ಇನ್‌ಸ್ಟಾಗ್ರಾಂಗೆ ಬಂತು ಹೊಸ ವಿಡಿಯೋ ಎಫೆಕ್ಟ್ಸ್‌..! ಬಳಸೋದು ಹೇಗೆ..?

By Gizbot Bureau
|

ಬಳಕೆದಾರರನ್ನು ಆಕರ್ಷಿಸಲು ಫೇಸ್‌ಬುಕ್‌ ಒಡೆತನದ ಇನ್‌ಸ್ಟಾಗ್ರಾಂ ಆಪ್‌ ಹೊಸ ಫೀಚರ್‌ಗಳನ್ನು ಸೇರಿಸಿದೆ. ಟಿಕ್‌ಟಾಕ್‌ನಲ್ಲಿ ಹೆಚ್ಚಿನ ಲೈಕ್ಸ್‌ ಪಡೆಯಲು ಈ ಫೀಚರ್‌ಗಳು ನೆರವಾಗುತ್ತವೆ. ವಿಡಿಯೋ-ಶೇರಿಂಗ್‌ ಸೋಷಿಯಲ್‌ ಮೀಡಿಯಾ ಆಪ್‌ ಆಗಿರುವ ಇನ್‌ಸ್ಟಾಗ್ರಾಮ್‌ನಲ್ಲಿ ಬೂಮ್‌ರಾಂಗ್‌ಗಾಗಿ ಸ್ಲೊ-ಮೊ, ಎಕೋ ಮತ್ತು ಡ್ಯುಯೋ ಎಫೆಕ್ಟ್ಸ್‌ಗಳನ್ನು ತರಲಾಗಿದೆ. ಇದರ ಜೊತೆ ಅಗತ್ಯಕ್ಕನುಗುಣವಾಗಿ ರೆಕಾರ್ಡ್ ಮಾಡಿದ ಬೂಮ್‌ರಾಂಗ್ ಕ್ಲಿಪ್ ಟ್ರಿಮ್ ಮಾಡುವ ವೈಶಿಷ್ಟ್ಯ ಕೂ ಬಳಕೆದಾರರಿಗೆ ದೊರೆಯುತ್ತಿದೆ.

ಸ್ಲೊ-ಮೊ ಎಫೆಕ್ಟ್‌

ಸ್ಲೊ-ಮೊ ಎಫೆಕ್ಟ್‌ ಹೆಸರೇ ಹೇಳುವಂತೆ ಬೂಮ್‌ರಾಂಗ್ ವಿಡಿಯೋವನ್ನು ನಿಧಾನಗೊಳಿಸುತ್ತದೆ. ಎಕೋ ಎಫೆಕ್ಟ್‌ ವಿಡಿಯೋವನ್ನು ಮಸುಕಾಗಿಸುತ್ತದೆ. ಇನ್ನು, ಡ್ಯುಯೋ ಎಫೆಕ್ಟ್‌ಗೆ ಬಂದರೆ ಲಂಭ ರೇಖೆಗಳೊಂದಿಗೆ ಗ್ಲಿಚ್‌ನ್ನು ವಿಡಿಯೋಗೆ ಸೇರಿಸಿ, ವಿಡಿಯೋದ ವೇಗವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸುತ್ತದೆ.

ಇನ್‌ಸ್ಟಾಗ್ರಾಂನಲ್ಲಿ ಹೊಸ ಎಫೆಕ್ಟ್‌ಗಳ ಬಳಕೆ ಹೇಗೆ..?

ಇನ್‌ಸ್ಟಾಗ್ರಾಂನಲ್ಲಿ ಹೊಸ ಎಫೆಕ್ಟ್‌ಗಳ ಬಳಕೆ ಹೇಗೆ..?

1. ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಗ್ರಾಂ ಅಪ್ಲಿಕೇಶನ್ ತೆರೆಯಿರಿ ಮತ್ತು ಆಪ್‌ನ ಮೇಲಿನ ಎಡ ಮೂಲೆಯಿಂದ ನಿಮ್ಮ ಪ್ರೊಫೈಲ್ ಐಕಾನ್‌ನಲ್ಲಿ ದೀರ್ಘಕಾಲ ಒತ್ತಿರಿ.

2. ಈಗ, ಎಡಕ್ಕೆ ಸ್ವೈಪ್ ಮಾಡಿ ಮತ್ತು ಬೂಮ್‌ರಾಂಗ್ ಮೋಡ್ ಆಯ್ಕೆಮಾಡಿ.

3. ಬೂಮ್‌ರಾಂಗ್ ವಿಡಿಯೋ ರೆಕಾರ್ಡ್ ಮಾಡಿ ಮತ್ತು ನಂತರ ಮೇಲಿನ ಬಲ ಮೂಲೆಯಿಂದ 'ಇನ್ಫಿನಿಟಿ' ಲೋಗೋ ಟ್ಯಾಪ್ ಮಾಡಿ.

4. ಇಲ್ಲಿ, ನೀವು ಬಯಸಿದ ಎಫೆಕ್ಟ್‌ ಆಯ್ಕೆ ಮಾಡಿ.

5. ನಂತರ, ರೆಕಾರ್ಡ್ ಮಾಡಿದ ವಿಡಿಯೋವನ್ನು ಹೊಸ ಎಫೆಕ್ಟ್‌ನೊಂದಿಗೆ ಪೋಸ್ಟ್ ಮಾಡಲು 'ಸೆಂಡ್‌' ಬಟನ್ ಟ್ಯಾಪ್ ಮಾಡಿ.

ಇನ್‌ಸ್ಟಾಗ್ರಾಂ‌

ನೀವು ಮೇಲಿನ ಹಂತಗಳನ್ನು ಮುಗಿಸಿದ ನಂತರ, ಇನ್‌ಸ್ಟಾಗ್ರಾಂ‌ನಲ್ಲಿನ ಯಾವುದೇ ಸ್ಟೋರಿ ಪೋಸ್ಟ್‌ನಂತೆ ಎಲ್ಲಾ ಸಾಮಾನ್ಯ ಎಫೆಕ್ಟ್‌ಗಳು, ಎಮೋಜಿಗಳು ಮತ್ತು ಸ್ಟ್ಯಾಂಪ್‌ಗಳನ್ನು ಸೇರಿಸಬಹುದು.

Most Read Articles
Best Mobiles in India

English summary
How To Use Slo-Mo, Duo Boomerang, And Echo Feature On Instagram

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X