ಗೂಗಲ್‌ ಪೇನಲ್ಲಿ ಮೋಸ ತಡೆಯೋದು ಹೇಗೆ..?

By Gizbot Bureau
|

ಡಿಜಿಟಲ್ ಪೇಮೆಂಟ್‌ ಆಪ್‌ಗಳು ನಮ್ಮ ಜೀವನವನ್ನು ಸುಲಭಗೊಳಿಸಿದ್ದು, ನಗದು ರಹಿತ ವಹಿವಾಟುಗಳಿಂದ ವ್ಯಾಪಾರ ಮೊದಲಿಗಿಂತಲೂ ಸರಳವಾಗಿದೆ. ಆದರೆ, ಡಿಜಿಟಲ್ ಪೇಮೆಂಟ್‌ ಆಪ್‌ಗಳು ತನ್ನದೇ ಆದ ಅಪಾಯಗಳು ಹಾಗೂ ದೋಷಗಳನ್ನು ಹೊಂದಿವೆ. ಇತ್ತೀಚೆಗೆ, ಮಹಾರಾಷ್ಟ್ರದ ಥಾಣೆಯ ನಿವಾಸಿಗೆ ವಂಚಕ ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ಹಣಕ್ಕಾಗಿ ಕೋರಿದ ನಂತರ ಒಂದು ಲಕ್ಷ ರೂ. ಕಳೆದುಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾ

ಸಂತ್ರಸ್ತ ತಮ್ಮ ಪೀಠೋಪಕರಣಗಳನ್ನು ಮಾರಾಟ ಮಾಡಲು ಸೋಷಿಯಲ್‌ ಮೀಡಿಯಾದಲ್ಲಿ ಜಾಹೀರಾತು ಪೋಸ್ಟ್ ಮಾಡಿದ್ದಾರೆ. ಖರೀದಿದಾರನಂತೆ ನಟಿಸುವ ವಂಚಕ ಪೇಟಿಎಂ ಮತ್ತು ಗೂಗಲ್‌ ಪೇ ಮೂಲಕ ಪಾವತಿಸಲು ಮುಂದಾಗಿದ್ದಾದನು. ಆದರೆ, ವಂಚಕ ಹಣ ಕಳುಹಿಸುವ ಬದಲು ಹಣಕ್ಕಾಗಿ ವಿನಂತಿಸಿದ್ದಾನೆ. ಆಗ, ಸಂತ್ರಸ್ತ ತಾನು ಹಣ ಪಡೆಯುತ್ತಿದ್ದೇನೆ ಎಂದು ಭಾವಿಸಿ ಹಣವನ್ನು ಕಳುಹಿಸಿದ್ದಾನೆ.

ಗೂಗಲ್ ಪೇ

ಇಂತಹ ವಂಚಕ ಪಾವತಿ ವಿನಂತಿಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸಲು. ಹಾಗೂ ಅನಾಮಧೇಯ ವ್ಯಕ್ತಿಗಳಿಂದ ಹಣದ ವಿನಂತಿಗಳನ್ನು ಗೂಗಲ್‌ ಪೇ ನಿಮಗೆ ಅನುಮತಿಸುತ್ತದೆ. ಇದಲ್ಲದೇ ನೀವು ಸಂಪರ್ಕಿಸಲು ಬಯಸದ ಯಾವುದೇ ವ್ಯಕ್ತಿಯನ್ನು ಸಹ ಗೂಗಲ್‌ ಪೇನಲ್ಲಿ ನಿರ್ಬಂಧಿಸಬಹುದಾಗಿದೆ. ಈ ಫೀಚರ್‌ ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್ ಪ್ಲಾಟ್‌ಫಾರ್ಮ್‌ಗಳೆರಡಲ್ಲೂ ಲಭ್ಯವಿದ್ದು, ಗೂಗಲ್ ಪೇನಲ್ಲಿ ಜನರನ್ನು ನಿರ್ಬಂಧಿಸಲು ಕೆಲವು ಸರಳ ಹಂತಗಳಿದ್ದು, ಮುಂದೆ ನೋಡಿ.

ಸ್ಮಾರ್ಟ್‌ಫೋನ್‌

1. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪೇ ಆಪ್‌ ತೆರೆಯಿರಿ

2. ಈಗ, ನೀವು ಹಣ ಕಳುಹಿಸಿದ / ಸ್ವೀಕರಿಸಿದ ಸಂಪರ್ಕಗಳನ್ನು ನೋಡಿ. ಇಲ್ಲಿ, ನಿಮ್ಮಿಂದ ಹಣ ವಿನಂತಿಸಿದ ಸಂಪರ್ಕಗಳು ಕೂಡ ಕಾಣುತ್ತವೆ.

3. ಇಲ್ಲಿ, ನೀವು ನಿರ್ಬಂಧಿಸಲು ಬಯಸುವ ವ್ಯಕ್ತಿಯನ್ನು ಆರಿಸಿ ಮತ್ತು ಅದರ ಮೇಲೆ ಟ್ಯಾಪ್ ಮಾಡಿ.

4. ನಿಮ್ಮ ಫೋನ್‌ಬುಕ್‌ನಲ್ಲಿ ಸಂಖ್ಯೆಯನ್ನು ಸೇವ್‌ ಮಾಡಿದ್ದರೆ, ಮತ್ತಷ್ಟು ಆಯ್ಕೆಗಳಿಗಾಗಿ ಪರದೆಯ ಬಲಭಾಗದಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ.

5. ಇಲ್ಲಿ ನೀವು ಬ್ಲಾಕ್ ಆಯ್ಕೆಯನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿ.

6. ನಿಮ್ಮ ಸಾಧನದಲ್ಲಿ ಸಂಖ್ಯೆಯನ್ನು ಸೇವ್‌ ಮಾಡಿರದಿದ್ದರೆ, ನೀವು ಅದರ ಐಕಾನ್ ಟ್ಯಾಪ್ ಮಾಡಿದಾಗ ಸ್ವಯಂಚಾಲಿತವಾಗಿ ಬ್ಲಾಕ್ ಆಯ್ಕೆಯನ್ನು ನೋಡುತ್ತೀರಿ. ಇಲ್ಲಿ ಆ ಸಂಖ್ಯೆ / ಸಂಪರ್ಕವನ್ನು ಸ್ಪ್ಯಾಮ್ ಎಂದು ವರದಿ ಮಾಡಬಹುದು.

ಗಮನಿಸಿ:

ಗಮನಿಸಿ:

ನೀವು ಗೂಗಲ್‌ ಪೇನಲ್ಲಿ ಯಾರನ್ನಾದರೂ ನಿರ್ಬಂಧಿಸಿದರೆ, ಫೋಟೋಸ್‌ ಮತ್ತು ಹ್ಯಾಂಗ್‌ಔಟ್‌ನಂತಹ ಇತರ ಕೆಲವು ಗೂಗಲ್‌ ಉತ್ಪನ್ನಗಳಲ್ಲಿಯೂ ಅವರನ್ನು ನಿರ್ಬಂಧಿಸಲಾಗುತ್ತದೆ.

Best Mobiles in India

Read more about:
English summary
How To Get Secure From Fraud On Google Pay

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X