ಆಂಡ್ರಾಯ್ಡ್‌ನಿಂದ ಐಫೋನ್‌ಗೆ ಕಾಂಟ್ಯಾಕ್ಟ್‌ಗಳ ವರ್ಗಾವಣೆ ಹೇಗೆ?

By Suneel
|

ಐಫೋನ್ ಬಳಸುವವರು ಬೇಸರವಾದ್ರೆ ಆಂಡ್ರಾಯ್ಡ್‌ ವೇದಿಕೆಗೆ ಬರುತ್ತಾರೆ. ಹಾಗೆ ಆಂಡ್ರಾಯ್ಡ್‌ ಬಳಸುತ್ತಿದ್ದವರು ಪ್ರಖ್ಯಾತ ಆಪಲ್‌ ಐಓಎಸ್‌ಗಳನ್ನು ನಾನು ಒಮ್ಮೆ ಬಳಸಬೇಕು ಎಂದು ಬಿಗ್‌ ಅಮೌಂಟ್‌ ಆದ್ರು ಪರವಾಗಿಲ್ಲ ಎಂದು ಖರೀದಿಸುತ್ತಾರೆ. ಫೋನ್‌ಗಳ ಬದಲಾವಣೆಯಿಂದ ಎದುರಾಗುವ ಸಮಸ್ಯೆ ಡಾಟಾಗಳನ್ನು ಐಓಎಸ್‌ನಿಂದ ಆಂಡ್ರಾಯ್ಡ್‌ಗೆ ಮತ್ತು ಆಂಡ್ರಾಯ್ಡ್‌ನಿಂದ ಐಓಎಸ್‌ಗಳಿಗೆ ವರ್ಗಾವಣೆ ಮಾಡುವುದು. ಡಾಟಾಗಿಂತ ಹೆಚ್ಚಾಗಿ ಕಾಂಟ್ಯಾಕ್ಟ್‌ ನಂಬರ್‌ಗಳ ವರ್ಗಾವಣೆ ಮಾಡುವುದು ಎಲ್ಲರಿಗೂ ಎದುರಾಗುವ ಸಮಸ್ಯೆ.

ಸಿಮ್‌ಗಳಲ್ಲಿ ಹೆಚ್ಚು ಕಾಂಟ್ಯಾಕ್ಟ್‌ ಸ್ಟೋರ್‌ ಮಾಡಲು ಆಗದೆ ಡಿವೈಸ್‌ಗಳಲ್ಲಿ ಮೊಬೈಲ್‌ ನಂಬರ್ ಸೇವ್‌ ಮಾಡುವವರು ಇದ್ದಾರೆ. ಅಂತಹ ಆಂಡ್ರಾಯ್ಡ್ ಬಳಕೆದಾರರು ಐಫೋನ್‌ ಖರೀದಿಸಿದಾಗ ಆಂಡ್ರಾಯ್ಡ್‌ನಲ್ಲಿನ ಕಾಂಟ್ಯಾಕ್ಟ್‌(ಫೋನ್‌ ನಂಬರ್‌)ಗಳನ್ನು ಐಫೋನ್‌ಗೆ ವರ್ಗಾಯಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್‌ ಬಳಕೆ ಹೇಗೆ?

ಜಿಮೇಲ್ ಬಳಕೆಯಿಂದ ಕಾಂಟ್ಯಾಕ್ಟ್ ವರ್ಗಾವಣೆ

ಜಿಮೇಲ್ ಬಳಕೆಯಿಂದ ಕಾಂಟ್ಯಾಕ್ಟ್ ವರ್ಗಾವಣೆ

ಆಂಡ್ರಾಯ್ಡ್‌ ಬಳಕೆದಾರರು ಜಿಮೇಲ್‌ ಖಾತೆ ಹೊಂದಿದ್ದರೆ, ಜಿಮೇಲ್‌ಗೆ ಕಾಂಟ್ಯಾಕ್ಟ್‌ಗಳನ್ನು ಸರಳವಾಗಿ ಸಿಂಕ್‌ ಮಾಡಬಹುದು. ಸಿಂಕ್‌ ಮಾಡಲು Settings>>Accounts>>Google>>Sync Contacts. ‌ಕಾಂಟ್ಯಾಕ್ಟ್‌ಗಳು ಸಿಂಕ್ ಆದ ನಂತರ Settings>>Mail, Contact and Calendars>>Add Account ಅನ್ನು ಐಫೋನ್‌ನಲ್ಲಿ ನಿರ್ವಹಿಸಿ. ಗೂಗಲ್ ಸೆಲೆಕ್ಟ್‌ ಮಾಡಿ ಕಾಂಟ್ಯಾಕ್ಟ್‌ ಸಿಂಕ್‌ ಆಗಿರುವ ಜಿಮೇಲ್‌ ಖಾತೆಗೆ ಲಾಗಿನ್‌ ಆಗಿ. ಕಾಂಟ್ಯಾಕ್‌ ಎನೇಬಲ್‌ ಆಗಿರುವ ಬಗ್ಗೆ ಸೆಟ್ಟಿಂಗ್‌ನಲ್ಲಿ ಖಚಿತಪಡಿಸಿಕೊಳ್ಳಿ.

ನೇಟಿಕ್‌ ಕಾಂಟ್ಯಾಕ್ಟ್ ಆಪ್‌

ನೇಟಿಕ್‌ ಕಾಂಟ್ಯಾಕ್ಟ್ ಆಪ್‌

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ನೇಟಿವ್‌ ಕಾಂಟ್ಯಾಕ್ಟ್ ಆಪ್‌ ಅನ್ನು ಓಪನ್‌ ಮಾಡಿ ಇಂಪೋರ್ಟ್‌/ಎಕ್ಸ್‌ಪೋರ್ಟ್ ಆಯ್ಕೆ ಮಾಡಿ. ನಿಮ್ಮ ಕಾಂಟ್ಯಾಕ್ಟ್‌ಗಳನ್ನು ವಿಸಿಎಫ್‌ ಫೈಲ್‌ಗೆ ಎಕ್ಸ್‌ಪೋರ್ಟ್‌ ಮಾಡಿ. ನಂತರ ಐಫೋನ್‌ನಲ್ಲಿ ಕಾಂಟ್ಯಾಕ್ಟ್‌ಗಳನ್ನು ಇಂಪೋರ್ಟ್‌ ಮಾಡಿಕೊಳ್ಳಬಹುದು.

'ಮೂವ್‌ ಟು ಐಓಎಸ್'‌ ಆಪ್‌  ಬಳಸಿ

'ಮೂವ್‌ ಟು ಐಓಎಸ್'‌ ಆಪ್‌ ಬಳಸಿ

ಆಪಲ್‌ ಮಾಲೀಕತ್ವದ 'ಮೂವ್‌ ಟು ಐಓಎಸ್' ಆಪ್‌ ಆಂಡ್ರಾಯ್ಡ್‌ನಿಂದ ಐಫೋನ್‌ಗೆ ಕಾಂಟ್ಯಾಕ್ಟ್‌ಗಳನ್ನು ಶೇರ್ ಮಾಡಲು ಸಹಾಯಕವಾಗಿದೆ. ಈ ಆಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಬಹುದಾಗಿದೆ. ಈ ಆಪ್‌ ಅನ್ನು ವ್ಯವಸ್ಥೆಗೊಳಿಸಬೇಕಾದರೆ 'Move Data From Android' ಟೂಲ್‌ ಅನ್ನು ಆಯ್ಕೆ ಮಾಡಬೇಕು. ಆಪ್ ನಿಮಗೆ 10 ಡಿಜಿಟ್‌ನ ಕೋಡ್ ಅನ್ನು ನೀಡುತ್ತದೆ. ಕೋಡ್‌ ಅನ್ನು ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಎಂಟರ್‌ ಮಾಡಿದರೆ ಐಫೋನ್‌ ಮತ್ತು ಆಂಡ್ರಾಯ್ಡ್‌ಗಳೆರಡು ಸಹ ಸಿಂಕ್‌ ಆಗಿ ಕಾಂಟ್ಯಾಕ್ಟ್‌ಗಳನ್ನು ವರ್ಗಾವಣೆ ಮಾಡಬಹುದಾಗಿದೆ.

ಥರ್ಡ್‌ ಪಾರ್ಟಿ ಆಪ್‌ಗಳು

ಥರ್ಡ್‌ ಪಾರ್ಟಿ ಆಪ್‌ಗಳು

ಹಲವು ಥರ್ಡ್ ಪಾರ್ಟಿ ಆಪ್‌ಗಳು ಆಂಡ್ರಾಯ್ಡ್‌ನಿಂದ ಐಓಎಸ್‌ಗೆ ಕಾಂಟ್ಯಾಕ್ಟ್‌ಗಳನ್ನು ಶೇರ್‌ ಮಾಡಲು ಇವೆ. ಆದರೆ ಕಾಂಟ್ಯಾಕ್ಟ್‌ ಶೇರ್‌ ಮಾಡುವ ಆಪ್‌ ಐಓಎಸ್ ಮತ್ತು ಆಂಡ್ರಾಯ್ಡ್‌ ಎರಡರಲ್ಲೂ ಇರುವ ಬಗ್ಗೆ ಖಚಿತಪಡಿಸಿಕೊಳ್ಳಿ.

ಕಾಂಟ್ಯಾಕ್ಟ್ ಇಂಪೋರ್ಟ್

ಕಾಂಟ್ಯಾಕ್ಟ್ ಇಂಪೋರ್ಟ್

ಬಹುಸಂಖ್ಯಾತ ಆಪ್‌ಗಳು ಕಾಂಟ್ಯಾಕ್ಟ್‌ಗಳನ್ನು ಬ್ಯಾಕಪ್‌ ಮಾಡುವ ಫೀಚರ್ ಮತ್ತು ಕಾಂಟ್ಯಾಕ್ಟ್‌ಗಳನ್ನು ಶೇರ್‌ ಮಾಡುವ ಫೀಚರ್‌ ಹೊಂದಿದ್ದು, ನೀವು ನೀಡಿರುವ ಇಮೇಲ್‌ ಖಾತೆಯನ್ನು ಐಫೋನ್‌ನಲ್ಲಿ ಓಪನ್‌ ಮಾಡಿ ವಿಸಿಎಫ್ ಫೈಲ್‌ ಅನ್ನು ಡೌನ್‌ಲೋಡ್‌ ಮಾಡಬೇಕು. ಈ ಫೈಲ್‌ ನೇರವಾಗಿ ಕಾಂಟ್ಯಾಕ್ಟ್‌ಗಳನ್ನು ಇಂಪೋರ್ಟ್ ಮಾಡುತ್ತದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್‌ ಬಳಕೆ ಹೇಗೆ?ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್‌ ಬಳಕೆ ಹೇಗೆ?

ಮೊಬೈಲ್‌ಗಳ ಬ್ಯಾಟರಿ ಸ್ಫೋಟಗೊಳ್ಳುವುದನ್ನು ತಡೆಯುವುದು ಹೇಗೆ?ಮೊಬೈಲ್‌ಗಳ ಬ್ಯಾಟರಿ ಸ್ಫೋಟಗೊಳ್ಳುವುದನ್ನು ತಡೆಯುವುದು ಹೇಗೆ?

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
How to transfer contacts from Android to iOS. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X