ನಿಮ್ಮ ಪರ್ಸನಲ್ ಡಿಟೇಲ್ಸ್ ನ್ನು ಟಿವಿಯಿಂದಲೂ ಕದಿಯಬಹುದು!

By Gizbot Bureau
|

ಒಂದು ಕಾಲ ಇತ್ತು. ಟಿವಿಯನ್ನು ಮೂರ್ಖರಿಗಾಗಿ ಇರುವ ಪೆಟ್ಟಿಗೆ ಎಂದು ಕರೆಯಲಾಗುತ್ತಿತ್ತು. ಕಾಲಹರಣ ಮಾಡುವ ಪಡ್ಡೆಹೈಕಳಿಗೆ ಹೇಳಿ ಮಾಡಿಸಿರುವುದು ಎಂದು ಮೂದಲಿಸುತ್ತಿದ್ದೆವು. ಆದರೆ ಇದೀಗ ಟಿವಿ ಜಗತ್ತು ಬದಲಾಗುತ್ತಿದೆ. ಈ ಜಮಾನದ ಟಿವಿಯನ್ನು ಇಂಟರ್ನೆಟ್ ಗೆ ಕನೆಕ್ಟ್ ಮಾಡಿಕೊಂಡು ಸುಲಭವಾಗಿ ಸ್ಟ್ರೀಮಿಂಗ್ ಮಾಡಬಹುದು ಮತ್ತು ಆನ್ ಲೈನ್ ಕಟೆಂಟ್ ಗಳನ್ನು ವೀಕ್ಷಣೆ ಮಾಡಬಹುದು.

ನಿಮ್ಮ ಪರ್ಸನಲ್ ಡಿಟೇಲ್ಸ್ ನ್ನು ಟಿವಿಯಿಂದಲೂ ಕದಿಯಬಹುದು!

ಟಿವಿಗಳು ಇದೀಗ ಬಳಕೆದಾರರ ಆದ್ಯತೆಯ ಮೇರೆಗೆ,ನಿಮ್ಮ ಹವ್ಯಾಸಕ್ಕೆ ಅನುಗುಣವಾಗಿರುವ ವಿಚಾರವನ್ನು ತೋರಿಸುವುದಕ್ಕೆ ನೆರವು ನೀಡುತ್ತದೆ. ಇದನ್ನು ಎಸಿಆರ್ ತಂತ್ರಗಾರಿಕೆಯನ್ನು ಬಳಸಿ ಮಾಡಬಹುದು.ಎಸಿಆರ್ ಅಂದರೆ ಅಟೋಮ್ಯಾಟಿಕ್ ಕಟೆಂಟ್ ರೆಕಗ್ನಿಷನ್. ಇದರಲ್ಲಿ ಓವರ್ ದಿ ಏರ್, ಕೇಬಲ್, ಸ್ಟ್ರೀಮಿಂಗ್ ಸೇವೆಗಳು ಮತ್ತು ಡಿಸ್ಕ್ ಕೂಡ ಸೇರಿರುತ್ತದೆ.

ಇದು ಬಹಳ ಪ್ರಯೋಜನಕಾರಿಯಾಗಿರುವ ಫೀಚರ್ ಎಂದು ಅನ್ನಿಸುತ್ತದೆ. ಆದರೆ ಇದರ ಜೊತೆಗೆ ಟೆಲಿವಿಷನ್ ಬ್ರ್ಯಾಂಡ್ ಗಳು ಈ ರೀತಿ ನಿಮ್ಮ ವಯಕ್ತಿಕ ಮಾಹಿತಿಗಳು ಜಾಹೀರಾತುದಾರರಿಗೆ ಅಥವಾ ಮೂರನೇ ವ್ಯಕ್ತಿಗಳಿಗೆ ನೀಡುತ್ತಿದ್ದಾರೆ ಎಂಬ ಅಂಶವೊಂದು ಬಹಿರಂಗವಾಗಿದೆ. ಹಾಗಾಗಿ ನೀವು ಟೆಲಿವಿಷನ್ ನಲ್ಲಿ ನಿಮ್ಮ ಮಾಹಿತಿಗಳು ಶೇರ್ ಆಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಅದಕ್ಕಾಗಿ ನೀವು ಕೆಲವು ಸೆಟ್ಟಿಂಗ್ಸ್ ಗಳನ್ನು ಮಾಡಬೇಕಾಗುತ್ತದೆ.

ನಮ್ಮ ಸ್ಮಾರ್ಟ್ ಟಿವಿಗಳು ನಿಮ್ಮ ವಯಕ್ತಿಕ ಮಾಹಿತಿಯನ್ನು ಕದಿಯದಂತೆ ಹೇಗೆ ಕಾಯುವುದು?

ಪ್ರತಿಯೊಂದು ಟೆಲಿವಿಷನ್ ಬ್ರ್ಯಾಂಡ್ ನಲ್ಲೂ ತನ್ನದೇ ವಿಭಿನ್ನ ಶೈಲಿಯಲ್ಲಿ ಈ ಫೀಚರ್ ನ್ನು ಅಳವಡಿಸಲಾಗಿರುತ್ತದೆ ಮತ್ತು ಅದರ ಹಂತಹಂತವಾಗಿರುವ ಮಾಹಿತಿ ಇಲ್ಲಿದೆ.

ಎಲ್ ಜಿ: ಸೆಟ್ಟಿಂಗ್ಸ್ ಮೆನುವಿನಲ್ಲಿರುವ “ಲೈವ್ ಪ್ಲಸ್” ಆಯ್ಕೆಯನ್ನು ಆಫ್ ಮಾಡಿ.

ಎಲ್ ಜಿ: ಸೆಟ್ಟಿಂಗ್ಸ್ ಮೆನುವಿನಲ್ಲಿರುವ “ಲೈವ್ ಪ್ಲಸ್” ಆಯ್ಕೆಯನ್ನು ಆಫ್ ಮಾಡಿ.

ವಯ,. ತಮಂ, ಲಲಲಲಲ ನ ಹೊಸ ಎಲ್ ಜಿ ಮಾಡೆಲ್ ಗಳಲ್ಲಿ: ಪ್ರಮುಖ ಮೆನು ಸ್ಕ್ರೀನಿನಲ್ಲಿರುವ ಮೇಲ್ಬಾಗದ ಬಲಗಡೆ ಸೆಟ್ಟಿಂಗ್ಸ್ ಐಕಾನ್ ನ್ನು ಕ್ಲಿಕ್ಕಿಸಿ. ನಂತರ, ಆಲ್ ಸೆಟ್ಟಿಂಗ್ಸ್ ಗೆ ತೆರಳಿ ಮತ್ತು ಜನರಲ್ ಆಯ್ಕೆಯನ್ನು ಹುಡುಕಿ. ಸ್ಕ್ರೋಲ್ ಡೌನ್ ಮಾಡಿ ಲೈವ್ ಪ್ಲಸ್ ಆಯ್ಕೆಯನ್ನು ನೋಡಿ.

ಹಳೆಯ ಮಾಡೆಲ್ ಗಳಲ್ಲಿ: ಟರ್ಮ್ಸ್ ಆಫ್ ಯ್ಯೂಸ್, ಪ್ರೈವೆಸಿ ಪಾಲಿಸಿ, ವ್ಯೂವಿಂಗ್ ಇನ್ಫರ್ಮೇಷನ್ ಮತ್ತು ಪರ್ಸನಲೈಜ್ ಅಡ್ವರ್ಟೈಜ್ಮೆಂಟ್ ಆಯ್ಕೆಯನ್ನು ಆಫ್ ಮಾಡಿ.ಇದನ್ನು ನೀವು ಯ್ಯೂಸರ್ ಅಗ್ರಿಮೆಂಟ್ ಆಯ್ಕೆಯಲ್ಲಿ ಗಮನಿಸಬಹುದು. ಅಬೌಟ್ ದಿಸ್ ಟಿವಿ ಆಯ್ಕೆಯ ಕೆಳಭಾಗದಲ್ಲಿ ಈ ಮೇಲಿನ ಆಯ್ಕೆಯೂ ಇರುತ್ತದೆ.

ಸೋನಿ: ಇಂಟರ್ಯಾಕ್ಟೀವ್ ಟಿವಿ ಸೆಟ್ಟಿಂಗ್ಸ್ ಅಥವಾ ಸಾಂಬಾ ಇಂಟರ್ಯಾಕ್ಟೀವ್ ಟಿವಿ ಆಯ್ಕೆಯನ್ನು ಆಫ್ ಮಾಡಿ.

ಸೋನಿ: ಇಂಟರ್ಯಾಕ್ಟೀವ್ ಟಿವಿ ಸೆಟ್ಟಿಂಗ್ಸ್ ಅಥವಾ ಸಾಂಬಾ ಇಂಟರ್ಯಾಕ್ಟೀವ್ ಟಿವಿ ಆಯ್ಕೆಯನ್ನು ಆಫ್ ಮಾಡಿ.

ಸೋನಿ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಟಿವಿ: ಸೆಟ್ಟಿಂಗ್ಸ್ ಗೆ ತೆರಳಿ ಮತ್ತು ಸಿಸ್ಟಮ್ ಪ್ರಿಫರೆನ್ಸ್ ಆಯ್ಕೆಗೆ ಹೋಗಿ. ಇಂಟರ್ಯಾಕ್ಟೀವ್ ಟಿವಿ ಸೆಟ್ಟಿಂಗ್ಸ್ ಅಥವಾ ಸಾಂಬಾ ಇಂಟರ್ಯಾಕ್ಟೀವ್ ಟಿವಿಯನ್ನು ಸೆಲೆಕ್ಟ್ ಮಾಡಿ ಮತ್ತು ಅದನ್ನು ಡಿಸೇಬಲ್ ಮಾಡಿ.

ಹಳೆಯ ಸೋನಿ ಟಿವಿಗಳಲ್ಲಿ: ಸೆಟ್ಟಿಂಗ್ಸ್ -> ಪ್ರಿಫರೆನ್ಸ್-> ಸೆಟ್ ಅಪ್ -> ನೆಟ್ ವರ್ಕ್ -> ಸಾಂಬಾ ಇಂಟರ್ಯಾಕ್ಟೀವ್ ಟಿವಿ -> ಸೆಟ್ಟಿಂಗ್ಸ್ ಗೆ ತೆರಳಿ ಮತ್ತು ಡಿಸೇಬಲ್ ಮಾಡಿ.

ಸ್ಯಾಮ್ ಸಂಗ್: ವ್ಯೂವಿಂಗ್ ಇನ್ಫರ್ಮೇಷನ್ ಸರ್ವೀಸ್ ನ್ನು ಆಫ್ ಮಾಡಿ.

ಸ್ಯಾಮ್ ಸಂಗ್: ವ್ಯೂವಿಂಗ್ ಇನ್ಫರ್ಮೇಷನ್ ಸರ್ವೀಸ್ ನ್ನು ಆಫ್ ಮಾಡಿ.

ಹೊಸ ಸ್ಯಾಮ್ ಸಂಗ್ ಸ್ಮಾರ್ಟ್ ಟಿವಿ ಮಾಡೆಲ್ ಗಳು: ಪ್ರಮುಖ ಮೆನುವಿನಲ್ಲಿರುವ ಸೆಟ್ಟಿಂಗ್ಸ್ ಗೆ ತೆರಳಿ, ಸಪೋರ್ಟ್ ನ್ನು ಹುಡುಕಾಡಿ ಮತ್ತು ಸ್ಕ್ರೋಲ್ ಡೌನ್ ಮಾಡಿ ಟರ್ಮ್ಸ್ ಎಂಡ್ ಪಾಲಿಸಿಗೆ ತೆರಳಿ. ವ್ಯೂವಿಂಗ್ ಇನ್ಫರ್ಮೇಷನ್ ಸರ್ವೀಸ್ ಮತ್ತು ವಾಯ್ಸ್ ರೆಕಗ್ನಿಷನ್ ಸರ್ವೀಸ್ ನ್ನು ಆಫ್ ಮಾಡಿ.

ಹಳೆಯ ಸ್ಯಾಮ್ ಸಂಗ್ ಸ್ಮಾರ್ಟ್ ಟಿವಿ ಮಾಡೆಲ್ ಗಳಲ್ಲಿ: ಸೆಟ್ಟಿಂಗ್ಸ್ ಗೆ ತೆರಳಿ, ಸಪೋರ್ಟ್ ನ್ನು ಕ್ಲಿಕ್ಕಿಸಿ ಮತ್ತು ಟರ್ಮ್ಸ್ & ಪಾಲಿಸಿ ಆಯ್ಕೆಯನ್ನು ಹುಡುಕಿ. ಸಿನ್ಕ್ರನೈಸ್ ಪ್ಲಸ್ ಮತ್ತು ವಾಯ್ಸ್ ರೆಕಗ್ನಿಷನ್ ಸರ್ವೀಸ್ ಆಯ್ಕೆಗೆ ತೆರಳಿ. ಡಿಸೇಬಲ್ ಮಾಡಿ.

ಸೂಚನೆ: ವಾಯ್ಸ್ ರೆಕಗ್ನಿಷನ್ ಸೇವೆಯನ್ನು ಆಫ್ ಮಾಡುವುದರಿಂದಾಗಿ ಟೆಲಿವಿಷನ್ ನಲ್ಲಿ ವಾಯ್ಸ್ ಗೆ ಸಂಬಂಧಿಸಿದ ಫಂಕ್ಷನಾಲಿಟಿಗಳು ನಿಲ್ಲುತ್ತವೆ.

ಶಿಯೋಮಿ

ಶಿಯೋಮಿ

ಯ್ಯೂಸರ್ ಅಗ್ರಿಮೆಂಟ್ ಇನ್ಫೋರ್ಮೇಷನ್ ಮತ್ತು ಟಿವಿಯ ಸೆಟ್ಟಿಂಗ್ಸ್ ನಿಂದ ನಮ್ಮ ಡಿವೈಸ್ ನ್ನು ಇಂಪ್ರೂ ಮಾಡಲು ಸಹಕರಿಸಿ ಎಂದಿರುವ ಆಯ್ಕೆಯನ್ನು ಡಿಸೇಬಲ್ ಮಾಡಿ.

ಪ್ಯಾಚ್ ವಾಲ್ ಓಎಸ್: ಯ್ಯೂಸರ್ ಅಗ್ರಿಮೆಂಟ್ ಇನ್ಫರ್ಮೇಷನ್ ನ್ನು ಡಿಸೇಬಲ್ ಮಾಡಿ.

ವಿಯು: ಸಾಂಬಾ ಇಂಟರ್ಯಾಕ್ಟೀವ್ ಟಿವಿಯನ್ನು ಆಫ್ ಮಾಡಿ.

ವಿಯು: ಸಾಂಬಾ ಇಂಟರ್ಯಾಕ್ಟೀವ್ ಟಿವಿಯನ್ನು ಆಫ್ ಮಾಡಿ.

ಸೆಟ್ಟಿಂಗ್ಸ್ ಗೆ ತೆರಳಿ ಮತ್ತು ಸಿಸ್ಟಮ್ ಪ್ರಿಫರೆನ್ಸ್ ಆಯ್ಕೆಗೆ ತೆರಳಿ. ಸಾಂಬಾ ಇಂಟರ್ಯಾಕ್ಟೀವ್ ಟಿವಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಮತ್ತು ಡಿಸೇಬಲ್ ಮಾಡಿ.

Best Mobiles in India

Read more about:
English summary
How to stop your TV from getting access to your personal data

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X