Subscribe to Gizbot

ಏರ್‌ಟೆಲ್‌ನಿಂದ ರೂ.29 ಕ್ಕೆ 1GB ಡಾಟಾ ಪಡೆಯಲು ಈ ಹಂತಗಳನ್ನು ಪಾಲಿಸಿ

Written By:

ರಿಲಾಯನ್ಸ್ ಜಿಯೋ ಬಿಡುಗಡೆಯಿಂದ ಟೆಲಿಕಾಂ ಕ್ಷೇತ್ರದಲ್ಲಿ ಒಂದು ಹೊಸ ಸಂಚಲನ ಉಂಟಾಗಿದೆ. ಅಲ್ಲದೇ ಏರ್‌ಟೆಲ್‌, ವೊಡಾಫೋನ್, ಐಡಿಯಾ ಮತ್ತು ಬಿಎಸ್‌ಎನ್‌ಎಲ್‌ ಟೆಲಿಕಾಂಗಳಿಗೆ ಹೊಸ ಸ್ಪರ್ಧಿಯಿಂದ ಉದ್ಯಮದಲ್ಲಿ ಕೊಂಚ ಹಿನ್ನಡೆಯು ಆಗಿದೆ.

ರಿಲಾಯನ್ಸ್ ಜಿಯೋ ಟ್ಯಾರಿಫ್‌ ಎಫೆಕ್ಟ್‌ನಿಂದ ಈಗಾಗಲೇ ಪ್ರಖ್ಯಾತ ಏರ್‌ಟೆಲ್‌(Airtel) ಮತ್ತು ವೊಡಾಫೋನ್‌ಗಳು ಹೆಚ್ಚಿನ ಡಾಟಾ ಆಫರ್‌ಗಳನ್ನು ಗ್ರಾಹಕರಿಗೆ, ಹೊಸ ಗ್ರಾಹಕರಿಗೆ ನೀಡಲು ಆರಂಭಿಸಿವೆ. ಅಲ್ಲದೇ ಏರ್‌ಟೆಲ್‌ ಹಿಂದಿನ ಒಂದೇ ರೀತಿಯ ರೀಚಾರ್ಜ್‌ಗೆ ಶೇ.67 ರಷ್ಟು ಡಾಟಾ ಹೆಚ್ಚಿನದಾಗಿ ನೀಡುತ್ತಿದೆ.

ಭಾರತಿ ಏರ್‌ಟೆಲ್‌, ಭಾರತದಲ್ಲಿ ವಿಶಾಲವಾಗಿ ನೆಟ್‌ವರ್ಕ್‌ ಹೊಂದಿರುವ ಪ್ರಖ್ಯಾತ ಟೆಲಿಕಾಂ ಆಗಿದ್ದು, ಗ್ರಾಹಕರಿಗೆ ಒಂದು ಹೊಸ ವಿಶೇಷವಾದ ಆಫರ್‌ ಅನ್ನು ನೀಡುತ್ತಿದೆ. ಈ ಆಫರ್‌ನಿಂದ ಬಳಕೆದಾರರು 1GB 3G/4G ಡಾಟಾವನ್ನು ಕೇವಲ ರೂ.29 ಕ್ಕೆ ಪಡೆಯಬಹುದಾಗಿದೆ. ಅದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳನ್ನು ಓದಿ ತಿಳಿಯಿರಿ.

ವಿದ್ಯಾರ್ಥಿಗಳಿಗೆ ಏರ್‌ಟೆಲ್‌ನಿಂದ ರೂ.400 ಕ್ಕಿಂತ ಕಡಿಮೆಗೆ ಟಾಪ್‌ ವಾಯ್ಸ್ ಕರೆ, ರೋಮಿಂಗ್‌ ಪ್ಲಾನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಹಂತ 1

ಹಂತ 1

ಈಗಾಗಲೇ ತಿಳಿದಿರುವಂತೆ ಏರ್‌ಟೆಲ್‌ ಆಕರ್ಷಕವಾದ ಆರಂಭಿಕ ಡಾಟಾ ಪ್ಯಾಕ್‌ಗಳನ್ನು 28 ಮತ್ತು 30 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡುತ್ತಿದೆ. ನಿಮ್ಮ ಏರ್‌ಟೆಲ್‌ ನಂಬರ್‌ ಅನ್ನು 29 ರೂಪಾಯಿ ಇಂದ ರೀಚಾರ್ಜ್‌ ಮಾಡುವುದರಿಂದ ಒಟ್ಟಾರೆ 75MB 3G ಡಾಟಾ 28 ದಿನಗಳ ವ್ಯಾಲಿಡಿಟಿಯೊಂದಿಗೆ ಸಿಗುತ್ತದೆ. ಮುಂದಿನ ಸ್ಲೈಡರ್‌ ಓದಿರಿ

ಹಂತ 2

ಹಂತ 2

ಆದರೆ ಇದೇ ಟ್ರಿಕ್ಸ್ ಅನ್ನು ಬಳಸಿ 29 ರೂಗೆ ಡಾಟಾ ಪ್ಯಾಕ್‌ ಅನ್ನು ಪಡೆಯುತ್ತೇವೆ. ಆದರೆ 1GB 3G/4G ಡಾಟಾವನ್ನು 28 ದಿನಗಳ ವ್ಯಾಲಿಡಿಟಿಯೊಂದಿಗೆ ಪಡೆಯುತ್ತೇವೆ. ಮುಂದೆ ಓದಿ

ಹಂತ 3

ಹಂತ 3

ಆರಂಭದಲ್ಲಿ ನೀವು ಟ್ಯಾರಿಫ್ ಪ್ಯಾಕ್ 96 ರೂ ಅನ್ನು ರೀಚಾರ್ಜ್‌ ಮಾಡಿಸಬೇಕು. ಈ ಪ್ಯಾಕ್‌ನಿಂದ 1GB ಡಾಟಾ ಒಂದು ವಾರದ ವ್ಯಾಲಿಡಿಟಿಯೊಂದಿಗೆ ದೊರೆಯುತ್ತದೆ. ಈ ರೀಚಾರ್ಜ್‌ ಅನ್ನು ಯಾವುದೇ ಇ-ಕಾಮರ್ಸ್‌ ಅಥವಾ ಸಾಮಾನ್ಯ ರೀಟೇಲ್‌ ಶಾಪ್‌ಗಳಲ್ಲೂ ಪಡೆಯಬಹುದು.

ಹಂತ 4

ಹಂತ 4

ನಿಮ್ಮ ಏರ್‌ಟೆಲ್‌ ನಂಬರ್‌ ಅನ್ನು ರೂ.96 ಕ್ಕೆ ರೀಚಾರ್ಜ್‌ ಮಾಡಿಸಿದ ನಂತರ, ಡಯಲರ್ ಬಾಕ್ಸ್‌ಗೆ ಹೋಗಿ *121*111# ಟೈಪಿಸಿ ಎಂಟರ್‌ ಮಾಡಿ

ಹಂತ 5

ಹಂತ 5

ಮೇಲಿನ ಸಂಖ್ಯೆಗಳನ್ನು ಡಯಲ್ ಮಾಡಿದ ನಂತರ ಪಾಪಪ್‌ ನೋಡಿಫಿಕೇಶನ್‌ ಬರುತ್ತದೆ, ಅದರಲ್ಲಿ ನೀವು ರೂ.29 ರ ಪ್ಯಾಕ್ ಅನ್ನು ಸೆಲೆಕ್ಟ್ ಮಾಡಿರಿ. ಸೂಚನೆ: ಸೆಲೆಕ್ಟ್ ಮಾಡುವ ಮೊದಲು ನಿಮ್ಮ ಏರ್‌ಟೆಲ್‌ ಖಾತೆ ಬ್ಯಾಲೆನ್ಸ್‌ನಲ್ಲಿ ರೂ. 29 ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಕಾರಣ ಈ ಸೇವೆಗೆ ಬ್ಯಾಲೆನ್ಸ್‌ನಿಂದ ಹಣ ಕಡಿತಗೊಳ್ಳುತ್ತದೆ.

ಹಂತ 6

ಹಂತ 6

ಏರ್‌ಟೆಲ್‌ ಆಪರೇಟರ್‌ ದೃಡೀಕರಣ ಮೆಸೇಜ್‌ಗಾಗಿ ಕಾಯಿರಿ. ಮೆಸೇಜ್‌ ಬಂದ ನಂತರ 75MB 3G ಡಾಟಾ ನಿಮ್ಮ ಏರ್‌ಟೆಲ್‌ ನಂಬರ್‌ಗೆ ಕ್ರೆಡಿಟ್‌ ಆಗಿರುತ್ತದೆ. ಈಗ ನಿಮ್ಮ ಡಾಟಾ ಬ್ಯಾಲೆನ್ಸ್ ಅನ್ನು ಚೆಕ್‌ ಮಾಡಿ. ನಿಮ್ಮ ಡಾಟಾ ಬ್ಯಾಲೆನ್ಸ್ 1.1GB ಇರುತ್ತದೆ. ಈ 1.1GB ಡಾಟಾವು 30 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ.

ವಿಶೇಷ ಸೂಚನೆ: ರೂ.29 ರ ರೀಚಾರ್ಜ್‌ ಅನ್ನು ರೂ.96 ರ ರೀಚಾರ್ಜ್‌ ನಂತರವಷ್ಟೇ ಪಡೆಯಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Follow These Simple Steps to Get 1GB Data on Airtel for Just Rs. 29. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot