ಫೇಸ್‌ಬುಕ್‌ನಲ್ಲಿ ಆಟೋ-ಪ್ಲೇ ವೀಡಿಯೊ ಫೀಚರ್ಸ್‌ ಅನ್ನು ಆಫ್ ಮಾಡುವುದು ಹೇಗೆ?

|

ಫೇಸ್‌ಬುಕ್‌ ಸಾಮಾಜಿಕ ಜಾಲತಾಣಗಳ ದೈತ್ಯ ಎಂದೇ ಖ್ಯಾತಿ ಪಡೆದಿದೆ. ಬಳಸಲು ಸುಲಭವಾದ ಇಂಟರ್ಫೇಸ್ ಮತ್ತು ಆಕರ್ಷಕವಾಗಿರುವ ಫೀಚರ್ಸ್‌ ಮೂಲಕ ಫೇಸ್‌ಬುಕ್‌ ಸಾಕಷಗಟು ಜನಪ್ರಿಯತೆ ಪಡೆದಿದೆ. ಅಲ್ಲದೆ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್‌ನಲ್ಲಿ ವೀಡಿಯೊ ವೀಕ್ಷಣೆ ಕೂಡ ಕೆಲವು ವರ್ಷಗಳಿಂದ ಹೆಚ್ಚುತ್ತಿದೆ. ಆದರಿಂದ ಫೇಸ್‌ಬುಕ್‌ನಲ್ಲಿ ಆಟೋಪ್ಲೇ ವೀಡಿಯೊ ಆಯ್ಕೆ ಕೂಡ ಇದೆ. ಇದು ಕೆಲವೊಮ್ಮೆ ಬಳಕೆದಾರರಿಗೆ ಕಿರಿಕಿರಿ ಮಾಡಲಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ನಲ್ಲಿ ಆಟೋ ಪ್ಲೇ ವೀಡಿಯೊ ಆಯ್ಕೆ ಇದೆ. ಇದು ಫೇಸ್‌ಬುಕ್‌ ಅಪ್ಲಿಕೇಶನ್ ತೆರೆದ ತಕ್ಷಣ ವೀಡಿಯೊಗಳನ್ನು ಆಟೋ ಪ್ಲೇ ಮಾಡುತ್ತದೆ. ಇದು ಕೆಲವೊಮ್ಮೆ ಬಳಕೆದಾರರಿಗೆ ಕಿರಿಕಿರಿಗೊಳಿಸುತ್ತದೆ. ನಿಮ್ಮ ಆಸಕ್ತಿಗೆ ಸಂಬಂಧಿಸಿದ ವಿಷಯವನ್ನು ಅದು ಪ್ಲೇ ಮಾಡಿದಾಗ ಈ ಫೀಚರ್ಸ್‌ ಓಕೆ ಎನಿಸುತ್ತದೆ. ಆದರೆ ಕೆಲವು ಸೂಕ್ಷ್ಮ ವಿಷಯಗಳು ಪೂರ್ವನಿಯೋಜಿತವಾಗಿ ಪ್ಲೇ ಆಗುವಾಗ ಅದು ನಿಮಗೆ ಕಿರಿಕಿರಿ ಎನಿಸಿ ಬಿಡುತ್ತೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಆಟೋ-ಪ್ಲೇಯಿಂಗ್ ವೀಡಿಯೊ ಫೀಚರ್ಸ್‌ ಅನ್ನು ಸ್ಟಾಪ್‌ ಮಾಡಲು ಬಯಸುತ್ತಾರೆ. ಹಾಗಾದ್ರೆ ಫೇಸ್‌ಬುಕ್‌ನಲ್ಲಿ ಆಟೋ ಪ್ಲೇ ವೀಡಿಯೊ ಫೀಚರ್ಸ್‌ ಆಫ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್‌ನಲ್ಲಿ ಆಟೋ-ಪ್ಲೇ ವೀಡಿಯೊ ಫೀಚರ್ಸ್‌ ಅನ್ನು ಆಫ್ ಮಾಡುವುದು ಹೇಗೆ?

ಫೇಸ್‌ಬುಕ್‌ನಲ್ಲಿ ಆಟೋ-ಪ್ಲೇ ವೀಡಿಯೊ ಫೀಚರ್ಸ್‌ ಅನ್ನು ಆಫ್ ಮಾಡುವುದು ಹೇಗೆ?

ಆಂಡ್ರಾಯ್ಡ್ ಡಿವೈಸ್‌ನಲ್ಲಿ ಆಟೋ ಪ್ಲೇ ವೀಡಿಯೊ ಫೀಚರ್ಸ್‌ ಆಫ್‌ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಹಂತ 1: ಫೇಸ್‌ಬುಕ್ ಅಪ್ಲಿಕೇಶನ್ ತೆರೆಯಿರಿ ಮತ್ತು ಸ್ಕ್ರೀನ್‌ ಮೇಲಿನ ಬಲಭಾಗದಲ್ಲಿರುವ ಮೆನು ಬಟನ್ ಕ್ಲಿಕ್ ಮಾಡಿ.

ಹಂತ 2: ಕೆಳಗೆ ಸ್ಕ್ರಾಲ್ ಮಾಡಿ ಮತ್ತು ‘ಸೆಟ್ಟಿಂಗ್ಸ್‌ ಮತ್ತು ಪ್ರೈವೆಸಿ' ಗಾಗಿ ಪರಿಶೀಲಿಸಿ, ನಂತರ ಸೆಟ್ಟಿಂಗ್ಸ್‌ ಆರಿಸಿ.

ಹಂತ 3: ಒಮ್ಮೆ ತೆರೆದರೆ, ಕೆಳಗೆ ಸ್ಕ್ರಾಲ್ ಮಾಡುವಾಗ ನೀವು ‘Media and Contacts' ಕಾಣುವಿರಿ.

ಹಂತ 4: ‘ಆಟೊಪ್ಲೇ' ಆಯ್ಕೆಯನ್ನು ಆರಿಸಿ ನಂತರ ಅದನ್ನು ‘ನೆವರ್ ಆಟೋಪ್ಲೇ ವೀಡಿಯೊಸ್' ಎಂದು ಸೆಟ್‌ ಮಾಡಿ.

ಐಒಎಸ್ ಅಪ್ಲಿಕೇಶನ್‌ನಲ್ಲಿ ಆಟೋ-ಪ್ಲೇ ವೀಡಿಯೊ ಫೀಚರ್ಸ್‌ ಅನ್ನು ಆಫ್ ಮಾಡುವುದು ಹೇಗೆ?

ಐಒಎಸ್ ಅಪ್ಲಿಕೇಶನ್‌ನಲ್ಲಿ ಆಟೋ-ಪ್ಲೇ ವೀಡಿಯೊ ಫೀಚರ್ಸ್‌ ಅನ್ನು ಆಫ್ ಮಾಡುವುದು ಹೇಗೆ?

ಹಂತ 1: ಆಂಡ್ರಾಯ್ಡ್ ಅಪ್ಲಿಕೇಶನ್‌ನಂತೆ, ನೀವು ಪರದೆಯ ಕೆಳಭಾಗದಲ್ಲಿ ಮೆನು ಬಟನ್ ಅನ್ನು ಕಾಣಬಹುದು.

ಹಂತ 2: ‘ಸೆಟ್ಟಿಂಗ್ಸ್‌ ಮತ್ತು ಪ್ರೈವೆಸಿ' ಟ್ಯಾಪ್ ಮಾಡಿ ನಂತರ ‘ಸೆಟ್ಟಿಂಗ್ಸ್‌' ಆಯ್ಕೆಮಾಡಿ.

ಹಂತ 3: ಕೆಳಗೆ ಸ್ಕ್ರಾಲ್ ಮಾಡಿ ಮತ್ತು 'Media and Contacts' ಹುಡುಕಿ.

ಹಂತ 4: ‘ವೀಡಿಯೊಗಳು ಮತ್ತು ಫೋಟೋಗಳು' ಆಯ್ಕೆಯನ್ನು ಈ ಟ್ಯಾಪ್ ಮಾಡಿ.

ಹಂತ 5: ನಂತರ ನೀವು ‘ಆಟೊಪ್ಲೇ' ಅನ್ನು ಕಾಣುತ್ತೀರಿ . ಈಗ ನೀವು ಆಟೋ ಪ್ಲೇಯಿಂಗ್‌ ವೀಡಿಯೊ ಫೀಚರ್ಸ್‌ ಅನ್ನು ನಿಷ್ಕ್ರಿಯಗೊಳಿಸಬಹುದು.

ವೆಬ್ ಬ್ರೌಸರ್‌ನಲ್ಲಿ ಆಟೋ-ಪ್ಲೇ ವೀಡಿಯೊ ಫೀಚರ್ಸ್‌ ಅನ್ನು ಆಫ್ ಮಾಡುವುದು ಹೇಗೆ?

ವೆಬ್ ಬ್ರೌಸರ್‌ನಲ್ಲಿ ಆಟೋ-ಪ್ಲೇ ವೀಡಿಯೊ ಫೀಚರ್ಸ್‌ ಅನ್ನು ಆಫ್ ಮಾಡುವುದು ಹೇಗೆ?

ಹಂತ 1: ನಿಮ್ಮ ಬ್ರೌಸರ್‌ನಲ್ಲಿ ಫೇಸ್‌ಬುಕ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ, ನಂತರ ಪುಟದ ಮೇಲಿನ ಬಲಭಾಗದಲ್ಲಿರುವ ಡ್ರಾಪ್-ಡೌನ್ ಮೆನುಗೆ ಹೋಗಿ

ಹಂತ 2: ‘ಸೆಟ್ಟಿಂಗ್ಸ್‌ ಮತ್ತು ಪ್ರೈವೆಸಿ' ಆಯ್ಕೆಮಾಡಿ, ತದನಂತರ ‘ಸೆಟ್ಟಿಂಗ್ಸ್‌' ಟ್ಯಾಪ್ ಮಾಡಿ.

ಹಂತ 3: ಎಡಗೈ ಮೆನುವಿನಲ್ಲಿ ‘ವೀಡಿಯೋಸ್‌' ಲಿಸ್ಟ್‌ ಅನ್ನು ಸರ್ಚ್‌ ಮಾಡಿ.

ಹಂತ 4: ಆ ಆಯ್ಕೆಯೊಳಗೆ, ನೀವು ಆಟೋ-ಪ್ಲೇಯಿಂಗ್‌ ವೀಡಿಯೊ ಫೀಚರ್ಸ್‌ ಅನ್ನು ಮ್ಯೂಟ್ ಮಾಡುವ ಟಾಗಲ್ ಅನ್ನು ನೀವು ಕಾಣಬಹುದು.

ಈ ಮೂಲಕ ವೆಬ್‌ ಬ್ರೌಸರ್‌ನಲ್ಲಿ ಫೇಸ್‌ಬುಕ್‌ ಆಟೋ ಪ್ಲೇಯಿಂಗ್‌ ವೀಡಿಯೋಸ್‌ ಫೀಚರ್ಸ್‌ ಅನ್ನು ಆಫ್‌ ಮಾಡಬಹುದು.

Most Read Articles
Best Mobiles in India

English summary
Tired of those annoying sound while scrolling through feeds on your Facebook, here are few simple tips you can follow to mute autoplay videos.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X