ಎಮರ್ಜೆನ್ಸಿ ಟೈಂನಲ್ಲಿ ನಿಮ್ಮ ಸಹಾಯಕ್ಕೆ ಸ್ಮಾರ್ಟ್‌ಫೋನ್‌..? ಹೀಗೆ ಮಾಡಿ..!

By Gizbot Bureau
|

ಸದ್ಯ ನಮ್ಮೆಲ್ಲರ ಜೀವನದಲ್ಲಿ ಸ್ಮಾರ್ಟ್‌ಫೋನ್‌ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ನಮ್ಮ ಪ್ರತಿಯೊಂದು ವೈಯಕ್ತಿಕ ಮಾಹಿತಿ ಸ್ಮಾರ್ಟ್‌ಫೋನ್‌ನಲ್ಲಿ ಅಡಕವಾಗಿರುತ್ತದೆ. ಇದರಿಂದ ಜನರು ಸಹ ತಮ್ಮ ಖಾಸಗಿ ಮಾಹಿತಿಯನ್ನು ಅಪರಿಚಿತರಿಂದ ರಕ್ಷಿಸಲು ಹೆಚ್ಚಿನ ಒತ್ತನ್ನು ನೀಡುತ್ತಾರೆ. ವಿಶ್ವದಾದ್ಯಂತ ಸಂಚರಿಸಲು ಮೊಬೈಲ್ ಸೂಕ್ತ ಮಾರ್ಗದರ್ಶಕವಾಗಿದ್ದರೂ, ತುರ್ತು ಪರಿಸ್ಥಿತಿಗಳು ಕೂಡ ನಿಮಗೆ ಎದುರಾಗುತ್ತವೆ. ಆಗ ನಿಮ್ಮ ಮಾಹಿತಿ ಸೂಕ್ತವಾಗಿದ್ದರೆ ನಿಮಗೆ ಸಹಾಯ ಮಾಡಲು ಬಂದವರ ಕೆಲಸ ಕೂಡ ತುಂಬಾ ಸುಲಭವಾಗುತ್ತದೆ.

ಎಮರ್ಜೆನ್ಸಿ ಟೈಂನಲ್ಲಿ ನಿಮ್ಮ ಸಹಾಯಕ್ಕೆ ಸ್ಮಾರ್ಟ್‌ಫೋನ್‌..? ಹೀಗೆ ಮಾಡಿ..!

ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಮಾಹಿತಿಯನ್ನು ಗೂಢಾಚಾರಿಕೆಯ ಕಣ್ಣುಗಳಿಂದ ದೂರವಿರಿಸಲು ಕೆಲವು ರೀತಿಯ ಸುರಕ್ಷತಾ ಕ್ರಮಗಳನ್ನು ಬಳಸುತ್ತಾರೆ. ನಿಮ್ಮ ಎಮರ್ಜೆನ್ಸಿ ಮೊಬೈಲ್ ಸಂಖ್ಯೆ ಮತ್ತು ರಕ್ತ ಗುಂಪಿನಂತಹ ಮಾಹಿತಿಯನ್ನು ನಿಮ್ಮ ಲಾಕ್ ಪರದೆಯಲ್ಲಿ ಸೇರಿಸಲು ಶಿಫಾರಸು ಮಾಡಲಾಗಿದೆ. ಏಕೆಂದರೆ, ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಸಹಾಯಕ್ಕೆ ಬರುವ ಮೊದಲ ವ್ಯಕ್ತಿ ಅಪರಿಚಿತನಾಗಿರಬಹುದು ಮತ್ತು ನಿಮ್ಮ ಫೋನ್‌ನ್ನು ಬಳಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಎಮರ್ಜೆನ್ಸಿ ಮೊಬೈಲ್ ಸಂಖ್ಯೆ ಮತ್ತು ರಕ್ತ ಗುಂಪುಗಳಂತಹ ಮಾಹಿತಿ ಎಮರ್ಜೆನ್ಸಿ ಟೈಂನಲ್ಲಿ ಸುಲಭವಾಗಿ ಸಿಗುವಂತಿದ್ದರೆ ಉತ್ತಮ. ಅದಕ್ಕಾಗಿಯೇ ನಿಮ್ಮ ಫೋನ್‌ನಲ್ಲಿ ಈ ಮಾಹಿತಿ ಸುಲಭವಾಗಿ ಹೊಂದಿಸಲು ಮಾರ್ಗವಿದೆ. ಅದು ಏನಂತಿರಾ ಕೆಳಗೆ ಓದಿ..

ಆಂಡ್ರಾಯ್ಡ್ ಫೋನ್‌ನಲ್ಲಿ ಹೇಗೆ..?

ಆಂಡ್ರಾಯ್ಡ್ ಫೋನ್‌ನಲ್ಲಿ ಹೇಗೆ..?

ಆಂಡ್ರಾಯ್ಡ್ ಮತ್ತು ಐಒಎಸ್‌ ಎರಡರಲ್ಲೂ ಎಮರ್ಜೆನ್ಸಿ ಮಾಹಿತಿಯನ್ನು ಅಳವಡಿಸಲು ವಿಭಿನ್ನವಾದ ಹಂತಗಳನ್ನು ಅನುಸರಿಸಬೇಕು. ಮೊದಲಿಗೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ತುರ್ತು ಮಾಹಿತಿಯನ್ನು ಹೇಗೆ ಹೊಂದಿಸಬಹುದು ಎಂಬುದನ್ನು ಕೆಳಗಿನ ಹಂತಗಳ ಮೂಲಕ ತಿಳಿದುಕೊಳ್ಳಿ..

ಹಂತ - 1

ಮೊದಲು ಆಪ್‌ ಡ್ರಾಯರ್‌ ಮೂಲಕ ಸೆಟ್ಟಿಂಗ್ಸ್‌ಗೆ ಹೋಗಿ.

ಹಂತ - 2

ಸೆಟ್ಟಿಂಗ್ಸ್‌ಗೆ ಭೇಟಿ ನೀಡಿದ ನಂತರ ತುರ್ತು ಮಾಹಿತಿ (Emergency information) ಆಯ್ಕೆಯನ್ನು ಆಯ್ದುಕೊಳ್ಳಿ.

ಹಂತ - 3

ತುರ್ತು ಮಾಹಿತಿ (Emergency information)ಯ ಲೊಕೇಷನ್ ಒಂದು ಡಿವೈಸ್‌ಗಿಂತ ಇನ್ನೊಂದು ಡಿವೈಸ್‌ಗೆ ಭಿನ್ನವಾಗಿರುವ ಸಾಧ್ಯತೆ ಹೆಚ್ಚು. ಆದ್ದರಿಂದ ಸರ್ಚ್‌ ಬಾರ್ ಮೂಲಕ ತುರ್ತು ಮಾಹಿತಿ (Emergency information) ಆಯ್ಕೆಯನ್ನು ಹುಡುಕಬಹುದು.

ಹಂತ - 4

ತುರ್ತು ಮಾಹಿತಿ (Emergency information) ಆಯ್ಕೆಯನ್ನು ಪ್ರವೇಶಿಸಿದ ನಂತರ ಮಾಹಿತಿ ಸಂಪಾದಿಸಿ (Edit Information) ಆಯ್ಕೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ವೈದ್ಯಕೀಯ ಮಾಹಿತಿಯನ್ನು ನಮೂದಿಸಿ. ಹೆಚ್ಚಿನ ಆಂಡ್ರಾಯ್ಡ್‌ ಬಳಕೆದಾರರು ತುರ್ತು ಮೊಬೈಲ್‌ ಸಂಖ್ಯೆಗಳನ್ನು ಸೇರಿಸುವ ಮತ್ತು ತುರ್ತು ಸಂದರ್ಭಗಳಲ್ಲಿ ಟೆಕ್ಸ್ಟ್‌ ಮೆಸೇಜ್‌ಗಳ ಮೂಲಕ ಸಂದೇಶ ರವಾನಿಸುವ ಆಯ್ಕೆಗಳನ್ನು ಹೊಂದಿರುತ್ತಾರೆ.

ಹಂತ - 5

ನಿಮ್ಮ ವೈಯಕ್ತಿಕ ವಿವರಗಳು, ಅಂದ್ರೆ, ಹೆಸರು, ವಿಳಾಸ, ರಕ್ತದ ಗುಂಪು, ಅಲರ್ಜಿ, ಔಷಧಿಗಳು, ಅಂಗಾಂಗ ದಾನಿ, ವೈದ್ಯಕೀಯ ಮಾಹಿತಿಗಳನ್ನು ನೀವು ನಮೂದಿಸಬೇಕಾಗುತ್ತದೆ. ಇದರಿಂದ ತುರ್ತು ಪರಿಸ್ಥಿತಿಯಲ್ಲಿ ಸುಲಭವಾಗುತ್ತದೆ.

ಹಂತ - 6

ಎಲ್ಲಾ ಮಾಹಿತಿಯನ್ನು ನಮೂದಿಸಿದ ನಂತರ, ಯಾರಾದರೂ ನಮ್ಮ ಸ್ಮಾರ್ಟ್‌ಫೋನ್‌ ಸ್ವೈಪ್ ಮತ್ತು ಎಮರ್ಜೆನ್ಸಿ ಕಾಲ್‌ ಆಯ್ಕೆ ಮೂಲಕ ಎಮರ್ಜೆನ್ಸಿ ಮಾಹಿತಿಯನ್ನು ಪಡೆಯಬಹುದಾಗಿದೆ.

ತುರ್ತು ಸಂದೇಶ..?

ತುರ್ತು ಸಂದೇಶ..?

ಮೇಲಿನ ವಿಧಾನ ಅಲ್ಲದೇ ಮತ್ತೊಂದು ವಿಧಾನ ಎಮರ್ಜೆನ್ಸಿ ಟೈಂನಲ್ಲಿ ನಿಮ್ಮ ಸಹಾಯಕ್ಕೆ ಬರುತ್ತದೆ. ಆ ವಿಧಾನ ತುರ್ತು ಮಾಹಿತಿಯನ್ನು ಪ್ರದರ್ಶಿಸಲು ಲಾಕ್ ಸ್ಕ್ರೀನ್ ಸಂದೇಶ ಎಂಬ ವೈಶಿಷ್ಟ್ಯವನ್ನು ಬಳಸುವುದನ್ನು ಒಳಗೊಂಡಿರುತ್ತದೆ. ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಕಾರ್ಯರೂಪಕ್ಕೆ ತರಬಹುದು.

ಹಂತ - 1

ಅಪ್ಲಿಕೇಶನ್ ಡ್ರಾಯರ್ ಮೂಲಕ ಸೆಟ್ಟಿಂಗ್ಸ್‌ ಅನ್ನು ಪ್ರವೇಶಿಸಿ.

ಹಂತ - 2

ಲಾಕ್‌ಸ್ಕ್ರೀನ್ ಆದ್ಯತೆ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. (ಆಂಡ್ರಾಯ್ಡ್ ಆವೃತ್ತಿಯ ಆಧಾರದಲ್ಲಿ ಈ ಪ್ರಕ್ರಿಯೆಯು ಸ್ವಲ್ಪ ಬದಲಾಗಬಹುದು.)

ಹಂತ - 3

ಲಾಕ್‌ಸ್ಕ್ರೀನ್ ಸಂದೇಶ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ - 4

ಈ ಫೀಚರ್‌ನ್ನು ಅಪರಿಚಿತ ಬಳಕೆದಾರರಿಗೆ ಶುಭಾಶಯ ತಿಳಿಸಲು ಅಥವಾ ಪ್ರಸಿದ್ಧ ಸಿನಿಮಾ ಸಂಭಾಷಣೆ ಉಲ್ಲೇಖಿಸಲು ಹೆಚ್ಚಾಗಿ ಬಳಸಲಾಗಿದ್ದರೂ, ಎಮರ್ಜೆನ್ಸಿ ಮಾಹಿತಿಯನ್ನು ನಿಮ್ಮ ಲಾಕ್ ಪರದೆಗೆ ಸೇರಿಸುವುದರಿಂದ ಹೆಚ್ಚಿನ ಉಪಯೋಗವಾಗುತ್ತದೆ.

ಹಂತ - 5

ನಿರ್ಣಾಯಕ ಮಾಹಿತಿ ಸೇರಿಸಿದ ನಂತರ ಸೇವ್ ಬಟನ್ ಕ್ಲಿಕ್ ಮಾಡಿ.

ಐಫೋನ್‌ನಲ್ಲಿ ಹೇಗೆ..?

ಐಫೋನ್‌ನಲ್ಲಿ ಹೇಗೆ..?

ಐಫೋನ್‌ನಲ್ಲಿ ತುರ್ತು ಮಾಹಿತಿಯನ್ನು ಹೊಂದಿಸುವುದು..

ಹಂತ - 1

ನಿಮ್ಮ ಐಫೋನ್‌ನಲ್ಲಿ ಆರೋಗ್ಯ ಆಪ್ ತೆರೆಯಿರಿ ಮತ್ತು "ಮೆಡಿಕಲ್ ಐಡಿ" ಟ್ಯಾಬ್ ಆಯ್ಕೆಮಾಡಿ.

ಹಂತ - 2

ಈಗ, ಪರದೆಯ ಮೇಲ್ಭಾಗದಲ್ಲಿರುವ "ಸಂಪಾದಿಸು" ಆಯ್ಕೆಯನ್ನು ಆರಿಸಿ ಮತ್ತು "ಲಾಕ್ ಮಾಡಿದಾಗ ತೋರಿಸು" ಆಯ್ಕೆಯನ್ನು ಸಕ್ರಿಯಗೊಳಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸ್ಲೈಡರ್ ಅನ್ನು ಹಸಿರು ಬಣ್ಣಕ್ಕೆ ಹೊಂದಿಸುವ ಮೂಲಕ ಸಕ್ರಿಯಗೊಳಿಸಬಹುದು.

ಹಂತ - 3

ವಿವಿಧ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು ಸಂಬಂಧಿಸಿಲ್ಲದ ವಿಭಾಗಗಳನ್ನು ಖಾಲಿ ಬಿಡಿ. ಕೆಳಭಾಗದಲ್ಲಿ ತುರ್ತು ಸಂಪರ್ಕಗಳ ವಿಭಾಗಕ್ಕೆ ಹೋಗುವ ಆಯ್ಕೆಯನ್ನು ನೀವು ಕಾಣಬಹುದು. ಇವುಗಳನ್ನು ಸೇರಿಸಿದ ನಂತರ, ನಿಮ್ಮ ಮತ್ತು ನಿಮ್ಮ ತುರ್ತು ಸಂಪರ್ಕದ ವ್ಯಕ್ತಿಯ ನಡುವಿನ ಸಂಬಂಧವನ್ನು ನೀವು ವಿವರಿಸಬಹುದು ಮತ್ತು ಮೇಲೆ ತಿಳಿಸಿದ ಹಂತಗಳನ್ನು ಪುನರಾವರ್ತಿಸಬಹುದು. ನೀವು ಒಂದಕ್ಕಿಂತ ಹೆಚ್ಚು ತುರ್ತು ಸಂಪರ್ಕಗಳನ್ನು ಸೇರಿಸಬಹುದಾಗಿದೆ.

Best Mobiles in India

English summary
How To Set Up Emergency Contact On Your Smartphone Lock Screen

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X