ಲಾಕ್ ಸ್ಕ್ರೀನ್ ನಲ್ಲಿ ಎಮರ್ಜೆನ್ಸಿ ಮಾಹಿತಿ ಸೇರಿಸುವುದು ಹೇಗೆ ಗೊತ್ತಾ?

By Gizbot Bureau
|

ಸ್ಮಾರ್ಟ್ ಫೋನ್ ಗಳು ತಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ನಾವದನ್ನು ಬಿಟ್ಟಿರುವುದಕ್ಕೆ ಸಾಧ್ಯವೇ ಇಲ್ಲ ಎಂಬಂತಾಗುತ್ತಿದ್ದೇವೆ. ಕೆಲವು ಸಂದರ್ಬದಲ್ಲಿ ಸ್ಮಾರ್ಟ್ ಫೋನ್ ಗಳು ಬಹಳ ಪ್ರಯೋಜನಕ್ಕೆ ಬರುತ್ತವೆಯಾದರೂ ನಾವು ಅವುಗಳಿಗೆ ಹಾಕಿರುವ ಬೌಂಡರಿಯಿಂದಾಗಿ ಸಮಯಕ್ಕೆ ಸರಿಯಾಗಿ ಸಹಾಯಕ್ಕೆ ಬರದ ನಿಷ್ಪ್ರಯೋಜಕ ವಸ್ತುಗಳಂತಾಗಬಹುದು. ಯಾಕೆ ಹೀಗೆ ಹೇಳ್ತಾ ಇದ್ದೀವಿ ಅಂದುಕೊಳ್ತಾ ಇದ್ದೀರಾ?

ಸ್ಮಾರ್ಟ್ ಫೋನ್ ಗಳಿಗೆ ಪಾಸ್ ವರ್ಡ್

ಹೌದು ನಮ್ಮ ಭದ್ರತಾ ಕಾರಣದಿಂದ ಸ್ಮಾರ್ಟ್ ಫೋನ್ ಗಳಿಗೆ ಪಾಸ್ ವರ್ಡ್ ಗಳನ್ನೋ ಅಥವಾ ಸ್ಕ್ರೀನ್ ಲಾಕ್ ಗಳನ್ನೋ ಹಾಕಿರುತ್ತೇವೆ. ಆದರೆ ಕಾರು ಅಪಘಾತ ಅಥವಾ ಇತರೆ ಯಾವುದೇ ರೀತಿಯ ತುರ್ತು ಸನ್ನಿವೇಶಗಳಲ್ಲಿ ಅವುಗಳಿಂದ ನಿಮ್ಮವರನ್ನು ಸಂಪರ್ಕಿಸುವುದಕ್ಕೆ ಇತರರಿಗೆ ಅಸಾಧ್ಯವಾಗಿ ಬಿಡುತ್ತದೆ. ಆದರೆ ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದರೆ ತುರ್ತು ಸನ್ನಿವೇಶದಲ್ಲಿ ನಿಮಗೆ ಸಹಾಯ ಮಾಡಲು ಮುಂದೆ ಬರುವ ವ್ಯಕ್ತಿಯು ನಿಮ್ಮವರವನ್ನು ಸಂಪರ್ಕಿಸುವುದಕ್ಕೆ ಸಾಧ್ಯವಾಗುತ್ತದೆ.

ಸೆನ್ಸಿಟೀವ್ ಮಾಹಿತಿ

ಸೆನ್ಸಿಟೀವ್ ಮಾಹಿತಿಗಳು ನಿಮ್ಮ ಫೋನಿನಿಂದ ಇತರರಿಗೆ ತಿಳಿಯಬಾರದು ಎಂಬ ಕಾರಣಕ್ಕೆ ಸೆಕ್ಯುರಿಟಿ ಫೀಚರ್ ಗಳನ್ನು ಬಳಸುವುದು ಸೂಕ್ತವೇ. ಆದರೆ ಲಾಕ್ ಸ್ಕ್ರೀನ್ ನಲ್ಲಿ ತುರ್ತು ಕಾಂಟ್ಯಾಕ್ಟ್ ನಲ್ಲಿ ನಿಮ್ಮವರ ಕಾಂಟ್ಯಾಕ್ಟ್ ನ್ನು ಸೇವ್ ಮಾಡುವುದಕ್ಕೆ ಮರೆಯಬೇಡಿ. ಹೌದು ಹೀಗೆ ಮಾಡುವುದರಿಂದಾಗಿ ಅಪಘಾತವೋ ಇಲ್ಲಾ ಇನ್ಯಾವುದೇ ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಮೊಬೈಲ್ ನೋಡಿ ನಿಮಗೆ ಸಹಾಯ ಮಾಡಲು ಬರುವ ವ್ಯಕ್ತಿಗೆ ಸುಲಭದಲ್ಲಿ ನಿಮ್ಮವರನ್ನು ಸಂಪರ್ಕಿಸುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲದೇ ಇದ್ದರೆ ಆತನಿಗೆ/ಆಕೆಗೆ ನಿಮ್ಮ ಫೋನಿನ ಲಾಕ್ ತೆಗೆಯುವುದಕ್ಕೆ ಅಸಾಧ್ಯವಾಗಿ ಸಹಾಯ ಮಾಡುವುದಕ್ಕೆ ಕಷ್ಟವಾಗಬಹುದು. ಹಾಗಾಗಿ ಲಾಕ್ ಸ್ಕ್ರೀನ್ ನಲ್ಲಿ ತುರ್ತು ಸಂಪರ್ಕದ ನಂಬರ್ ಮತ್ತು ರಕ್ತದ ಗುಂಪನ್ನು ಸೇವ್ ಮಾಡುವುದನ್ನು ಮರೆಯಬೇಡಿ. ಒಂದು ವೇಳೆ ನೀವು ಈ ಮಾಹಿತಿಯನ್ನು ಲಾಕ್ ಸ್ಕ್ರೀನ್ ನಲ್ಲಿ ಹೇಗೆ ಸೇರಿಸುವುದು ಎಂಬುದಾಗಿ ನೀವು ಚಿಂತಿಸುತ್ತಿದ್ದರೆ ಈ ಲೇಖನವನ್ನು ಪೂರ್ತಿ ಫಾಲೋ ಮಾಡಿ.

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ತುರ್ತು ಸಂಪರ್ಕವನ್ನು ಸೆಟ್ ಮಾಡುವುದು ಹೇಗೆ?

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ತುರ್ತು ಸಂಪರ್ಕವನ್ನು ಸೆಟ್ ಮಾಡುವುದು ಹೇಗೆ?

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ತುರ್ತು ಸಂಪರ್ಕದ ಮಾಹಿತಿಯನ್ನು ಸೇರಿಸುವುದಕ್ಕೆ ಸಾಕಷ್ಟು ಮಾರ್ಗಗಳಿವೆ ಆದರೆ ಅತೀ ಹೆಚ್ಚು ಬಳಕೆಯಲ್ಲಿರುವ ವಿಧಾನವೆಂದರೆ ಎಮರ್ಜೆನ್ಸಿ ಇನ್ಫರ್ಮೇಷನ್ ಫೀಚರ್ ಗೆ ಮಾಹಿತಿಯನ್ನು ಸೇರಿಸುವುದು. ಹೇಗೆ ಎಂಬುದು ಇಲ್ಲಿದೆ ನೋಡಿ.

ಹಂತ 1: ಸೆಟ್ಟಿಂಗ್ಸ್ ಆಪ್ ನ್ನು ತೆರೆಯಿರಿ ಮತ್ತು ನಂತರ ಎಮರ್ಜೆನ್ಸಿ ಇನ್ಫರ್ಮೇಷನ್ ಗೆ ತೆರಳಿ. ಆಂಡ್ರಾಯ್ಡ್ ನ ವಿಭಿನ್ನ ವರ್ಷನ್ ನ ವಿಭಿನ್ನ ಸೆಟ್ಟಿಂಗ್ಸ್ ಪೆನಲ್ ನಲ್ಲಿ ಎಮರ್ಜೆನ್ಸಿ ಸೆಕ್ಷನ್ ಇರಬಹುದು ಮತ್ತು ಸರ್ಚ್ ಆಯ್ಕೆಯಿಂದ ಇದನ್ನು ಸುಲಭದಲ್ಲಿ ಆಕ್ಸಿಸ್ ಮಾಡಬಹುದು.

ಹಂತ 2:ನಿಮ್ಮ ಮೆಡಿಕಲ್ ಮಾಹಿತಿಗಳನ್ನು ಸೇರಿಸುವುದಕ್ಕಾಗಿ "Edit information"ನ್ನು ಟ್ಯಾಪ್ ಮಾಡಿ ಮತ್ತು ಪ್ರಾದೇಶಿಕವಾಗಿ ಈ ಫೀಚರ್ ರಿಸ್ಟ್ರಿಕ್ಟ್ ಆಗಿರುವ ಸಾಧ್ಯತೆ ಇದೆ. ಹೆಚ್ಚಿನ ಆಂಡ್ರಾಯ್ಡ್ ಬಳಕೆದಾರರಲ್ಲಿ ತುರ್ತು ಕಾಂಟ್ಯಾಕ್ಟ್ ನಂಬರ್ ನ್ನು ಸೇರಿಸುವುದು ಮತ್ತು ತುರ್ತು ಟೆಕ್ಸ್ಟ್ ಮೆಸೇಜ್ ಗಳ ಕಾನ್ಫಿಗರೇಷನ್ ಗೆ ಆಯ್ಕೆ ಇರುತ್ತದೆ.

ಹಂತ 3: ಒಮ್ಮೆ ಈ ಮಾಹಿತಿಯು ಕಾನ್ಫಿಗರ್ ಆದ ನಂತರ ಲಾಕ್ ಸ್ಕ್ರೀನ್ ನಿಂದಲೇ ಯಾರು ಬೇಕಿದ್ದರೂ ಇದನ್ನು ಆಕ್ಸಿಸ್ ಮಾಡಬಹುದು. ಅದಕ್ಕಾಗಿ ಸ್ವೈಪ್ ಮಾಡಬೇಕು ಇಲ್ಲವೇ "Emergency Call" ಆಯ್ಕೆಯನ್ನು ಟ್ಯಾಪ್ ಮಾಡಬೇಕು ಅಷ್ಟೇ.

ಆಂಡ್ರಾಯ್ಡ್ ನಲ್ಲಿ ಇನ್ನೊಂದು ವಿಧಾನ:

ಆಂಡ್ರಾಯ್ಡ್ ನಲ್ಲಿ ಇನ್ನೊಂದು ವಿಧಾನ:

ಇದು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ತುರ್ತು ಮಾಹಿತಿಗಳನ್ನು ಸೇರಿಸುವುದಕ್ಕೆ ಇರುವ ಬಹಳ ಸುಲಭದ ವಿಧಾನವಾಗಿದೆ. ಇದನ್ನು ಲಾಕ್ ಸ್ಕ್ರೀನ್ ಮೆಸೇಜ್ ಆಗಿದೆ. ಇದನ್ನು ಮಾಡುವುದು ಹೇಗೆ ಗೊತ್ತಾ?

ಹಂತ 1: ಸೆಟ್ಟಿಂಗ್ಸ್ ಗೆ ತೆರಳಿ ಮತ್ತು ಸೆಕ್ಯುರಿಟಿ ಮತ್ತು ಲೊಕೇಷನ್ ನ್ನು ಟ್ಯಾಪ್ ಮಾಡಿ.

ಹಂತ 2:ಸ್ಕ್ರೀನ್ ಲಾಕ್ ನ್ನು ಕ್ಲಿಕ್ ಮಾಡಿ ಮತ್ತು ಸ್ಕ್ರೀನ್ ಲಾಕ್ ಮೆಸೇಜ್ ನ್ನು ಆಕ್ಸಿಸ್ ಮಾಡುವುದಕ್ಕಾಗಿ ಸೆಟ್ಟಿಂಗ್ಸ್ ನ್ನು ಟ್ಯಾಪ್ ಮಾಡಿ. ಸೆಟ್ಟಿಂಗ್ಸ್ ನಲ್ಲಿ ನೀವು ಲಾಕ್ ಸ್ಕ್ರೀನ್ ನ್ನು ಸರ್ಚ್ ಮಾಡಬಹುದು ಮತ್ತು ಲಾಕ್ ಸ್ಕ್ರೀನ್ ಮೆಸೇಜ್ ಗೆ ನೇವಿಗೇಟ್ ಆಗಬಹುದು.

ಹಂತ 3:ಲಾಕ್ ಸ್ಕ್ರೀನ್ ನಲ್ಲಿ ಯಾವೆಲ್ಲಾ ಮಾಹಿತಿಯನ್ನು ಹಂಚಿಕೊಳ್ಳಬೇಕೋ ಅವುಗಳನ್ನು ಇಲ್ಲಿ ಬರೆಯಿರಿ. ತುರ್ತು ಕಾಂಟ್ಯಾಕ್ಟ್ ವಿವರ, ರಕ್ತದ ಗುಂಪು ಇತ್ಯಾದಿ ಎಲ್ಲಾ ವಿವರವನ್ನು ಈ ಮೆಸೇಜ್ ನಲ್ಲಿ ಬರೆದರೆ ಎಮರ್ಜೆನ್ಸಿ ಕಾಂಟ್ಯಾಕ್ಟ್ ನಲ್ಲಿ ಅದು ಡಿಸ್ಪ್ಲೇ ಗುತ್ತದೆ. ಎಂಟರ್ ಮಾಡಿ ಸೇವ್ ನ್ನು ಕ್ಲಿಕ್ಕಿಸಿ.

ಐಫೋನ್ ನಲ್ಲಿ ತುರ್ತು ಕಾಂಟ್ಯಾಕ್ಟ್ ನ್ನು ಸೆಟ್ ಮಾಡುವುದು ಹೇಗೆ?

ಐಫೋನ್ ನಲ್ಲಿ ತುರ್ತು ಕಾಂಟ್ಯಾಕ್ಟ್ ನ್ನು ಸೆಟ್ ಮಾಡುವುದು ಹೇಗೆ?

ಹಂತ 1:ಐಫೋನ್ ನಲ್ಲಿ ಹೆಲ್ತ್ ಆಪ್ ನ್ನು ತೆರೆಯಿರಿ ಮತ್ತು ಮೆಡಿಕಲ್ ಐಡಿ ಟ್ಯಾಬ್ ನ್ನು ಸೆಲೆಕ್ಟ್ ಮಾಡಿ.

ಹಂತ 2: ಇದೀಗ, ಸ್ಕ್ರೀನಿನ ಮೇಲ್ಬಾಗದಲ್ಲಿ "Edit" ನ್ನು ಸೆಲೆಕ್ಟ್ ಮಾಡಿ ಮತ್ತು "Show When Locked" ಆಯ್ಕೆಯು ಅನೇಬಲ್ ಆಗಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸ್ಪೈಡರ್ ಹಸಿರು ಬಣ್ಣದಲ್ಲಿ ಸೆಟ್ ಆಗಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

ಹಂತ 3:ಇದೀಗ,ಬೇರೆಬೇರೆ ಫೀಲ್ಡ್ ಗಳನ್ನು ಭರ್ತಿ ಮಾಡಿ ಮತ್ತು ಯಾವುದೇ ಸೆಕ್ಷನ್ ಸಂಬಂಧಿಸದೇ ಇದ್ದಲ್ಲಿ ಅದನ್ನು ಖಾಲಿ ಬಿಡುವ ಬದಲು N/A ಅಥವಾ None ಎಂದು ಸೇರಿಸಿ. ಪೇಜಿನ ಕೆಳಭಾಗದಲ್ಲಿ ತುರ್ತು ಕಾಂಟ್ಯಾಕ್ಟ್ ವಿಭಾಗದ ಆಯ್ಕೆಯನ್ನು ಗಮನಿಸುತ್ತೀರಿ ಮತ್ತು ಹೊಸ ಎಂಟ್ರಿಯನ್ನು ಕ್ರಿಯೇಟ್ ಮಾಡುವುದಕ್ಕಾಗಿ ಎಮರ್ಜೆನ್ಸಿ ಕಾಂಟ್ಯಾಕ್ಟ್ ನ್ನು ಟ್ಯಾಪ್ ಮಾಡಿ. ಒಮ್ಮೆ ಸೇರಿಸಿದ ನಂತರ ತುರ್ತು ಕಾಂಟ್ಯಾಕ್ಟ್ ಸಂಖ್ಯೆಯೊಂದಿಗಿನ ವ್ಯಕ್ತಿಯು ನಿಮಗೆ ಏನಾಗಬೇಕು ಎಂಬುದನ್ನು ನಮೂದಿಸಿ ಮತ್ತು ಒಂದಕ್ಕಿಂತ ಹೆಚ್ಚು ತುರ್ತು ಸಂಪರ್ಕ ಸಂಖ್ಯೆಯನ್ನು ಸೇರಿಸಿ ಮತ್ತು ಮೇಲಿನ ಹಂತಗಳನ್ನು ಪುನರಾವರ್ತಿಸಿ.

ಒಮ್ಮೆ ಈ ಮಾಹಿತಿಯನ್ನು ನೀವು ನಿಮ್ಮ ಸ್ಮಾರ್ಟ್ ಫೋನಿಗೆ ಸೇರಿಸಿದ ನಂತರ ಡಿವೈಸ್ ನ್ನು ಲಾಕ್ ಮಾಡಿ ಮತ್ತು ಮಾಹಿತಿಗಳು ಸರಿಯಾಗಿ ಡಿಸ್ಪ್ಲೇ ಆಗಿದೆಯೇ ಎಂಬುದನ್ನು ಪರೀಕ್ಷಿಸಿ ನೋಡಿ.ಎಮರ್ಜೆನ್ಸಿ ಆಪ್ ಗಳು ನೇರವಾಗಿ ಲಾಕ್ ಆಗಿರುವ ಡಿವೈಸ್ ನಿಂದ ತುರ್ತು ಸಂಖ್ಯೆಗೆ ಕರೆ ಮಾಡುವುದಕ್ಕೆ ಅವಕಾಶ ನೀಡುತ್ತವೆ. ಲಾಕ್ ಸ್ಕ್ರೀನಿಗೆ ಕಾಂಟ್ಯಾಕ್ಟ್ ಸಂಖ್ಯೆಯನ್ನು ಸೇರಿಸುವುದರಿಂದಾಗಿ ನೇರವಾಗಿ ಡಯಲ್ ಮಾಡುವುದಕ್ಕೆ ಲಾಕ್ ಸ್ಕ್ರೀನ್ ನಲ್ಲಿ ಅವಕಾಶವಿರುವುದಿಲ್ಲ.ಲಾಕ್ ಸ್ಕ್ರೀನ್ ನಲ್ಲಿ ಏನೂ ಇಲ್ಲದೆ ಖಾಲಿ ಇಡುವುದಕ್ಕಿಂತ ತುರ್ತು ಸನ್ನಿವೇಶಕ್ಕೆ ಅಗತ್ಯವಿರುವ ಮಾಹಿತಿಯನ್ನು ಸೇರಿಸಿರುವುದು ಪ್ರಯೋಜನಕಾರಿ.

ಯಾವಾಗ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ನಾಳೆ ಯಾಕೆ ಇನ್ನೊಂದು ಘಂಟೆಯ ನಂತರದ ಪರಿಸ್ಥಿತಿಯನ್ನು ಊಹೆ ಮಾಡಲಾಗದು. ತುರ್ತು ಅಗತ್ಯತೆಗೆ ಅನುಕೂಲಕರವಾಗಿರುವ ಈ ಫೀಚರ್ ನ್ನು ಬಳಸುವುದು ಅರ್ಥಪೂರ್ಣವಲ್ಲವೇ?

Best Mobiles in India

English summary
How To Setup Emergency Contact On Android and iOS Devices

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X