ವಾಟ್ಸ್ ಆಪ್ ಕರೆಗಳನ್ನು ಹೇಗೆ ರೆಕಾರ್ಡ್ ಮಾಡುವುದು ಗೊತ್ತಾ?

By Gizbot Bureau
|

ವಾಟ್ಸ್ ಆಪ್ ಒಂದು ಅಧ್ಬುತ ಮೆಸೇಜಿಂಗ್ ಆಪ್ ಆಗಿದ್ದು ಸಾಕಷ್ಟು ಫೀಚರ್ ಗಳನ್ನು ಹೊಂದಿದೆ ಅದರಲ್ಲಿ ವೀಡಿಯೋ ಮತ್ತು ಆಡಿಯೋ ಕರೆಗಳಿಗೂ ಕೂಡ ಅವಕಾಶವಿದೆ. ಪ್ರತಿದಿನವೂ ನಾವಿದನ್ನು ಬಳಸುತ್ತೇವೆ ಯಾಕೆಂದರೆ ವಾಟ್ಸ್ ಆಪ್ ಬಹಳ ಸುಲಭವಾಗಿ ಬಳಸಲು ಯೋಗ್ಯವಾಗಿರುವ ಆಪ್ ಆಗಿದೆ. ಕಳೆದ ಹಲವು ದಿನಗಳಿಂದ ಇದರಲ್ಲಿ ಮಿಸ್ ಆಗಿರುವ ಒಂದು ಫೀಚರ್ ಎಂದರೆ ಕಾಲ್ ರೆಕಾರ್ಡಿಂಗ್. ಹೌದು ಕರೆಗಳನ್ನು ರೆಕಾರ್ಡ್ ಮಾಡಿಕೊಳ್ಳುವುದರೊಂದಿಗೆ ಸಾಕಷ್ಟು ತಪ್ಪು ಬಳಕೆಯೂ ಆಗುತ್ತದೆ ಎಂಬುದು ನಿಜವಾದರೂ ಕೂಡ ಕೆಲವೊಮ್ಮೆ ಕರೆಗಳ ರೆಕಾರ್ಡಿಂಗ್ ಫೀಚರ್ ಬಹಳ ಉಪಯೋಗಕ್ಕೆ ಬರುತ್ತದೆ.

ಒಂದು ವೇಳೆ ನೀವು ವಾಟ್ಸ್ ಆಪ್ ಕರೆಗಳನ್ನು ರೆಕಾರ್ಡ್ ಮಾಡಬೇಕು ಎಂದರೆ ಅದರ ಹಿಂದೆ ಸ್ವಲ್ಪ ಕೆಲಸಗಳನ್ನು ಮಾಡಬೇಕಾಗುತ್ತದೆ. ಆದರೆ ಇದು ನೀವು ಯಾವ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತೀರಿ ಎಂಬುದನ್ನು ಆಧರಿಸಿರುತ್ತದೆ. ಹಾಗಾದ್ರೆ ಆಂಡ್ರಾಯ್ಡ್ ಮತ್ತು ಐಫೋನ್ ಗಳಲ್ಲಿ ಹೇಗೆ ವಾಟ್ಸ್ ಆಪ್ ಕರೆಗಳನ್ನು ರೆಕಾರ್ಡ್ ಮಾಡಿಕೊಳ್ಳಬಹುದು ಎಂಬುದನ್ನು ನಾವಿಲ್ಲಿ ನಿಮಗಾಗಿ ತಿಳಿಸುತ್ತಿದ್ದೇವೆ. ಟ್ರೈ ಮಾಡಿ ನೋಡಿ.

ವಾಟ್ಸ್ ಆಪ್ ಕರೆಗಳನ್ನು ಹೇಗೆ ರೆಕಾರ್ಡ್ ಮಾಡುವುದು ಗೊತ್ತಾ?

ಸೂಚನೆ: ನೀವು ನಿಮ್ಮ ಪ್ರೈವೆಸಿಯ ಬಗ್ಗೆ ಜಾಗೃತರಾಗಿರಿ ಮತ್ತು ಸೀಕ್ರೆಟ್ ಆಗಿ ನಿಮ್ಮ ಕರೆಗಳನ್ನು ರೆಕಾರ್ಡ್ ಮಾಡುವ ಬಗ್ಗೆ ಹುಷಾರಾಗಿರಿ. ರೆಕಾರ್ಡಿಂಗ್ ಮಾಡುವ ಮುನ್ನ ರೆಕಾರ್ಡಿಂಗ್ ಬಗೆಗಿನ ಜಾಗೃತೆಗಳು ನಿಮಗೆ ಇರಲೇಬೇಕಾಗುತ್ತದೆ.

ಐಫೋನ್ ಮತ್ತು ಆಂಡ್ರಾಯ್ಡ್ ಗಳಲ್ಲಿ ವಾಟ್ಸ್ ಆಪ್ ಕರೆಗಳ ರೆಕಾರ್ಡಿಂಗ್

ಐಫೋನ್ ಮತ್ತು ಆಂಡ್ರಾಯ್ಡ್ ಗಳಲ್ಲಿ ವಾಟ್ಸ್ ಆಪ್ ಕರೆಗಳ ರೆಕಾರ್ಡಿಂಗ್

ಆಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ಕೂಡ ಕರೆಗಳ ರೆಕಾರ್ಡಿಂಗ್ ವಿಧಾನವು ವಿಭಿನ್ನವಾಗಿರುವುದರಿಂದಾಗಿ ನಾವು ಎರಡು ವಿಭಿನ್ನ ಸೆಕ್ಷನ್ ಗಳಲ್ಲಿ ಇದನ್ನು ವಿವರಿಸುತ್ತಿದ್ದೇವೆ. ನಿಮಗೆ ಆಂಡ್ರಾಯ್ಡ್ ಸೆಕ್ಷನ್ ಗೆ ಬೇಕಿದ್ದರೆ ಕೆಳಗೆ ಓದಿ ಇಲ್ಲದೇ ಐಫೋನ್ ಸೆಕ್ಷನ್ನಿನದ್ದು ಬೇಕಿದ್ದರೆ ಈ ಕೆಳಗಿನ ಸೆಕ್ಷನ್ ನ್ನು ಸ್ಕಿಪ್ ಮಾಡಿ ಮುಂದೆ ಓದಲು ಮುಜುಗರ ಪಟ್ಟುಕೊಳ್ಳಬೇಡಿ.

ಆಂಡ್ರಾಯ್ಡ್ ನಲ್ಲಿ ವಾಟ್ಸ್ ಆಪ್ ಕರೆಗಳ ರೆಕಾರ್ಡಿಂಗ್

ಆಂಡ್ರಾಯ್ಡ್ ನಲ್ಲಿ ವಾಟ್ಸ್ ಆಪ್ ಕರೆಗಳ ರೆಕಾರ್ಡಿಂಗ್

ಪ್ರತಿಯೊಂದು ಆಂಡ್ರಾಯ್ಡ್ ಡಿವೈಸ್ ನಲ್ಲಿಯೂ ಕೂಡ ವಾಟ್ಸ್ ಆಪ್ ಕರೆಗಳ ರೆಕಾರ್ಡಿಂಗ್ ವೈಶಿಷ್ಟ್ಯತೆಯು ಕಾರ್ಯ ನಿರ್ವಹಿಸುವುದಿಲ್ಲ. ಕೆಲವು ಫೋನ್ ಗಳಲ್ಲಿ VoIP ಕಾಲ್ ರೆಕಾರ್ಡಿಂಗ್ ಅನೇಬಲ್ ಆಗಿರುತ್ತದೆ ಮತ್ತು ಕೆಲವು ಡಿವೈಸ್ ಗಳಲ್ಲಿ ಅನೇಬಲ್ ಆಗಿರುವುದಿಲ್ಲ. ಆಂಡ್ರಾಯ್ಡ್ ಪೈ ನಲ್ಲಿ ರನ್ ಆಗುವ ಡಿವೈಸ್ ಗಳು ಇದಕ್ಕೆ ಬೆಂಬಲ ನೀಡದೇ ಇರುವ ಸಾಧ್ಯತೆ ಇದೆ.

1. ಕ್ಯೂಬ್ ಕಾಲ್ ರೆಕಾರ್ಡರ್ ಆಪ್ ನ್ನು ಇನ್ಸ್ಟಾಲ್ ಮಾಡಿ ಮತ್ತು ತೆರೆಯಿರಿ.ಎಲ್ಲಾ ಪರ್ಮಿಷನ್ ಗಳನ್ನು ಒದಗಿಸಿ.

2.ಇದೀಗ ವಾಟ್ಸ್ ಆಪ್ ನ್ನು ತೆರೆಯಿರಿ ಮತ್ತು ಕರೆಯನ್ನು ಮಾಡಿ. ಈ ಕರೆ ರೆಕಾರ್ಡ್ ಆಗುತ್ತಿದೆ ಎಂಬ ವಿಡ್ಜ್ ನಿಮ್ಮ ಸ್ಕ್ರೀನಿನಲ್ಲಿ ಕಾಣಿಸುತ್ತದೆ.ಒಂದು ವೇಳೆ ವಿಡ್ಜ್ ಕಾಣಿಸದೇ ಇದ್ದಲ್ಲಿ ಕ್ಯೂಬ್ ರೆಕಾರ್ಡರ್ ಆಪ್ ನ ಮೈಕ್ರೋಫೋನ್ ಐಕಾನಿನ ಮೇಲೆ ಮ್ಯಾನುವಲ್ ಆಗಿ ಟ್ಯಾಪ್ ಮಾಡಿ . ನಂತರ ಇದು ಕರೆಗಳನ್ನು ರೆಕಾರ್ಡ್ ಮಾಡಲು ಪ್ರಾರಂಭಿಸುತ್ತದೆ.

3. ಕೆಲವು ರೆಕಾರ್ಡಿಂಗ್ ಗಳಲ್ಲಿ ಮತ್ತೊಂದು ಸೈಡಿನ ಆಡಿಯೋ ಇರುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ, ಹ್ಯಾಮ್ ಬರ್ಗರ್ ಮೆನುವನ್ನು ಟ್ಯಾಪ್ ಮಾಡಿ ಮತ್ತು ರೆಕಾರ್ಡಿಂಗ್ ನ್ನು ತೆರೆಯಿರಿ. VoIP ರೆಕಾರ್ಡಿಂಗ್ ಆಡಿಯೋ ಸೋರ್ಸ್ ನ್ನು ಮೈಕ್ರೋ ಫೋನ್ ಗೆ ಬದಲಾಯಿಸಿ. ಇದು ಲೌಡ್ ಸ್ಪೀಕರ್ ನ್ನು ಕೂಡ ಆನ್ ಮಾಡುತ್ತದೆ.

ವಾಟ್ಸ್ ಆಪ್ ಕರೆ

ವಾಟ್ಸ್ ಆಪ್ ಕರೆ

ವಾಟ್ಸ್ ಆಪ್ ಕರೆಗಳಿಗೆ ಮಾತ್ರವಲ್ಲ ಬದಲಾಗಿ ಸಾಮಾನ್ಯ ಸೆಲ್ಯುಲರ್ ಕರೆಗಳನ್ನು ರೆಕಾರ್ಡ್ ಮಾಡುವುದಕ್ಕೂ ಕೂಡ ಈ ಆಪ್ ನ್ನು ನೀವು ಬಳಕೆ ಮಾಡಬಹುದು. ನಾವು ಟೆಸ್ಟಿಂಗ್ ಮಾಡುತ್ತಿದ್ದಾಗ ಎಂಐ ಎ1 ಮತ್ತು ರೆಡ್ಮಿ ನೋಟ್ 6 ಪ್ರೋ ಗಳಲ್ಲಿ ನಾವು ಟೆಸ್ಟ್ ಮಾಡಿದಾಗ ಯಾವುದೇ ಡೀಫಾಲ್ಟ್ ಸೆಟ್ಟಿಂಗ್ ನ್ನು ಬದಲಾಯಿಸದೇ ರೆಕಾರ್ಡ್ ಮಾಡುವುದಕ್ಕೆ ಸಾಧ್ಯವಾಗಿದೆ.

ಐಫೋನ್ ನಲ್ಲಿ ವಾಟ್ಸ್ ಆಪ್ ಕರೆಗಳ ರೆಕಾರ್ಡಿಂಗ್

ಐಫೋನ್ ನಲ್ಲಿ ವಾಟ್ಸ್ ಆಪ್ ಕರೆಗಳ ರೆಕಾರ್ಡಿಂಗ್

ಪ್ರೈವೆಸಿ ವಿಚಾರದಲ್ಲಿ ಐಓಎಸ್ ಸ್ವಲ್ಪ ಯಾವಾಗಲೂ ಸ್ಟ್ರಿಕ್ಟ್ ಆಗಿರುತ್ತದೆ. ಹಾಗಾಗಿ ಯಾವುದೇ ಸುಲಭ ಮಾರ್ಗದಲ್ಲಿ ವಾಟ್ಸ್ ಆಪ್ ಕರೆಗಳನ್ನು ರೆಕಾರ್ಡ್ ಮಾಡುವುದಕ್ಕೆ ಇದರಲ್ಲಿ ಸಾಧ್ಯವಾಗುವುದಿಲ್ಲ. ಆದರೆ ಒಂದು ಹ್ಯಾಕ್ ಮಾಡುವ ಮೂಲಕ ನೀವು ಇದನ್ನು ಸಾಧಿಸಬಹುದು. ಆದರೆ ಸಾಕಷ್ಟು ಕೆಲಸವನ್ನು ನೀವು ಮಾಡಬೇಕಾಗುತ್ತದೆ. ಒಂದು ರೀತಿ ಇದು ಸ್ವಲ್ಪ ಕಠಿಣವಾದ ಕೆಲಸವೂ ಹೌದು. ನೀವಿಲ್ಲಿ ಮ್ಯಾಕ್ ಮತ್ತು ಐಫೋನ್ ಮತ್ತು ಸೆಕೆಂಡರಿ ಸ್ಮಾರ್ಟ್ ಫೋನ್ ಜೊತೆಗೆ ವಾಟ್ಸ್ ಆಪ್ ಅಕೌಂಟ್ ನ್ನು ಹೊಂದಿರಬೇಕಾಗುತ್ತದೆ. ಸೆಕೆಂಡರಿ ಡಿವೈಸ್ ಆಂಡ್ರಾಯ್ಡ್ ಕೂಡ ಆಗಿರಬಹುದು ಅಥವಾ ಐಫೋನ್ ಕೂಡ ಆಗಿರಬಹುದು. ಸೆಕೆಂಡರಿ ಡಿವೈಸ್ ನಿಮ್ಮ ಪ್ರೈಮರಿ ಡಿವೈಸ್ ನಂತೆ ಮ್ಯಾಕ್ ಗೆ ರೆಕಾರ್ಡಿಂಗ್ ಗಾಗಿ ಕನೆಕ್ಟ್ ಆಗಿಯೇ ಇರಬೇಕಾಗುತ್ತದೆ.

1. ಮ್ಯಾಕ್ ಗೆ ನಿಮ್ಮ ಐಫೋನ್ ನ್ನು ಕನೆಕ್ಟ್ ಮಾಡಿ ಮತ್ತು ಎಲ್ಲಾ ಪರ್ಮಿಷನ್ ಗಳನ್ನು ಒದಗಿಸಿ. ಇದೀಗ ಕ್ವಿಕ್ ಟೈಮ್ ನ್ನು ತೆರೆಯಿರಿ ಮತ್ತು ಫೈಲ್ ಮೆನುವನ್ನು ಕ್ಲಿಕ್ಕಿಸಿ. ಇಲ್ಲಿ "New Audio Recording"ಆಯ್ಕೆ ಮಾಡಿ. ನಿಮ್ಮ ಐಫೋನ್ ನ್ನು ಸೋರ್ಸ್ ಆಗಿ ಸೆಲೆಕ್ಟ್ ಮಾಡಿ ಮತ್ತು ರೆಕಾರ್ಡ್ ಬಟನ್ ನ್ನು ಕ್ಲಿಕ್ಕಿಸಿ.

2.ಐಫೋನ್ ನಲ್ಲಿ ವಾಟ್ಸ್ ಆಪ್ ಕರೆಯನ್ನು ನಿಮ್ಮ ಸೆಕೆಂಡರಿ ವಾಟ್ಸ್ ಆಪ್ ಡಿವೈಸ್ ಗೆ ಮಾಡಿ. ಒಮ್ಮೆ ಕನೆಕ್ಟ್ ಆದ ನಂತರ ವಾಟ್ಸ್ ಆಪ್ ಗ್ರೂಪ್ ಕಾಲಿಂಗ್ ಫೀಚರ್ ನ್ನು ಸೆಲೆಕ್ಟ್ ಮಾಡಿ ಇನ್ನೊಬ್ಬ ವ್ಯಕ್ತಿಯನ್ನು ಆ ಕರೆಗೆ ಸೇರಿಸಿ ಮಾತನಾಡಿ.

3. ನಿಮ್ಮ ಮಾತುಕತೆಯನ್ನು ಸೆಕೆಡರಿ ಡಿವೈಸ್ ಬಳಸಿ ಮುಂದುವರಿಸಿ. ಒಮ್ಮೆ ನಿಮ್ಮ ಮಾತುಕತೆ ಮುಗಿದ ನಂತರ ಕ್ವಿಕ್ ಟೈಮ್ ನಲ್ಲಿ ರೆಕಾರ್ಡಿಂಗ್ ನ್ನು ನಿಲ್ಲಿಸಿ ಮತ್ತು ಅದನ್ನು ಮ್ಯಾಕ್ ನಲ್ಲಿ ಸೇವ್ ಮಾಡಿಕೊಳ್ಳಿ.

ಸೂಚನೆ: ನಿಮ್ಮ ಮಾತುಕತೆಯ ಸಂದರ್ಬದಲ್ಲಿ ಐಫೋನ್ ಮ್ಯಾಕ್ ಗೆ ಕನೆಕ್ಟ್ ಆಗಿರುವಂತೆ ನೋಡಿಕೊಳ್ಳಿ ಮತ್ತು ಮೂರು ವಾಟ್ಸ್ ಆಪ್ ನಂಬರ್ ಗಳು ಆಕ್ಟಿವ್ ಆಗಿ ಗ್ರೂಪ್ ಕರೆಯಲ್ಲಿ ಭಾಗಿಯಾಗಿರಬೇಕು. ಯಾವುದೇ ಒಂದು ಡಿವೈಸ್ ಡಿಸ್ಕನೆಕ್ಟ್ ಆದರೂ ಕೂಡ ಕರೆಯ ರೆಕಾರ್ಡಿಂಗ್ ನಿಲ್ಲುತ್ತದೆ.

ಅಷ್ಟೇ.. ನಿಮ್ಮ ಕೆಲಸ ಆಯಿತು. ಸ್ವಲ್ಪ ಕಷ್ಟವೇ. ಆದರೂ ಅಗತ್ಯವಿದೆ ಎಂದರೆ ಈ ಹಂತಗಳನ್ನು ಅನುಸರಿಸಬಹುದು. ಸದ್ಯಕ್ಕೆ ಇಷ್ಟು ಮಾಡಿದರೆ ಕೆಲವು ಡಿವೈಸ್ ಗಳಲ್ಲಿ ಸಾಧ್ಯವಾಗುತ್ತದೆ. ಆದರೆ ಮುಂದಿನ ದಿನಗಳಲ್ಲಿ ವಾಟ್ಸ್ ಆಪ್ ಕರೆಯ ರೆಕಾರ್ಡಿಂಗ್ ಕಠಿಣವಾಗಬಹುದು ಯಾಕೆಂದರೆ ಪ್ರೈವೆಸಿ ಕಂಟ್ರೋಲ್ ನಿಂದಾಗಿ ಮತ್ತಷ್ಟು ಜಠಿಲವಾಗುವ ಸಾಧ್ಯತೆ ಇದೆ.

Best Mobiles in India

English summary
How to Record WhatsApp Calls on Android and iPhone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X