Subscribe to Gizbot

ಎಲ್ಲೇ ಇದ್ದರೂ, ಸ್ಮಾರ್ಟ್‌ಫೋನ್‌ನಿಂದ ಕಂಪ್ಯೂಟರ್‌ ಶಟ್‌ಡೌನ್‌ ಹೇಗೆ?

Written By:

ಕಂಪ್ಯೂಟರ್‌ಗಿಂತ ಸ್ಮಾರ್ಟ್‌ಫೋನ್‌ ಇಂದು ಜನರ ದೈನಂದಿನ ಕೆಲಸಗಳಲ್ಲಿ ಹಲವು ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಸ್ಮಾರ್ಟ್‌ಫೋನ್‌ ಬಳಸುವವರಿಗೆಲ್ಲಾ ಇದು ತಿಳಿದಿರುವ ವಿಷಯ. ಈ ಹಿಂದೆ ಗಿಜ್‌ಬಾಟ್‌ನಲ್ಲಿ ಹಲವು ಅತ್ಯಂತ ಪ್ರಯೋಜನಕಾರಿ ಟೆಕ್‌ ಸಲಹೆಗಳನ್ನು ತಿಳಿದಿರಬಹುದು. ಅಂತೆಯೇ ಇಂದಿನ ಲೇಖನದಲ್ಲಿ ಒಂದು ಅತ್ಯದ್ಭುತ ಟೆಕ್‌ ಸಲಹೆಯನ್ನು ನೀಡುತ್ತಿದ್ದೇವೆ.

ನೀವು ಎಲ್ಲಿದ್ದರೂ ಪರವಾಗಿಲ್ಲಾ, ನಿಮ್ಮ ಆಫೀಸ್‌ನಲ್ಲಿ ಅಥವಾ ಮನೆಯಲ್ಲಿರುವ ಕಂಪ್ಯೂಟರ್‌ ಅನ್ನು ನೀವು ಇರುವಲ್ಲಿಂದಲೇ ಸ್ಮಾರ್ಟ್‌ಫೋನ್‌ ಬಳಸಿ ಶಟ್‌ಡೌನ್‌ (Shutdown) ಮಾಡಬಹುದು. ಟೆಕ್ನಾಲಜಿ ಬಗ್ಗೆ ಹೊಸದಾಗಿ ಮಾಹಿತಿ ಕೇಳುವವರಿಗೆ ಬಹುಶಃ ಈ ಮಾಹಿತಿ ತಿಳಿದರೆ ಆಶ್ಚರ್ಯವಾಗುವುದರಲ್ಲಿ ಸಂಶಯವಿಲ್ಲ. ತಡಮಾಡದೇ ಇಂದಿನ ಲೇಖನದ ಸ್ಲೈಡರ್‌ಗಳಲ್ಲಿ ನೀವು ಇರುವಲ್ಲಿಂದಲೇ ಸ್ಮಾರ್ಟ್‌ಫೋನ್‌ ಬಳಸಿ ಕಂಪ್ಯೂಟರ್ ಆಫ್‌ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ. ಹಾಗೆಯೇ ದಿನನಿತ್ಯ ಕಂಪ್ಯೂಟರ್‌ ಬಳಸುವ ನಿಮ್ಮ ಸ್ನೇಹಿತರಿಗೂ ಈ ಮಾಹಿತಿ ತಿಳಿಸಿ. ನಾವು ತಿಳಿಸುತ್ತಿರುವ ವಿಂಡೋಸ್ ಪ್ರೋಗ್ರಾಮ್‌ ಅನ್ನು, ಕಂಪ್ಯೂಟರ್‌ಗಳನ್ನು ಶಟ್‌ಡೌನ್(Shutdown) ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದನ್ನು "Remote Shutdown Program" ಎಂದು ಕರೆಯಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

ಮೊದಲಿಗೆ ನಿಮ್ಮ ವಿಂಡೋಸ್‌ ಕಂಪ್ಯೂಟರ್‌ಗೆ "Airytec switch off" ಪ್ರೋಗ್ರಾಮ್‌ ಅನ್ನು ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ.

ಸಾಫ್ಟ್‌ವೇರ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

 ಹಂತ 2

ಹಂತ 2

ಆಪ್‌ ಇನ್‌ಸ್ಟಾಲ್‌ ಮಾಡಿದ ನಂತರ "ಸಿಸ್ಟಮ್‌ ಟ್ರೇ"ನಲ್ಲಿ ಶಟ್‌ಡೌನ್‌ ಐಕಾನ್‌ ಕಾಣುತ್ತದೆ. ಚಿತ್ರ ಗಮನಿಸಿ.

ಹಂತ 3

ಹಂತ 3

ಹಂತ 2'ರಲ್ಲಿ ಹೇಳಿದಂತೆ ಶಟ್‌ಡೌನ್‌ ಐಕಾನ್‌ ಮೇಲೆ ಕ್ಲಿಕ್ ಮಾಡಿ ಚಿತ್ರದಲ್ಲಿ ಇರುವಂತೆ "Shutdown" ಆಯ್ಕೆ ಟಿಕ್ ಮಾಡಿ "Enable Task" ಅನ್ನು ಖಡ್ಡಾಯವಾಗಿ ಕ್ಲಿಕ್ ಮಾಡಿ.

ಹಂತ 4

ಹಂತ 4

ಈ ಹಂತದಲ್ಲಿ "Shutdown" ಐಕಾನ್‌ ಮೇಲೆ ಬಲಭಾಗದ ಮೌಸ್‌ ಬಟನ್‌ ಕ್ಲಿಕ್ ಮಾಡಿ. ನಂತರ ಓಪನ್‌ ಆದ ವಿಂಡೊದಲ್ಲಿ Setting>>remote section>>Edit Web Interface Settings

ಹಂತ 5

ಹಂತ 5

ಹಿಂದಿನ ಹಂತದಲ್ಲಿ ತಿಳಿಸಿದ Web Interface ಎನೇಬಲ್‌ ಮಾಡಲು "Enable authentication" ಎಂಬ ಬಟನ್‌ ಅನ್ನು ಅನ್‌ಚೆಕ್‌ ಮಾಡಿ. ನಂತರ "Apply" ಬಟನ್‌ ಕ್ಲಿಕ್‌ ಮಾಡಿ.

ಹಂತ 6

ಹಂತ 6

ಈ ಹಂತದಲ್ಲಿ "view / update static addresses" ಕ್ಲಿಕ್‌ ಮಾಡಿ ಅಲ್ಲಿನ ಯುಆರ್‌ಎಲ್‌ ಅನ್ನು ನೋಟ್‌ ಮಾಡಿಕೊಳ್ಳಿ ಅಥವಾ ಮೊಬೈಲ್‌ನಲ್ಲಿ ಬುಕ್‌ಮಾರ್ಕ್‌ ಮಾಡಿಕೊಳ್ಳಿ. ನಂತರ ಸಿಸ್ಟಮ್‌ ಟ್ರೇ'ನಲ್ಲಿ "ಶಟ್‌ಡೌನ್‌ ಐಕಾನ್" ಮೇಲೆ ಕ್ಲಿಕ್ ಮಾಡಿ. ಟಾಸ್ಕ್‌ ಏನೇಬಲ್‌ ಮಾಡಿ.

ಹಂತ 7

ಹಂತ 7

ಹಿಂದಿನ ಹಂತದಲ್ಲಿ ಹೇಳಿದ ಯುಆರ್‌ಎಲ್‌ ಅನ್ನು ನಿಮ್ಮ ಮೊಬೈಲ್‌ನಲ್ಲಿ ಓಪನ್‌ ಮಾಡಿ. ಚಿತ್ರದಲ್ಲಿರುವಂತೆ ವಿಂಡೊ ಓಪನ್‌ ಆಗುತ್ತದೆ.

ಹಂತ 8

ಹಂತ 8

ಈ ಹಂತದಲ್ಲಿ ನಿಮ್ಮ ಕಂಪ್ಯೂಟರ್‌ ಅನ್ನು ಶಟ್‌ಡೌನ್‌ ಮಾಡಲು(ಆಫ್‌ ಮಾಡಲು) "Shutdown" ಬಟನ್‌ ಮೇಲೆ ಕ್ಲಿಕ್‌ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
How To Remotely Shutdown PC From Anywhere With Smartphone. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot