ಟ್ವಿಟರ್‌ನ ಸ್ಪೇಸ್‌ ಫೀಚರ್ಸ್‌ ಬಳಸುವುದಕ್ಕೆ ಈ ನಿಯಮಗಳನ್ನು ಪಾಲಿಸಿ!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ವಿಟರ್‌ ಕೂಡ ಒಂದಾಗಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ ಆಗುವುದು ಸಾಮಾನ್ಯವಾಗಿದೆ. ಇನ್ನು ಜನರು ತಮ್ಮ ಭಾವನೆಗಳು, ಸಮಾಜದಲ್ಲಿನ ವಿಚಾರಗಳ ಬಗ್ಗೆ ಮುಕ್ತವಾಗಿ ಟ್ವಿಟರ್‌ನಲ್ಲಿ ಹಂಚಿಕೊಳ್ಳುವುದನ್ನು ನೋಡಬಹುದಾಗಿದೆ. ಇನ್ನು ಟ್ವಿಟರ್‌ ಕೂಡ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದರಲ್ಲಿ ಟ್ವಿಟರ್ ಸ್ಪೇಸ್‌ ಫೀಚರ್ಸ್‌ ಕೂಡ ಒಂದಾಗಿದೆ.

ಟ್ವಿಟರ್‌

ಹೌದು, ಟ್ವಿಟರ್‌ ಕ್ಲಬ್‌ ಹೌಸ್‌ ಮಾದರಿಯಲ್ಲಿ ಟ್ವಿಟರ್‌ ಸ್ಪೇಸ್‌ ಅನ್ನು ಪರಿಚಯಿಸಿದೆ. ಇದರಲ್ಲಿ ಬಳಕೆದಾರರ ಜಾಯಿನ್‌ ಆಗಬಹುದು. ಅಷ್ಟೇ ಅಲ್ಲ ಸ್ಪೇಸ್‌ ಅನ್ನು ಪ್ರಾರಂಭಿಸಬಹುದಾಗಿದೆ. ಕ್ಲಬ್‌ ಹೌಸ್‌ ಮಾದರಿಯಲ್ಲಿ ಪ್ರೀತಿ ಪಾತ್ರರೆಲ್ಲರೂ ಒಂದೆಡೆ ಸೇರುವುದಕ್ಕೆ ಇದು ಅವಕಾಶ ನೀಡಲಿದೆ. ಪ್ರಸ್ತುತ ಇದು ಆಯ್ದ ಐಒಎಸ್ ಬಳಕೆದಾರರಿಗೆ ಲಭ್ಯವಿದೆ. ಜೊತೆಗೆ ಆಂಡ್ರಾಯ್ಡ್ ಬಳಕೆದಾರರಿಗೆ ಏಪ್ರಿಲ್ ವೇಳೆಗೆ ಸ್ಪೇಸ್‌ ಫೀಚರ್ಸ್‌ ಲಭ್ಯವಾಗುವ ಸಾಧ್ಯತೆ ಇದೆ. ಹಾಗಾದ್ರೆ ಟ್ವೀಟರ್‌ ಸ್ಫೇಸ್‌ ಅನ್ನು ಶುರುಮಾಡುವುದು ಹೇಗೆ ಹಾಗೂ ಜಾಯಿನ್‌ ಆಗುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್

ಟ್ವಿಟರ್ ಸ್ಪೇಸ್‌ ಫೀಚರ್ಸ್‌ ಸಾರ್ವಜನಿಕವಾಗಿ ಲಭ್ಯವಿದೆ. ಇದು ಫ್ಲೀಟ್‌ಗಳ ಜೊತೆಗೆ ಟೈಮ್‌ಲೈನ್‌ನ ಮೇಲ್ಭಾಗದಲ್ಲಿ ಗೋಚರಿಸುತ್ತವೆ. ನೀವು ಅನುಸರಿಸುವ ಯಾರಾದರೂ ಸ್ಪೇಸ್‌ ಅನ್ನು ಪ್ರಾರಂಭಿಸಿದಾಗ ಮಾತ್ರ ಇದು ಕಾಣಲಿದೆ. ನಂತರ ನೀವು ಕೇಳುಗನಾಗಿ ಸಂಭಾಷಣೆಗೆ ಸೇರಬಹುದು. ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಪ್ರತಿಯೊಬ್ಬರೂ ಕೇಳುಗರಾಗಿ ಸೇರಬಹುದು. ಆದರೆ ಸ್ಪೇಸ್‌ ಒಂದನ್ನು ಕ್ರಿಯೆಟ್‌ ಮಾಡುವ ಆಯ್ಕೆಯು ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಸದ್ಯ ಸ್ಪೇಸ್‌ ಎಲ್ಲರಿಗೂ ಇನ್ನಷ್ಟೇ ಅಧಿಕೃತವಾಗವಬೇಕಿದೆ. ಇದಕ್ಕೂ ಮೊದಲು ನೀವು ಸ್ಪೇಸ್‌ ಅನ್ನು ಸ್ಟಾರ್ಟ್‌ ಮಾಡುವುದು ಹೇಗೆ ಅನ್ನೊದನ್ನ ತಿಳಿಯಲು ಕೆಳಗಿನ ಹಂತಗಳನ್ನು ಅನುಸರಿಸಿರಿ.

ಟ್ವಿಟರ್‌ನಲ್ಲಿ ಸ್ಪೇಸ್‌ ಅನ್ನು ಪ್ರಾರಂಭಿಸುವುದು ಹೇಗೆ?

ಟ್ವಿಟರ್‌ನಲ್ಲಿ ಸ್ಪೇಸ್‌ ಅನ್ನು ಪ್ರಾರಂಭಿಸುವುದು ಹೇಗೆ?

ಹಂತ:1 ಟ್ವಿಟರ್ ಅಪ್ಲಿಕೇಶನ್ ತೆರೆಯಿರಿ, ಮತ್ತು ಟ್ವೀಟ್ ಕಂಪೋಸ್ ಬಟನ್ ಮೇಲೆ ದೀರ್ಘಕಾಲ ಒತ್ತಿರಿ.

ಹಂತ:2 ವಜ್ರದ ಆಕಾರವನ್ನು ರೂಪಿಸುವ ಬಹು ವಲಯಗಳ ಹೊಸ ಸ್ಪೇಸಸ್ ಐಕಾನ್ ಅನ್ನು ನೀವು ನೋಡುತ್ತೀರಿ.

ಹಂತ:3 ಹೊಸ ಸ್ಪೇಸ್‌ ಅನ್ನು ಪ್ರಾರಂಭಿಸಲು ಐಕಾನ್ ಮೇಲೆ ಟ್ಯಾಪ್ ಮಾಡಿ.

ಹಂತ:4 ಫ್ಲೀಟ್‌ಗಳಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡುವ ಮೂಲಕ ನೀವು ಸ್ಪೇಸ್‌ ಅನ್ನು ಪ್ರಾರಂಭಿಸಬಹುದು.

ಹಂತ:5 ನಂತರ ಬಲಗಡೆಗೆ ಸ್ಕ್ರಾಲ್ ಮಾಡಿ ಮತ್ತು ಸ್ಪೇಸ್‌ಗಳನ್ನು ಆಯ್ಕೆ ಮಾಡಬಹುದಾಗಿದೆ.

ಟ್ವಿಟರ್

ಇನ್ನು ಟ್ವಿಟರ್ ಸ್ಪೇಸ್‌ ಫೀಚರ್ಸ್‌ ಮಾತನಾಡಬಲ್ಲ ಹೋಸ್ಟ್ ಸೇರಿದಂತೆ 11 ಜನರ ಮಿತಿಯನ್ನು ಹೊಂದಿದೆ. ಡಿಎಂ, ಟ್ವೀಟ್ ಅಥವಾ ಇನ್ನಾವುದೇ ಪ್ಲಾಟ್‌ಫಾರ್ಮ್ ಮೂಲಕ ಹಂಚಿಕೊಳ್ಳಬಹುದಾದ ಸ್ಪೇಸ್ ಲಿಂಕ್ ಮೂಲಕ ಕೇಳುಗರನ್ನು ಆಹ್ವಾನಿಸಬಹುದು. ನೀವು ಆ ವ್ಯಕ್ತಿಯನ್ನು ಅನುಸರಿಸದಿದ್ದರೂ ಸಹ ನೀವು ಲಿಂಕ್ ಹೊಂದಿದ್ದರೆ ನೀವು ಕೂಡ ಕೇಳುಗರಾಗಿ ಸೇರಬಹುದು. ಸ್ಪೇಸ್‌ನಲ್ಲಿ ಯಾರು ಮಾತನಾಡಬಹುದು ಎಂಬುದರ ಕುರಿತು ಸ್ಪೇಸ್‌ ಹೋಸ್ಟ್‌ಗೆ ಕಂಟ್ರೋಲ್‌ ಇರಲಿದೆ. ಇವರು ಪ್ರತಿಯೊಬ್ಬರಿಂದಲೂ, ನೀವು ಅನುಸರಿಸುವ ಜನರಿಂದಲೂ ಆಯ್ಕೆ ಮಾಡಬಹುದು ಅಥವಾ ಮಾತನಾಡಲು ಕೆಲವು ಜನರನ್ನು ಮಾತ್ರ ಆಹ್ವಾನಿಸಬಹುದಾಗಿದೆ.

Best Mobiles in India

English summary
At present everyone on Android and iOS can join Twitter Spaces as a listener, and select users have to option to start one. Here's your guide on Twitter Spaces.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X