ಇಂಟರ್‌ನೆಟ್‌ ಇಲ್ಲದಿದ್ರೂ ಗೂಗಲ್‌ ಡಾಕ್ಯುಮೆಂಟ್‌ ಎಡಿಟ್‌ ಮಾಡಿ..!

By Gizbot Bureau
|

ಮಾರುಕಟ್ಟೆಯಲ್ಲಿನ ಉಚಿತ ವರ್ಡ್ ಪ್ರೊಸೆಸರ್‌ಗಳಲ್ಲಿ ಗೂಗಲ್ ಡಾಕ್ಸ್ ಉತ್ತಮ ಆಯ್ಕೆಯಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿ ಬಳಸಲು ಇದು ಉಚಿತ ಮತ್ತು ಉತ್ತಮವಾಗಿದ್ದು, ಅನೇಕ ಬಳಕೆದಾರರಿಗೆ ಯೋಗ್ಯ ಆಯ್ಕೆಯಾಗಿದೆ. ಆದಾಗ್ಯೂ, ಅದರ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳೆರಡನ್ನೂ ಪರಿಗಣಿಸಬಹುದಾದ ಒಂದು ಫೀಚರ್‌ ಇದೆ. ನಿಮ್ಮ ಡೇಟಾವನ್ನು ಸಾರ್ವಕಾಲಿಕವಾಗಿ ಸಿಂಕ್ ಮಾಡಲು ಗೂಗಲ್‌ ಡಾಕ್ಸ್‌ಗೆ ಇಂಟರ್‌ನೆಟ್ ಸಂಪರ್ಕದ ಅಗತ್ಯವಿದೆ. ಆದರೆ, ನಿಮ್ಮ ಇಂಟರ್‌ನೆಟ್ ಸಂಪರ್ಕ ಕಡಿತವಾದರೆ ಅಥವಾ ನೀವು ನೆಟ್‌ವರ್ಕ್ ಇಲ್ಲದ ಸ್ಥಳಗಳಿಂದ ಗೂಗಲ್‌ ಡಾಕ್ಸ್ ಬಳಸುತ್ತಿದ್ದರೆ, ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ.

ಡಾಕ್ಯುಮೆಂಟ್

ನೀವು ಡಾಕ್ಯುಮೆಂಟ್ ಸಂಪಾದಿಸುವಾಗ ನಿಮ್ಮ ಇಂಟರ್‌ನೆಟ್ ಸಂಪರ್ಕ ಕಡಿತಗೊಂಡರೆ, ಮತ್ತೆ ಇಂಟರ್‌ನೆಟ್‌ ಸಂಪರ್ಕ ಸಿಗುವವರೆಗೂ ಡಾಕ್ಯುಮೆಂಟ್‌ ಸಂಪಾದನೆಗೆ ಡಾಕ್ಸ್ ಅನುಮತಿ ನೀಡುವುದಿಲ್ಲ. ಆದ್ದರಿಂದ, ಗೂಗಲ್‌ ಡಾಕ್ಸ್ ಅನ್ನು ಆಫ್‌ಲೈನ್‌ನಲ್ಲಿ ಬಳಸಬಹುದಾ ಎಂದು ಚಿಂತಿಸುತ್ತಿದ್ದರೆ, ಎಲ್ಲೂ ಹುಡುಕುವ ಅವಶ್ಯಕತೆಯಿಲ್ಲ. ನಿಮಗಾಗಿಯೇ ಇಲ್ಲಿ ಅನೇಕ ಟಿಪ್ಸ್‌ಗಳನ್ನು ನೀಡಲಾಗಿದೆ.

ಆಫ್‌ಲೈನ್‌ನಲ್ಲಿ ಹೇಗೆ..?

ಆಫ್‌ಲೈನ್‌ನಲ್ಲಿ ಹೇಗೆ..?

ಇಂಟರ್‌ನೆಟ್ ಇಲ್ಲದೆ ಗೂಗಲ್‌ ಡಾಕ್ಸ್‌ನ್ನು ಆಫ್‌ಲೈನ್‌ನಲ್ಲಿ ಬಳಸುವುದು ಹೇಗೆ ಎಂದು ನೋಡುವುದಾದರೆ, ಅಗತ್ಯವಿರುವ ಬಳಕೆದಾರರ ಅನುಕೂಲಕ್ಕಾಗಿ ಗೂಗಲ್ ಡಾಕ್ಸ್ ಆಫ್‌ಲೈನ್ ಮೋಡ್‌ನೊಂದಿಗೂ ಬರುತ್ತಿದೆ. ಅದು ಇಂಟರ್‌ನೆಟ್ ಸಂಪರ್ಕವಿಲ್ಲದೆ ಡಾಕ್ಯುಮೆಂಟ್‌ಗಳನ್ನು ಸಂಪಾದಿಸಲು ನಿಮಗೆ ಅನುಮತಿ ನೀಡುತ್ತದೆ. ಆದಾಗ್ಯೂ, ಇದನ್ನು ಬಳಸಲು, ನೀವು ವೈಫೈ ಅಥವಾ ಸೆಲ್ಯುಲಾರ್ ಡೇಟಾದ ಮೂಲಕ ಇಂಟರ್‌ನೆಟ್‌ಗೆ ಸಂಪರ್ಕ ಹೊಂದಿರುವಾಗ ಒಂದಿಷ್ಟು ಕಾರ್ಯಗಳನ್ನು ಮುಂಚಿತವಾಗಿ ಮಾಡಿರಬೇಕಾಗುತ್ತದೆ.

ಈ ಹಂತಗಳನ್ನು ಅನುಸರಿಸಿ

ಈ ಹಂತಗಳನ್ನು ಅನುಸರಿಸಿ

1. ನಿಮ್ಮ ವೆಬ್ ಬ್ರೌಸರ್‌ನಲ್ಲಿ ಗೂಗಲ್‌ ಡಾಕ್ಸ್ ತೆರೆಯಿರಿ.

2. ಎಡಗೈ ಭಾಗದಲ್ಲಿರುವ ಹ್ಯಾಂಬರ್‌ಗರ್ ಮೆನು ಬಟನ್ ಕ್ಲಿಕ್ ಮಾಡಿ.

3. ಸೆಟ್ಟಿಂಗ್ಸ್‌ಗೆ ಹೋಗಿ.

4. "ಆಫ್‌ಲೈನ್" ಎಂದು ಹೇಳುವ ಟಾಗಲ್ ಬಟನ್ ಆನ್ ಮಾಡಿ.

5. ಆಫ್‌ಲೈನ್ ಮೋಡ್ ಹೊಂದಿಸಲು ಗೂಗಲ್‌ ಡಾಕ್ಸ್ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನಂತರ, ನೀವು ಸಂಪಾದಿಸಲು ಬಯಸುವ ದಾಖಲೆಗಳನ್ನು ನೀವು ತೆರೆಯಬಹುದು. ಇಂಟರ್‌ನೆಟ್ ಇಲ್ಲದಿದ್ದಾಗ, ಡಾಕ್ಯುಮೆಂಟ್ ಫೈಲ್‌ಗಳು ಥಂಬ್‌ನೇಲ್‌ಗಳ ಬದಲಿಗೆ ಪಟ್ಟಿಯಾಗಿ ಗೋಚರಿಸುತ್ತವೆ.

ಹೈಲೈಟ್‌ ಮಾತ್ರ ಎಡಿಟ್‌

ಹೈಲೈಟ್‌ ಮಾತ್ರ ಎಡಿಟ್‌

ಆಫ್‌ಲೈನ್ ಮೋಡ್‌ನಲ್ಲಿ, ದಪ್ಪವಾಗಿ ಹೈಲೈಟ್ ಮಾಡಲಾದ ಡಾಕ್ಯುಮೆಂಟ್‌ಗಳನ್ನು ಮಾತ್ರ ನೀವು ಸಂಪಾದಿಸಬಹುದು. ಮರೆಯಾದವುಗಳು "ವಿವ್‌ ಒನ್ಲಿ" ಆಗಿರಬಹುದು ಅಥವಾ ಅವುಗಳ ಡೇಟಾ ನಿಮ್ಮ ಕಂಪ್ಯೂಟರ್‌ಗೆ ಸಿಂಕ್ ಮಾಡಲಾಗಿರುವುದಿಲ್ಲ.

ಇತರ ಮಾರ್ಗಗಳು

ಇತರ ಮಾರ್ಗಗಳು

ಇಂಟರ್‌ನೆಟ್ ಸಂಪರ್ಕ ಕಡಿತಗೊಂಡ ನಂತರ ಗೋಚರಿಸುವ ಅಧಿಸೂಚನೆಯಲ್ಲಿ ನೀವು ಟರ್ನ್‌ ಆನ್ ಆಯ್ಕೆಯನ್ನು ಕ್ಲಿಕ್ ಮಾಡಬಹುದು. ಮುಂದೆ, ಆಫ್‌ಲೈನ್ ಪ್ರವೇಶವನ್ನು ಟರ್ನ್‌ ಆನ್‌ ಕ್ಲಿಕ್ ಮಾಡಿ. ಇಂಟರ್‌ನೆಟ್ ಮತ್ತೆ ಸಕ್ರಿಯಗೊಂಡ ನಂತರ ಆಫ್‌ಲೈನ್ ಮೋಡ್ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ.

ಡಾಕ್ಸ್, ಶೀಟ್ಸ್, ಸ್ಲೈಡ್ಸ್‌ಗಳಲ್ಲಿ ಆಫ್‌ಲೈನ್ ಮೋಡ್

ಡಾಕ್ಸ್, ಶೀಟ್ಸ್, ಸ್ಲೈಡ್ಸ್‌ಗಳಲ್ಲಿ ಆಫ್‌ಲೈನ್ ಮೋಡ್

ಗೂಗಲ್‌ ಶೀಟ್ಸ್‌, ಗೂಗಲ್‌ ಸ್ಲೈಡ್‌ಗಳಲ್ಲಿ ಆಫ್‌ಲೈನ್ ಮೋಡ್ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತದೆ ಎಂಬುದನ್ನು ನೀವು ಗಮನಿಸಬಹುದು. ಅಲ್ಲದೆ, ನಿಮ್ಮ ಗೂಗಲ್‌ ಡ್ರೈವ್‌ನಲ್ಲಿಯೂ ಡಾಕ್ಯುಮೆಂಟ್‌ಗಳನ್ನು ಪ್ರವೇಶಿಸಬಹುದು. ಆಫ್‌ಲೈನ್ ಮೋಡ್ ಅನ್ನು ಆನ್ ಮಾಡಲು ಈ ಯಾವುದೇ ಅಪ್ಲಿಕೇಶನ್‌ಗಳಲ್ಲಿ ನೀವು ಅದೇ ಹಂತಗಳನ್ನು ಅನುಸರಿಸಬಹುದು.

Most Read Articles
Best Mobiles in India

English summary
How To Use Google Docs Even If Your Computer Is In Offline Mode

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X