ಗೂಗಲ್‌ ಮ್ಯಾಪ್ಸ್‌ನ ಹೊಸ ಫೀಚರ್‌ ಬಳಸಿ.. ಬ್ಯುಸಿನೆಸ್‌ನಲ್ಲಿ ಲಾಭ ಗಳಿಸಿ..!

By Gizbot Bureau
|

ತನ್ನ ಬಳಕೆದಾರರಿಗೆ ಯಾವಾಗಲೂ ಹೊಸತನ್ನು ನೀಡಬೇಕೆಂಬ ಅಭಿಲಾಷೆ ಹೊಂದಿರುವ ಸರ್ಚ್ ಇಂಜಿನ್‌ ದೈತ್ಯ ಗೂಗಲ್ ತನ್ನ ಗೂಗಲ್ ಮ್ಯಾಪ್ಸ್‌ ಸೇವೆಯಲ್ಲಿ ವ್ಯಾಪಾರಿಗಳಿಗೆ ಕೆಲವು ಹೊಸ ಫೀಚರ್‌ಗಳನ್ನು ನೀಡುತ್ತಿದೆ. ಹೊಸ ಫೀಚರ್‌ಗಳು ಗೂಗಲ್‌ ಮ್ಯಾಪ್ಸ್‌ ಬಳಕೆದಾರರಿಗೆ ರಿವಾರ್ಡ್‌ಗಳನ್ನು ನೀಡಲು ವ್ಯಾಪಾರಿಗಳಿಗೆ ಅನುವು ಮಾಡಿಕೊಡುತ್ತಿದೆ. ವ್ಯಾಪಾರಿಗಳು ರಿವಾರ್ಡ್‌ ನೀಡುವ ಮೂಲಕ ತಮ್ಮ ಅಂಗಡಿಗಳಲ್ಲಿಯೇ ಗೂಗಲ್‌ ಮ್ಯಾಪ್ಸ್‌ ಬಳಕೆದಾರರು ಉತ್ಪನ್ನಗಳನ್ನು ಖರೀದಿಸುವಂತೆ ಮಾಡಬಹುದಾಗಿದೆ.

ಗೂಗಲ್‌ ಮ್ಯಾಪ್ಸ್‌ನ ಹೊಸ ಫೀಚರ್‌ ಬಳಸಿ.. ಬ್ಯುಸಿನೆಸ್‌ನಲ್ಲಿ ಲಾಭ ಗಳಿಸಿ..!

ಐದು ವರ್ಷಗಳ ಹಿಂದೆ ಗೂಗಲ್ ಮೈ ಬಿಸಿನೆಸ್ ಪ್ರಾರಂಭವಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಕಂಪನಿ 150 ಮಿಲಿಯನ್ ಸ್ಥಳೀಯ ವ್ಯವಹಾರಗಳನ್ನು ಆನ್‌ಲೈನ್‌ನಲ್ಲಿ ನೆಟ್ಟಿಗರೊಂದಿಗೆ ಸಂಪರ್ಕ ಸಾಧಿಸಲು ನೆರವಾಗಿದೆ.

ಹೊಸ ಫೀಚರ್‌ಗಳು

ಹೊಸ ಫೀಚರ್‌ಗಳು

ಗೂಗಲ್‌ ಕಂಪನಿ ತನ್ನ ಗೂಗಲ್‌ ಮ್ಯಾಪ್ಸ್‌ಗೆ ದಿನದಿಂದ ದಿನಕ್ಕೆ ಹೊಸ ಫೀಚರ್‌ಗಳನ್ನು ಸೇರಿಸುತ್ತಿದೆ. ಮೊಬೈಲ್‌ಗಾಗಿ ಹೊಸ ವಿನ್ಯಾಸ ಪರಿಚಯಿಸಲಾಗಿದ್ದು, ಅಪ್‌ಡೇಟ್‌ ನಂತರ ಗೂಗಲ್ ಮ್ಯಾಪ್ಸ್‌ನ ಬಳಕೆದಾರರು ವ್ಯವಹಾರಗಳನ್ನು ಹುಡುಕಲು ಹೆಚ್ಚು ಸುಲಭ ಮಾಡಿದೆ. ಉದಾಹರಣೆಗೆ, ವ್ಯಾಪಾರಿಗಳು ಈಗ ತಮ್ಮ ವ್ಯವಹಾರಕ್ಕಾಗಿ ಹೆಸರು ಮತ್ತು URL ಪಡೆಯಬಹುದಾಗಿದ್ದು, ಈ URLನಿಂದ ಗ್ರಾಹಕರು ವ್ಯವಹಾರಗಳನ್ನು ತಮ್ಮ ಪ್ರೊಫೈಲ್‌ಗೆ ಸುಲಭವಾಗಿ ಸೇರಿಸಬಹುದು. ಇತ್ತೀಚಿನ ಅಪ್‌ಡೇಟ್‌ಗಳನ್ನು ತಿಳಿಯಬಹುದು, ಬುಕ್ಕಿಂಗ್‌ ಮಾಡಬಹುದು ಮತ್ತು ವಿಮರ್ಶೆಯನ್ನು ಕೂಡ ಬರೆಯಬಹುದಾಗಿದೆ.

ಗ್ರಾಹಕರ ಆಕರ್ಷಣೆಗೆ ಫೀಚರ್‌

ಗ್ರಾಹಕರ ಆಕರ್ಷಣೆಗೆ ಫೀಚರ್‌

ಇನ್ನು, ಗೂಗಲ್ ಮ್ಯಾಪ್ಸ್‌ನಲ್ಲಿ ತಮ್ಮ ವ್ಯವಹಾರವನ್ನು ಫಾಲೋ ಮಾಡುವ ಗ್ರಾಹಕರಿಗೆ ರಿವಾರ್ಡ್‌ ನೀಡಲು ವ್ಯಾಪಾರಿಗಳಿಗೆ ಅವಕಾಶವಿದೆ. ಗ್ರಾಹಕರಿಗೆ ಸ್ವಾಗತ ಕೊಡುಗೆಗಳು, ರಿಯಾಯಿತಿಗಳು ಮತ್ತು ಬಹುಮಾನಗಳನ್ನು ವ್ಯಾಪಾರಿಗಳು ನೀಡಬಹುದು. ಇಷ್ಟೇ ಅಲ್ಲದೇ ಸಂಭಾವ್ಯ ಗ್ರಾಹಕರಿಗೆ ಅಂಗಡಿಯನ್ನು ಹೆಚ್ಚು ಇಷ್ಟಪಡುವಂತೆ ಮಾಡಲು ಗೂಗಲ್‌ ವ್ಯಾಪಾರಿಗಳಿಗೆ ಇಷ್ಟದ ಪ್ರೊಫೈಲ್ ಫೋಟೋ ಹೊಂದಿಸುವ ಆಯ್ಕೆಯನ್ನು ಸಹ ನೀಡಿದೆ.

ಆಕರ್ಷಕ ಪ್ರೊಫೈಲ್

ಆಕರ್ಷಕ ಪ್ರೊಫೈಲ್

ವ್ಯಾಪಾರಿಗಳಿಂದ ಅಪ್‌ಲೋಡ್ ಮಾಡಿದ ಫೋಟೋಗಳು ಬ್ಯುಸಿನೆಸ್ ಪ್ರೊಫೈಲ್‌ನಲ್ಲಿ ಹೊಸ ಡೈನಾಮಿಕ್ ಮಾದರಿಯಲ್ಲಿ ತ್ವರಿತವಾಗಿ ಹಾಗೂ ಆಕರ್ಷಕವಾಗಿ ಕಾಣುತ್ತವೆ. ಇದರ ಜೊತೆ ಫೋಟೋ ಶೀರ್ಷಿಕೆಗಳು ಕೂಡ ಇರಲಿದ್ದು, ವ್ಯಾಪಾರಿಗಳಿಗೆ ಫೋಟೋಗಳ ಹಿಂದೆ ಇರುವ ಕಥೆಯನ್ನು ಹೇಳುವ ಅವಕಾಶ ಕೂಡ ಗೂಗಲ್‌ ಮ್ಯಾಪ್ಸ್‌ನ ಹೊಸ ಫೀಚರ್‌ನಲ್ಲಿ ಸಿಗಲಿದೆ.

ಉತ್ತಮ ಸೇವೆ

ಉತ್ತಮ ಸೇವೆ

ಜನರಿಗೆ ತನ್ನ ಸೇವೆಗಳಿಂದ ಉತ್ತಮ ಅನುಭವ ನೀಡಲು ಗೂಗಲ್‌ ಬಯಸುತ್ತದೆ. ಅದರಂತೆ ಗ್ರಾಹಕರಿಗೆ ಉತ್ತಮ ಅನುಭವ ನೀಡಿದ ವ್ಯವಹಾರಗಳನ್ನು ಗುರುತಿಸಲು ಗೂಗಲ್ ಬಯಸುತ್ತಿದ್ದು, ಲೋಕಲ್ ಫೇವರಿಟ್‌ ಎಂಬ ಆಯ್ಕೆಯೊಂದಿಗೆ ಆ ಪ್ರದೇಶದಲ್ಲಿ ನಿರ್ದಿಷ್ಟ ವರ್ಗದಲ್ಲಿನ ಅಗ್ರ 5 ವ್ಯವಹಾರಗಳನ್ನು ಗೂಗಲ್ ಹೈಲೈಟ್ ಮಾಡುತ್ತದೆ. ಈ ಟಾಪ್‌ ಅಂಗಡಿಗಳನ್ನು ಗ್ರಾಹಕರು ಸುಲಭವಾಗಿ ಹುಡುಕಲು ಮತ್ತು ತೊಡಗಿಸಿಕೊಳ್ಳಲು ಗೂಗಲ್ ಗೌರವದ ಡಿಜಿಟಲ್ ಮತ್ತು ಭೌತಿಕ ಬ್ಯಾಡ್ಜ್‌ಗಳನ್ನು ನೀಡಿ ಸಹಾಯ ಮಾಡುತ್ತಿದೆ.

Best Mobiles in India

Read more about:
English summary
How to Earn Rewards And Discounts Using Google Maps

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X