ಕೋಟಿ ಬೆಲೆಯನ್ನೂ ಮೀರಿದ ಐಷಾರಾಮಿ ಸ್ಮಾರ್ಟ್‌ಫೋನ್‌ಗಳು

By Shwetha
|

ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್ ಬಳಕೆಯು ಅಗತ್ಯಕ್ಕೆ ಮಾತ್ರವೇ ಮೀಸಲಾಗಿರದೇ ವೈಭವದ ವಿಷಯವೂ ಆಗಿದೆ. ಬಳಕೆದಾರರ ಫೋನ್ ವ್ಯಾಮೋಹ ಎಷ್ಟಿದೆಯೆಂದರೆ ತಮ್ಮ ಅಂಗಾಂಗಳನ್ನು ಮಾರಿ ಕೂಡ ಐಫೋನ್‌ನಂತಹ ದುಬಾರಿ ಫೋನ್‌ಗಳನ್ನು ಖರೀದಿಸಿದವರಿದ್ದಾರೆ. ಅಂತೂ ಜಂಗಮ ವಾಣಿಯ ಹುಚ್ಚು ವ್ಯಾಮೋಹಕ್ಕೆ ಬಲಿಯಾಗಿ ಮನುಷ್ಯ ಇಂದು ಕುರುಡಾಗುತ್ತಿದ್ದಾನೆ.

ಓದಿರಿ: ಫೋನ್ ಕಳುವಾಗಿದೆಯೇ? ಚಿಂತೆ ಬಿಡಿ ಇಲ್ಲಿದೆ ಸಲಹೆಗಳು

ಇದಕ್ಕೆ ತಕ್ಕಂತೆ ಫೋನ್ ತಯಾರಿಕಾ ಕಂಪೆನಿಗಳು ಕೂಡ ಪೈಫೋಟಿಯಂತೆ ದುಬಾರಿ ಡಿವೈಸ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಬರಿಯ ಡಿವೈಸ್‌ಗಳನ್ನು ಹೊರತರದೇ ಇದರಲ್ಲಿ ವಜ್ರ, ಚಿನ್ನ, ಪ್ಲಾಟಿನಮ್ ಸ್ಪರ್ಶಗಳನ್ನು ನೀಡಿ ಅದಕ್ಕೆ ಹೆಚ್ಚು ದುಬಾರಿ ಎಂಬ ತಲೆಬರಹವನ್ನು ನೀಡಿ ಬಳಕೆದಾರ ಖರೀದಿಸುವಂತೆ ಮಾಡುತ್ತಿದ್ದಾರೆ. ಇನ್ನು ಶೋಕಿಗಾಗಿ ಫೋನ್ ಕೊಳ್ಳುವ ಮಂದಿ ಇಂತಹ ಡಿವೈಸ್‌ಗಳು ಎಷ್ಟೇ ದುಬಾರಿಯಾಗಿದ್ದರೂ ಅದನ್ನು ಖರೀದಿಸಿ ಪ್ರದರ್ಶಿಸುತ್ತಾರೆ. ನೀವೂ ಇಂತಹ ಡಿವೈಸ್‌ಗಳ ವ್ಯಾಮೋಹಕ್ಕೆ ಒಳಗಾಗಿದ್ದೀರಿ ಮತ್ತು ಇಂತಹ ವೈಭವೋಪೇತ ದುಬಾರಿ ಫೋನ್‌ಗಳ ಕುರಿತು ವಿವರಗಳನ್ನು ತಿಳಿದುಕೊಳ್ಳಬೇಕು ಎಂದಾದಲ್ಲಿ ಇಲ್ಲಿದೆ ಮಾಹಿತಿ.

ವರ್ಚ್ಯು ಸಿಗ್ನೇಚರ್ ಡೈಮೆಂಡ್($88,300)

ವರ್ಚ್ಯು ಸಿಗ್ನೇಚರ್ ಡೈಮೆಂಡ್($88,300)

ವರ್ಚ್ಯು ಬಿಡುಗಡೆ ಮಾಡಿರುವ ದುಬಾರಿ ಫೋನ್ ಇದಾಗಿದೆ. ವಿಶ್ವದ ಟಾಪ್ 10 ಮೊಬೈಲ್ ಫೋನ್‌ಗಳ ಪಟ್ಟಿಯಲ್ಲಿ ಈ ಫೋನ್ ಕೂಡ ಸೇರಿದೆ. ಪ್ಲಾಟಿನಮ್‌ನಿಂದ ತಯಾರಿಸಲಾದ ಈ ಫೋನ್ ಬರಿಯ ಕೈಗಳಿಂದಲೇ ನಿರ್ಮಿಸಲ್ಪಟ್ಟಿದೆ.

ಐಫೋನ್ ಪ್ರಿನ್ಸಸ್ ಪ್ಲಸ್ ($176,400)

ಐಫೋನ್ ಪ್ರಿನ್ಸಸ್ ಪ್ಲಸ್ ($176,400)

ಇತರ ಆಪಲ್ ಐಫೋನ್ ಮೊಬೈಲ್‌ಗಿಂತಲೂ ಭಿನ್ನವಾಗಿರದ ಐಫೋನ್ ಪ್ರಿನ್ಸಸ್ ಪ್ಲಸ್ ವಿಶ್ವದಲ್ಲೇ ಅತಿ ದುಬಾರಿ ಫೋನ್‌ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಳ್ಳುವಂತೆ ಮಾಡಿದೆ. ಖ್ಯಾತ ವಿನ್ಯಾಸಕಾರರಾದ ಆಸ್ಟ್ರಿಯಾ, ಪೀಟರ್ ಅಲೊಯ್‌ಸನ್ ಈ ಐಫೋನ್ ಅನ್ನು ಸಿದ್ಧಪಡಿಸಿದ್ದು, 138 ಪ್ರಿನ್ಸಸ್ ಕಟ್ ಮತ್ತು 180 ಬ್ರಿಲಿಯಂಟ್ ಕಟ್ ಡೈಮೆಂಡ್ಸ್ ಅನ್ನು ಇದು ಹೊಂದಿದೆ.

ಬ್ಲ್ಯಾಕ್ ಡೈಮೆಂಡ್ ವಿಐಪಿಎನ್ ಸ್ಮಾರ್ಟ್‌ಫೋನ್ ($300,000)

ಬ್ಲ್ಯಾಕ್ ಡೈಮೆಂಡ್ ವಿಐಪಿಎನ್ ಸ್ಮಾರ್ಟ್‌ಫೋನ್ ($300,000)

ವಿಶ್ವದ ಶ್ರೀಮಂತ ಫೋನ್‌ಗಳ ಪಟ್ಟಿಯಲ್ಲಿ ಸೋನಿ ಎರಿಕ್‌ಸನ್‌ನ ಬ್ಲ್ಯಾಕ್ ಡೈಮಂಡ್ ಕೂಡ ಸ್ಥಾನ ಪಡೆದುಕೊಂಡಿದೆ. ಎರಡು ವಜ್ರಗಳನ್ನು ಬಳಸಿ ಇದನ್ನು ಅಲಂಕರಿಸಲಾಗಿದೆ. ನ್ಯಾವಿಗೇಶನ್ ಬಟನ್ ಮತ್ತು ಫೋನ್‌ನ ಹಿಂಭಾಗದಲ್ಲಿ ಇದನ್ನು ಕಾಣಬಹುದಾಗಿದೆ.

ವರ್ಚ್ಯು ಸಿಗ್ನೇಚರ್ ಕೋಬ್ರಾ ($310,000)

ವರ್ಚ್ಯು ಸಿಗ್ನೇಚರ್ ಕೋಬ್ರಾ ($310,000)

ವಿಶ್ವದ ದುಬಾರಿ ಫೋನ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನವನ್ನು ವರ್ಚ್ಯು ಸಿಗ್ನೇಚರ್ ಕೋಬ್ರಾ ಪಡೆದುಕೊಂಡಿದೆ. ಫ್ರೆಂಚ್ ಜ್ಯುವೆಲ್ಲರ್ ಬೌಶೆರನ್ ಈ ಫೋನ್ ಅನ್ನು ಸಿದ್ಧಪಡಿಸಿದ್ದು, ಪಿಯರ್ ಕಟ್ ಡೈಮಂಡ್ ಅನ್ನು ಇದರಲ್ಲಿ ಬಳಸಲಾಗಿದೆ.

ಗ್ರೇಸೊ ಲಕ್ಸರ್ ಲಾಸ್ ವೇಗಸ್ ಜಾಕ್‌ಪ್ಯಾಟ್ ($ 1 million)

ಗ್ರೇಸೊ ಲಕ್ಸರ್ ಲಾಸ್ ವೇಗಸ್ ಜಾಕ್‌ಪ್ಯಾಟ್ ($ 1 million)

ಗ್ರೆಸೊ ಹೆಸರಿನ ಫೋನ್ ಅನ್ನು ಕರೆಯುವುದು ಗ್ರೇಸೊ ಲಕ್ಸರ್ ಲಾಸ್ ವೇಗಸ್ ಜಾಕ್‌ಪ್ಯಾಟ್ ಎಂಬ ಹೆಸರಿನಿಂದಾಗಿದೆ. 2005 ರಲ್ಲಿ ಈ ಫೋನ್ ಅನ್ನು ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಸ್ಥಾಪಿಸಲಾಯಿತು. 180 ಗ್ರಾಮ್‌ಗಳ ಚಿನ್ನದಿಂದ ಈ ಫೋನ್ ಅನ್ನು ತಯಾರಿಸಲಾಗಿದೆ.

ಡೈಮೆಂಡ್ ಕ್ರಿಪ್ಟೊ ಸ್ಮಾರ್ಟ್‌ಫೋನ್ ($ 1.3 million)

ಡೈಮೆಂಡ್ ಕ್ರಿಪ್ಟೊ ಸ್ಮಾರ್ಟ್‌ಫೋನ್ ($ 1.3 million)

ವಿಂಡೋಸ್ ಸಿಇ ಆಧಾರಿತ ಈ ಸ್ಮಾರ್ಟ್ ಫೋನ್ ಪೀಟರ್ ಅಲಿಸನ್‌ನಿಂದ ವಿನ್ಯಾಸಗೊಳಿಸಲಾಗಿದೆ. 50 ವಜ್ರದ ಹರಳುಗಳನ್ನು ಈ ಫೋನ್‌ನಲ್ಲಿ ಬಳಸಲಾಗಿದೆ.

ಗೋಲ್ಡ್ ವಿಶ್ ಲಿ ಮಿಲಿಯನ್  ($ 1.3 million)

ಗೋಲ್ಡ್ ವಿಶ್ ಲಿ ಮಿಲಿಯನ್ ($ 1.3 million)

ಇಮ್ಯಾನುವಲ್ ಗುಯೆಟ್ ಈ ಫೋನ್ ಅನ್ನು ವಿನ್ಯಾಸಪಡಿಸಿದ್ದು, ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಸ್ಥಾಪನೆಯಾಯಿತು. ವಿಶ್ವದ ಗಿನ್ನೇಸ್ ವರ್ಲ್ಡ್ ದಾಖಲೆಯನ್ನು ಈ ಫೋನ್ ಪಡೆದುಕೊಂಡಿದೆ.

ಐಫೋನ್ 3 ಜಿ ಕಿಂಗ್ಸ್ ಬಟನ್ ($ 1.5 million)

ಐಫೋನ್ 3 ಜಿ ಕಿಂಗ್ಸ್ ಬಟನ್ ($ 1.5 million)

ವಿಶ್ವದ ಹೆಚ್ಚು ದುಬಾರಿ ಫೋನ್ ಆಗಿ ಖ್ಯಾತಿವೆತ್ತಿರುವ ಐಫೋನ್ 3 ಜಿ ಕಿಂಗ್ಸ್ ಬಟನ್, 138 ವಜ್ರಗಳನ್ನು ಇದರಲ್ಲಿ ಅಳವಡಿಸಲಾಗಿದೆ.

ಸುಪ್ರೀಮ್ ಗೋಲ್ಡ್ ಸ್ಟ್ರೈಕರ್ ಐಫೋನ್

ಸುಪ್ರೀಮ್ ಗೋಲ್ಡ್ ಸ್ಟ್ರೈಕರ್ ಐಫೋನ್

ವಿಶ್ವದಲ್ಲೇ ಎರಡನೆಯ ಅತಿ ದೊಡ್ಡ ದುಬಾರಿ ಫೋನ್ ಆಗಿ ಸುಪ್ರೀಮ್ ಗೋಲ್ಡ್ ಸ್ಟ್ರೈಕರ್ ಐಫೋನ್ ಖ್ಯಾತಿವೆತ್ತಿದೆ. 271 ಗ್ರಾಮ್ಸ್ 22 ಕೆ ಸೋಲಿಡ್ ಚಿನ್ನದಿಂದ ಇದನ್ನು ತಯಾರಿಸಲಾಗಿದೆ.

ವಿಶ್ವದ ಹೆಚ್ಚು ದುಬಾರಿ ಐಫೋನ್

ವಿಶ್ವದ ಹೆಚ್ಚು ದುಬಾರಿ ಐಫೋನ್

ವಿಶ್ವದ ಹೆಚ್ಚು ದುಬಾರಿ ಐಫೋನ್ 32 ಜಿಬಿ ಆವೃತ್ತಿಯ ಐಫೋನ್ 4 100 ಕ್ಯಾರೇಟ್ ಚಿನ್ನದಿಂದ ನಿರ್ಮಿಸಲಾಗಿದೆ. ಮುಂಭಾಗದ ನ್ಯಾವಿಗೇಶನ್ ಬಟನ್ ಪ್ಲಾಟಿನಮ್‌ನಿಂದ ತಯಾರಿಸಲಾಗಿದ್ದು 8 ಕ್ಯಾರೇಟ್ ಡೈಮೆಂಡ್ಸ್ ಅನ್ನು ಇದು ಒಳಗೊಂಡಿದೆ.

Most Read Articles
Best Mobiles in India

English summary
Now Smartphones are become most important for everybody in this world therefore they are available of cheap as well as expensive prices But some phones are most expensive in this world.So here is list of top 10 most expensive mobile phones in the world 2016.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more