ಯೂಟ್ಯೂಬ್‌ನಲ್ಲಿ ವೀಡಿಯೊ ಬಫರಿಂಗ್‌ ಆಗದೆ ನೋಡುವುದು ಹೇಗೆ?

By Suneel
|

3G, 4G ಇಂಟರ್ನೆಟ್‌ ನೆಟ್‌ವರ್ಕ್‌ ಇದ್ರು ಸಹ ಯೂಟ್ಯೂಬ್‌ನಲ್ಲಿ ಮಾತ್ರ ವೀಡಿಯೋ ಸ್ಪೀಡ್‌ ಆಗಿ ನೋಡಲು ಆಗಲ್ಲ. ವೀಡಿಯೋ 1 ನಿಮಿಷ ಬರುತ್ತೆ 2 ನಿಮಿಷ ಬಫರ್‌ ತಗಳುತ್ತೆ. ಯೂಟ್ಯೂಬ್‌ನಲ್ಲಿ ವೀಡಿಯೋ ನೋಡೋಕೆ ಬೇಜಾರು. ಇಂತಹ ಬೇಸರ 4G ಇಂಟರ್ನೆಟ್‌ ವೇಗ ಇರುವವರಿಗೂ ಸಹ ಇದೆ.

ಯೂಟ್ಯೂಬ್‌ನಲ್ಲಿ ವೀಡಿಯೋ ನೋಡುವಾಗ ಬಫರಿಂಗ್‌ ಸಮಸ್ಯೆ ಎಲ್ಲಾ ಸ್ಮಾರ್ಟ್‌ಫೋನ್‌ ಬಳಕೆದಾರರಿಗೂ ಸಹ ಇದ್ದದ್ದೇ. ಆದ್ದರಿಂದ ಇಂದಿನ ಲೇಖನದಲ್ಲಿ ಯೂಟ್ಯೂಬ್‌ ಪ್ರಿಯರಿಗೆ ಬಫರಿಂಗ್‌ ಆಗದೇ ನೇರವಾಗಿ ವೇಗದಲ್ಲಿ ವೀಡಿಯೋ ನೋಡುವುದು ಹೇಗೆ ಎಂಬುದನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗೆ ನೀಡುತ್ತಿದೆ.

ಇಂಟರ್ನೆಟ್ ವೇಗಕ್ಕಾಗಿ 'ಫಿಲ್ಟರ್‌' ಡಿವೈಸ್‌ ಅಭಿವೃದ್ದಿ

ಹಂತ 1

ಹಂತ 1

ಪ್ರಥಮವಾಗಿ ನೀವು ನಿಮ್ಮ ಗೂಗಲ್‌ ಕ್ರೋಮ ಅಥವಾ ಮೊಜಿಲ್ಲಾ ಫೈಯರ್‌ಫಾಕ್ಸ್‌ಗೆ "SmartVideo for YouTube" ವಿಸ್ತರಣೆಯನ್ನು ಡೌನ್‌ಲೊಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ. ಇನ್‌ಸಾಲ್‌ ಮಾಡಲು ಲಿಂಕ್‌ ಅನ್ನು ಕೊನೆಯ ಸ್ಲೈಡರ್‌ನಲ್ಲಿ ನೀಡಲಾಗಿದೆ. ಅದನ್ನು ಕ್ಲಿಕ್‌ ಮಾಡಿದಾಗ ನಿಮಗೆ ಚಿತ್ರದಲ್ಲಿರುವಂತೆ ವೆಬ್‌ ಪೇಜ್‌ ಓಪನ್ ಆಗುತ್ತದೆ. ವೆಬ್‌ಪೇಜ್‌ನಲ್ಲಿ ಹಸಿರು ಬಟನ್‌ನಲ್ಲಿ ಕಾಣುವ ADDED TO CHROME ಎಂಬಲ್ಲಿ ಕ್ಲಿಕ್‌ ಮಾಡಿ.

ಹಂತ 2

ಹಂತ 2

"SmartVideo for YouTube" ಇನ್‌ಸ್ಟಾಲ್‌ ಮಾಡಿದ ನಂತರ ಯೂಟ್ಯೂಬ್‌ನಲ್ಲಿ ಯಾವುದಾದರೂ ಒಂದು ವೀಡಿಯೋವನ್ನು ಪ್ಲೇ ಮಾಡಿ. ವೀಡಿಯೋ ಪ್ಲೇ ಮಾಡಿದ ನಂತರ ವೀಡಿಯೋ ಕೆಳಗೆ ಕೆಲವು ಹೊಸ ಆಯ್ಕೆಗಳು ಕಾಣುತ್ತದೆ. ಮೌಸ್‌ ಅನ್ನು ನಿಮ್ಮ ಯೂಟ್ಯೂಬ್‌ ವೀಡಿಯೋ ಮೇಲಿಂದ ಕೆಳಗೆ ಇಳಿಸಿದಾಗ ಆಯ್ಕೆಗಳ ಬಾಕ್ಸ್‌ ಬರುತ್ತದೆ.

ಹಂತ 3

ಹಂತ 3

ಈ ಹಂತದಲ್ಲಿ ಬಲಭಾಗದಲ್ಲಿ Global Prefereces ಎಂಬಲ್ಲಿ ಕ್ಲಿಕ್ ಮಾಡಿ. ನಂತರ Smart Buffer ಎಂಬ ಆಯ್ಕೆ ಕಾಣುತ್ತದೆ. ಅದನ್ನು ರೈಟ್‌ ಮಾರ್ಕ್‌ ಮಾಡಿ.

ಹಂತ 4

ಹಂತ 4

ಈಗ ನೀವು ಬಳಸುವ ಯೂಟ್ಯೂಬ್‌ ವೀಡಿಯೋಗಳ ಬಫರ್‌ ಅತಿವೇಗಗೊಳ್ಳುತ್ತದೆ. ಯೂಟ್ಯೂಬ್‌ ಸ್ಟ್ರೀಮಿಂಗ್ ಅತಿವೇಗವಾಗಿ ನೀವು ವೀಡಿಯೋವನ್ನು ಬಫರ್‌ ಇಲ್ಲದಂತೆ ವೇಗವಾಗಿ ನೋಡಬಹುದಾಗಿದೆ.

SmartVideo for YouTube ವಿಸ್ತರಣೆಗಾಗಿ ಲಿಂಕ್‌

SmartVideo for YouTube ವಿಸ್ತರಣೆಗಾಗಿ ಲಿಂಕ್‌

* ಗೂಗಲ್‌ ಕ್ರೋಮ್‌ ಬಳಸುವವರು SmartVideo for YouTube ವಿಸ್ತರಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ
* ಮೊಜಿಲ್ಲಾ ಫೈಯರ್‌ಫಾಕ್ಸ್‌ ಬಳಸುವವರು SmartVideo for YouTube ವಿಸ್ತರಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ

Best Mobiles in India

Read more about:
English summary
How To Watch Videos faster without buffering in Youtube. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X