ಗೂಗಲ್ ಪೇನಲ್ಲಿ ಹಲವು ಬ್ಯಾಂಕ್ ಅಕೌಂಟ್‌ಗಳ ಬಳಕೆ ಹೇಗೆ..? ಇಲ್ಲಿದೆ ಟಿಪ್ಸ್..!
ಸದ್ಯ ಯುಪಿಐ ಪೇಮೆಂಟ್ ಬಹಳ ಜನಪ್ರಿಯವಾಗಿದೆ. ಜನ ದೈನಂದಿನ ವ್ಯವಹಾರಗಳಲ್ಲಿ ಹೆಚ್ಚೆಚ್ಚು ಯುಪಿಐ ವ್ಯಾಲೆಟ್‌ಗಳನ್ನು ಬಳಸುತ್ತಿದ್ದಾರೆ. ಅದರಲ್ಲೂ ಗೂಗಲ್ ಪೇ ಕೂಡ ಅತ್ಯಂತ ಜನಪ್ರಿಯ ಯುಪಿಐ ವ್ಯಾಲೆಟ್ ಆಗಿದೆ. ಅಂಗಡಿಗಳಲ್ಲಿ ಪಾವತಿಸಲು, ಆನ್‌ಲೈನ್ ಖರೀದಿಗೆ ಮತ್ತು ಸ್ನೇಹಿತರು ಹಾಗೂ ಕುಟುಂಬಕ್ಕೆ ಹಣ ಕಳುಹಿಸಲು ಡಿಜಿಟಲ್ ವ್ಯಾಲೆಟ್ ಬಳಕೆಯಾಗುತ್ತಿದೆ. ಯುಪಿಐ ಮೂಲಕ ವಹಿವಾಟು ಪ್ರಾರಂಭಿಸಲು ಬಳಕೆದಾರರು ತಮ್ಮ ಬ್ಯಾಂಕ್ ಖಾತೆಗಳನ್ನು ಆಪ್‌ಗೆ ಲಿಂಕ್ ಮಾಡಬೇಕಾಗುತ್ತದೆ.

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇರುವವರೂ ಗೂಗಲ್ ಪೇನಲ್ಲಿ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಬಹುದಾ ಎಂಬ ಪ್ರಶ್ನೆ ಮೂಡುತ್ತದೆ. ಹೌದು, ಅನೇಕ ಬ್ಯಾಂಕ್ ಖಾತೆಗಳನ್ನು ಗೂಗಲ್ ಪೇನಲ್ಲಿ ಲಿಂಕ್ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಮೊಬೈಲ್ ವ್ಯಾಲೆಟ್‌ಗೆ ಹೆಚ್ಚುವರಿ ಖಾತೆಯನ್ನು ಹೇಗೆ ಸೇರಿಸುವುದು ಎಂಬುದರ ಕುರಿತು ಈ ಕೆಳಗೆ ಹಂತ ಹಂತವಾಗಿ ವಿವರಿಸಲಾಗಿದ್ದು, ಮುಂದೆ ನೋಡಿ.

ಹಂತ 1
ಗೂಗಲ್ ಪೇ ಆಪ್ ತೆರೆಯಿರಿ ಮತ್ತು ಮೇಲೆ ಬಲ ಮೂಲೆಯಲ್ಲಿರುವ ಥ್ರೀ ಡಾಟ್ ಐಕಾನ್‌ನ್ನು ಕ್ಲಿಕ್ ಮಾಡಿ.
ಹಂತ 2
ಥ್ರೀ ಡಾಟ್ ಐಕಾನ್ ಕ್ಲಿಕ್ಕಿಸಿದ ಮೇಲೆ ಸೆಟ್ಟಿಂಗ್ಸ್ ಆಯ್ಕೆ ಟ್ಯಾಪ್ ಮಾಡಿ ಮತ್ತು ಪೇಮೆಂಟ್ ವಿಧಾನಗಳಿಗೆ ಮುಂದುವರೆಯಿರಿ.
ಹಂತ 3
ಪೇಮೆಂಟ್ ವಿಧಾನಗಳಲ್ಲಿ ಬ್ಯಾಂಕ್ ಖಾತೆಯನ್ನು ಸೇರಿಸಿ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 4
ಈಗ, ಅಲ್ಲಿರುವ ಪಟ್ಟಿಯಿಂದ ನಿಮ್ಮ ಬ್ಯಾಂಕ್ ಹೆಸರನ್ನು ಆರಿಸಿ. ನಂತರ, ಬ್ಯಾಂಕ್ ಕಾರ್ಡ್ ಸಂಖ್ಯೆಯ ಕೊನೆಯ ಆರು ಸಂಖ್ಯೆಗಳು ಮತ್ತು ಅದರ ಮುಕ್ತಾಯ ದಿನಾಂಕದಂತಹ ವಿವರಗಳನ್ನು ನಮೂದಿಸಿ.

ಹಂತ 5
ಈಗ, ನಿಮ್ಮ ವಿವರಗಳನ್ನು ಬ್ಯಾಂಕ್‌ನೊಂದಿಗೆ ಪರಿಶೀಲಿಸಲು ಆಪ್‌ಗೆ ಅವಕಾಶ ಮಾಡಿಕೊಡಿ. ನಂತರ, ಯುಪಿಐ ಪಿನ್ ರಚಿಸಿ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 6
ಬ್ಯಾಂಕ್‌ನಿಂದ ಎಸ್‌ಎಂಎಸ್ ಕೋಡ್ ಬಳಸಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ.
ಹಂತ 7
ಹೊಸ ಯುಪಿಐ ಪಿನ್ ರಚಿಸಿ ಹಾಗೂ ಖಚಿತಪಡಿಸಿ. ಯುಪಿಐ ಪಿನ್ ಎನ್ನುವುದು ಅನನ್ಯ ಸಂಖ್ಯೆಯಾಗಿದ್ದು, ನಿಮ್ಮ ಪಾವತಿ / ಖರೀದಿಗಳನ್ನು ವ್ಯಾಲೆಟ್ ಮೂಲಕ ಅಧಿಕೃತಗೊಳಿಸುತ್ತದೆ.

ಪ್ರೈಮರಿ ಅಕೌಂಟ್
ಗೂಗಲ್ ಪೇ ಆಪ್‌ನಲ್ಲಿ ಸೇರಿಸಲಾದ ಬಹು ಖಾತೆಗಳಿಂದ ಪ್ರೈಮರಿ ಖಾತೆಯನ್ನು ಸಹ ಬಳಕೆದಾರರು ಆಯ್ಕೆ ಮಾಡಬಹುದು. ಪ್ರಾಥಮಿಕ ಖಾತೆ ಎಂದು ಹೊಂದಿಸುವುದರಿಂದ ಪಾವತಿಸಲು ಮತ್ತು ಸ್ವೀಕರಿಸಲು ಇದು ಡೀಫಾಲ್ಟ್ ಬ್ಯಾಂಕ್ ಖಾತೆಯಾಗಿರುತ್ತದೆ. ಪ್ರೈಮರಿ ಖಾತೆಯನ್ನು ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ 1. ಸೆಟ್ಟಿಂಗ್ಸ್‌ಗೆ ಹೋಗಿ.
ಹಂತ 2. ಸೆಟ್ಟಿಂಗ್ಸ್ ಅಡಿಯಲ್ಲಿ ಪೇಮೆಂಟ್ ವಿಧಾನಗಳಿಗೆ ಹೋಗಿ.
ಹಂತ 3. ನೀವು ಪ್ರೈಮರಿ ಅಕೌಂಟ್ ಆಗಿರಿಸಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ.
ಹಂತ 4. ಕೊನೆಗೆ ಪ್ರಾಥಮಿಕ ಖಾತೆ ಆಯ್ಕೆಯನ್ನು ಕ್ಲಿಕ್ ಮಾಡಿ.


Click it and Unblock the Notifications








