ಬ್ಯಾಂಕ್ ಖಾತೆ ತೆರೆಯಲು ವಾಟ್ಸ್ ಆಪ್ ನಲ್ಲಿ ಅವಕಾಶ

By Gizbot Bureau
|

ಎಯುನ ಸಣ್ಣ ಹಣಕಾಸು ಬ್ಯಾಂಕ್ ಆಸಕ್ತ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯನ್ನು ಇನ್ಸೆಂಟ್ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ಮೂಲಕ ತೆರೆಯಬಹುದು ಎಂದು ಪ್ರಕಟಿಸಿದೆ. ಸುಧಾರಿತ ಮಲ್ಟಿ ಚಾನಲ್ ಸಂಭಾಷಣೆ ಮತ್ತು ಕಂಪ್ಯೂಟ್ ಫ್ಲಾಟ್ ಫಾರ್ಮ್ ಬಳಸಿ ಈ ಸೇವೆಯನ್ನು ಕರಿಕ್ಸ್ ಮೊಬೈಲ್ ನಡೆಸುತ್ತಿದೆ.

ವಾಟ್ಸ್ ಆಪ್ ನಲ್ಲೇ ತೆರೆಯಿರಿ ಬ್ಯಾಂಕ್ ಖಾತೆ:

ವಾಟ್ಸ್ ಆಪ್ ನಲ್ಲೇ ತೆರೆಯಿರಿ ಬ್ಯಾಂಕ್ ಖಾತೆ:

ಕರಿಕ್ಸ್ ನ ವರ್ಸಟೈಲ್ ಫ್ಲ್ಯಾಟ್ ಫಾರ್ಮ್ ಬಳಸಿ ಎಯು ಬ್ಯಾಂಕಿನ ಆಸಕ್ತ ಗ್ರಾಹಕರು ತಮಗೆ ಅಗತ್ಯವಿರುವ ಸೇವಿಂಗ್ ಬ್ಯಾಂಕ್ ಖಾತೆಯನ್ನು ಕೇವಲ ಐದಕ್ಕಿಂತಲೂ ಕಡಿಮೆ ನಿಮಿಷದಲ್ಲಿ ವಾಟ್ಸ್ ಆಪ್ ಚಾಟ್ ತರಹದ ಇಂಟರ್ಫೇಸ್ ಬಳಸಿ ತೆರೆಯಬಹುದಾಗಿದೆ.

ಬ್ಯಾಂಕ್ ಎಂಡಿ ಹೇಳಿಕೆ:

ಬ್ಯಾಂಕ್ ಎಂಡಿ ಹೇಳಿಕೆ:

ಈ ಸೇವೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಎಯು ಸಣ್ಣ ಹಣಕಾಸು ಬ್ಯಾಂಕಿನ ಎಂಡಿ ಮತ್ತು ಸಿಇಓ ಆಗಿರುವ ಸಂಜಯ್ ಅಗರ್ ವಾಲ್ " ವಾಟ್ಸ್ ಆಪ್ ವಿಶ್ವದಾದ್ಯಂತ ನಮ್ಮ ದೈನಂದಿನ ಜನರ ಜೀವನದ ದಿನನಿತ್ಯದ ಭಾಗವಾಗಿದೆ.ಜನ ಸ್ನೇಹಿ ಇಂಟರ್ಫೇಸ್ ಮೂಲಕ ಇದು ಸಾಕಷ್ಟು ಫೀಚರ್ ಗಳನ್ನು ಬಳಕೆದಾರರಿಗೆ ನೀಡುತ್ತದೆ. ಇದನ್ನು ಗಣನೆಗೆ ತೆಗೆದುಕೊಂಡಿರುವ ನಮ್ಮ ಎಯು ಬ್ಯಾಂಕ್ ನಮ್ಮ ಜನರ ಜೊತೆಗೆ ತೊಡಗಿಕೊಳ್ಳಲು ಈ ವೇದಿಕೆಯನ್ನು ಬಳಸುವುದಕ್ಕೆ ನಿರ್ಧರಿಸಿದ್ದೇವೆ. ಡಿಜಿಟಲ್ ಪರಿಹಾರದ ಮೂಲಕ ಬ್ಯಾಂಕಿಂಗ್ ವ್ಯವಹಾರವನ್ನು ಇನ್ನಷ್ಟು ಸರಳಗೊಳಿಸುವ ನಮ್ಮ ಗುರಿಯ ಒಂದು ಭಾಗವಾಗಿ ಈ ಹೆಜ್ಜೆಯನ್ನು ಇಡಲಾಗಿದೆ.ಇದು ಭಾರತದಲ್ಲಿ ಜನರು ಬ್ಯಾಂಕಿಂಗ್ ವ್ಯವಸ್ಥೆಯನ್ನು ನೋಡುವ ರೀತಿಯನ್ನು ಬದಲಾಯಿಸಲಿದೆ" ಎಂದಿದ್ದಾರೆ.

ಕಾರಿಕ್ಸ್ ಮೊಬೈಲ್ ಸಿಓಓ ಹೇಳಿಕೆ:

ಕಾರಿಕ್ಸ್ ಮೊಬೈಲ್ ಸಿಓಓ ಹೇಳಿಕೆ:

ಕಾರಿಕ್ಸ್ ಮೊಬೈಲ್ ನ ಸಿಓಓ ದೀಪಕ್ ಘೋಯಲ್ ಮಾತನಾಡಿ "ಎಯು ಬ್ಯಾಂಕ್ ನೊಂದಿಗಿನ ಪಾಲುದಾರಿಕೆಯ ಮೂಲಕ ವಾಟ್ಸ್ ಆಪ್ ಬ್ಯಾಂಕಿಂಗ್ ಸೇವೆಯನ್ನು ಜನರಿಗೆ ತಲುಪಿಸುವುದು ನಮ್ಮ ಭಾಗ್ಯ. ಮೆಸೇಜಿಂಗ್ ಆಪ್ ಮೂಲಕ ಬ್ಯಾಂಕಿಂಗ್ ಸೇವೆಯನ್ನು ತಲುಪಿಸುವುದು ಯಾವಾಗಲೂ ಕೂಡ ಒಂದು ಸವಾಲಿನ ಕೆಲಸ.ಬ್ಯಾಕ್ ಎಂಡ್ ನಲ್ಲಿ ಸಾಕಷ್ಟು ಅಪ್ಲಿಕೇಷನ್ ಗಳನ್ನು ಮತ್ತು ಪ್ರಕ್ರಿಯೆಗಳನ್ನು ಸ್ವಯಂಚಾಲಿತವಾಗಿ ಮತ್ತು ಸುರಕ್ಷಿತವಾಗಿ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಯಾವ ರೀತಿ ಈ ಸೇವೆಯನ್ನು ಜನರು ಸ್ವೀಕರಿಸುತ್ತಾರೆ ಎಂಬ ಬಗ್ಗೆ ಕುತೂಹಲವಿದೆ ಮತ್ತು ನಾವು ಈ ಸೇವೆಯನ್ನು ಒದಗಿಸುವುದಕ್ಕೆ ಸಂತೋಷ ಪಡುತ್ತೇವೆ" ಎಂದಿದ್ದಾರೆ.

 ಎಕ್ಸಿಕ್ಯೂಟೀವ್ ಡೈರೆಕ್ಟರ್ ಹೇಳಿಕೆ:

ಎಕ್ಸಿಕ್ಯೂಟೀವ್ ಡೈರೆಕ್ಟರ್ ಹೇಳಿಕೆ:

ಗ್ರಾಹಕರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸರಳವಾಗಿರುವ ಮತ್ತು ಗ್ರಾಹಕರಿಗೆ ಸುಲಭವಾಗಿರುವಂತ ಬ್ಯಾಂಕಿಂಗ್ ವ್ಯವಸ್ಥೆಯನ್ನು ತರುವುದಕ್ಕೆ ಎಯು ಬ್ಯಾಂಕ್ ಪ್ರಯತ್ನಿಸುತ್ತದೆ. ಸದ್ಯ ಟ್ಯಾಬ್ ಆಧಾರಿತ ಅಪ್ಲಿಕೇಷನ್ ಮೂಲಕವೇ ಇದೀಗ ನಮ್ಮ ಎಲ್ಲಾ ಸೇವಿಂಗ್ ಬ್ಯಾಂಕ್ ಖಾತೆಗಳು ತೆರೆಯಲ್ಪಡುತ್ತಿದೆ. ಇದೀಗ ಹೊಸ ತಂತ್ರಜ್ಞಾನವನ್ನು ನಮ್ಮ ದಿನನಿತ್ಯದ ಆಪರೇಷನ್ ನಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಬ್ಯಾಂಕ್ ನ್ನೇ ವ್ಯವಹಾರಕ್ಕಾಗಿ ಯಾಕೆ ಆಯ್ದುಕೊಳ್ಳಬೇಕು ಎಂಬುದಕ್ಕೆ ಕಾರಣ ಸಿಕ್ಕಂತಾಗುತ್ತದೆ.

ದೇಶವಿದೇಶದಲ್ಲಿ ಅತೀ ಹೆಚ್ಚು ಬಳಕೆಯಲ್ಲಿರುವ ಮೆಸೇಜಿಂಗ್ ಆಪ್ ಎಂದರೆ ಅದು ವಾಟ್ಸ್ ಆಪ್.ಈ ಹೆಜ್ಜೆಯು ಸುರಕ್ಷಿತವಾಗಿರುವ, ಸೀಮೆಗೆ ನಿಲುಕದ ಮತ್ತು ಉತ್ತಮ ಸೇವೆಯನ್ನು ಗ್ರಾಹಕರಿಗೆ ನೀಡುವ ಮೂಲಕ ಉತ್ತಮ ಬ್ಯಾಂಕಿಂಗ್ ಅನುಭ ನೀಡುವ ನಂಬಿಕೆ ನಮ್ಮದು ಎನ್ನುತ್ತಾರೆ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕಿನ ಎಕ್ಸಿಕ್ಯೂಟೀವ್ ಡೈರೆಕ್ಟರ್ ಉತ್ತಮ ತಿಬರ್ವಾಲ್.

ಗ್ರಾಹಕರ ಬ್ಯಾಂಕಿಂಗ್ ಸೇವೆಗಳು ಮತ್ತಷ್ಟು ಸುಲಭ:

ಗ್ರಾಹಕರ ಬ್ಯಾಂಕಿಂಗ್ ಸೇವೆಗಳು ಮತ್ತಷ್ಟು ಸುಲಭ:

ಈ ಸೇವೆಯು ಎಯು ಬ್ಯಾಂಕಿನ ಬ್ರ್ಯಾಂಡ್ ಮೌಲ್ಯಗಳ ವಿಸ್ತರಣೆಯಾಗಿದ್ದು ಹಣಕಾಸು ವ್ಯವಹಾರದ ಸುತ್ತ ಸುತ್ತುತ್ತದೆ ಮತ್ತು ಗ್ರಾಹಕರಿಗೆ ಕಠಿಣವಲ್ಲದ ಬ್ಯಾಂಕಿಂಗ್ ಸೇವೆಯನ್ನು ಒದಗಿಸುತ್ತದೆ. ವಾಟ್ಸ್ ಆಪ್ ನಲ್ಲಿ ಬ್ಯಾಂಕ್ ಪ್ರಾರಂಭಿಸಲು ಯೋಜಿಸುತ್ತಿರುವ ಅನೇಕ ಸೇವೆಗಳಲ್ಲಿ ಇದೂ ಕೂಡ ಒಂದಾಗಿದೆ. ಎಯು ಬ್ಯಾಂಕ್ ಇದೀಗ ದ್ವಿಮುಖ ಸಂಭಾಷಣೆಗೆ ನಡೆಸಲು,ಗ್ರಾಹಕರ ಅನುಭವವನ್ನು ಸ್ವಯಂಚಾಲಿತಗೊಳಿಸಲು ಮತ್ತು ಹೆಚ್ಚಿಸಲು ವಾಟ್ಸ್ ಆಪ್ ಬ್ಯುಸಿನೆಸ್ ಪರಿಹಾರವನ್ನು ಬಳಸಿಕೊಂಡು ಮೈಕ್ರೋ ಎಂಗೇಜ್ಮೆಂಟ್ ಗಳನ್ನು ರಚಿಸುವುದಕ್ಕೆ ಅವಕಾಶವಾಗುತ್ತದೆ.

ಗ್ರಾಹಕರೆಲ್ಲೋ ಅಲ್ಲೇ ಬ್ಯಾಂಕ್:

ಗ್ರಾಹಕರೆಲ್ಲೋ ಅಲ್ಲೇ ಬ್ಯಾಂಕ್:

ಭಾರತದಲ್ಲಿ ವಾಟ್ಸ್ ಆಪ್ ನ್ನು ದೊಡ್ಡ ಫ್ಲ್ಯಾಟ್ ಫಾರ್ಮ್ ಆಗಿ ಒಪ್ಪಿಕೊಳ್ಳಲಾಗಿದೆ. ಅದರಲ್ಲೂ ಪ್ರಮುಖ ದೈನಂದಿನ ಮಾತುಕತೆಗಾಗಿ ಹೆಚ್ಚೆಚ್ಚು ಬಳಕೆ ಮಾಡಲಾಗುತ್ತದೆ. ಭಾರತೀಯರನ್ನು ದೊಡ್ಡ ಮಟ್ಟದಲ್ಲಿ ತಲುಪುವ ಸಾಮರ್ಥ್ಯವು ಇನ್ನೂ ಕೂಡ ಈ ಬ್ಯುಸಿನೆಸ್ ತಂತ್ರಜ್ಞಾನದಲ್ಲಿ ಸಾಧ್ಯವಾಗಲಿದ್ದು 2-4 ಟೈಯರ್ ಪ್ರದೇಶಗಳಲ್ಲಿ ವಾಟ್ಸ್ ಆಪ್ ಮಹತ್ವದ ಪಾತ್ರವನ್ನು ವಹಿಸುತ್ತದೆ ಜೊತೆಗೆ ಡಿಜಿಟಲ್ ವ್ಯವಸ್ಥೆಯನ್ನು ಅಧಿಕಗೊಳಿಸುವ ಮೂಲಕ ಅದೆಷ್ಟೊ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. 200 ಮಿಲಿಯನ್ ಮಾಸಿಕವಾಗಿ ಆಕ್ಟಿವ್ ಆಗಿರುವ ಭಾರತೀಯ ಬಳಕೆದಾರರು ಈ ಮೆಸೇಜಿಂಗ್ ಆಪ್ ನಲ್ಲಿ ಇರುವುದರಿಂದಾಗಿ ಬ್ಯಾಂಕಿಂಗ್ ಸೇವೆಗಳು ಇದರಲ್ಲಿರುವುದು ಹೆಚ್ಚು ಸೂಕ್ತವಾಗಿರುತ್ತದೆ. "ಗ್ರಾಹಕರೆಲ್ಲಿದ್ದಾರೋ ಅಲ್ಲೇ ಬ್ಯಾಂಕ್" ಎಂಬ ಕಾನ್ಸೆಪ್ಟ್ ನ್ನು ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಡೆಸಬೇಕು ಎಂಬ ಮನಸ್ಸಿನಲ್ಲಿದೆ.

Best Mobiles in India

English summary
How to open bank account using Whatsapp

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X