ಬ್ಯಾಂಕ್‌ ಖಾತೆ ಹೊಂದಿರುವವರು ನೆಟ್‌ಬ್ಯಾಂಕಿಂಗ್ ಬಳಸುವುದು ಹೇಗೆ? ಕಂಪ್ಲೀಟ್ ಡೀಟೇಲ್ಸ್..

By Suneel
|

ಸ್ಮಾರ್ಟ್‌ಫೋನ್ ಕೈಯಲ್ಲಿದ್ದರೂ, ಲ್ಯಾಪ್‌ಟಾಪ್‌-ಕಂಪ್ಯೂಟರ್‌ಗಳು ಮನೆಯಲ್ಲಿದ್ದರೂ ಜನರು ಹಣವನ್ನು ಇತರರ ಖಾತೆಗೆ ಸಂದಾಯ ಮಾಡಲು ಬ್ಯಾಂಕ್‌ಗಳ ಮುಂದೆ ಸಾಲಿನಲ್ಲಿ ನಿಲ್ಲಿವುದು ತಪ್ಪಿಲ್ಲ. ಆದ್ರೆ ಈ ರೀತಿಯ ಹಣ ಸಂದಾಯ ಮಾಡಲು ಜಸ್ಟ್ ಮೊಬೈಲ್‌ನಲ್ಲೇ ಆಗಲಿ, ಕಂಪ್ಯೂಟರ್‌ನಲ್ಲೇ ಆಗಲಿ 20MB ಗಿಂತ ಕಡಿಮೆ ಇಂಟರ್ನೆಟ್ ಇದ್ದರೇ ಸಾಕು.

ಹೌದು, ಇಂದು ಪ್ರತಿ ಬ್ಯಾಂಕ್‌ಗಳು ಸಹ ತಮ್ಮದೇ ಆದ ಅಧಿಕೃತ ಮೊಬೈಲ್‌ ಆಪ್‌ಗಳನ್ನು ಹೊಂದಿವೆ. ಹಾಗೆ ಪ್ರತಿ ಬ್ಯಾಂಕ್‌ಗಳು ನೆಟ್‌ಬ್ಯಾಂಕಿಂಗ್ (ಆನ್‌ಲೈನ್ ಬ್ಯಾಂಕಿಂಗ್) ಸಿಸ್ಟಮ್‌ ಹೊಂದಿವೆ. ಈ ಎಲ್ಲಾ ಸೌಲಭ್ಯಗಳಿದ್ದರೂ ಸಹ ಇನ್ನೂ ಕೆಲವರು ತಮ್ಮ ಕೈಯಲ್ಲಿ ಸ್ಮಾರ್ಟ್‌ಫೋನ್‌ ಇದ್ದರೂ ಬ್ಯಾಂಕ್‌ಗಳ ಮುಂದೆ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಇವರ ಒಂದೇ ಒಂದು ಸಮಸ್ಯೆ ಎಂದರೆ ನೆಟ್‌ಬ್ಯಾಂಕಿಂಗ್ ಬಳಸಲು ಬರುವುದಿಲ್ಲ ಎಂಬುದು. ಆದ್ದರಿಂದ ಇಂದಿನ ಲೇಖನದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆದಾರರು ನೆಟ್‌ಬ್ಯಾಂಕಿಂಗ್ ಬಳಸುವುದು ಹೇಗೆ ಎಂದು ತಿಳಿಸುತ್ತಿದ್ದೇವೆ.

 ಮೊದಲು ತಿಳಿಯಬೇಕಾದ ಅಗತ್ಯಾಂಶಗಳು

ಮೊದಲು ತಿಳಿಯಬೇಕಾದ ಅಗತ್ಯಾಂಶಗಳು

- ಎಚ್‌ಡಿಎಫ್‌ಸಿ ಬ್ಯಾಂಕ್‌ ಖಾತೆ ತೆರೆಯುವ ವೇಳೆಯಲ್ಲಿಯೇ ಮೊಬೈಲ್‌ ಬ್ಯಾಂಕಿಂಗ್, ನೆಟ್‌ಬ್ಯಾಂಕಿಂಗ್ ಬಳಸಲು ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಇರುವ ದಾಖಲೆಗಳನ್ನು ನೀಡಿರುತ್ತಾರೆ. ಅಲ್ಲದೇ ಡೆಬಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಪಿನ್‌ ನಂಬರ್ ಸೇರಿದಂತೆ ಪಾಸ್‌ಬುಕ್ ಸಹಿತ ಕಿಟ್ ಅನ್ನು ನೀಡಿರುತ್ತಾರೆ. ಬ್ಯಾಂಕ್ ಖಾತೆ ತೆರೆದ ನಂತರ ಈ ಎಲ್ಲಾ ಸೇವೆಗಳ ಕಿಟ್‌ ಅನ್ನು ಪಡೆಯಲು ಮರೆಯದಿರಿ.

- ನೆಟ್‌ಬ್ಯಾಂಕ್‌ ಬಳಸಲು ಎಚ್‌ಡಿಎಫ್‌ಸಿ ಬ್ಯಾಂಕ್‌ನವರೇ ನೀಡಿದ ದಾಖಲೆಗಳಲ್ಲಿ ಮೊದಲು ನಿಮ್ಮ ನೆಟ್‌ಬ್ಯಾಂಕ್ User ID/Customer ID ಮತ್ತು ನೆಟ್‌ಬ್ಯಾಕ್‌ ಪಾಸ್‌ವರ್ಡ್ ತಿಳಿದುಕೊಳ್ಳಿ.

ನೆಟ್‌ಬ್ಯಾಂಕ್‌ ಲಾಗಿನ್‌ ಆಗಿ

ನೆಟ್‌ಬ್ಯಾಂಕ್‌ ಲಾಗಿನ್‌ ಆಗಿ

* ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಎಚ್‌ಡಿಎಫ್‌ಸಿ ನೆಟ್‌ಬ್ಯಾಂಕ್‌ ಬಳಸಲು ಮೊದಲು ಲಾಗಿನ್‌ ಆಗಬೇಕು. ಲಾಗಿನ್‌ ಆಗಲು ಮೊದಲು www.hdfcbank.com ಎಂದು ಟೈಪಿಸಿ ಎಂಟರ್ ಮಾಡಿ. ಓಪನ್‌ ಆದ ವೆಬ್‌ಪೇಜ್‌ನಲ್ಲಿ 'Personal' ಮೆನು ಆಯ್ಕೆ ಮಾಡಿ ನಂತರ 'Netbank' ಎಂಬಲ್ಲಿ ಕ್ಲಿಕ್ ಮಾಡಿ. ಮುಂದುವರೆಸಲು 'Continue to Netbanking' ಕ್ಲಿಕ್ ಮಾಡಿ.

* ನಂತರ ಓಪನ್ ಆದ ಪೇಜ್‌ನಲ್ಲಿ ಮೊದಲು User ID/Customer ID ಎಂಬಲ್ಲಿ ಬ್ಯಾಂಕ್‌ನವರು ನೀಡಿದ Customer ID ಅನ್ನು ಎಂಟರ್‌ ಮಾಡಿ.

* ಪಾಸ್‌ವರ್ಡ್ ಕೇಳಲಾಗುತ್ತದೆ. ಪಾಸ್‌ವರ್ಡ್‌ ನೀಡುವ ಮುನ್ನ 'Please confirm your secure acces' ಎಂಬಲ್ಲಿ ಕ್ಲಿಕ್ ಮಾಡಿ ನಂತರ ಬ್ಯಾಂಕ್‌ನವರು ನೀಡಿರುವ ಪಾಸ್‌ವರ್ಡ್ ಅನ್ನು ಎಂಟರ್ ಮಾಡಿ 'Log In' ಎಂಬಲ್ಲಿ ಕ್ಲಿಕ್‌ ಮಾಡಿ.

* ಯಶಸ್ವಿಯಾಗಿ ನೀವು ನೆಟ್‌ಬ್ಯಾಂಕಿಂಗ್‌ಗೆ ಲಾಗಿನ್‌ ಆಗುತ್ತೀರಿ. ನಂತರ ಅಲ್ಲಿ ಪ್ರತಿಯೊಂದು ಸೇವೆಗೂ ಸಹ ಬೇರೆ ಬೇರೆ ಟ್ಯಾಬ್‌ಗಳು ಇರುವುದನ್ನು ನೋಡಬಹುದು.

* ಆದರೆ ಮೊದಲು ಬ್ಯಾಂಕ್ ನೀಡಿರುವ ನೆಟ್‌ಬ್ಯಾಂಕ್‌ ಪಾಸ್‌ವರ್ಡ್‌ ಅನ್ನು ಲಾಗಿನ್‌ ಆದ ನಂತರ 'Change Password' ಎಂಬಲ್ಲಿ ಕ್ಲಿಕ್ ಮಾಡಿ ಲಾಗಿನ್ ಪಾಸ್‌ವರ್ಡ್‌ ಬದಲಿಸಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಹಣ ವರ್ಗಾವಣೆ ಹೇಗೆ?

ಹಣ ವರ್ಗಾವಣೆ ಹೇಗೆ?

ನೆಟ್‌ ಬ್ಯಾಂಕ್‌ ಬಳಕೆದಾರರು ಸಾಮಾನ್ಯವಾಗಿ ಹೆಚ್ಚು ಬಳಸುವುದು ಹಣ ವರ್ವಾವಣೆ ಮತ್ತು ಬಿಲ್‌ ಪೇಮೆಂಟ್ ಮತ್ತು ರೀಚಾರ್ಜ್‌ ಸೇವೆಗಳನ್ನು.

* ನಿಮ್ಮ ಖಾತೆಯಿಂದ ಇತರರಿಗೆ ಹಣ ವರ್ಗಾವಣೆ ಮಾಡಲು 'Funds Transfer' ಎಂಬ ಟ್ಯಾಬ್‌ ಮೇಲೆ ಕ್ಲಿಕ್ ಮಾಡಿ.

* ಯಾರಿಗೆ ಹಣ ವರ್ಗಾವಣೆ ಮಾಡುವ ಮೊದಲು 'ನಿಮ್ಮ ನೆಟ್‌ಬ್ಯಾಂಕ್‌ನಲ್ಲಿ ಅವರ ಖಾತೆಯ ಮಾಹಿತಿ ನೀಡಿ ಬೆನಿಫಿಸಿಯರಿ ಆಗಿ ಆಡ್ ಮಾಡಬೇಕು.

* ಹಣ ವರ್ಗಾವಣೆ ಮಾಡಲು ಬಯಸುವವರ ಬ್ಯಾಂಕ್‌ ಎಚ್‌ಡಿಎಫ್‌ಸಿ ಆಗಿದ್ದಲ್ಲಿ, 'Transfer within the bank' ಟ್ಯಾಬ್‌ ಅನ್ನು, ಇತರೆ ಬ್ಯಾಂಕ್‌ ಖಾತೆದಾರರಾಗಿದ್ದಲ್ಲಿ 'Transfer to other bank' ಎಂಬುದನ್ನು ಆಯ್ಕೆ ಮಾಡಬೇಕು.

* ನಂತರ ಓಪನ್‌ ಆದ ಪೇಜ್‌ನಲ್ಲಿ ಸ್ಕ್ರಾಲ್ ಡೌನ್‌ ಮಾಡಿ "Add a Beneficiary' ಎಂಬುದನ್ನು ಸೆಲೆಕ್ಟ್ ಮಾಡಿ. ಹಣ ವರ್ಗಾವಣೆ ಮಾಡಲು ಬಯಸಿರುವವರ ಅಕೌಂಟ್ ನಂಬರ್, ಹೆಸರು ನೀಡಿ ಬೆನಿಫಿಸಿಯರಿ ಆಡ್ ಮಾಡಬೇಕು. ಹಾಗೆ ಒನ್ ಟೈಮ್‌ ಪಾಸ್‌ವರ್ಡ್‌ ಅನ್ನು ಎಂಟರ್ ಮಾಡಬೇಕು.

ಹಣ ವರ್ಗಾವಣೆ ಹೇಗೆ?

ಹಣ ವರ್ಗಾವಣೆ ಹೇಗೆ?

* ಬೆನಿಫಿಸಿಯರಿ ಆಡ್ ಆದ ನಂತರ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದು. ಹಣ ವರ್ಗಾವಣೆ ಮಾಡಲು ಬಯಸುವವರ ಬ್ಯಾಂಕ್‌ ಎಚ್‌ಡಿಎಫ್‌ಸಿ ಆಗಿದ್ದಲ್ಲಿ, 'Transfer within the bank' ಟ್ಯಾಬ್‌ ಅನ್ನು, ಇತರೆ ಬ್ಯಾಂಕ್‌ ಖಾತೆದಾರರಾಗಿದ್ದಲ್ಲಿ 'Transfer to other bank' ಆಯ್ಕೆ ಮಾಡಿ 'Select A Beneficiary' ಎಂಬಲ್ಲಿ ಕ್ಲಿಕ್ ಮಾಡಿ ಅವರ ಹೆಸರನ್ನು ಆಯ್ಕೆ ಮಾಡಿ. ಖಾತೆ ನಂಬರ್ ಅನ್ನು ಸ್ವಯಂಕೃತವಾಗಿ ಆಡ್‌ ಆಗುತ್ತದೆ. 'Transfer Amount' ಎಂಬ ಕಾಲಂನಲ್ಲಿ ಹಣ ಎಷ್ಟು ಎಂದು ಟೈಪಿಸಿ. 'Transfer Description' ಎಂಬಲ್ಲಿ ಹಣ ಪಡೆಯುವವರಿಗೆ ಎನಾದರೂ ಹೇಳುವುದಾದರೆ ಟೈಪಿಸಿ.

* 'I accept Terms & Conditions and have read the Note below' ಎಂಬಲ್ಲಿ ಟಿಕ್ ಮಾಡಿ, ಕೆಳಗೆ 'Contiue' ಎಂಬುದರ ಮೇಲೆ ಕ್ಲಿಕ್ ಮಾಡಿ. ಒನ್‌ ಟೈಮ್‌ ಪಾಸ್‌ವರ್ಡ್‌ ಅನ್ನು ನೀಡಿ. ನಂತರ ಹಣ ಕ್ಷಣದಲ್ಲಿ ವರ್ಗಾವಣೆ ಆಗುತ್ತದೆ.

* ಖಾತೆ 'ಲಾಗ್‌ ಔಟ್' ಮಾಡುವುದನ್ನು ಮರೆಯದಿರಿ.

Link Aadhaar Number !! ಆನ್‌ಲೈನ್‌ನಲ್ಲಿ ಆಧಾರ್ ಅನ್ನು ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಮಾಡುವುದು ಹೇಗೆ?
ಯಾವುದೇ ಸೇವೆಯ ಬಿಲ್ ಪಾವತಿಸಿ

ಯಾವುದೇ ಸೇವೆಯ ಬಿಲ್ ಪಾವತಿಸಿ

ವಿದ್ಯುತ್‌ ಬಿಲ್‌, ವಾಟರ್ ಬಿಲ್‌, ಇತರೆ ಯಾವುದೇ ಬಿಲ್ ಪಾವತಿಸಲು ಇಲಾಖೆಗಳಿಗೆ ದಣಿದು ಹೋಗುವ ಅವಶ್ಯಕತೆ ಇಲ್ಲ. ಎಚ್‌ಡಿಎಫ್‌ಸಿ ಬ್ಯಾಂಕ್‌ ಖಾತೆದಾರರು ನೆಟ್‌ಬ್ಯಾಂಕ್‌ ಓಪನ್‌ ಮಾಡಿ 'Bill Payment & Recharge' ಎಂಬಲ್ಲಿ ಕ್ಲಿಕ್ ಮಾಡಿ. ನಂತರ ಯಾವ ಬಿಲ್‌ ಪಾವತಿಸಬೇಕೋ ಅದನ್ನು ಆಯ್ಕೆ ಮಾಡಿ, ಕೇಳುವ ವಿವರಗಳನ್ನು ಟೈಪಿಸಿ ಕುಳಿತಲ್ಲೇ ಹಣ ಪಾವತಿಸಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
How To use HDFC Netbanking. Know about how to transfer money, and how to pay bill in online. visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X