ನಿಮ್ಮ ಆಧಾರ್‌ ಕಾರ್ಡ್‌ ಚಾಲ್ತಿ ಇದೆಯಾ?..ಯಾವುದಕ್ಕೂ ಒಮ್ಮೆ ಪರಿಶೀಲಿಸಿ!

|

ಆಧಾರ್ (AADHAAR) ಎಲ್ಲಾ ಭಾರತೀಯ ನಾಗರಿಕರಿಗೆ UIDAI ನೀಡಿದ 12 ಅಂಕಿಯ ಗುರುತಿನ ಸಂಖ್ಯೆಯಾಗಿದೆ. ಆಧಾರ್ ವ್ಯವಸ್ಥೆಯು ಭಾರತೀಯ ಸರ್ಕಾರದಿಂದ ನಡೆಸಲ್ಪಡುವ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಗಿದೆ. ದೇಶದಲ್ಲಿ ಪ್ರತಿ ನಾಗರೀಕರಿಗೂ ಆಧಾರ್ ಕಾರ್ಡ್ ಅತ್ಯಂತ ಮಹತ್ತರ ದಾಖಲೆಯಾಗಿದೆ, ಏಕೆಂದರೆ ಇದು ಗುರುತಿನ, ವಿಳಾಸ ಮತ್ತು ವಯಸ್ಸಿನ ಪುರಾವೆಯಾಗಿ ಕಾರ್ಯ ನಿರ್ವಹಿಸುತ್ತದೆ. ಅನೇಕ ಸಂದರ್ಭಗಳಲ್ಲಿ, ಸರ್ಕಾರಿ ಸೇವೆಗಳನ್ನು ಪಡೆಯಲು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ.

ಕಾರ್ಯನಿರ್ವಹಿಸುತ್ತಿದೆ

ಆಧಾರ್ ಕಾರ್ಡ್‌ನ ದುರ್ಬಳಕೆಯನ್ನು ತಡೆಯಲು ಮತ್ತು ತಪ್ಪಾಗಿ ರಚಿಸಲಾದ ಆಧಾರ್ ಕಾರ್ಡ್ ಅನ್ನು ತೆಗೆದುಹಾಕಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIADI) ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಇತ್ತೀಚಿಗಷ್ಟೆ ದೇಶದಲ್ಲಿ ಸುಮಾರು 6,00,000 ಕ್ಕೂ ಹೆಚ್ಚಿನ ನಕಲಿ ಆಧಾರ್ ಕಾರ್ಡ್‌ಗಳನ್ನು ರದ್ದು ಮಾಡಿದೆ. ಇನ್ನು ಜನರು ತಮ್ಮ ಆಧಾರ್ ಕಾರ್ಡ್‌ನ ಅಸ್ತಿತ್ವವನ್ನು ಪರಿಶೀಲಿಸಬಹುದಾಗಿದೆ. ಈ ಪ್ರಕ್ರಿಯೆಯನ್ನು ಆಧಾರ್ ಪರಿಶೀಲನೆ ಎಂದು ಹೇಳಲಾಗುತ್ತದೆ.

ಆಧಾರ್ ಕಾರ್ಡ್‌ ಪರಿಶೀಲನೆ ಏಕೆ ಮಾಡಬೇಕು?

ಆಧಾರ್ ಕಾರ್ಡ್‌ ಪರಿಶೀಲನೆ ಏಕೆ ಮಾಡಬೇಕು?

ನಿಮ್ಮ ಆಧಾರ್ ಕಾರ್ಡ್‌ನ ಅಸ್ತಿತ್ವವನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಆಧಾರ್ ಪರಿಶೀಲನೆ ಎಂದು ಕರೆಯಲಾಗುತ್ತದೆ. ನಿಮ್ಮ ಗುರುತನ್ನು ದೃಢೀಕರಿಸಲು ನಿಮ್ಮ 12 ಅಂಕಿಯ ಅನನ್ಯ ಆಧಾರ್ ಸಂಖ್ಯೆಯನ್ನು ಬಳಸಬಹುದು. ಅಧಿಕೃತ UIDAI ವೆಬ್‌ಸೈಟ್ ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು ಅವಕಾಶ ಮಾಡಿಕೊಟ್ಟಿದೆ. ಆಧಾರ್ ಹೊಂದಿರುವ ಬಳಕೆದಾರರು ತಮ್ಮ ಆಧಾರ್ ಅನ್ನು ಪರಿಶೀಲಿಸಬಹುದು ಮತ್ತು ಪುರಾವೆಯಾಗಿ ಸಲ್ಲಿಸುವ ಮೊದಲು ವಿವರಗಳನ್ನು ದೃಢೀಕರಿಸಬಹುದು.

ಹಣಕಾಸಿನ

ಹಾಗೆಯೇ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸುವ ಮೂಲಕ ಇತರರ ಆಧಾರ್ ಕಾರ್ಡ್‌ ಚಾಲ್ತಿ ಇದೆಯಾ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು. ತೆರಿಗೆಗಳನ್ನು ಸಲ್ಲಿಸಲು, ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಮತ್ತು ಯಾವುದೇ ಇತರ ಹಣಕಾಸಿನ ವಹಿವಾಟುಗಳನ್ನು ನಿರ್ವಹಿಸಲು ನಿಮ್ಮ ಪರಿಶೀಲಿಸಿದ ಆಧಾರ್ ಕಾರ್ಡ್ ಅನ್ನು ನೀವು ಬಳಕೆ ಮಾಡಬಹುದಾಗಿದೆ. ಹಾಗಾದರೇ ಆಧಾರ್ ಕಾರ್ಡ್ ಸಕ್ರಿಯವಾಗಿದೆಯಾ ಅಥವಾ ಇಲ್ಲವೇ ಎಂಬುದನ್ನು ಆನ್‌ಲೈನ್‌ ಮೂಲಕ ಹೇಗೆ ಪರಿಶೀಲಿಸುವುದು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಆಧಾರ್ ಪರಿಶೀಲಿಸಲು ಈ ಕ್ರಮ ಅನುಸರಿಸಿ:

ಆಧಾರ್ ಪರಿಶೀಲಿಸಲು ಈ ಕ್ರಮ ಅನುಸರಿಸಿ:

ಹಂತ 1: ಅಧಿಕೃತ UIDAI ವೆಬ್‌ಸೈಟ್‌ಗೆ ಭೇಟಿ ನೀಡಿ https://uidai.gov.in/
ಹಂತ 2: ನನ್ನ ಆಧಾರ್ ಅಡಿಯಲ್ಲಿ, ಆಧಾರ್ ಸೇವೆಗಳಿಂದ 'ಆಧಾರ್ ಸಂಖ್ಯೆಯನ್ನು ಪರಿಶೀಲಿಸಿ' ಕ್ಲಿಕ್ ಮಾಡಿ. ಅಥವಾ ನೇರ ಲಿಂಕ್ ಅನ್ನು ಕ್ಲಿಕ್ ಮಾಡಿ- https://myaadhaar.uidai.gov.in/verifyAadhaar
ಹಂತ 3: 'ಕ್ಯಾಪ್ಚಾ' ಕೋಡ್ ಜೊತೆಗೆ ನೀವು ಪರಿಶೀಲಿಸಲು ಬಯಸುವ ಆಧಾರ್ ಸಂಖ್ಯೆಯನ್ನು ನಮೂದಿಸಿ.
ಹಂತ 4: 'ಮುಂದುವರಿಯಿರಿ ಮತ್ತು ಆಧಾರ್ ಅನ್ನು ಪರಿಶೀಲಿಸಿ' ಕ್ಲಿಕ್ ಮಾಡಿ
ಮುಂದಿನ ಪುಟವು ವಯಸ್ಸಿನ ಪಟ್ಟಿ, ಲಿಂಗ, ರಾಜ್ಯ..ಮುಂತಾದ ವಿವರಗಳೊಂದಿಗೆ 'ಆಧಾರ್ ಪರಿಶೀಲನೆ ಪೂರ್ಣಗೊಂಡಿದೆ' ಎಂಬುದನ್ನು ಪ್ರದರ್ಶಿಸುತ್ತದೆ.

ನಿಮ್ಮ ಆಧಾರ್ ಕಾರ್ಡ್‌ ರದ್ದಾಗಿದೆಯಾ?

ನಿಮ್ಮ ಆಧಾರ್ ಕಾರ್ಡ್‌ ರದ್ದಾಗಿದೆಯಾ?

UIDAI ನಕಲು ಆಧಾರ್ ಕಾರ್ಡ್‌ ಪರಿಶೀಲನೆ ಪ್ರಕ್ರಿಯೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಡೆಸುತ್ತಿದೆ ಮತ್ತು ಈಗ ಫೇಸ್‌ ಸಹ ಪರಿಶೀಲನೆ ಆಯ್ಕೆ ಆಗಿ ಅಳವಡಿಸಲಾಗಿದೆ. ನಿಮ್ಮ ಆಧಾರ್ ಕಾರ್ಡ್ ಅನ್ನು ಸುರಕ್ಷಿತವಾಗಿರಿಸುವುದು ಬಹಳ ಮುಖ್ಯ. ಅಲ್ಲದೆ ನಿಮ್ಮ ಆಧಾರ್ ಸಕ್ರಿಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ನೀವು ಪರಿಶೀಲಿಸಬೇಕು. ಹೀಗಾಗಿ ಕಾಲಕಾಲಕ್ಕೆ ಆಧಾರ್ ಪರಿಶೀಲುಸುವುದು ಉತ್ತಮ.

ದಾಖಲೆಗಳನ್ನು

ಹಲವಾರು ಪ್ರಯತ್ನಗಳ ಹೊರತಾಗಿಯೂ, ನಿಮ್ಮ ಆಧಾರ್ ಸಂಖ್ಯೆಯನ್ನು ಪರಿಶೀಲಿಸಲು ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ಆಧಾರ್ ಸಂಖ್ಯೆ ಅಸ್ತಿತ್ವದಲ್ಲಿಲ್ಲ ಎಂದು ವೆಬ್‌ಸೈಟ್ ಪ್ರದರ್ಶಿಸುತ್ತದೆ. ಆ ಸಂದರ್ಭದಲ್ಲಿ, ನೀವು ಹತ್ತಿರದ ದಾಖಲಾತಿ ಕೇಂದ್ರಕ್ಕೆ ನಿಮ್ಮ ಪೋಷಕ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ನಿಮ್ಮ ಬಯೋಮೆಟ್ರಿಕ್‌ಗಳನ್ನು ಮರು-ಪರಿಶೀಲಿಸುವ ಮತ್ತು UIDAI ಡೇಟಾಬೇಸ್‌ಗೆ ಸೇರಿಸುವ ಸಾಧ್ಯತೆಯಿದೆ. ಆಧಾರ್ ಡೇಟಾಬೇಸ್‌ನಲ್ಲಿ ನಿಮ್ಮ ಬಯೋಮೆಟ್ರಿಕ್ಸ್ ಮತ್ತು ಮಾಹಿತಿಯನ್ನು ನವೀಕರಿಸಲು ಬಳಕೆದಾರರಿಗೆ 25 ರೂ ಮತ್ತು 18% GST ವೆಚ್ಚವಾಗುತ್ತದೆ.

ಏನಿದು ಆಧಾರ್ PVC ಕಾರ್ಡ್?

ಏನಿದು ಆಧಾರ್ PVC ಕಾರ್ಡ್?

ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಕಾರ್ಡ್ ರೂಪದಲ್ಲಿ UIDAI ಆಧಾರ್ ಕಾರ್ಡುದಾರರಿಗೆ ಹೊಸ ಸೇವೆಯನ್ನು ಪ್ರಾರಂಭಿಸಿದೆ. ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್‌ನಂತೆಯೇ, ನಿಮ್ಮ ಪರ್ಸ್‌ನಲ್ಲಿ ಪಿವಿಸಿ ಆಧಾರ್ ಕಾರ್ಡ್ ಅನ್ನು ಇಟ್ಟುಕೊಳ್ಳಲು ಸಹಾಯವಾಗುತ್ತದೆ. ಈ ಆಧಾರ್ ಕಾರ್ಡ್ ಡಿಜಿಟಲ್ ಸಹಿ ಮಾಡಿದ ಸುರಕ್ಷಿತ ಕ್ಯೂಆರ್ ಕೋಡ್, ಹೊಲೊಗ್ರಾಮ್, ಘೋಸ್ಟ್ ಇಮೇಜ್, ಗಿಲ್ಲೋಚೆ ಪ್ಯಾಟರ್ನ್ ಇತ್ಯಾದಿ ಭದ್ರತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

ಆಧಾರ್ ಪಿವಿಸಿ ಕಾರ್ಡ್ ಬೆಲೆ ಎಷ್ಟು?

ಆಧಾರ್ ಪಿವಿಸಿ ಕಾರ್ಡ್ ಬೆಲೆ ಎಷ್ಟು?

ಬಳಕೆದಾರರು uidai.gov.in ಅಥವಾ Resident.uidai.gov.in ಮೂಲಕ ಆನ್‌ಲೈನ್‌ನಲ್ಲಿ ಆಧಾರ್ ಸಂಖ್ಯೆ, ವರ್ಚುವಲ್ ಐಡಿ ಅಥವಾ ದಾಖಲಾತಿ ಐಡಿ ಬಳಸಿ ಆಧಾರ್ ಪಿವಿಸಿ ಕಾರ್ಡ್ ಆರ್ಡರ್ ಮಾಡಬಹುದು. ಆಧಾರ್ ಪಿವಿಸಿ ಕಾರ್ಡ್ ಗಾಗಿ 50 ರೂ. ಶುಲ್ಕವನ್ನು ಪಾವತಿಸಿಬೇಕು.

ಆಧಾರ್ ಪಿವಿಸಿ ಕಾರ್ಡ್ ಪಡೆಯಲು ಈ ಕ್ರಮಗಳನ್ನು ಅನುಸರಿಸಿ:

ಆಧಾರ್ ಪಿವಿಸಿ ಕಾರ್ಡ್ ಪಡೆಯಲು ಈ ಕ್ರಮಗಳನ್ನು ಅನುಸರಿಸಿ:

ಹಂತ 1: UIDAI ಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ - uidai.gov.in
ಹಂತ 2: ಆರ್ಡರ್ ಪಿವಿಸಿ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಂತ 3: ಆಧಾರ್ ಕಾರ್ಡ್ ಆದೇಶಿಸಲು ನಿಮ್ಮ ಆಧಾರ್ ಸಂಖ್ಯೆ ಅಥವಾ ವರ್ಚುವಲ್ ಗುರುತಿನ ಸಂಖ್ಯೆ ಅಥವಾ ಇಐಡಿ ನಮೂದಿಸಿ
ಹಂತ 4: ಸೆಂಡ್ ಒಟಿಪಿ ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 5: ನೋಂದಾಯಿತ ಮೊಬೈಲ್ ಬಳಕೆಯಲ್ಲಿ ಮಾತ್ರ ಆಧಾರ್ ಪೂರ್ವವೀಕ್ಷಣೆ ಲಭ್ಯವಿದೆ. ನೋಂದಾಯಿಸದ ಮೊಬೈಲ್ ಆಧಾರಿತ ಆದೇಶಕ್ಕಾಗಿ ಆಧಾರ್ ಕಾರ್ಡ್ ವಿವರಗಳ ಪೂರ್ವವೀಕ್ಷಣೆ ಲಭ್ಯವಿಲ್ಲ.
ಹಂತ 6: ಟೈಮ್ ಬೇಸ್ಡ್ ಒನ್ ಟೈಮ್ ಪಾಸ್‌ವರ್ಡ್‌ ಅನ್ನು M-ಆಧಾರ್ ಅಪ್ಲಿಕೇಶನ್ ಮೂಲಕವೂ ಬಳಸಬಹುದು.

Best Mobiles in India

English summary
How to Verify Your Aadhaar? Follow These Simple Steps.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X