ಜಿಯೋ ನಂಬರ್‌ನಲ್ಲಿ ಕಾಲರ್ ಟ್ಯೂನ್ ಸ್ಥಗಿತಗೊಳಿಸುವುದು ಹೇಗೆ..?
ಜಿಯೋ ತನ್ನ ಗ್ರಾಹಕರಿಗಾಗಿ ಉಚಿತ ಕಾಲರ್ ಟ್ಯೂನ್ ಸೇವೆ ನೀಡುತ್ತಿದೆ. ಆದರೆ, ಬಹಳಷ್ಟು ಜನ ಯಾವುದೇ ಹಾಡನ್ನು ಕಾಲರ್ ಟ್ಯೂನ್ ಆಗಿ ಬಳಸಲು ಬಯಸುವುದಿಲ್ಲ ಅಥವಾ ಹಾಡನ್ನು ಬದಲಾಯಿಸಲು ಬಯಸುತ್ತಾರೆ. ಈ ರೀತಿಯಲ್ಲಿ ನಿಮ್ಮ ಜಿಯೋ ಸಂಖ್ಯೆಯಿಂದ ಕಾಲರ್ ಟ್ಯೂನ್‌ನ್ನು ನಿಷ್ಕ್ರಿಯಗೊಳಿಸಲು ಅಥವಾ ಬದಲಾಯಿಸಲು ಬಯಸುವವರಲ್ಲಿ ನೀವು ಒಬ್ಬರಾಗಿದ್ದರೆ, ಈ ಕೆಳಗಿನ ವಿಧಾನಗಳೊಂದಿಗೆ ಮುಂದುವರೆಯಿರಿ. ಕಾಲರ್ ಟ್ಯೂನ್ ನಿಷ್ಕ್ರಿಯ ಅಥವಾ ಬದಲಾವಣೆಗೆ ನಿಮ್ಮ ಬಳಿ ಸಕ್ರಿಯ ಜಿಯೋ ಸಂಖ್ಯೆ ಮತ್ತು ಮೈ ಜಿಯೋ ಆಪ್ ಇರುವುದು ಅವಶ್ಯಕ.

ವಿಧಾನ 1 : ಎಸ್‌ಎಂಎಸ್
- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮೆಸೇಜ್ ಆಪ್ ತೆರೆಯಿರಿ.
- ಮೆಸೇಜ್‌ನಲ್ಲಿ ಸ್ಟಾಪ್ ಎಂದು ಟೈಪ್ ಮಾಡಿ 56789 ಗೆ ಕಳುಹಿಸಿ.
- ನಿಷ್ಕ್ರಿಯಗೊಳಿಸುವಿಕೆಯನ್ನು ದೃಢೀಕರಿಸಲು 1 ಎಂದು ಪ್ರತ್ಯುತ್ತರಿಸಿ.
- ಇದಾದ ನಂತರ ಜಿಯೋ ಟ್ಯೂನ್ಸ್ ಸೇವೆ ಸ್ಥಗಿತವಾಗುತ್ತದೆ. ಮತ್ತು ನಿಷ್ಕ್ರಿಯದ ಬಗ್ಗೆ ದೃಢೀಕೃತ SMSನ್ನು ಬಳಕೆದಾರರು ಸ್ವೀಕರಿಸುತ್ತಾರೆ.

ವಿಧಾನ 2 : ಮೈ ಜಿಯೋ ಆಪ್
- ಮೈ ಜಿಯೋ ಆಪ್ ತೆರೆಯಿರಿ.
- ಮೆನುವಿನಲ್ಲಿ 'ಜಿಯೋ ಟ್ಯೂನ್ಸ್' ಆಯ್ಕೆಯನ್ನು ಕ್ಲಿಕ್ ಮಾಡಿ.
- 'ಮೈ ಸಬ್‌ಸ್ಕ್ರೈಬರ್ ಪುಟ'ಕ್ಕೆ ಹೋಗಿ ಮತ್ತು ಕೆಳಭಾಗದಲ್ಲಿರುವ 'ಜಿಯೋ ಟ್ಯೂನ್ ನಿಷ್ಕ್ರಿಯಗೊಳಿಸಿ' ಆಯ್ಕೆ ಟ್ಯಾಪ್ ಮಾಡಿ.
- ದೃಢೀಕರಣ ಪುಟದಲ್ಲಿ 'ಹೌದು' ಎಂಬುದನ್ನು ಟ್ಯಾಪ್ ಮಾಡಿ

ವಿಧಾನ 3 : ಐವಿಆರ್ ಬಳಕೆ
- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಾಲ್ ಡಯಲರ್ ಆಪ್ ತೆರೆಯಿರಿ
- ಜಿಯೋ ಸಂಖ್ಯೆಯಿಂದ 155223 ಗೆ ಕಾಲ್ ಮಾಡಿ
- ಇಂಗ್ಲಿಷ್‌ಗಾಗಿ 1 ಮತ್ತು ಹಿಂದಿಗಾಗಿ 2 ಒತ್ತುವ ಮೂಲಕ ಆದ್ಯತೆಯ ಭಾಷೆ ಆರಿಸಿ.
- ಈಗ, ಐವಿಆರ್ ನಿಮ್ಮ ಜಿಯೋ ಸಂಖ್ಯೆಯಲ್ಲಿರುವ ಎಲ್ಲಾ ಸಕ್ರಿಯ ಮೌಲ್ಯವರ್ಧಿತ ಸೇವೆಗಳನ್ನು ಕೇಳುತ್ತದೆ
- ನಿಷ್ಕ್ರಿಯಗೊಳಿಸಲು ಜಿಯೋ ಟ್ಯೂನ್ ಆಯ್ಕೆ ಆರಿಸಿ.

ಮರು ಆಕ್ಟಿವೇಟ್
ಒಂದು ವೇಳೆ ನೀವು ಜಿಯೋ ಟ್ಯೂನ್ ಸೇವೆಯನ್ನು ಪುನಃ ಸಕ್ರಿಯಗೊಳಿಸಲು ಬಯಸಿದರೆ, ಮುಂದಿನ ಆಯ್ಕೆಗಳನ್ನು ಅನುಸರಿಸಿ.
- ಮೈ ಜಿಯೋ ಆಪ್‌ನಲ್ಲಿ ಪ್ರಾಥಮಿಕ ಸಂಖ್ಯೆಯಾಗಿ ಜಿಯೋ ಸಂಖ್ಯೆಯನ್ನು ಆಯ್ಕೆ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ನಂತರ, ಎಡ ಮೂಲೆಯಲ್ಲಿರುವ ಥ್ರೀ ಡಾಟ್ ಮೆನುವನ್ನು ಟ್ಯಾಪ್ ಮಾಡಿ.
- ಬಳಿಕ ಮೆನುವಿನಲ್ಲಿರುವ ಜಿಯೋ ಟ್ಯೂನ್ ಆಯ್ಕೆ ಕ್ಲಿಕ್ ಮಾಡಿ.
- 'ಹಾಡುಗಳು' ಟ್ಯಾಬ್‌ಗೆ ಮುಂದುವರೆದು, ನೀವು ಅಪೇಕ್ಷಿಸಿದ ಹಾಡನ್ನು ಜಿಯೋ ಟ್ಯೂನ್ ಆಗಿ ಹೊಂದಿಸಲು ಹಾಡನ್ನು ಹುಡುಕಿ.
- ನೀವು ಆಯ್ಕೆ ಮಾಡಿದ ಟ್ಯೂನ್‌ನ್ನು ಸಕ್ರಿಯಗೊಳಿಸಲು ಅಥವಾ ಬದಲಾಯಿಸಲು JioTune ಸೆಟ್ ಆಯ್ಕೆಯನ್ನು ಟ್ಯಾಪ್ ಮಾಡಿ.


Click it and Unblock the Notifications








