ಇಂಟರ್‌ನೆಟ್‌ ಇಲ್ಲದಿದ್ದರೂ, ಬ್ಯಾಂಕಿಂಗ್ ವ್ಯವಹಾರ ಮಾಡಿ..!

By Gizbot Bureau
|

ಇಂಟರ್‌ನೆಟ್‌ ಇಲ್ಲದೇ ಮೊಬೈಲ್‌ನಲ್ಲಿ ಬ್ಯಾಂಕಿಂಗ್‌ ವ್ಯವಹಾರಗಳನ್ನು ನಡೆಸುವಂತಿದ್ದರೆ ಹೇಗೆ..? ಏಕೆಂದರೆ ಭಾರತದ ಎಲ್ಲಾ ಕಡೆ ನೆಟ್‌ವರ್ಕ್‌ ಸಿಕ್ಕರೂ ಇಂಟರ್‌ನೆಟ್‌ ಸಿಗೋದು ಡೌಟ್. ಅದಕ್ಕಾಗಿಯೇ ಇಂಟರ್‌ನೆಟ್‌ ರಹಿತ ಬ್ಯಾಂಕಿಂಗ್‌ ಬೇಕೆಂದು ಜನ ಅಂದುಕೊಳ್ಳುತ್ತಾರೆ. ಹೌದು, ಸೀಮಿತ ಅಥವಾ ಇಂಟರ್‌ನೆಟ್‌ ವ್ಯಾಪ್ತಿ ಇಲ್ಲದ ಸ್ಥಳದಲ್ಲಿ ನೀವಿರುತ್ತೀರಾ, ಕೆಲವು ಬ್ಯಾಂಕಿಂಗ್‌ ವ್ಯವಹಾರಗಳನ್ನು ತುರ್ತಾಗಿ ಮಾಡಬೇಕಾಗಿರುತ್ತದೆ. ಆಗ ನಿಮಗೆ ಯುಎಸ್‌ಎಸ್‌ಡಿ ನೆರವಿಗೆ ಬರುತ್ತದೆ.

ಇಂಟರ್‌ನೆಟ್‌ ಇಲ್ಲದಿದ್ದರೂ, ಬ್ಯಾಂಕಿಂಗ್ ವ್ಯವಹಾರ ಮಾಡಿ..!

ನಿಮ್ಮ ಬ್ಯಾಂಕಿನೊಂದಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆಗಳಿಗಾಗಿ ನಿಮ್ಮ ಸಂಖ್ಯೆಯನ್ನು ನೋಂದಾಯಿಸಿದ್ದರೆ, ಯಾವುದೇ ಫೀಚರ್ ಫೋನ್‌ನಿಂದ * 99 # ಡಯಲ್ ಮಾಡುವ ಮೂಲಕ ಹಣಕಾಸಿನ ವಹಿವಾಟು ನಡೆಸಬಹುದು. ಹೇಗೆ ಅಂತಿರಾ..? ಮುಂದೆ ಓದಿ..

ಏನೀದು ಅಂತಿರಾ..?

ಏನೀದು ಅಂತಿರಾ..?

ಈ ಸೌಲಭ್ಯ ಎನ್‌ಯುಯುಪಿ (ನ್ಯಾಷನಲ್ ಯೂನಿಫೈಡ್ ಯುಎಸ್‌ಎಸ್‌ಡಿ ಪ್ಲಾಟ್‌ಫಾರ್ಮ್)ಸೇವೆಯಡಿಯಲ್ಲಿ ಲಭ್ಯವಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪ್ ಆಫ್ ಇಂಡಿಯಾ (ಎನ್‌ಪಿಸಿಐ)ದಿಂದ 2012ರಲ್ಲಿ ಈ ಸೌಲಭ್ಯ ಪ್ರಾರಂಭವಾದರೂ, 2014ರಲ್ಲಿ ವ್ಯಾಪಕವಾಗಿ ಜನರಿಗೆ ಲಭ್ಯವಾಯಿತು. ಈ ಸೇವೆಯು ಯುಎಸ್ಎಸ್‌ಡಿ (Unstructured Supplementary Service Data) ಸಂವಹನ ಪ್ರೋಟೋಕಾಲ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸಂವಹನ ತಂತ್ರಜ್ಞಾನವಾಗಿದ್ದು, ನೆಟ್‌ವರ್ಕ್‌ನಲ್ಲಿನ ಮೊಬೈಲ್ ಫೋನ್ ಮತ್ತು ಅಪ್ಲಿಕೇಶನ್ ಪ್ರೋಗ್ರಾಂ ನಡುವೆ ಪಠ್ಯ ಕಳುಹಿಸಲು ಬಳಸಲಾಗುತ್ತದೆ. ಹಾಗೂ ಈ ಸೇವೆ ಜಿಎಸ್‌ಎಂ (Global System for Mobile) ಫೋನ್‌ಗಳಿಗೆ ಮಾತ್ರ ಲಭ್ಯವಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ..?

ಹೇಗೆ ಕಾರ್ಯನಿರ್ವಹಿಸುತ್ತದೆ..?

ಎಲ್ಲಾ ಬ್ಯಾಂಕ್‌ ಮತ್ತು ಟೆಲಿಕಾಂ ಸೇವಾ ಪೂರೈಕೆದಾರರನ್ನು ಒಟ್ಟುಗೂಡಿಸುವ ಮೂಲಕ ಎನ್‌ಯುಯುಪಿ ಸೇವೆ ಕಾರ್ಯನಿರ್ವಹಿಸುತ್ತದೆ. ಹಾಗೂ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ನಲ್ಲಿ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ. ಈ ಸೇವೆಯನ್ನು ಬಳಸಲು ನೀವು ಮಾಡಬೇಕಿರುವುದು ಇಷ್ಟೇ. ನಿಮ್ಮ ಫೋನ್‌ನಲ್ಲಿ * 99 # ಡಯಲ್ ಮಾಡಿ, ಕೆಲವು ಸೆಕೆಂಡ್‌ಗಳ ಕಾಲ ಕಾಯಿರಿ, ನಂತರ ಸೇವಾ ಆಯ್ಕೆಗಳು ನಿಮ್ಮ ಡಿಸ್‌ಪ್ಲೇ ಮೇಲೆ ಮೂಡುತ್ತವೆ.

ಈ ಆಯ್ಕೆಗಳಲ್ಲಿ ನಿಮ್ಮ ಮೊಬೈಲ್ ಸಂಖ್ಯೆ, ಯುಪಿಐ ಐಡಿ, ಐಎಫ್‌ಎಸ್‌ಸಿ ಮತ್ತು ಬ್ಯಾಂಕ್ ಅಕೌಂಟ್‌ ನಂಬರ್‌ ಮತ್ತಿತರ ಮಾಹಿತಿಗಳನ್ನು ಬಳಸಿಕೊಂಡು ಹಣ ವರ್ಗಾಯಿಸಬಹುದಾಗಿದೆ. ಸೇವೆಯಲ್ಲಿ ನಮೂದಿಸಿದ ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ ಅಪೇಕ್ಷಿತ ಸೇವೆಯನ್ನು ಬಳಸಬಹುದಾಗಿದ್ದು, ಮೊಬೈಲ್ ಸಂಖ್ಯೆ ಅಥವಾ ಯುಪಿಐ ಐಡಿ ಬಳಸಿ ಹಣ ವರ್ಗಾವಣೆಗೆ ನೀವು ವಿನಂತಿಸಬಹುದು. ಅಥವಾ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಬಹುದು, ಯುಪಿಐ ಪಿನ್ ರಚಿಸಬಹುದು ಮತ್ತು ಬದಲಾಯಿಸಬಹುದಾಗಿದೆ.

NUUP ಸೇವೆ ಬಳಸದ ವ್ಯಕ್ತಿಗೂ ಸಹ ಹಣ ಕಳುಹಿಸಲು ಈ ಸೇವೆ ನಿಮಗೆ ಅನುವು ಮಾಡಿಕೊಡುತ್ತದೆ. ಈ ಸೇವೆ ಕಾರ್ಯನಿರ್ವಹಿಸಲು, ನಿಮ್ಮ ಬ್ಯಾಂಕ್‌ನೊಂದಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆಗಳಿಗಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿರಬೇಕಿರುವುದು ಅವಶ್ಯಕ.

ವ್ಯವಹಾರಗಳು

ವ್ಯವಹಾರಗಳು

ಈ ಸೌಲಭ್ಯ ಬಳಸಿಕೊಂಡು ನೀವು ದೊಡ್ಡ ವರ್ಗಾವಣೆಯನ್ನು ಮಾಡಲು ಸಾಧ್ಯವಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಮಾರ್ಗಸೂಚಿಯಂತೆ ಪ್ರತಿ ವಹಿವಾಟಿಗೆ ಗರಿಷ್ಠ 5,000 ರೂ. ಕಳುಹಿಸಬಹುದಾಗಿದೆ. ಈ ಸೇವೆಗೆ ಹೆಚ್ಚಿನ ಬ್ಯಾಂಕುಗಳು ಯಾವುದೇ ಶುಲ್ಕ ವಿಧಿಸುವುದಿಲ್ಲ. ಆದರೆ, ನೀವು * 99 # ಸೇವೆಯನ್ನು ಬಳಸುವಾಗ ಟೆಲಿಕಾಂ ಆಪರೇಟರ್ ಶುಲ್ಕ ವಿಧಿಸಬಹುದು. ಉದಾಹರಣೆಗೆ, ಪ್ರತಿ ವಹಿವಾಟಿಗೆ ಏರ್‌ಟೆಲ್ 0.50 ಪೈಸೆ ಶುಲ್ಕ ವಿಧಿಸುತ್ತದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ಮಾರ್ಗಸೂಚಿಗಳ ಪ್ರಕಾರ, ಟೆಲಿಕಾಂ ಪೂರೈಕೆದಾರರು ಈ ಸೇವೆಯ ಬಳಕೆಗೆ ಪ್ರತಿ ವಹಿವಾಟಿಗೆ ಗರಿಷ್ಠ 1.50 ರೂ. ಶುಲ್ಕ ವಿಧಿಸಬಹುದು.

ಈ ಅಂಶಗಳನ್ನು ನೆನಪಿನಲ್ಲಿಡಿ..!

ಈ ಅಂಶಗಳನ್ನು ನೆನಪಿನಲ್ಲಿಡಿ..!

ಯಾವುದೇ ವಹಿವಾಟು ನಡೆಸಲು ಬಳಕೆದಾರರು ಇಲ್ಲಿ ಯುಪಿಐ ಪಿನ್ ನಮೂದಿಸಬೇಕಾಗಿರುವುದರಿಂದ ನಿಮ್ಮ ಫೋನ್ ಕಳೆದರು ದುರುಪಯೋಗದ ಆತಂಕವಿಲ್ಲ. ಆದರೂ, ಯಾವುದೇ ದುರುಪಯೋಗವನ್ನು ತಪ್ಪಿಸಲು ನೀವು ತಕ್ಷಣ ಬ್ಯಾಂಕಿಗೆ ತಿಳಿಸಿ, ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ನಿಷ್ಕ್ರಿಯಗೊಳಿಸಬೇಕು. ಅಲ್ಲದೆ, ಈ ಸೇವೆಯು ತಕ್ಷಣದ ಪಾವತಿ ಸೇವೆ (ಐಎಂಪಿಎಸ್)ಯನ್ನು ಬಳಸುವುದರಿಂದ ಒಮ್ಮೆ ನೀವು ಹಣ ವರ್ಗಾವಣೆ ಪ್ರಾರಂಭಿಸಿದ ನಂತರ,ಅದನ್ನು ರದ್ದುಗೊಳಿಸಲು, ನಿಲ್ಲಿಸಲು ಅಥವಾ ಹಿಂತಿರುಗಿಸಲು ಸಾಧ್ಯವಿಲ್ಲ. ಇದು ತ್ವರಿತ ಇಂಟರ್ ಬ್ಯಾಂಕ್ ನಿಧಿ ವರ್ಗಾವಣೆ ಸೇವೆಯಾಗಿದೆ. ಈ ಸೇವೆ ಬಳಸುವಾಗ ಯಾವುದೇ ದೂರು ಅಥವಾ ಸಮಸ್ಯೆಗಳಿದ್ದರೆ ನಿಮ್ಮ ಬ್ಯಾಂಕ್ ಅಥವಾ ಟೆಲಿಕಾಂ ಪೂರೈಕೆದಾರರಿಗೆ ದೂರು ಸಲ್ಲಿಸನಹುದು.

Best Mobiles in India

English summary
How To Transfer Money From Your Phone Without Internet

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X