ಜಿಂಜರ್ಬೆಡ್‌ನಿಂದ ಆಂಡ್ರಾಯ್ಡ್‌ ಐಸಿಎಸ್‌ಗೆ ಅಪ್ಗ್ರೇಡ್‌ ಮಾಡಿಕೊಳ್ಳುವುದು ಹೇಗೆ?

By Super
|
ಜಿಂಜರ್ಬೆಡ್‌ನಿಂದ ಆಂಡ್ರಾಯ್ಡ್‌ ಐಸಿಎಸ್‌ಗೆ ಅಪ್ಗ್ರೇಡ್‌ ಮಾಡಿಕೊಳ್ಳುವುದು ಹೇಗೆ?

ನಿಮ್ಮ ಬಳಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಇದ್ದಲ್ಲಿ ಅದನ್ನು ಕಾಲ ಕಾಲಕ್ಕೆ ಅಪ್ಗ್ರೇಡ್‌ ಮಾಡಿಕೊಳ್ಳ ಬೇಕಾಗಿರುತ್ತದೆ. ಆಂಡ್ರಾಯ್ಡ್‌ ಪ್ಲಾಟ್‌ಫಾರ್ಮ್‌ನ ಬಹುದೊಡ್ಡ ವಿಶೇಷತೆ ಎಂದರೆ ಹಳೆಯ ಆಪರೇಟಿಂಗ್‌ ಸಿಸ್ಟಂನಿಂದ ಹೊಸ ಆಪರೇಟಿಂಗ್‌ ಸಿಸ್ಟಂಗೆ ಅಪ್ಗ್ರೇಡ್‌ ಮಾಡಿಕೊಳ್ಳ ಬಹುದಾಗಿದೆ. ಅಂದಹಾಗೆ ಆಂಡ್ರಾಯ್ಡ್‌ ಜೆಲ್ಲಿಬೀನ್‌ ಸದ್ಯದಲ್ಲಿನ ಲೇಟೆಸ್ಟ್‌ ಆಂಡ್ರಾಯ್ಡ್‌ ಪ್ಲಾಟ್‌ಫಾರ್ಮ್‌ ಆಗಿದೆ ಇದಕ್ಕೂ ಮುನ್ನ ಆಂಡ್ರಾಯ್ಡ್‌ 4.0 ಐಸ್‌ಕ್ರೀಮ್‌ ಸ್ಯಾಂಡ್ವಿಚ್‌ ಆಪರೇಟಿಂಗ್‌ ಸಿಸ್ಟಂ ಆಗಿದೆ.

ಅಂದಹಾಗೆ ಇತ್ತೀಚನ ಸಮೀಕ್ಷೆಯೊಂದರ ಪ್ರಕಾರ ಆಂಡ್ರಾಯ್ಡ್‌ ಸಾಧನಗಳನ್ನು ಬಳಸುತ್ತಿರುವ ಮಂದಿಯನ್ನು ತಮ್ಮ ಸ್ಮಾರ್ಟ್‌ಫೋನ್‌ ಆಪ್ಗ್ರೇಡ್‌ ಮಾಡಿಕೊಂಡಿದ್ದಾರೆಯೆ ಇಲ್ಲವೇ ಎಂದು ಪರೀಕ್ಷಿಸಿದಾಗ ಅಚ್ಚರಿಯ ಪಲಿತಾಂಷ ಬೆಳಕಿಗೆ ಬಂದಿದ್ದು, ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಅಪ್ಗ್ರೇಡ್‌ ಆಪ್ಷನ್‌ ಲಭ್ಯವಿದ್ದರೂ ಕೂಡ ಹಳೆಯ ಆಪರೇಟಿಂಗ್‌ ಸಿಸ್ಟಂ ಅನ್ನೇ ಬಳಸುತ್ತಿದ್ದಾರೆ.

ಕೆಲವರು ಅಪ್ಗ್ರೇಡ್‌ ಮಾಡಿಕೊಳ್ಳುವುದು ಹೇಗೆ ಎಂಬುದು ತಿಳಿಯದೇ ಇರುವುದರಿಂದ ಮಾಡಿಕೊಂಡಿಲ್ಲಾ ಎಂದು ಉತ್ತರಿಸಿದ್ದರೆ, ಅಪ್ಗ್ರೇಡ್‌ ಮಾಡಿಕೊಳ್ಳುವುದು ತಿಳಿದಿದ್ದರೂ ಕೂಡ ತಮ್ಮ ಸ್ಮಾರ್ಟ್‌ ಫೋನ್‌ನಲ್ಲಿ ತಾಂತ್ರಕ ತೊಂದೆರೆಗಳು ಉಟಾಗ ಬಹುದೆಂದು ಹೆದರಿ ಮಾಡಿಕೊಂಡಿಲ್ಲಾ ಎಂದು ಉತ್ತರಿಸಿದ್ದಾರೆ. ಅಂದಹಾಗೆ ಸರಿಯಾದ ರೀತಿಯಲ್ಲಿ ಫೋನ್‌ ಅಪಗ್ರೇಡ್‌ ಮಾಡಿಕೊಂಡಲ್ಲಿ ಯಾವುದೇ ತೊಂದರೆಗಳು ಕಾಣಿಸಿಕೊಳ್ಳುವುದಿಲ್ಲಾ.

ಫೋನ್‌ ಅಪ್ಗ್ರೇಡ್‌ ಮಾಡಿಕೊಳ್ಳುವ ಮುನ್ನ ಗಮನ ಹರಿಸ ಬೇಕಾದ ವಿಶಯ

ನಿಮ್ಮ ಫೋನ್‌ನಲ್ಲಿ ಆಂಡ್ರಾಯ್ಡ್‌ ಜಿಂಜರ್‌ ಬ್ರೆಡ್‌ ಆಪರೇಟಿಂಗ್‌ ಸಿಸ್ಟಂ ನೀಡಲಾಗಿದ್ದಲ್ಲಿ ಅಪ್ಗ್ರೇಡ್‌ ಮಾಡಿಕೊಳ್ಳುವ ಮುನ್ನ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಧಿಕೃತ ಅಪ್ಗ್ರೇಡ್‌ ಆಪ್ಷನ್‌ ಇದೆಯೇ ಎಂದು ನೋಡಿಕೊಳ್ಳಿ. ಇಲ್ಲವಾದಲ್ಲಿ ನೀವಾಗಿಯೇ ಕೂಡ ಅಪ್ಗ್ರೇಡ್‌ ಮಾಡಿಕೊಳ್ಳ ಬಹುದಾಗಿದದೆ. ಇದಕ್ಕಾಗಿ ಸ್ಕ್ರೀನ್‌ ಮೇಲಿನ ಮೆನ್ಯು ಆಪ್ಷನ್‌ ಮೇಲೆ ಕ್ಲಿಕ್‌ ಮಾಡಿ ಸೆಟ್ಟಿಂಗ್ಸ್‌ ಆಪ್ಷನ್ಸ್‌ಗೆ ತೆರಳಿ ಅಬೌಟ್‌ ಪೋನ್‌ ಮೇಲೆ ಕ್ಲಿಕ್‌ ಮಾಡಿ, ಸ್ವಲ್ಒ ಕಾಲ ಸರ್ಚಿಂಗ್‌ ಆದ ಬಳಿಕ ನಿಮ್ಮ ಪೋನ್‌ನಲ್ಲಿ ಅಪ್ಗ್ರೇಡ್‌ ಆಪ್ಷನ್‌ ಇದ್ದಲ್ಲಿ ನಿಮ್ಮ ಮುಂದೆ ಗೋಚರಿಸುತ್ತದೆ.

ನಿಮ್ಮ ಫೋನ್‌ನಲ್ಲೊ ಆಂಡ್ರಾಯ್ಡ್‌ ಆಪ್ಷನ್‌ ಆಪಗ್ರೇಡ್‌ ಮಾಡಿಕೊಳ್ಳಲು ಆಪ್ಷನ್‌ ತೋರಿಸಿದಲ್ಲಿ ಅದರ ಮೇಲೆ ಕ್ಲಿಕ್‌ ಮಾಡಿ. ಈಗ ನಿಮ್ಮ ಫೋನ್‌ನಲ್ಲಿ ಯಾವುದೇ ಸೆಟ್ಟಿಂಗ್ಸ್‌ ಬದಲಾಯಿಸುವಂತಿಲ್ಲ ಹಾಗೂ ಯಾವುದೇ ಪಾಸ್ವರ್ಡ್‌ ಹಾಕುವಂತಿಲ್ಲ ತನ್ನಂತೆ ತಾನೆಯೇ ಅಪ್ಗ್ರೇಡಾಗಿ ಬಿಡುತ್ತದೆ. ಆದರೇ ಇದಕ್ಕೂ ಮುನ್ನ ನಿಮ್ಮ ಫೋನ್‌ ಅಪ್ಗರೇಡ್‌ ಮಾಡುವ ಸಂದರ್ಭದಲ್ಲಿ ಸ್ವಿಚ್‌ ಆಫ್‌ ಆಗದಂತೆ ಎಚ್ಚರ ವಹಿಸಲು ಮೊದಲೆ ಪೂರ್ಣ ಪ್ರಮಾಣವಾಗಿ ಚಾರ್ಜ್‌ಮಾಡಿಕೊಂಡಿರಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X