ಕಂಪ್ಯೂಟರ್‌ ತ್ವರಿತವಾಗಿ ಶಟ್‌ಡೌನ್‌ ಮಾಡುವುದು ಹೇಗೆ?

By Super
|

ಕಂಪ್ಯೂಟರ್‌ ತ್ವರಿತವಾಗಿ ಶಟ್‌ಡೌನ್‌ ಮಾಡುವುದು ಹೇಗೆ?
ಕಂಪ್ಯೂಟರ್‌ನಲ್ಲಿ ಕಾರ್ಯ ನಿರ್ವಹಿಸುವಾಗ ತಕ್ಷಣಕೆ ಬೇರೆಡೆ ಹೋಗ ಬೇಕಾದ ಸಂದರ್ಭ ಬಂದಾಗ ಕೆಲವರು ನೇರವಾಗಿ ಕಂಪ್ಯೂಟರ್‌ನ ಸ್ವಿಚ್‌ ಆಫ್ ಮಾಡಿ ಬಿಡುತ್ತಾರೆ ಅಂದಹಾಗೆ ಈರೀತಿ ಮಾಡುವುದರಿಂದ ಕಂಪ್ಯೂಟರ್‌ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕಂಪ್ಯೂಟರ್‌ ಅನ್ನು ಡೈರೆಕ್ಟ್‌ ಶಟ್‌ಡೌನ್‌ ಮಾಡುವುದರಿಂದ ಓಪನ್‌ ಆಗಿರುವಂತಹ ಹಲವಾರು ಫೈಲ್ಸ್‌ಗಳು ಸರಿಯಾಗಿ ಕ್ಲೋಸ್‌ ಆಗದೆ ಹೋಗುತ್ತವೆ ಇದರಿಂದ ಮತ್ತೊಂಮ್ಮೆ ಅದೇ ಫೈಲ್‌ ಬಳಸಬೇಕೆಂದಾಗ ತೊಂದರೆ ಎದುರಾಗುತ್ತದೆ.

ಅದಕ್ಕಾಗಿಯೇ ಗಿಜ್ಬಾಟ್‌ ಇಂದು ತುರ್ತು ಸಮಯಗಳಲ್ಲಿ ಕಂಪ್ಯೂಟರ್‌ ಹೇಗೆ ಷಟ್‌ಡೌನ್‌ ಮಾಡುವುದು ಎಂಬುದರ ಕುರಿತಾಗಿ ಸುಲಭ ಮಾರ್ಗವನ್ನು ತಂದಿದೆ ಒಂಮೆ ಓದಿ ನೋಡಿ. ಈ ವಿದಾನ ದಿಂದ ನಿಮ್ಮ ಕಂಪ್ಯೂಟರ್‌ಗೆ ಯಾವುದೇರೀತಿಯ ಹಾನಿಯಾಗದಂತೆ ತ್ವರಿತವಾಗಿ ಷಟ್‌ಡೌನ್‌ ಮಾಡಬಹುದಾಗಿದೆ.

1. ಕಂಪ್ಯೂಟರ್‌ ಶಟ್‌ಡೌನ್‌ ಮಾಡಲು ಕೆಳಗಿನ ಬಾರ್‌ ಮೇಲೆ ರೈಟ್‌ ಕ್ಲಿಕ್‌ ಮಾಡಿ ಟಾಸ್ಕ್‌ ಮ್ಯಾನೇಜರ್‌ ಓಪನ್‌ ಮಾಡಿಕೊಳ್ಳಿ ಇಲ್ಲವಾದಲ್ಲಿ ನೇರವಾಗಿ CTRL + ALT + DEL ಶಾರ್ಟ್‌ಕಟ್‌ ಕೀ ಕೂಡ ಬಳಸಬಹುದಾಗಿದೆ.

2. ಟಾಸ್ಕ್ ಮ್ಯಾನೇಜರ್‌ ಓಪನ್‌ ಮಾಡಿಕೊಂಡ ಬಳಿಕ ಅಪ್ಲಿಕೇಷನ್ ಆಪ್ಷನ್‌ ಆಯ್ಕೆ ಮಾಡಿಕೊಂಡು ಅದರಲ್ಲಿನ ಎಲ್ಲಾ ಪ್ರೋಗ್ರಾಮ್‌ಗಳನ್ನು ಗಳನ್ನು ಎಂಡ್‌ ಮಾಡಿಬಿಡಿ.

3.ಇದಾದ ಬಳಿಕ ALT + U ಪ್ರೆಸ್‌ ಮಾಡಿ ಷಟ್‌ಡೌನ್‌ ಆಪ್ಷನ್‌ ಓಪನ್‌ ಮಾಡಿಕೊಳ್ಳಿ.

4. ನಂತರ CTRL ಕೀ ಪ್ರೆಸ್‌ ಮಾಡಿ ಶಟ್‌ಡೌನ್‌ ಆಪ್ಷನ್‌ ಕ್ಲಿಕ್‌ ಮಾಡಿ.

5. ಆಪ್ಷನ್‌ ಒತ್ತುತಿದ್ದಂತೆಯೇ ಕಂಪ್ಯೂಟರ್‌ ಶಟ್‌ಡೌನ್‌ ಆಗಿಬಿಡುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X