ನಿಧಾನವಾಗಿರುವ ವೈಫೈ ಕನೆಕ್ಷನ್ನಿನ ಸಮಸ್ಯೆಯನ್ನು ಪರಿಹರಿಸಿ ಇಂಟರ್ನೆಟ್ ಸ್ಪೀಡ್ ಹೆಚ್ಚಿಸುವುದು ಹೇಗೆ?

By Gizbot Bureau
|

ಮನೆಯಲ್ಲಿ ಓದುತ್ತಿರುವಾಗ ಅಥವಾ ತರಗತಿಯಲ್ಲಿರುವಾಗ ಅಥವಾ ಯಾವುದೇ ಆಫೀಸ್ ಕೆಲಸ ನಿರ್ವಹಿಸುತ್ತಿರುವ ಅಂತರ್ಜಾಲ ಸಂಪರ್ಕ ನಿಧಾವಾಗುವಿಕೆ ಖಂಡಿತವಾಗಲೂ ಒಂದು ದೊಡ್ಡ ಸಮಸ್ಯೆಯೇ ಸರಿ. ನಿಧಾನಗತಿಯ ಅಂತರ್ಜಾಲ ಸಂಪರ್ಕ ನಿಮ್ಮ ಇಡೀ ದಿನವನ್ನು ಹಾಳು ಮಾಡಬಹುದು. ನಿಮ್ಮ ಫೆವರೆಟ್ ವೀಡಿಯೋ ಸ್ಟ್ರೀಮಿಂಗ್ ಮಾಡುವಾಗ ಅಥವಾ ಕ್ಲೌಡ್ ಗೆ ಯಾವುದೇ ಫೈಲ್ ಹಾಕಬೇಕು ಎಂದುಕೊಳ್ಳುವಾಗ ಅಂತರ್ಜಾಲದ ವೇಗ ಕಿರಿಕಿರಿ ಉಂಟು ಮಾಡಿದರೆ ಏನು ಮಾಡಬೇಕು?ನಿಧಾನವಾಗುವ ಅಂತರ್ಜಾಲದ ಸಂಪರ್ಕವನ್ನು ಅನೇಕ ವಿಧದಲ್ಲಿ ಸರಿಪಡಿಸುವುದಕ್ಕೆ ಸಾಧ್ಯವಿದೆ. ಕೆಲವು ಸರಳ ಹಂತಗಳನ್ನು ಅನುಸರಿಸಿ ನೀವು ನಿಮ್ಮ ಅಂತರ್ಜಾಲ ಸಂಪರ್ಕವನ್ನು ವೇಗಗೊಳಿಸಬಹುದು. ಹಾಗಾದ್ರೆ ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಇಲ್ಲಿ ಓದಿಕೊಳ್ಳಿ.

ನಿಧಾನವಾಗುವ ವೈಫೈ- ಸರಿಪಡಿಸುವುದು ಹೇಗೆ?

ನಿಧಾನವಾಗುವ ವೈಫೈ- ಸರಿಪಡಿಸುವುದು ಹೇಗೆ?

ನಿಧಾನವಾಗಿರುವ ವೈಫೈ ಸಂಪರ್ಕವನ್ನು ವೇಗಗೊಳಿಸುವುದಕ್ಕೆ ಅನೇಕ ವಿಧಾನಗಳಿವೆ. ಕೆಲವು ಸರಳ ವಿಧಾನಗಳ ವಿವರ ಇಲ್ಲಿದೆ.

1. ನಿಮ್ಮ ಅಂತರ್ಜಾಲ ಸಂಪರ್ಕ ನಿಧಾನವಾಗಿದೆಯೇ?

1. ನಿಮ್ಮ ಅಂತರ್ಜಾಲ ಸಂಪರ್ಕ ನಿಧಾನವಾಗಿದೆಯೇ?

ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ನಿಮ್ಮ ಅಂತರ್ಜಾಲ ಸಂಪರ್ಕದೊಂದಿಗೆ ನೀವು ನಡೆಸುತ್ತಿರುವ ಒದ್ದಾಟವು ನೀವು ಆಯ್ಕೆ ಮಾಡಿರುವ ಅಂತರ್ಜಾಲ ವೇಗದ ಪ್ಲಾನ್ ನೊಂದಿಗೆ ಮ್ಯಾಚ್ ಆಗುತ್ತಿದೆಯೇ ಎಂಬುದನ್ನು ಮೊದಲು ಗಮನಿಸಬೇಕು. ಅದಕ್ಕಾಗಿ ನೀವು ಯಾವುದೇ ಪರಿಣತಿ ಇರುವ ವೆಬ್ ಸೈಟ್ ಗೆ ತೆರಳಬಹುದು. ಉದಾಹರಣೆಗೆ ಸ್ಪೀಡ್ ಟೆಸ್ಟ್.ನಾಟ್ ಅಥವಾ ಫಾಸ್ಟ್.ಕಾಮ್. ನಿಮ್ಮ ಅಂತರ್ಜಾಲದ ವೇಗವು ಮ್ಯಾಚ್ ಆಗುತ್ತಿದ್ದರೆ ನಿಮ್ಮ ಪ್ರೊವೈಡರ್ ಬಳಿ ಮಾತನಾಡಿ ಪ್ಲಾನ್ ಬದಲಾವಣೆಗೆ ನೀವು ಚರ್ಚೆ ನಡೆಸಬಹುದು. ಅಂತರ್ಜಾಲದ ಸಂಪರ್ಕ ಉತ್ತಮವಾಗಿರಬೇಕು ಎಂದರೆ ನೀವು ಯಾವಾಗಲೂ ಕೂಡ ಪ್ಲಾನ್ ನಲ್ಲಿ ಅಪ್ ಗ್ರೇಡ್ ಆಗುತ್ತಲೇ ಇರಬೇಕಾಗುತ್ತದೆ ಮತ್ತು ವೇಗದ ಅಂತರ್ಜಾಲ ಸೌಲಭ್ಯ ಒದಗಿಸುವ ಪ್ಲಾನ್ ನ್ನು ಖರೀದಿಸುವುದು ಬಹಳ ಒಳ್ಳೆಯದು.

2. ವೈಫೈ ಸಮಸ್ಯೆ ಪರಿಹಾರಕ್ಕಾಗಿ ವೈಫೈ ರೂಟರ್ ನ್ನು ರೀಸ್ಟಾರ್ಟ್ ಮಾಡಿ

2. ವೈಫೈ ಸಮಸ್ಯೆ ಪರಿಹಾರಕ್ಕಾಗಿ ವೈಫೈ ರೂಟರ್ ನ್ನು ರೀಸ್ಟಾರ್ಟ್ ಮಾಡಿ

ಕನೆಕ್ಷನ್ ಸಮಸ್ಯೆಯನ್ನು ಪರಿಹಾರ ಮಾಡುವುದಕ್ಕಾಗಿ ಕೆಲವೊಮ್ಮೆ ನೀವು ಮಾಡಬೇಕಾಗಿರುವುದು ವೈಫೈ ರೂಟರ್ ನ್ನು ರೀಸ್ಟಾರ್ಟ್ ಮಾಡಿ. ಸಿಂಪಲ್ ಆಗಿ ನಿಮ್ಮ ವೈಫೈ ರೂಟರ್ ನ್ನು ಆಫ್ ಮಾಡಿ ಮತ್ತು ಪುನಃ ಕೆಲವು ಸೆಕೆಂಡ್ ಗಳ ನಂತರ ಆನ್ ಮಾಡಿ. ಹೀಗೆ ಮಾಡಿದ ನಂತರವೂ ನಿಮ್ಮ ಅಂತರ್ಜಾಲದ ಸ್ಪೀಡ್ ನಿಧಾನವಾಗಿದೆಯೇ ಎಂಬುದನ್ನು ಪರೀಕ್ಷಿಸಿ. ಒಂದು ವೇಳೆ ಸಮಸ್ಯೆ ಪರಿಹಾರವಾಗದೇ ಇದ್ದಲ್ಲಿ ನಿಮ್ಮ ಕಂಪ್ಯೂಟರ್, ಫೋನ್ ಅಥವಾ ಡಿವೈಸ್ ನ್ನು ರೀಸ್ಟಾರ್ಟ್ ಮಾಡಿ. ಕೆಲವೊಮ್ಮೆ ನಿಮ್ಮ ಅಂತರ್ಜಾಲ ಸಂಪರ್ಕವು ನಿಧಾನವಾಗಿರುವುದಕ್ಕೆ ಪ್ರಮುಖ ಕಾರಣ ನಿಮ್ಮ ಡಿವೈಸ್ ಕೂಡ ಆಗಿರುತ್ತದೆ.

3. ವೈಫೈ ರೂಟರ್ ನ್ನು ಸರಿಯಾದ ಜಾಗದಲ್ಲಿ ಇಡುವುದು

3. ವೈಫೈ ರೂಟರ್ ನ್ನು ಸರಿಯಾದ ಜಾಗದಲ್ಲಿ ಇಡುವುದು

ಹೈ ಸ್ಪೀಡ್ ಇಂಟರ್ನೆಟ್ ಕನೆಕ್ಷನ್ ಮತ್ತು ಅತ್ಯುತ್ತಮ ವೈಫೈ ರೂಟರ್ ಇದ್ದರೂ ಕೂಡ ನಿಮ್ಮ ಅಂತರ್ಜಾಲ ಸಂಪರ್ಕ ನಿಧಾನವಾಗಿ ಇದೆಯಾ? ಹಾಗಾದ್ರೆ ನೀವು ವೈಫೈ ಇಟ್ಟಿರುವ ಜಾಗದ ಸಮಸ್ಯೆಯೂ ಕೂಡ ಆಗಿರಬಹುದು. ರೂಟರ್ ನ್ನು ಯಾವಾಗಲೂ ಕೂಡ ಎತ್ತರದ ಸ್ಥಳದಲ್ಲಿ ಇಡುವುದಕ್ಕೆ ಸಲಹೆ ಮಾಡಲಾಗುತ್ತದೆ. ಉದಾಹರಣೆಗೆ ನಿಮ್ಮ ವಾಲ್ ಡ್ರೋಬ್ ಮೇಲ್ಬಾಗದಲ್ಲಿ ಇರಿಸುವುದು. ಹಾಗಾಗಿ ನಿಮ್ಮ ಮನೆಯ ಬೇರೆಬೇರೆ ಜಾಗದಲ್ಲಿ ರೂಟರ್ ನ್ನು ಇಟ್ಟು ಒಮ್ಮೆ ಪರೀಕ್ಷೆ ಮಾಡಿಕೊಳ್ಳಿ. ಯಾವ ಜಾಗದಲ್ಲಿ ಬೆಸ್ಟ್ ಸಿಗ್ನಲ್ ಸಿಗುತ್ತದೆ ಎಂಬುದನ್ನು ಗಮನಿಸಿ.ರೂಟರ್ ಸಿಗ್ನಲ್ ಗಳು ಗೋಡೆಗಳು ಮತ್ತು ಇತರೆ ವಸ್ತುಗಳನ್ನು ದಾಟಿಯೂ ಹೋಗಬಲ್ಲದು. ಆದರೆ ಕೆಲವೊಮ್ಮೆ ದಪ್ಪ ಗೋಡೆಗಳಾಗಿದ್ದಲ್ಲಿ ಸಿಗ್ನಲ್ ವೀಕ್ ಆಗುತ್ತದೆ. ಇಂತಹ ಸಂದರ್ಬದಲ್ಲಿ ಮೈಕ್ರೋಓವನ್ ಮತ್ತು ರೆಫ್ರಿಜರೇಟರ್ ನಿಂದ ದೂರದಲ್ಲಿ ರೂಟರ್ ಇಡುವುದಕ್ಕೆ ಸಲಹೆ ನೀಡಲಾಗುತ್ತದೆ. ಹಾಗಾಗಿ ನಿಮ್ಮ ರೂಟರ್ ಜಾಗವನ್ನು ಸರಿಯಾಗಿ ಪರಿಶೀಲಿಸುವುದು ಒಳ್ಳೆಯದು.

4. ರೂಟರ್ ಆಂಟೆನಾವನ್ನು ಹೊಂದಾಣಿಸಿ

4. ರೂಟರ್ ಆಂಟೆನಾವನ್ನು ಹೊಂದಾಣಿಸಿ

ರೂಟರ್ ಆಂಟೆನಾವನ್ನು ಸಿಗ್ನಲ್ ಸಿಗುವ ದಿಕ್ಕಿಗೆ ಹೊಂದಾಣಿಕೆ ಮಾಡಿ ಇಡುವುದು ಬಹಳ ಮುಖ್ಯ. ಹಾಗಾಗಿ ನಿಮ್ಮ ರೂಟರ್ ಆಂಟೆನಾ ಯಾವ ದಿಕ್ಕಿಗೆ ತಿರುಗಿದೆ ಎಂಬುದನ್ನು ಗಮನಿಸುವುದು ಬಹಳ ಮುಖ್ಯ. ಹೆಚ್ಚಿನ ವೈಫೈ ರೂಟರ್ ನಲ್ಲಿ ಎರಡು ಅಥವಾ ಮೂರು ಆಂಟೆನಾಗಳಿರುತ್ತದೆ. ಅಂತಹವುಗಳಲ್ಲಿ ನೇರವಾಗಿ ಮತ್ತು ಅಡ್ಡಲಾಗಿ ಎರಡೂ ದಿಕ್ಕಿನಲ್ಲಿ ಆಂಟೆನಾ ಇರುವಂತೆ ನೋಡಿಕೊಳ್ಳಿ.ಆ ಮೂಲಕ ವೈಫೈ ರೂಟರ್ ಅಗಲವಾದ ಪ್ರದೇಶವನ್ನು ಆಕ್ರಮಿಸುವುದಕ್ಕೆ ಸಹಾಯವಾಗುತ್ತದೆ.

5. ಬಲಿಷ್ಟ ವೈಫೈ ಸೆಕ್ಯುರಿಟಿ ಸ್ಯಾಂಡರ್ಡ್ ನ್ನು ಬಳಸಿ

5. ಬಲಿಷ್ಟ ವೈಫೈ ಸೆಕ್ಯುರಿಟಿ ಸ್ಯಾಂಡರ್ಡ್ ನ್ನು ಬಳಸಿ

ಒಂದು ವೇಳೆ ನಿಮ್ಮ ವೈಫೈ ಸೆಕ್ಯುರಿಟಿ ಬಲಿಷ್ಟವಾಗಿಲ್ಲದೆ ಇದ್ದರೆ ನಿಮ್ಮ ಪಾಸ್ ವರ್ಡ್ ಪಡೆಯುವುದು ಬಹಳ ಸುಲಭವಾಗಿ ಬಿಡುತ್ತದೆ. ಹಾಗಾಗಿ ನಿಮ್ಮ ಅಕ್ಕಪಕ್ಕದವರು ಸುಲಭವಾಗಿ ನಿಮ್ಮ ಪಾಸ್ ವರ್ಡ್ ಕದ್ದು ನಿಮ್ಮ ವೈಫೈ ಕನೆಕ್ಷನ್ ಬಳಸುತ್ತಿರಬಹುದು. ಹಾಗಾಗಿ ಯಾವಾಗಲೂ ಕೂಡ WPA2 ಸೆಕ್ಯುರಿಟಿ ಪ್ರೊಟಕೊಲ್ ಬಳಕೆಗೆ ಸಲಹೆ ನೀಡಲಾಗುತ್ತದೆ. ನಿಮ್ಮ ರೂಟರ್ ಸೆಟ್ಟಿಂಗ್ ಮೂಲಕವೇ ನೀವಿದನ್ನು ಬದಲಾಯಿಸಬಹುದು. WPA2 ಪಾಸ್ ವರ್ಡ್ ಸೆಟ್ ಮಾಡುವುದಕ್ಕಾಗಿ ವೈಫೈ ಸೆಟ್ಟಿಂಗ್ಸ್ ನ್ನು ಆಕ್ಸಿಸ್ ಮಾಡಿ ಅದಕ್ಕಾಗಿ ರೂಟರ್ ಐಪಿ ಅಡ್ರೆಸ್ ನ್ನು ನಿಮ್ಮ ಫೋನ್ ಅಥವಾ ಕಂಪ್ಯೂಟರ್ ಮೂಲಕ ಯಾವುದೇ ಬ್ರೌಸರ್ ನಲ್ಲಿ ಹಾಕಿ. ರೂಟರ್ ನ ಹಿಂಭಾಗದಲ್ಲಿ ನೀವು ಅದರ ಐಪಿ ಅಡ್ರೆಸ್ ನ್ನು ಹುಡುಕಬಹುದು ಅಥವಾ ವೈಫೈ ನೆಟ್ ವರ್ಕ್ ಸೆಟ್ಟಿಂಗ್ಸ್ ಮೂಲಕವೂ ನೀವುದನ್ನು ಅಕ್ಸಿಸ್ ಮಾಡಬಹುದು.

6. ಸಿಂಗಲ್ ಕನೆಕ್ಷನ್ ಹಲವಾರು ಬಳಕೆದಾರರು

6. ಸಿಂಗಲ್ ಕನೆಕ್ಷನ್ ಹಲವಾರು ಬಳಕೆದಾರರು

ನಿಮ್ಮ ಬಳಿ ಹೈ ಸ್ಪೀಡ್ ಇಂಟರ್ನೆಟ್ ಸಂಪರ್ಕವಿರಬಹುದು. ಆದರೆ ಅದನ್ನು ನೀವು ನಿಮ್ಮ ಮನೆಯಲ್ಲಿ ಅಥವಾ ಆಫೀಸಿನಲ್ಲಿ ಇತರೆ ಹಲವರೊಂದಿಗೆ ಹಂಚಿಕೊಂಡಿದ್ದರೆ ಕೂಡ ಸಂಪರ್ಕದ ಸ್ಪೀಡ್ ಕಡಿಮೆಯಾಗಿರುತ್ತದೆ.ಹಲವಾರು ಬಳಕೆದಾರರು ಬಳಸಿದಾಗ ರೂಟರ್ ಅಂತರ್ಜಾಲದ ಸ್ಪೀಡ್ ಕಡಿಮೆ ಮಾಡುವುದಿಲ್ಲ ಬದಲಾಗಿ ಅದರ ಬ್ಯಾಂಡ್ ವಿಡ್ತ್ ಕಂಪ್ರೆಸ್ ಆಗುತ್ತದೆ. ಉದಾಹರಣೆಗೆ ನೀವು ಯಾವುದೇ ಫೈಲ್ ಕ್ಲೌಡ್ ನಿಂದ ಡೌನ್ ಲೋಡ್ ಮಾಡುತ್ತೀರುತ್ತೀರಿ, ನಿಮ್ಮ ಮಗು ಯಾವುದೋ ಮೂವಿ ಡೌನ್ ಲೋಡ್ ಮಾಡುವಾಗ ಮತ್ತೊಬ್ಬರು ಅದೇ ನೆಟ್ ವರ್ಕ್ ಕನೆಕ್ಷನ್ ನಲ್ಲಿ ಗೇಮ್ ಡೌನ್ ಲೋಡ್ ಮಾಡಿದಾಗ ಸಹಜವಾಗಿ ಇಂಟರ್ನೆಟ್ ನಿಧಾನವಾಗುತ್ತದೆ. ಇವೆಲ್ಲವೂ ಒಂದೇ ಬ್ಯಾಂಡ್ ವಿಡ್ತ್ ನಲ್ಲಿ ಆಗುವಾಗ ಸಹಜವಾಗಿ ನಿಧಾನವಾಗುತ್ತದೆ.

7. QoS ಮೂಲಕ ನಿಧಾನದ ವೈಫೈಯನ್ನು ಸರಿಪಡಿಸಿ

7. QoS ಮೂಲಕ ನಿಧಾನದ ವೈಫೈಯನ್ನು ಸರಿಪಡಿಸಿ

ವೈಫೈ ಸ್ಪೀಡ್ ಹೆಚ್ಚಿಸಲು ಇರುವ ಅಧ್ಬುತ ಟೂಲ್ ಎಂದರೆ ಅದು QoS ಅಥವಾ Quality of Service. ಇದರ ಕೆಲವೇನೆಂದರೆ ನಿಮ್ಮ ವೈಫೈ ನಲ್ಲಿ ಇರುವ ಬ್ಯಾಂಡ್ ವಿಡ್ತ್ ನ್ನು ವಿಭಾಗಿಸಿ ಹಂಚುವುದು. ಕೆಲವೇ ಕೆಲವು ಸೆಟ್ಟಿಂಗ್ಸ್ ಮೂಲಕ ನೀವು ಇದನ್ನು ಸಾಧಿಸಬಹುದು. ಆ ಮೂಲಕ ಯುಟ್ಯೂಬ್ ನಲ್ಲಿ 4ಕೆ ರೆಸಲ್ಯೂಷನ್ನಿನ ವೀಡಿಯೋ ನೋಡಬಹುದು ಮತ್ತು ನೂತನ ವೀಡಿಯೋಗಳನ್ನು ಕೂಡ ಸ್ಟ್ರೀಮ್ ಮಾಡಬಹುದು.ನಿಮ್ಮ ರೂಟರ್ QoS ಸೆಟ್ಟಿಂಗ್ಸ್ ನ್ನು ಪರಿಶೀಲಿಸುವುದಕ್ಕಾಗಿ ರೂಟರ್ ಐಪಿ ಅಡ್ರೆಸ್ ನ್ನು ಬ್ರೌಸ್ ಮಾಡಿ ಮತ್ತು QoS ಟ್ಯಾಬ್ ನ್ನು ಆಕ್ಸಿಸ್ ಮಾಡಿ.

8.ವೈಫೈ ಕನೆಕ್ಷನ್ ಸಮಸ್ಯೆ ಪರಿಹಾರಕ್ಕಾಗಿ ರೂಟರ್ ಫರ್ಮ್ ವೇರ್ ನ್ನು ಅಪ್ ಡೇಟ್ ಮಾಡಿ

8.ವೈಫೈ ಕನೆಕ್ಷನ್ ಸಮಸ್ಯೆ ಪರಿಹಾರಕ್ಕಾಗಿ ರೂಟರ್ ಫರ್ಮ್ ವೇರ್ ನ್ನು ಅಪ್ ಡೇಟ್ ಮಾಡಿ

ರೂಟರ್ ನ ಸಾಫ್ಟ್ ವೇರ್ ಅಪ್ ಡೇಟ್ ಮಾಡುವುದು ಬಹಳ ಮುಖ್ಯ ಯಾಕೆಂದರೆ ಆ ಮೂಲಕ ವೈಫೈ ಕನೆಕ್ಷನ್ ಪ್ರದರ್ಶನ ಮತ್ತು ಭದ್ರತೆ ಅಧಿಕವಾಗುತ್ತದೆ. ಇತ್ತೀಚೆಗೆ ಬರುವ ಹೆಚ್ಚಿನ ರೂಟರ್ ಗಳು ಸ್ವಯಂಚಾಲಿತವಾಗಿ ಅಪ್ ಡೇಟ್ ಆಗುವ ಸಾಮರ್ಥ್ಯ ಹೊಂದಿರುತದೆ. ಆದರೆ ಒಂದು ವೇಳೆ ನಿಮ್ಮದು ಹಳೆಯ ರೂಟರ್ ಆಗಿದ್ದಲ್ಲಿ ನೀವು ಮ್ಯಾನುವಲ್ ಅಪ್ ಡೇಟ್ ನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ. ವಿಭಿನ್ನ ರೂಟರ್ ಗಳಿಗೆ ವಿಭಿನ್ನ ಸಾಫ್ಟ್ ವೇರ್ ಅಪ್ ಡೇಟ್ ಗಳು ಇರುತ್ತದೆ.

9. ಡಿಎನ್ಎಸ್ ಸರ್ವರ್ ಗಳು ಚೇಂಜ್ ಮಾಡಿ

9. ಡಿಎನ್ಎಸ್ ಸರ್ವರ್ ಗಳು ಚೇಂಜ್ ಮಾಡಿ

ಪ್ರತಿಯೊಂದು ಐಎಸ್ ಪಿ ಗೂ ವಿಭಿನ್ನ ಇಂಟರ್ನೆಟ್ ಪ್ಲಾನ್ ಇದ್ದರೂ ಕೂಡ ಡಿಎನ್ಎಸ್ (domain name system)ನ್ನು ಬಳಸುತ್ತದೆ.ಇದು ಐಪಿ ಅಡ್ರೆಸ್ ಗೆ ಡೊಮೈನ್ ಹೆಸರನ್ನು ಸಾಗಿಸುವುದಕ್ಕೆ ನೆರವು ನೀಡುತ್ತದೆ. ಉದಾಹರಣೆಗೆ ಯುಟ್ಯೂಬ್, ಫೇಸ್ಬುಕ್.ಕಾಮ್ ಇತ್ಯಾದಿ. ಹಾಗಾಗಿ ಡಿಎನ್ಎಸ್ ಸರ್ವರ್ ಸ್ವಯಂಚಾಲಿತವಾಗಿ ನೀಡುತ್ತಿರುವ ಡಿಎನ್ಎಸ್ ಸರ್ವರ್ ವೀಕ್ ಇರಬಹುದು. ಹಾಗಾಗಿ ನೀವು ಡಿಎನ್ಎಸ್ ಸರ್ವರ್ ನ್ನು ಚೇಂಜ್ ಮಾಡಿ ಟ್ರೈ ಮಾಡಬಹುದು.

10. ವೈಫೈ ಎನಲೈಸರ್ ನ್ನು ಬಳಸಿ

10. ವೈಫೈ ಎನಲೈಸರ್ ನ್ನು ಬಳಸಿ

ವೈಫೈ ಅನಲೈಸರ್ ಆಪ್ ನಿಮಗೆ ಉತ್ತಮ ಟೂಲ್ ಆಗಿದ್ದು ಕಡಿಮೆ ಸಂದಣಿ ಇರುವ ಚಾನೆಲ್ ಬಳಕೆಗೆ ಸಹಾಯ ಮಾಡುತ್ತದೆ. ವೈಫೈ ಕಮ್ಯುನಿಕೇಷನ್ ನಲ್ಲಿ ಎರಡು ಪ್ರಮುಖ ಬ್ಯಾಂಡ್ ಗಳಿವೆ. 2.4GHz ಮತ್ತು 5GHz. 5GHz ಬ್ಯಾಂಡ್ ಕಡಿಮೆ ಕ್ರೌಡ್ ಇರುವುದಾಗಿದ್ದು ಕಡಿಮೆ ರೇಂಜ್ ಹೊಂದಿರುತ್ತದೆ. ಹಾಗಾಗಿ ಇಂತಹ ಟೂಲ್ ನ್ನು ಅನಲೈಸ್ ಮಾಡುವಾಗ ಜಾಗೃತೆಯಿಂದಿರಿ. ಉಚಿತವಾಗಿರುವ ಮತ್ತು ಪಾವತಿ ಮಾಡಬೇಕಿರುವ ಎರಡೂ ರೀತಿಯ ವೈಫೈ ಅನಲೈಸರ್ ಆಪ್ ಇರುತ್ತದೆ.

11. ವೈಫೈ ಚಾನಲ್ ನ್ನು ಬದಲಾಯಿಸಿ

11. ವೈಫೈ ಚಾನಲ್ ನ್ನು ಬದಲಾಯಿಸಿ

ಒಂದು ವೇಳೆ ನೀವು ನಿಮ್ಮ ರೂಟರ್ ಐಪಿ ಅಡ್ರೆಸ್ ಹುಡುಕಿದರೆ ಯಾವುದೇ ಬ್ರೌಸರ್ ಮೂಲಕ ವೈಫೈ ಸೆಟ್ಟಿಂಗ್ ನ ಆಕ್ಸಿಸ್ ಪಡೆಯಿರಿ ಮತ್ತು ನೀವು ವಯರ್ ಲೆಸ್ ಸೆಟ್ಟಿಂಗ್ಸ್ ನ ಗಮನಿಸುತ್ತೀರಿ. ಒಟ್ಟು 14 ಚಾನಲ್ ಗಳಿರುತ್ತದೆ ಮತ್ತು ಯಾವ ವೈಫೈ ಚಾನಲ್ ಅತೀ ಹೆಚ್ಚು ಬಳಕೆಯಲ್ಲಿರುವ ಪ್ರದೇಶ ಎಂಬುದನ್ನು ಮೊದಲು ಗಮನಿಸಬೇಕು. ಒಮ್ಮೆ ಅದನ್ನು ತಿಳಿದ ನಂದರ ಓವರ್ ಲ್ಯಾಪ್ ಆಗದಂತೆ ಆಯ್ಕೆ ಮಾಡಿಕೊಳ್ಳಬೇಕು. ಒವರ್ ಲ್ಯಾಪ್ ಆಗದ ಚಾನಲ್ ಗಳಲ್ಲಿ ವೇಗ ಹೆಚ್ಚಿರುತ್ತದೆ ಎಂಬುದನ್ನು ತಿಳಿದುಕೊಂಡಿರಿ.

12. ನಿಮ್ಮ ಡಿವೈಸ್ ನೆಟ್ ವರ್ಕ್ ಸೆಟ್ಟಿಂಗ್ ನ್ನು ರಿಸೆಟ್ ಮಾಡಿ

12. ನಿಮ್ಮ ಡಿವೈಸ್ ನೆಟ್ ವರ್ಕ್ ಸೆಟ್ಟಿಂಗ್ ನ್ನು ರಿಸೆಟ್ ಮಾಡಿ

ಒಂದು ವೇಳೆ ವೈಫೈ ರೂಟರ್ ರೀಸೆಟ್ ಮಾಡಿದ ನಂತರವೂ ನಿಮ್ಮ ಸಮಸ್ಯೆ ಪರಿಹಾರವಾಗದೇ ಇದ್ದಲ್ಲಿ ನೀವು ಡಿವೈಸ್ ನೆಟ್ ವರ್ಕ್ ಸೆಟ್ಟಿಂಗ್ಸ್ ನ್ನು ಗಮನಿಸಬೇಕಾಗುತ್ತದೆ. ನಿಮ್ಮ ಡಿವೈಸಿನ ನೆಟ್ ವರ್ಕ್ ಸೆಟ್ಟಿಂಗ್ ಸಾಮಾನ್ಯವಾಗಿ ಡೀಫಾಲ್ಟ್ ಆಗಿರುತ್ತದೆ. ಅದಕ್ಕಾಗಿ ನೀವು ನಿಮ್ಮ ಡಿವೈಸ್ ನಲ್ಲಿ ವೈಫೈ ರಿಕಾನ್ಫಿಗರೇಷನ್ ಮಾಡಬಹುದು.ಇದನ್ನು ಮಾಡುವುದರಿಂದ ನಿಮ್ಮ ಸಮಸ್ಯೆ ಪರಿಹಾರವಾಗಬಹುದು.

13.ಹೊಸ ವೈಫೈ ರೂಟರ್ ನ್ನು ಖರೀದಿಸಿ

13.ಹೊಸ ವೈಫೈ ರೂಟರ್ ನ್ನು ಖರೀದಿಸಿ

ಹೈ ಸ್ಪೀಡ್ ಇಂಟರ್ನೆಟ್ ಇದ್ದು ಕೂಡ ಸಮಸ್ಯೆ ಪರಿಹಾರವಾಗದೇ ಇದ್ದಲ್ಲಿ ವೈಫೈ ರೂಟರ್ ದು ಕೂಡ ದೊಡ್ಡ ಪಾತ್ರವಿರುತ್ತದೆ. ಹೈ ಸ್ಪೀಡ್ ಇಂಟರ್ನೆಂಟ್ ಪ್ಲಾನ್ ನಿಮ್ಮ ಬಳಿ ಇರಬಹುದು ಆದರೆ ವೈಫೈ ರೂಟರ್ ಹಳೆಯದಾಗಿರಬಹುದು. ಹಾಗಾಗಿ ಹೊಸ ವೈಫೈ ರೂಟರ್ ಖರೀದಿಸಿ ಸಮಸ್ಯೆ ಪರಿಹಾರ ಮಾಡಿಕೊಳ್ಳಿ. ಹೊಸ ಯಾವ ವೈಫೈ ರೂಟರ್ ಅತ್ಯುತ್ತಮವಾದದ್ದು ಎಂಬ ಬಗ್ಗೆ ಶೋಧನೆ ನಡೆಸಬಹುದು.

14. ಐಎಸ್ ಪಿ ಬಳಸಿ ದೂರು ದಾಖಲಿಸಿ

14. ಐಎಸ್ ಪಿ ಬಳಸಿ ದೂರು ದಾಖಲಿಸಿ

ಯಾವುದೇ ಮೇಲಿನ ವಿಧಾನವೂ ಕೆಲಸ ಮಾಡದೇ ಇದ್ದಲ್ಲಿ ನೀವು ನಿಮ್ಮ ಐಎಸ್ ಪಿಯನ್ನು ಸಂಪರ್ಕಿಸಬಹುದು.ಅದಕ್ಕಾಗಿ ಸಂಬಂಧಪಟ್ಟವರು ಅದರ ಬಗ್ಗೆ ಜಾಗೃತೆ ಮಾಡುತ್ತಾರೆ. ಕೇವಲ ಕರೆ ಮಾಡುವುದು ಅಥವಾ ದುರು ನೀಡುವುದಕ್ಕಿಂತ ನೀವೇ ಸಮಸ್ಯೆ ಪರಿಹರಿಸಿಕೊಳ್ಳುವುದು ಬಹಳ ಉತ್ತಮ. ಯಾವುದಕ್ಕೂ ಸಮಸ್ಯೆಯನ್ನು ಟ್ರ್ಯಾಕ್ ಮಾಡುವುದನ್ನು ಕಲಿಯಿರಿ.

15. ನಿಮ್ಮ ಐಎಸ್ ಪಿಯನ್ನು ಬದಲಾಯಿಸಿ

15. ನಿಮ್ಮ ಐಎಸ್ ಪಿಯನ್ನು ಬದಲಾಯಿಸಿ

ಒಂದು ವೇಳೆ ನಿಮ್ಮ ಸದ್ಯದ ಐಎಸ್ ಪಿ ಪರಿಹಾರ ನೀಡದೇ ಇದ್ದಲೇ ಕೊನೆಯ ಉಳಿದಿರುವ ಪರಿಹಾರವೆಂದರೆ ಮತ್ತೊಂದು ಐಸ್ ಪಿಯನ್ನು ಖರೀದಿಸಿ ಬೆಟರ್ ಆಗಿರುವ ಕನೆಕ್ಷನ್ ಪಡೆದುಕೊಳ್ಳುವುದು. ಅದಕ್ಕಾಗಿ ಕೆಲವು ಸಂಶೋಧನೆಗಳನ್ನು ಕೈಗೊಳ್ಳಿ. ನಿಮ್ಮ ಪ್ರದೇಶಕ್ಕೆ ಅನುಗುಣವಾಗಿ ಯಾವುದು ಬೆಟರ್ ಕನೆಕ್ಷನ್ ನೋಡಿಕೊಳ್ಳಿ.

Best Mobiles in India

English summary
How To Solve Slow Internet Connection, Wi-Fi Problems: Step By Step Instructions

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X