Just In
Don't Miss
- Automobiles
ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಜೆಮೊಪಾಯ್
- Finance
ಡಾಲರ್ ಎದುರು ಹೆಚ್ಚಿದ ರುಪಾಯಿ ಬಲ: 6 ವಾರಗಳಲ್ಲಿ ಗರಿಷ್ಠ ಮಟ್ಟ
- News
ರಾಮನಗರ, ಚನ್ನಪಟ್ಟಣಕ್ಕೆ ಕಾವೇರಿ ನೀರು ಸ್ಥಗಿತ
- Lifestyle
ಈ ರೀತಿ ಈಜುವುದರಿಂದ ಮೈ ಬೊಜ್ಜು ಸುಲಭವಾಗಿ ಕರಗಿಸಬಹುದು
- Movies
ಮಧ್ಯರಾತ್ರಿ ಆರಾಧ್ಯ ದೈವನ ಹುಟ್ಟು ಹಬ್ಬ ಆಚರಿಸಿದ ವಿಜಿ 'ಸಲಗ' ಟೀಮ್
- Sports
ಐಎಸ್ಎಲ್ 2019: ಒಡಿಶಾ ಎಫ್ಸಿಗೆ ಪುಣೆಯಲ್ಲಿ ಅಮೂಲ್ಯ ಜಯ
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಊಬರ್ ನಲ್ಲಿ ಪ್ರಯಾಣಿಸುವಾಗ ಹಣವಿಲ್ಲದೆ ಇದ್ದರೆ ಇನ್ನು ಚಿಂತೆ ಇಲ್ಲ!
ಊಬರ್ ಸಂಸ್ಥೆ ಭಾರತದಲ್ಲಿ ಯಶಸ್ವಿಯಾಗಿ ತನ್ನ ಬ್ಯುಸಿನೆಸ್ ನ್ನು ನಡೆಸುತ್ತಿದೆ. ಓಲಾಗೂ ಕೂಡ ಸ್ಪರ್ಧೆಯೊಡ್ಡುತ್ತಿದೆ. ಭಾರತದಲ್ಲಿ ಊಬರ್ ಯಶಸ್ವಿಯಾಗುವುದಕ್ಕೆ ಕಾರಣ ಯುಎಸ್ ನ ಸ್ಟ್ರ್ಯಾಟಜಿಯನ್ನು ಅದು ಭಾರತಕ್ಕೆ ಅಳವಡಿಸಿಕೊಂಡಿಲ್ಲ. ಭಾರತದ ಅಗತ್ಯತೆಗೆ ತನ್ನನ್ನ ತಾನು ಒಗ್ಗಿಸಿಕೊಂಡಿದೆ. ಆದರೂ ಕೂಡ ಭಾರತಕ್ಕೆ ಅಗತ್ಯವಿರುವ ಕೆಲವು ಫೀಚರ್ ಗಳನ್ನು ಊಬರ್ ಬಿಟ್ಟುಬಿಟ್ಟಿದೆ. ಅದರಲ್ಲೊಂದು ಪೇ ಲೇಟರ್ ಆಯ್ಕೆ. ಅಂದರೆ ಊಬರ್ ಬಳಸಿದ ನಂತರ ಹಣವಿಲ್ಲದೆ ಇದ್ದರೆ ಮತ್ತೊಂದು ದಿನ ಪಾವತಿ ಮಾಡುವುದಕ್ಕೆ ಅವಕಾಶ.
ಸ್ವಿಗ್ಗಿ ಮತ್ತು ಝೋಮೋಟೋ ಕೂಡ ಪೇ ಲೇಟರ್ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಮೂರನೇ ಪಾರ್ಟಿಯ ಜೊತೆಗೆ ಕೈಜೋಡಿಸಿಕೊಂಡಿದೆ.ಆದರೆ ಇದೀಗ ಊಬರ್ ನಲ್ಲೂ ಕೂಡ ಟ್ರಾವೆಲ್ ಮಾಡಿ ನಂತರದ ದಿನಗಳಲ್ಲಿ ಅದರ ಪಾವತಿ ಮಾಡುವ ಆಯ್ಕೆಯನ್ನು ಬಳಸಿಕೊಳ್ಳುವುದಕ್ಕೆ ಅವಕಾಶವಿದೆ.ನೀವೂ ಕೂಡ ಈ ವಿಚಾರದಲ್ಲಿ ಆಸಕ್ತಿ ಹೊಂದಿದರೆ ಹೇಗೆ ಪೇ ಲೇಟರ್ ಆಯ್ಕೆಯನ್ನು ಊಬರ್ ನಲ್ಲಿ ಬಳಸಿಕೊಳ್ಳುವುದು ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.
ಸೂಚನೆ: ಸದ್ಯ ಆಂಡ್ರಾಯ್ಡ್ ಡಿವೈಸ್ ಗಳಲ್ಲಿ ಮಾತ್ರವೇ ಇದು ಕೆಲಸ ಮಾಡುತ್ತಿದೆ.
ಊಬರ್ ನಲ್ಲಿ ಪೇ ಲೇಟರ್ ಆಯ್ಕೆ ಬಳಸುವುದು ಹೇಗೆ?
ಊಬರ್ ನಲ್ಲಿ ಪೇ ಲೇಟರ್ ಆಯ್ಕೆಯನ್ನು ಸೆಟ್ ಅಪ್ ಮಾಡುವುದು ಹೇಗೆ?
1.ಇಪೇಲೇಟರ್(ಉಚಿತ) ಆಪ್ ನ್ನು ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿ ಮತ್ತು ಸೈನ್ ಅಪ್ ಆಗಿ.ನಿಮ್ಮ ಎಲ್ಲಾ ವಿವರಗಳನ್ನು ಒದಗಿಸಿ ಮತ್ತು ಕ್ರೆಡಿಟ್ ಲಿಮಿಟ್ ನ್ನು ಪಡೆದುಕೊಳ್ಳಿ.
2.ಪ್ರೊಫೈಲ್ ಸೆಕ್ಷನ್ ಗೆ ಸ್ವಿಚ್ ಆಗಿ ಮತ್ತು ಯುಪಿಐ ನ್ನು ಸೆಟ್ ಅಪ್ ಮಾಡಿ. ಇಪೇಲೇಟರ್ ಅಕೌಂಟ್ ಗೆ ಇದು ಯುಪಿಐ ಅಡ್ರೆಸ್ ನ್ನು ಜನರೇಟ್ ಮಾಡುತ್ತದೆ.
3.ಇದೀಗ ಊಬರ್ ನ್ನು ತೆರೆಯಿರಿ ಮತ್ತು ಪೇಮೆಂಟ್ ಆಯ್ಕೆಗೆ ತೆರಳಿ. ಇಲ್ಲಿ ಆಡ್ ಪೇಮೆಂಟ್ ಮೆಥೆಡ್ ನ್ನು ಟ್ಯಾಪ್ ಮಾಡಿ.
4. ನಂತರ ಯುಪಿಐ ಯನ್ನು ಆಯ್ಕೆ ಮಾಡಿ ಮತ್ತು 'Link existing payment address’ ನ್ನು ಟ್ಯಾಪ್ ಮಾಡಿ.
5. ಇಲ್ಲಿ ಇಪೇಲೇಟರ್ ಯುಪಿಐ ಅಡ್ರೆಸ್ ನ್ನು ಎಂಟರ್ ಮಾಡಿ ಮತ್ತು ಸೇವ್ ಬಟನ್ ನ್ನು ಟ್ಯಾಪ್ ಮಾಡಿ.ಹೊಸ ಪೇಮೆಂಟ್ ಅಡ್ರೆಸ್ ನ್ನು ವ್ಯಾಲಿಡೇಟ್ ಮಾಡುವುದಕ್ಕಾಗಿ ಕಂಟಿನ್ಯೂ ವನ್ನು ಟ್ಯಾಪ್ ಮಾಡಿ. ಇದು ನಿಮಗೆ 1 ರುಪಾಯಿಯನ್ನು ಇಪೇಲೇಟರ್ ಅಕೌಂಟ್ ನಲ್ಲಿ ಚಾರ್ಜ್ ಮಾಡುತ್ತದೆ.
6.ಇ ಪೇ ಲೇಟರ್ ಆಪ್ ನಿಂದ ಚಾರ್ಜ್ ಬಗ್ಗೆ ನಿಮಗೆ ನೋಟಿಫಿಕೇಷನ್ ಬರುತ್ತದೆ.ನೋಟಿಫಿಕೇಷನ್ ನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಮೊಬೈಲ್ ಗೆ ಕಳುಹಿಸಲಾಗಿರುವ ಓಟಿಪಿಯನ್ನು ಎಂಟರ್ ಮಾಡಿ.
7. ಇದೀಗ ಊಬರ್ ಗೆ ತೆರಳಿ ಮತ್ತು ಕ್ಲೋಸ್ ಬಟನ್ ನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಇಪೇಲೇಟರ್ ಯುಪಿಐ ಅಡ್ರೆಸ್ ಇದೀಗ ಊಬರ್ ಅಕೌಂಟ್ ಗೆ ಆಡ್ ಆಗುತ್ತದೆ. ಅಂತಿಮವಾಗಿ ನಿಮ್ಮ ರೈಡ್ ನ್ನು ಬುಕ್ ಮಾಡಿ ಮತ್ತು ಇಪೇಲೇಟರ್ ಯುಪಿಐ ಅಡ್ರೆಸ್ ನ್ನು ಪೇಮೆಂಟ್ ಆಯ್ಕೆಯಲ್ಲಿ ಸೆಲೆಕ್ಟ್ ಮಾಡಿ.
8. ನಿಮ್ಮ ಟ್ರಿಪ್ ಅಂತ್ಯಗೊಂಡ ನಂತರ ನಿಮಗೆ ಇಪೇಲೇಟರ್ ಆಪ್ ಮೂಲಕ ಒಟ್ಟಾರೆ ಮೊತ್ತದ ನೋಟಿಫಿಕೇಷನ್ ಲಭ್ಯವಾಗುತ್ತದೆ ಮತ್ತು ಅಮೌಂಟಿನ ವಿವರ ಇರುತ್ತದೆ.ಒಟಿಪಿಯನ್ನು ಎಂಟರ್ ಮಾಡಿ ಮತ್ತು ಇಪೇಲೇಟರ್ ಕ್ರೆಡಿಟ್ ಮೂಲಕ ಮೂಲಕ ಹಣವು ಡಿಡಕ್ಟ್ ಆಗುತ್ತದೆ.
9. ನಿಮ್ಮ ಎಲ್ಲಾ ಊಬರ್ ರೈಡ್ ನ ಡ್ಯೂಗಳ ಮೊತ್ತವು ಇಪೇಲೇಟರ್ ಆಪ್ ನಲ್ಲಿರುತ್ತದೆ. ಮುಂದಿನ 14 ದಿನಗಳ ವರೆಗೆ ಯಾವುದೇ ಚಾರ್ಜ್ ಇಲ್ಲದೆಯೂ ಕೂಡ ಈ ಹಣವನ್ನು ಪಾವತಿ ಮಾಡುವುದಕ್ಕೆ ಅವಕಾಶವಿರುತ್ತದೆ.
ನಿಮ್ಮ ಊಬರ್ ರೈಡ್ ನ್ನು ಬುಕ್ ಮಾಡಿ ಮತ್ತು ನಂತರದ ದಿನಗಳಲ್ಲಿ ಪಾವತಿಸಿ
ಪೇ ಲೇಟರ್ ಆಯ್ಕೆ ಕೇವಲ ಹಣ ಕಡಿಮೆಯಾಗಿದೆ ಅಥವಾ ಇಲ್ಲ ಅನ್ನೋ ಕಾರಣಕ್ಕಾಗಿ ಮಾತ್ರವಲ್ಲ. ಇದು ಆರಾಮದಾಯಕ ಪ್ರಯಾಣಕ್ಕಾಗಿಯೂ ಹೌದು.ಪ್ರತಿಯೊಬ್ಬರೂ ಕೂಡ ಪಾವತಿ ವಿಷಯದಲ್ಲಿ ತೊಂದರೆ ಇಲ್ಲದ ಅನುಭವವನ್ನು ಪಡೆಯುವುದಕ್ಕೆ ಇಚ್ಛಿಸುತ್ತಾರೆ. ಅದರಲ್ಲೂ ಊಬರ್ ನ್ನು ಪ್ರತಿದಿನ ಬಳಕೆ ಮಾಡುವವರಿಗೆ ಇದು ಅನುಕೂಲಕರವಾಗಿರುತ್ತದೆ.
ಇಪೇಲೇಟರ್ ನ ಬಹಳ ಮುಖ್ಯ ಭಾಗವಾಗಿರುವುದೇನೆಂದರೆ ನಿಮ್ಮ ಎಲ್ಲಾ ಊಬರ್ ಪ್ರಯಾಣವನ್ನು ಒಟ್ಟಿಗೆ ಪಾವತಿ ಮಾಡುವುದಕ್ಕೆ ಅವಕಾಶವಿರುವುದು. ತಿಂಗಳ ಬಜೆಟ್ ರೂಪಿಸಿಕೊಳ್ಳುವವರಿಗೆ ಇದು ಬಹಳ ಪ್ರಯೋಜನಕಾರಿಯಾಗಿರುತ್ತದೆ. ಪ್ರತಿ ದಿನ ಹಲವು ಟ್ಯಾಪ್ ಗಳಲ್ಲಿ ಪಾವತಿ ಮಾಡುವ ಬದಲು ಕೆಲವೇ ಟ್ಯಾಪ್ ನಲ್ಲಿ ಹಲವು ಪ್ರಯಾಣದ ಪಾವತಿಯನ್ನು ಮುಗಿಸುವುದಕ್ಕೆ ಅವಕಾಶ ನೀಡುತ್ತದೆ. ನೀವು ಕೂಡ ಪೇಲೇಟರ್ ಆಯ್ಕೆಯನ್ನು ಬಳಸುತ್ತಿದ್ದೀರಾ? ನಿಮಗೆ ಏನನ್ನಿಸುತ್ತಿದೆ ಎಂಬುದನ್ನು ಮರೆಯದೆ ಕಮೆಂಟ್ ಮಾಡಿ ತಿಳಿಸಿ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090