ ಮಾಡಿ ಎಂಟರ್‌ ಬಟನ್ ಪ್ರೆಸ್‌ ಮಾಡಿ. ನಂತರ ಹಲವು ವೀಡಿಯೋ ಫಾರ್ಮ್ಯಾಟ್‌ಗಳಿರುವ ಇನ್ನೊಂದು ವೆಬ್‌ಪೇಜ್‌ ಓಪನ್ ಆಗುತ್ತದೆ. ನಿಮಗೆ ಯಾವ ವೀಡಿಯೋ ಫಾರ್ಮ್ಯಾಟ್‌ ಬೇಕು ಎಂಬುದನ್ನು ಆಯ್ಕೆ ಮಾಡಿ ಅದರ ಮೇಲೆ ಕ್ಲಿಕ್ ಮಾಡಿ. ವೀಡಿಯೋ ನೇರವಾಗಿ ಡೌನ್‌ಲೋಡ್ ಆಗುತ್ತದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ

ಶೇ.50 ಮೊಬೈಲ್‌ ಬಳಕೆದಾರರಿಗೆ ಬೆನ್ನುಹುರಿಕೆ ರೋಗ: ಅಧ್ಯಯನಶೇ.50 ಮೊಬೈಲ್‌ ಬಳಕೆದಾರರಿಗೆ ಬೆನ್ನುಹುರಿಕೆ ರೋಗ: ಅಧ್ಯಯನ

ಅಶ್ಲೀಲ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌ ಮಾಡುವುದು ಹೇಗೆ?ಅಶ್ಲೀಲ ವೆಬ್‌ಸೈಟ್‌ಗಳನ್ನು ಕಂಪ್ಯೂಟರ್‌ನಲ್ಲಿ ಬ್ಲಾಕ್‌ ಮಾಡುವುದು ಹೇಗೆ?

ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಯಾರಿಗೂ ತಿಳಿಯದ ರಹಸ್ಯ ಟ್ರಿಕ್ಸ್‌ಗಳುಫೇಸ್‌ಬುಕ್ ಮೆಸೇಂಜರ್‌ನಲ್ಲಿ ಯಾರಿಗೂ ತಿಳಿಯದ ರಹಸ್ಯ ಟ್ರಿಕ್ಸ್‌ಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
How to Download YouTube Videos. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X