ಆಂಡ್ರಾಯ್ಡ್ ಫೋನ್‌ನಲ್ಲಿ ಜಿಪಿಎಸ್ ಸಿಗ್ನಲ್ ಉತ್ತಮಗೊಳಿಸುವುದು ಹೇಗೆ?

Written By:

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್ (ಜಿಪಿಎಸ್) ಅನ್ನು ಯುಎಸ್ ಆರ್ಮಿಯು 1973 ರಲ್ಲಿ ಅಭಿವೃದ್ಧಿಪಡಿಸಿತು, ಆದರೆ 1995 ರಲ್ಲಿ ಇದನ್ನು ಸಿವಿಲಿಯನ್ ಉದ್ದೇಶಗಳಿಗಾಗಿ ಬಿಡುಗಡೆ ಮಾಡಲಾಯಿತು. 24 ಗಂಟೆಗಳ ಸ್ಯಾಟಲೈಟ್ ಬಳಕೆಯಡಿಯಲ್ಲಿ ಇದನ್ನು ಆರಂಭದಲ್ಲಿ ಬಳಸಲಾಗಿತ್ತಾದರೂ ಒಟ್ಟಾರೆ 31 ಜಿಪಿಎಸ್ ಸ್ಯಾಟಲೈಟ್‌ಗಳನ್ನು ನಮಗೆ ಕಂಡುಕೊಳ್ಳಬಹುದಾಗಿದೆ.

ಓದಿರಿ: ಕೋಟಿ ಬೆಲೆಯನ್ನೂ ಮೀರಿದ ಐಷಾರಾಮಿ ಸ್ಮಾರ್ಟ್‌ಫೋನ್‌ಗಳು

ಜಿಪಿಎಸ್ ಆಂಟೆನಾದ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಈ ಸ್ಯಾಟಲೈಟ್‌ಗಳ ಮೂಲಕ ಸಂವಹನಗಳನ್ನು ನಡೆಸುತ್ತದೆ ಇಂದಿನ ಹೆಚ್ಚಿನ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಇದೊಂದು ಪ್ರಮುಖ ಹಾರ್ಡ್‌ವೇರ್ ಎಂದೆನಿಸಿದೆ. ಸಾಫ್ಟ್‌ವೇರ್‌ನೊಂದಿಗೆ ಡ್ರೈವರ್ ಮೂಲಕ ಈ ಹಾರ್ಡ್‌ವೇರ್ ಸಂಪರ್ಕವನ್ನು ಪಡೆದುಕೊಳ್ಳುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ನಿಮ್ಮ ಡಿವೈಸ್‌ಗಾಗಿ ಜಿಪಿಎಸ್ ಸಿಗ್ನಲ್ ಅನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೈ ಅಕ್ಯುರಸಿ ಮೋಡ್‌ಗೆ ಬದಲಾಯಿಸಿಕೊಳ್ಳಿ

ಹೈ ಅಕ್ಯುರಸಿ ಮೋಡ್‌ಗೆ ಬದಲಾಯಿಸಿಕೊಳ್ಳಿ

ಉತ್ತಮ ಸಿಗ್ನಲ್ ಅನ್ನು ಪಡೆದುಕೊಳ್ಳಲು, ನೀವು ಸ್ವಲ್ಪ ಬ್ಯಾಟರಿಯನ್ನು ವಿನಿಯೋಗಿಸಿಕೊಳ್ಳಬೇಕಾಗುತ್ತದೆ, ನಿಮ್ಮ ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಲೊಕೇಶನ್ ಸ್ಪರ್ಶಿಸಿ ಇಲ್ಲಿ ನಿಮ್ಮ ಲೊಕೇಶನ್ ಸರ್ವೀಸಸ್ ಆನ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮ ಸ್ಕ್ರೀನ್‌ನ ಬಲ ಮೇಲ್ಭಾಗದಲ್ಲಿ ನಿಮಗೆ ಟಾಗಲ್ ಮಾಡುವ ಅವಕಾಶ ಇರುತ್ತದೆ. ಇದು ಹಸಿರು ಬಣ್ಣದಲ್ಲಿದ್ದು ಬಲಕ್ಕಿರುತ್ತದೆ.

ವೈಫೈ ಅಗತ್ಯ

ವೈಫೈ ಅಗತ್ಯ

ಇದು ಹೈ ಅಕ್ಯುರಸಿ ಮೋಡ್‌ನಲ್ಲಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇದು ನಿಮ್ಮ ಜಿಪಿಎಸ್ ಅನ್ನು ಬಳಸಿಕೊಳ್ಳುತ್ತದೆ ಮತ್ತು ನಿಮ್ಮ ವೈಫೈ ಅಗತ್ಯ ಇದಕ್ಕಿದೆ ನಿಮ್ಮ ಮೊಬೈಲ್ ನೆಟ್‌ವರ್ಕ್ ಅನ್ನು ಬಳಸಿಕೊಂಡು ನಿಮ್ಮ ಲೊಕೇಶನ್ ಅನ್ನು ಇದು ಕಂಡುಹಿಡಿಯುತ್ತದೆ. ಇದು ಹೆಚ್ಚು ಬ್ಯಾಟರಿಯನ್ನು ಬಳಸಿಕೊಳ್ಳುತ್ತದೆ, ಆದರೆ ಹೆಚ್ಚು ನಿಖರವಾದ ಲೊಕೇಶನ್ ಮಾಹಿತಿಯನ್ನು ಇದು ನಿಮಗೆ ನೀಡುತ್ತದೆ.

ಜಿಪಿಎಸ್ ಸಿಗ್ನಲ್ ಸಕ್ರಿಯಗೊಳಿಸಿ

ಜಿಪಿಎಸ್ ಸಿಗ್ನಲ್ ಸಕ್ರಿಯಗೊಳಿಸಿ

ಬ್ಯಾಟರಿಯನ್ನು ಉಳಿಸುವುದಕ್ಕಾಗಿ ನೀವು ಜಿಪಿಎಸ್ ಸಿಗ್ನಲ್ ಅನ್ನು ಆಫ್‌ನಲ್ಲಿಟ್ಟುಕೊಳ್ಳುತ್ತೀರಿ. ನಿಮ್ಮ ಜಿಪಿಎಸ್ ಸಿಗ್ನಲ್ ಅನ್ನು ಆನ್ ಮೋಡ್‌ನಲ್ಲಿಟ್ಟುಕೊಳ್ಳುವುದರಿಂದ ನಿಮಗೆ ಹೆಚ್ಚುವರಿ ಪ್ರಯೋಜನ ಇರುತ್ತದೆ. ಬ್ಯಾಟರಿ ಉಳಿಕೆಗಿಂತಲೂ ಜಿಪಿಎಸ್ ಮೋಡ್ ಆನ್‌ನಲ್ಲಿರುವುದು ನಿಮ್ಮ ಲೊಕೇಶನ್ ಮಾಹಿತಿಗೆ ನೆರವನ್ನು ನೀಡುತ್ತದೆ.

ಜಿಪಿಎಸ್ ಸಮಸ್ಯೆಗಳನ್ನು ಅರಿತುಕೊಳ್ಳಿ

ಜಿಪಿಎಸ್ ಸಮಸ್ಯೆಗಳನ್ನು ಅರಿತುಕೊಳ್ಳಿ

ಜಿಪಿಎಸ್ ಸಮಸ್ಯೆಗಳನ್ನು ಅರಿತುಕೊಳ್ಳುವುದು ಎಂದರೆ, ಸಿಗ್ನಲ್ ದುರ್ಬಲತೆ ಉಂಟಾಗಿರುವುದು ಹಾರ್ಡ್‌ವೇರ್ ಅಥವಾ ಸಾಫ್ಟ್‌ವೇರ್ ಕಾರಣದಿಂದಲೇ ಎಂಬುದನ್ನು ತಿಳಿದುಕೊಳ್ಳಿ. ಜಿಪಿಎಸ್ ಎಸಿನ್ಶಿಯಲ್ಸ್ ಮುಖ್ಯ ಮೆನುವಿನಲ್ಲಿ, ಸ್ಯಾಟಲೈಟ್ಸ್ ಸ್ಪರ್ಶಿಸಿ, ಭೂಮಿಯಲ್ಲಿರುವ ಸ್ಯಾಟಲೈಟ್‌ಗಳಿಗೆ ನಿಮ್ಮ ಫೋನ್ ಸಂಪರ್ಕದಲ್ಲಿದೆಯೇ ಎಂಬುದನ್ನು ನೋಡಿ. ಸ್ಯಾಟಲೈಟ್ ಇದ್ದು ಕೂಡ ಜಿಪಿಎಸ್ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ ಇದು ಸಾಫ್ಟ್‌ವೇರ್ ಸಮಸ್ಯೆಯಾಗಿರುತ್ತದೆ.

ಜಿಪಿಎಸ್ ಡೇಟಾ ರಿಫ್ರೆಶ್ ಮಾಡಿ

ಜಿಪಿಎಸ್ ಡೇಟಾ ರಿಫ್ರೆಶ್ ಮಾಡಿ

ಒಮ್ಮೊಮ್ಮೆ ನಿಮ್ಮ ಡಿವೈಸ್ ನಿರ್ದಿಷ್ಟ ಜಿಪಿಎಸ್ ಸ್ಯಾಟಲೈಟ್‌ಗಳಲ್ಲಿ ಸ್ಟಕ್ ಆಗುತ್ತದೆ, ಇದನ್ನು ಸರಿಪಡಿಸಲು, ಜಿಪಿಎಸ್ ಸ್ಟೇಟಸ್ ಮತ್ತು ಟೂಲ್ ಬಾಕ್ಸ್‌ನಂತಹ ಅಪ್ಲಿಕೇಶನ್‌ಗಳನ್ನು ಬಳಸಿಕೊಳ್ಳಿ ಇದು ಸ್ಯಾಟಲೈಟ್ ತೊಂದರೆಗಳನ್ನು ನಿವಾರಿಸಿಕೊಳ್ಳುವಲ್ಲಿ ನಿಮಗೆ ನೆರವಾಗಲಿದೆ.

ಬಾಹ್ಯ ಜಿಪಿಎಸ್ ರಿಸೀವರ್

ಬಾಹ್ಯ ಜಿಪಿಎಸ್ ರಿಸೀವರ್

ನಿಮ್ಮ ಜಿಪಿಎಸ್ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ ಬಾಹ್ಯ ರಿಸೀವರ್ ಅನ್ನು ಪಡೆದುಕೊಳ್ಳಿ. ಬ್ಲ್ಯೂಟೂತ್ ಮೂಲಕ ಸಂಪರ್ಕವನ್ನು ಪಡೆದುಕೊಂಡು ಅದೇ ಚಾರ್ಜರ್‌ನಲ್ಲಿ ಇದನ್ನು ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
So here's how you can improve the GPS signal on your device.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot