Subscribe to Gizbot

ಏರ್‌ಟೆಲ್‌ನಿಂದ ಅತಿ ವೇಗದ ಉಚಿತ ಅನ್‌ಲಿಮಿಟೆಡ್‌ 4G ಡಾಟಾ ಪಡೆಯುವುದು ಹೇಗೆ?

Written By:

ರಿಲಾಯನ್ಸ್ ಜಿಯೋ ಲಾಂಚ್‌ನಿಂದಾಗಿ ಇಂದು ಇತರೆ ಟೆಲಿಕಾಂಗಳು ಸಹ ಗ್ರಾಹಕರಿಗೆ ಕಡಿಮೆ ಬೆಲೆಯ ಟ್ಯಾರಿಫ್ ಪ್ಲಾನ್‌ಗಳು, ಡಾಟಾ ಮತ್ತು ಉಚಿತ ಎಸ್‌ಎಂಎಸ್‌ಗಳನ್ನು ನೀಡುವ ಹಾಗೆ ಮಾಡಿದೆ. ಅಂದಹಾಗೆ ರಿಲಾಯನ್ಸ್ ಜಿಯೋಗೆ ಪ್ರತಿಸ್ಪರ್ಧಿಯಾಗಿರುವ ಏರ್‌ಟೆಲ್‌ ಅದರ ಸಾಲಿನಲ್ಲೇ ನಿಲ್ಲಲು ಪ್ರಯತ್ನಿಸುತ್ತಿದೆ. ಜಿಯೋ ನೀಡುವ ಆಫರ್‌ಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಉತ್ತಮ ಆಫರ್‌ಗಳನ್ನು ಏರ್‌ಟೆಲ್‌ ನೀಡಲು ಪ್ರಯತ್ನಿಸುತ್ತಿದೆ.

ಇಂದಿನ ಲೇಖನದಲ್ಲಿ ಏರ್‌ಟೆಲ್‌(Airtel) ಗ್ರಾಹಕರು ಡಾಟಾ ಪ್ಯಾಕ್‌ ರೀಚಾರ್ಜ್‌ ಮಾಡಿಸದಿದ್ದರೂ ಸಹ ಅನ್‌ಲಿಮಿಟೆಡ್‌ 4G ಡಾಟಾವನ್ನು ಉಚಿತವಾಗಿ ಪಡೆಯುವುದು ಹೇಗೆ ಎಂದು ತಿಳಿಸುತ್ತಿದ್ದೇವೆ.
ಸೂಚನೆ: ಗ್ರಾಹಕರ ಏರ್‌ಟೆಲ್‌ 4G ಸಿಮ್ ಕಾರ್ಡ್ ಯಾವುದೇ ಬ್ಯಾಲೆನ್ಸ್ ಹೊಂದಿರಬಾರದು.

ಏರ್‌ಟೆಲ್‌ನಿಂದ ರೂ.29 ಕ್ಕೆ 1GB ಡಾಟಾ ಪಡೆಯಲು ಈ ಹಂತಗಳನ್ನು ಪಾಲಿಸಿ

ಈ ಕೆಳಗಿನ ಹಂತಗಳನ್ನು ಉಚಿತ ಅನ್‌ಲಿಮಿಟೆಡ್ 4G ಡಾಟಾ ಪಡೆಯಲು ಅನುಸರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಹಂತ 1: 'Twerk It Vpn 4G' ಡೌನ್‌ಲೋಡ್‌ ಮಾಡಿ

ಹಂತ 1: 'Twerk It Vpn 4G' ಡೌನ್‌ಲೋಡ್‌ ಮಾಡಿ

ಅಂದಹಾಗೆ ಮೊದಲನೇ ಹಂತದಲ್ಲಿ ಏರ್‌ಟೆಲ್‌ 4G ಸಿಮ್ ಕಾರ್ಡ್ ಬಳಕೆದಾರರು Twer It Vpn 4G' ಎಂಬ ಆಪ್‌ ಅನ್ನು ಗೂಗಲ್‌ನಿಂದ ಡೌನ್‌ಲೋಡ್‌ ಮಾಡಿ. ಈ ಅಪ್ಲಿಕೇಶನ್‌ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಪತ್ತೆಯಾಗುವುದಿಲ್ಲ. ಗೂಗಲ್‌ ಪ್ಲೇ ಸ್ಟೋರ್‌ನಿಂದ ಈ ಆಪ್‌ ಅನ್ನು ನಿಯಮ ಉಲ್ಲಂಘನೆಯಿಂದ ತೆಗೆದುಹಾಕಲಾಗಿದೆ.

ಹಂತ 2: ಡಿಫಾಲ್ಟ್ APN ಸೆಟ್ಟಿಂಗ್ಸ್ ಬದಲಿಸಬೇಡಿ

ಹಂತ 2: ಡಿಫಾಲ್ಟ್ APN ಸೆಟ್ಟಿಂಗ್ಸ್ ಬದಲಿಸಬೇಡಿ

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡಿಫಾಲ್ಟ್ APN ಸೆಟ್ಟಿಂಗ್ಸ್ ಅನ್ನು ಬದಲಿಸದ ಹಾಗೆ ಎಚ್ಚರ ವಹಿಸಿ. ಉಚಿತ ಡಾಟಾ ಪಡೆಯಲು ಇದು ನಿರ್ಣಾಯಕ ಹಂತವಾಗಿದೆ.

ಹಂತ 3: 'Twerk It Handler' ಮೆನುವನ್ನು ಆಪ್‌ನಿಂದ ಓಪನ್‌ ಮಾಡಿ

ಹಂತ 3: 'Twerk It Handler' ಮೆನುವನ್ನು ಆಪ್‌ನಿಂದ ಓಪನ್‌ ಮಾಡಿ

ಆಪ್‌ ಡೌನ್‌ಲೋಡ್ ಮಾಡಿದ ನಂತರ, ಓಪನ್‌ ಮಾಡಿ. ಅಲ್ಲಿ 'Twerk It Handler' ಮೆನುವನ್ನು ಕಾಣಬಹುದಾಗಿದೆ. ಅದರ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ಇತರೆ ಕೆಲವು ಆಯ್ಕೆಗಳನ್ನು ಕಾಣಬಹುದು.

ಹಂತ 4: ಸೆಟ್ಟಿಂಗ್ಸ್‌ಗಳನ್ನು ಕೆಳಗಿನಂತೆ ಬದಲಿಸಿ

ಹಂತ 4: ಸೆಟ್ಟಿಂಗ್ಸ್‌ಗಳನ್ನು ಕೆಳಗಿನಂತೆ ಬದಲಿಸಿ

ಮೆನುಗೆ ಎಂಟರ್ ಆದ ನಂತರ 'Rmove Port' ನಂತಹ ಹಲವು ಆಪ್ಶನ್‌ ಗಳನ್ನು ಕಾಣಬಹುದು. ಈ ಕೆಳಗಿನಂತೆ ಸೆಟ್ಟಿಂಗ್ಸ್‌ಗಳನ್ನು ಬದಲಿಸಿ.
Remove Port- Enable it
Proxy Type- Dual Real Host
Proxy Server- 180.179.108.50

ಹಂತ 5: ಸೆಟ್ಟಿಂಗ್ಸ್ ಸೇವ್‌ ಮಾಡಿ

ಹಂತ 5: ಸೆಟ್ಟಿಂಗ್ಸ್ ಸೇವ್‌ ಮಾಡಿ

ಮೇಲಿನ ಸೆಟ್ಟಿಂಗ್ಸ್‌ಗಳನ್ನು ಬದಲಿಸಿದ ನಂತರ ಸೇವ್‌ ಮಾಡಿ ಮತ್ತು ಅಪ್ಲಿಕೇಶನ್‌ ಹೋಮ್‌ ಪೇಜ್‌ಗೆ ಸ್ವಿಚ್‌ ಮಾಡಿ. ಈ ಹಂತದಲ್ಲಿ ಕೆಲವು ಹೋಮ್‌ VPN ಸರ್ವರ್‌ ಅನ್ನು ಸೆಲೆಕ್ಟ್ ಮಾಡಬೇಕು. ಅತಿ ವೇಗದ ಡಾಟಾಗಾಗಿ, ಜಸ್ಟ್‌ United States ಸೆಲೆಕ್ಟ್‌ ಮಾಡಿ. ಅಥವಾ ಅದು ವರ್ಕ್‌ ಆಗದಿದ್ದಲ್ಲಿ ಇತರೆ ದೇಶಗಳನ್ನು ಸೆಲೆಕ್ಟ್ ಮಾಡಿ. United States ಸೆಟ್ಟಿಂಗ್‌ ಮಾಡಿದ ನಂತರ Twerk It ಬಟನ್‌ ಪ್ರೆಸ್‌ ಮಾಡಿ.

ಹಂತ 6: ಡೌನ್‌ಲೋಡ್‌ ವೇಗ ಚೆಕ್‌ ಮಾಡಿ

ಹಂತ 6: ಡೌನ್‌ಲೋಡ್‌ ವೇಗ ಚೆಕ್‌ ಮಾಡಿ

ಮೇಲೆ ತಿಳಿಸಿದ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ, ವರ್ಕ್‌ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ಚೆಕ್‌ ಮಾಡಿ. ಇದು ಉತ್ತಮ ಡಾಟಾ ವೇಗದಿಂದ ವರ್ಕ್‌ ಆಗುತ್ತದೆ.

ಸೂಚನೆ: ಅಂದಹಾಗೆ ಈ ಪ್ರಕ್ರಿಯೆಯಿಂದ ನಿಮ್ಮ ಏರ್‌ಟೆಲ್‌ ಸಿಮ್ ಕಾರ್ಡ್‌ ಬ್ಲಾಕ್‌ ಆಗುವ ಸಂದರ್ಭಗಳು ಇರುತ್ತವೆ. ಈ ಸಮಸ್ಯೆಯಿಂದ ಪಾರಾಗಲು ಮಿತಿಯಲ್ಲಿ ಬಳಸಿ, ಪ್ರತಿ 250MB ಡಾಟಾ ಬಳಕೆ ನಂತರ ಡಿಸ್‌ಕನೆಕ್ಟ್ ಮತ್ತು ಕನೆಕ್ಟ್ ಆಗುತ್ತಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

English summary
How to Get Unlimited 4G Data for Free on Airtel With High-Speed. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot