ಆಂಡ್ರಾಯ್ಡ್ ಫೋನ್‌ನಲ್ಲಿ ಡಿಲೀಟ್ ಆದ ಫೋಟೋ ಮರುಪಡೆದುಕೊಳ್ಳುವುದು ಹೇಗೆ?

By Shwetha
|

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚು ಮುಖ್ಯವಾಗಿರುವ ಫೋಟೋಗಳು ಮತ್ತು ಫೈಲ್‌ಗಳು ನಷ್ಟವಾದಲ್ಲಿ ನೀವೇನು ಮಾಡಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಫೋಟೋ ನಷ್ಟವಾಯಿತು ಎಂದು ಬೇಸರಿಸುತ್ತಾ ಕುಳಿತುಕೊಳ್ಳುವ ಬದಲಿಗೆ ಮರುಪಡೆದುಕೊಳ್ಳುವ ಸರಳ ವಿಧಾನವನ್ನು ಅರಿತುಕೊಂಡು ನಿಮ್ಮ ಫೋನ್‌ನಲ್ಲಿ ಕಳೆದು ಹೋದ ಫೋಟೋವನ್ನು ರೀಸ್ಟೋರ್ ಮಾಡಿಕೊಳ್ಳಿ.

ಓದಿರಿ: ವಾಟ್ಸಾಪ್ ಚಾಟ್ ಮರೆಮಾಡುವುದು ಹೇಗೆ?

ಇಂದಿನ ಲೇಖನದಲ್ಲಿ ಸರಳವಾದ ಹಂತಗಳ ಮೂಲಕ ನಾವು ನಿಮಗೆ ಈ ಮಾಹಿತಿಯನ್ನು ತಿಳಿಸುತ್ತಿದ್ದು ಇದು ಹೆಚ್ಚು ಪರಿಣಾಮಕಾರಿ ಮತ್ತು ಸರಳ ಟಿಪ್ಸ್ ಆಗಿದೆ. ಬನ್ನಿ ಅದೇನು ಎಂಬುದನ್ನು ಅರಿತುಕೊಳ್ಳೋಣ.

ಡೀಬಗ್ಗಿಂಗ್ ಮೋಡ್

ಡೀಬಗ್ಗಿಂಗ್ ಮೋಡ್

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ನೀವು ಮೊದಲಿಗೆ ಡೀಬಗ್ಗಿಂಗ್ ಮೋಡ್ ಅನ್ನು ಸಕ್ರಿಯಗೊಳಿಸಬೇಕು. ಇದನ್ನು ಮಾಡಲು ಸೆಟ್ಟಿಂಗ್ಸ್ > ಡೆವಲಪರ್ ಆಪ್ಶನ್ > ಯುಎಸ್‌ಬಿ ಡೀಬಗ್ಗಿಂಗ್

ಆಂಡ್ರಾಯ್ಡ್ ರಿಕವರಿ

ಆಂಡ್ರಾಯ್ಡ್ ರಿಕವರಿ

ಆಂಡ್ರಾಯ್ಡ್ ರಿಕವರಿ ಚಾಲನೆ ಮಾಡಿ ಮತ್ತು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಯುಎಸ್‌ಬಿ ಮೂಲಕ ಸಂಪರ್ಕಪಡಿಸಿ. ಆನ್‌ಸ್ಕ್ರೀನ್ ಆಪ್ಶನ್ ನಿಮ್ಮ ಫೋನ್‌ನಲ್ಲಿ ಪಾಪ್ ಆಗುತ್ತದೆ. ಯುಎಸ್‌ಬಿ ಸ್ಟೋರೇಜ್ ಆಯ್ಕೆಮಾಡಿ. ನಿಮ್ಮ ಡಿವೈಸ್‌ನಲ್ಲಿ ಆಂಡ್ರಾಯ್ಡ್ ರಿಕವರಿ ನೀವು ಕಾಣುತ್ತೀರಿ ಮತ್ತು ಸ್ಟೋರೇಜ್ ಆಯ್ಕೆ ಲಭ್ಯವಾಗುತ್ತದೆ.

ಮೀಡಿಯಾ ಸ್ಟೋರೇಜ್

ಮೀಡಿಯಾ ಸ್ಟೋರೇಜ್

ಡೇಟಾವನ್ನು ರಿಕವರಿ ಮಾಡುವ ಮೀಡಿಯಾ ಸ್ಟೋರೇಜ್ ಅನ್ನು ಆಯ್ಕೆಮಾಡಿ. ಡಿವೈಸ್ ಸ್ಕ್ಯಾನ್ ಮಾಡಲು ಅಪ್ಲಿಕೇಶನ್ ಆರಂಭಿಸುತ್ತದೆ. ಅಂತೆಯೇ ಫೋನ್‌ನಲ್ಲಿರುವ ಎಲ್ಲಾ ಡೇಟಾವನ್ನು ಇದು ಸ್ಕ್ಯಾನ್ ಮಾಡುತ್ತದೆ.

ಫೋನ್/ಮೆಮೊರಿ ಕಾರ್ಡ್‌

ಫೋನ್/ಮೆಮೊರಿ ಕಾರ್ಡ್‌

ಸ್ಕ್ಯಾನಿಂಗ್ ಪೂರ್ಣಗೊಂಡ ನಂತರ, ಫೋನ್/ಮೆಮೊರಿ ಕಾರ್ಡ್‌ನಲ್ಲಿರುವ ಪ್ರಸ್ತುತವಿರುವ ಫೈಲ್‌ಗಳ ಪಟ್ಟಿಯನ್ನು ನೀವು ಕಾಣುತ್ತೀರಿ. ಟ್ರಿ ಮಾದರಿಯಲ್ಲಿ ಫೈಲ್‌ಗಳ ಮೂಲಕ ನಿಮಗೆ ಬ್ರೌಸ್ ಮಾಡಬಹುದಾಗಿದೆ ಅಂತೆಯೇ ಅವುಗಳನ್ನು ಪೂರ್ವವೀಕ್ಷಣೆ ಮಾಡಬಹುದಾಗಿದೆ.

ಸೇವ್ ಕ್ಲಿಕ್

ಸೇವ್ ಕ್ಲಿಕ್

ನಿಮಗೆ ಬೇಕಾದ ಫೈಲ್‌ಗಳನ್ನು ನೀವು ಒಮ್ಮೆ ಲೊಕೇಟ್ ಮಾಡಿದ ನಂತರ, ಫೈಲ್‌ ಹೆಸರುಗಳ ಬದಿಯಲ್ಲಿ ಚೆಕ್ ಬಾಕ್ಸ್‌ಗಳನ್ನು ಮಾರ್ಕ್ ಮಾಡಿ, ಸೇವ್ ಕ್ಲಿಕ್ ಮಾಡುವ ಮೂಲಕ ಪ್ರಕ್ರಿಯೆ ನಡೆಸಿ. ಡೇಟಾವನ್ನು ಎಲ್ಲಿ ಉಳಿಸಬೇಕು ಎಂಬ ಲೊಕೇಶನ್ ಅನ್ನು ನಿರ್ದಿಷ್ಟಪಡಿಸಿ ಮತ್ತು ಮುಂದುವರಿಯಿರಿ.

ಲೊಕೇಶನ್ ಪಾತ್

ಲೊಕೇಶನ್ ಪಾತ್

ರಿಕವರಿ ಯಶಸ್ವಿಯಾಗಿ ಸಂಪೂರ್ಣಗೊಂಡ ನಂತರ, ರಿಕವರಿ ಆಗಿರುವ ಫೈಲ್‌ಗಳ ಸಂಖ್ಯೆಯನ್ನು ನಿಮಗೆ ತೋರಿಸುತ್ತದೆ. ಫೈಲ್‌ಗಳ ಗಾತ್ರ ಮತ್ತು ಅದು ಎಲ್ಲಿ ಉಳಿದಿದೆ ಎಂಬುದನ್ನು ತಿಳಿಸುತ್ತದೆ. ಅಪ್ಲಿಕೇಶನ್‌ನಿಂದ ನೀವು ನೇರವಾಗಿ ಲೊಕೇಶನ್ ಪಾತ್ ಅನ್ನು ತೆರೆಯಬಹುದಾಗಿದೆ.

Best Mobiles in India

English summary
your lost photos are not really lost at all. We'll show you just how easy it is to recover photos on Android. There's only one thing to remember: act fast.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X