ಗೂಗಲ್ ಕ್ರೋಮ್ ನಲ್ಲಿ ಸೇವ್ ಆಗಿರುವ ಪಾಸ್ ವರ್ಡ್ ಗಳನ್ನು ತಿಳಿಯುವುದು ಹೇಗೆ?

By Gizbot Bureau
|

ಗೂಗಲ್ ನ ಪ್ರಸಿದ್ಧ ಬ್ರೌಸರ್ ಗೂಗಲ್ ಕ್ರೋಮ್ ನ್ನು ನೀವು ಬಳಸುತ್ತಿದ್ದೀರಾ? ಒಂದು ವೇಳೆ ಹೌದಾದರೆ ಯಾವುದೇ ಕಾರಣಕ್ಕೆ ನಿಮಗೆ ಗೊತ್ತಿಲ್ಲದೆ ಪಾಸ್ ವರ್ಡ್ ಸೇವ್ ಮಾಡುವ ಆಯ್ಕೆಯನ್ನು ನೀವು ಆಕ್ಟಿವೇಟ್ ಮಾಡಿರುವ ಸಾಧ್ಯತೆ ಇರುತ್ತದೆ. ಈ ಫೀಚರ್ ನಮಗೆ ಪಾಸ್ ವರ್ಡ್ ನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಅಗತ್ಯತೆಯನ್ನು ದೂರ ಮಾಡುತ್ತದೆ. ಸಾಕಷ್ಟು ವೆಬ್ ಸೈಟ್ ಗಳ ಪಾಸ್ ವರ್ಡ್ ಮತ್ತು ಯೂಸರ್ ನೇಮ್ ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟವಾಗಿರುವುದರಿಂದಾಗಿ ಖಂಡಿತ ಈ ಪಾಸ್ ವರ್ಡ್ ಸೇವ್ ಮಾಡಿ ಇಡುವ ಫೀಚರ್ ಅನುಕೂಲವಾಗುತ್ತದೆ ಎಂಬುದು ನಿಜವಾದ ಸಂಗತಿಯೇ ಆದರೆ....?

ಗೂಗಲ್ ಕ್ರೋಮ್ ನಲ್ಲಿ ಸೇವ್ ಆಗಿರುವ ಪಾಸ್ ವರ್ಡ್ ಗಳನ್ನು ತಿಳಿಯುವುದು ಹೇಗೆ?

ಆದರೆ ಏನು ಎಂದು ಪ್ರಶ್ನಿಸುತ್ತಿದ್ದೀರಾ? ಇದು ಸಮಸ್ಯೆಗೆ ಕಾರಣವಾಗಬಹುದು ಎಂಬುದು ನಿಮಗೆ ಚೆನ್ನಾಗಿ ಗೊತ್ತಿದೆ ಅಲ್ಲವೆ? ಹ್ಯಾಕರ್ ಗಳಿಗೆ ಪಾಸ್ ವರ್ಡ್ ಕದಿಯುವುದಕ್ಕೆ ಸುಲಭ ಮಾರ್ಗವನ್ನು ನೀವೇ ಕೊಟ್ಟಂತಾಗುವ ಸಾಧ್ಯತೆ ಇರುತ್ತದೆ. ಯಾವುದಕ್ಕೂ ನಿಮ್ಮ ಯಾವೆಲ್ಲ ಪಾಸ್ ವರ್ಡ್ ಗಳು ಆಂಡ್ರಾಯ್ಡ್ ನ ಗೂಗಲ್ ಕ್ರೋಮ್ ನಲ್ಲಿ ಸೇವ್ ಆಗಿದೆ ಎಂಬುದನ್ನು ಒಮ್ಮೆ ನೋಡಿ ಬಿಡಿ. ಹೇಗೆ ಎಂದು ಕೇಳುತ್ತಿದ್ದೀರಾ? ಮುಂದೆ ಓದಿ.

ಆಂಡ್ರಾಯ್ಡ್ ನ ಗೂಗಲ್ ಕ್ರೋಮ್ ನಲ್ಲಿ ಸೇವ್ ಆಗಿರುವ ಪಾಸ್ ವರ್ಡ್ ಗಳನ್ನು ನೋಡುವುದು ಹೇಗೆ?

ಪಾಸ್ ವರ್ಡ್ ಗಳು ಮರೆತು ಹೋಗುವ ಪ್ರಶ್ನೆಯೇ ಇಲ್ಲದಂತಾಗಿದೆ. ಯಾಕೆಂದರೆ ಗೂಗಲ್ ಕ್ರೋಮ್ ನಲ್ಲಿ ಆರಾಮಾಗಿ ನಾವು ಪಾಸ್ ವರ್ಡ್ ಗಳನ್ನು ಸೇವ್ ಮಾಡಿ ಇಟ್ಟುಕೊಳ್ಳಬಹುದು. ನೂರಾರು ವೆಬ್ ಸೈಟ್ ಗಳ ಪಾಸ್ ವರ್ಡ್ ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟವಾಗಿರುವುದರಿಂದಾಗಿ ಅದನ್ನು ಸೇವ್ ಮಾಡಿ ಇಡುವ ಅವಕಾಶವನ್ನು ಗೂಗಲ್ ಕ್ರೋಮ್ ನಮಗೆ ಒದಗಿಸಿಕೊಟ್ಟಿದೆ.

ಆಂಡ್ರಾಯ್ಡ್ ನ ಗೂಗಲ್ ಕ್ರೋಮ್ ನಲ್ಲಿ ಸೇವ್ ಆಗಿರುವ ಪಾಸ್ ವರ್ಡ್ ಗಳನ್ನು ಮ್ಯಾನೇಜ್ ಮಾಡುವುದು ಹೇಗೆ?

• ಮೊದನೆಯದಾಗಿ ನಾವಿದ್ದನ್ನು ಮಾಡುವುದಕ್ಕೆ ನಿಮ್ಮ ಗೂಗಲ್ ಬ್ರೌಸರ್ ಗೂಗಲ್ ಕ್ರೋಮ್ ನ್ನು ನೂತನ ವರ್ಷನ್ ಗೆ ಅಪ್ ಡೇಟ್ ಮಾಡಿರಬೇಕು.

• ಇದೀಗ ನಾವು ಗೂಗಲ್ ಸೆಟ್ಟಿಂಗ್ಸ್ ಗೆ ತೆರಳಬೇಕು.

• ಪಾಸ್ ವರ್ಡ್ ಆಯ್ಕೆಯನ್ನು ಸಿಂಪಲ್ ಆಗಿ ಟ್ಯಾಪ್ ಮಾಡಿ.

• ಪಾಸ್ ವರ್ಡ್ ಮತ್ತು ಕ್ರಿಡೆನ್ಶಿಯಲ್ ಗಳನ್ನು ಗೂಗಲ್ ಕ್ರೋಮ್ ಸೇವ್ ಮಾಡಿರುವ ಎಲ್ಲಾ ವೆಬ್ ಸೈಟ್ ಗಳ ವಿವರವನ್ನು ನೀವು ಕಾಣಬಹುದು.

• ಅಕ್ಷರಮಾಲೆಯ ಪ್ರಕಾರ ಎಲ್ಲಾ ವೆಬ್ ಸೈಟ್ ಗಳು ಇಲ್ಲಿ ನಿಮಗೆ ಕಾಣಿಸುತ್ತವೆ .

• ಮೇಲಿನ ಹಂತಗಳು ಮುಗಿದ ನಂತರ ಕಣ್ಣಿನ ಐಕಾನ್ ನ್ನು ಕ್ಲಿಕ್ಕಿಸಿದಾಗ ಸೇವ್ ಆಗಿರುವ ಪಾಸ್ ವರ್ಡ್ ಗಳು ಸಿಗುತ್ತದೆ. ಆದರೆ ಅದನ್ನು ಮಾಡಲು ನಮ್ಮ ಡಿವೈಸ್ ಪ್ಯಾಟರ್ನ್, ಪಿನ್ ಅಥವಾ ಫಿಂಗರ್ ಪ್ರಿಂಟ್ ನ್ನು ಹಾಕಲು ಹೇಳುತ್ತದೆ. ಮಾಲೀಕರನ್ನು ಖಾತ್ರಿ ಪಡಿಸಿಕೊಳ್ಳುವ ಉದ್ದೇಶದಿಂದ ಹೀಗೆ ಕೇಳಲಾಗುತ್ತದೆ.

• ಇದೀಗ ಸೈಟ್ ಫೀಲ್ಡ್ ನ್ನು ಕಾಪಿ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಯ್ಯೂಸರ್ ನೇಮ್ ಮತ್ತು ಪಾಸ್ ವರ್ಡ್ ನ್ನು ಇನ್ನೊಂದು ಬ್ರೌಸರ್ ನಲ್ಲಿ ಅಥವಾ ಮತ್ತೊಂದು ಡಿವೈಸ್ ನಲ್ಲಿ ಮ್ಯಾನುವಲ್ ಆಗಿ ಟೈಪ್ ಮಾಡಿ ಲಾಗಿನ್ ಆಗುವುದಕ್ಕೆ ನೀವು ಕಾಪಿ ಮಾಡಿಕೊಳ್ಳಬಹುದು. ನಾವು ಕ್ರೋಮ್ ಇನ್ನು ಮುಂದೆ ಪಾಸ್ ವರ್ಡ್ ನೆನಪಿನಲ್ಲಿ ಇಟ್ಟುಕೊಳ್ಳದಂತೆ ಅಳಿಸುವುದಕ್ಕೂ ಕೂಡ ಇಲ್ಲಿ ಅವಕಾಶಿರುತ್ತದೆ.

ಒಂದು ವೇಳೆ ನೀವು ಕೂಡ ಯಾವುದಾದರೂ ವೆಬ್ ಸೈಟ್ ನ ಪಾಸ್ ವರ್ಡ್ ಮರೆತು ಬಿಟ್ಟಿದ್ದರೆ ನಿಮ್ಮ ಡಿವೈಸ್ ನಲ್ಲಿ ಹುಡುಕಾಡಿ ನೋಡಿ. ಈ ಲೇಖನ ಇಷ್ಟವಾದರೆ ಶೇರ್ ಮಾಡುವುದನ್ನು ಮರೆಯಬೇಡಿ. ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.

Best Mobiles in India

English summary
How To See Saved Passwords On Google Chrome For Android

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X