Subscribe to Gizbot

ಇಂಟರ್ನೆಟ್ ವೇಗಕ್ಕಾಗಿ 'ಫಿಲ್ಟರ್‌' ಡಿವೈಸ್‌ ಅಭಿವೃದ್ದಿ

Written By:

ಜಗತ್ತಿನಾದ್ಯಂತ ಎಲ್ಲರೂ ಸಹ ಅತಿವೇಗದ ಇಂಟರ್ನೆಟ್‌ಗಾಗಿ ಹಂಬಲಿಸುವುದು ಗೊತ್ತೇ ಇದೇ. ಈ ಸಮಸ್ಯೆಯನ್ನರಿತ ಟೆಕ್‌ ಸಂಶೋಧಕರು ಎಂದಿಗೂ ಸುಮ್ಮನೆ ಕುಳಿತುಕೊಳ್ಳುವುದಿಲ್ಲಾ. ಈಗಾಗಲೇ 4G ಇಂಟರ್ನೆಟ್‌ ಬಳಸುತ್ತಿರುವ ಜನರು 5G ಬಗ್ಗೆ ಈಗಾಗಲೇ ಪೀಠಿಕೆ ಮಾಹಿತಿಯನ್ನು ಕೇಳಿದ್ದೀರಿ. ಆದರೆ ಕೆನಡಾದ ಟೆಕ್‌ ಸಂಶೋಧಕರು 5G ಇಂಟರ್ನೆಟ್ ಸಹ ಹೊರತು ಪಡಿಸಿ ಇಂಟರ್ನೆಟ್‌ ವೇಗಕ್ಕಾಗಿ ಇಂಟರ್ನೆಟ್‌ 'ಫಿಲ್ಟರ್‌' ಎಂಬ ಡಿವೈಸ್ ಅಭಿವೃದ್ದಿ ಪಡಿಸಿದ್ದಾರೆ.

ಓದಿರಿ:ಬಫರಿಂಗ್‌ ಆಗದೆ ಯೂಟ್ಯೂಬ್‌ನಲ್ಲಿ ವೀಡಿಯೋ ನೋಡುವುದು ಹೇಗೆ?

'ಫಿಲ್ಟರ್' ಇಂಟರ್ನೆಟ್‌ ವೇಗವನ್ನು ಹೆಚ್ಚು ಸ್ಮಾರ್ಟ್‌ ಮಾಡಲಿದ್ದು ಎಲ್ಲಾ ರೀತಿಯ ಸಿಸ್ಟಮ್‌ಗಳಿಗೆ ಲಭ್ಯವಾಗಲಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ತಿಳಿಯಲು ಗಿಜ್‌ಬಾಟ್‌ನ ಇಂದಿನ ಲೇಖನ ಓದಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ಯೂನೇಬಲ್‌ ಫಿಲ್ಟರ್‌

ಟ್ಯೂನೇಬಲ್‌ ಫಿಲ್ಟರ್‌

ಕೆನಡಾದ ಸಂಶೋಧಕ ತಂಡವು ಕಡಿಮೆ ವೆಚ್ಚದ ಟ್ಯೂನೇಬಲ್ ಫಿಲ್ಟರ್‌ ಎಂಬ ಇಂಟರ್ನೆಟ್‌ ವೇಗಗೊಳಿಸಬಲ್ಲ ಡಿವೈಸ್ ವಿನ್ಯಾಸಗೊಳಿಸಿದ್ದಾರೆ.

ಉತ್ತಮ ಸಿಸ್ಟಮ್‌ಗಳಿಗೆ ಲಭ್ಯ

ಉತ್ತಮ ಸಿಸ್ಟಮ್‌ಗಳಿಗೆ ಲಭ್ಯ

ಈ ಡಿವೈಸ್‌ ಕಾರ್ಯ ವೈಖರಿ ಗಾತ್ರ ಮತ್ತು ಬೆಲೆಯಲ್ಲಿ ವ್ಯತ್ಯಾಸಗಳನ್ನು ಹೊಂದಿದ್ದು ಉತ್ತಮ ಸಿಸ್ಟಮ್‌ಗಳಿಗೆ ಲಭ್ಯ.

ಇಂಟರ್ನೆಟ್‌ ಟ್ಯೂನಿಂಗ್ ವ್ಯವಸ್ಥೆ

ಇಂಟರ್ನೆಟ್‌ ಟ್ಯೂನಿಂಗ್ ವ್ಯವಸ್ಥೆ

ಫಿಲ್ಟರ್‌ ಟ್ಯೂನಿಂಗ್ ವ್ಯವಸ್ಥೆಯು ಇಂಟರ್ನೆಟ್‌ ವೇಗಗೊಳಿಸಲು ಸಿಲಿಕಾನ್‌ ಚಿಪ್‌ ಆಧಾರ ಹೊಂದಿದೆ.

ಎಲ್ಲಾ ತರಂಗಾಂತರಗಳಲ್ಲೂ ಇಂಟರ್ನೆಟ್‌ ಸಂಪರ್ಕ

ಎಲ್ಲಾ ತರಂಗಾಂತರಗಳಲ್ಲೂ ಇಂಟರ್ನೆಟ್‌ ಸಂಪರ್ಕ

ಫಿಲ್ಟರ್‌ ಡಿವೈಸ್‌ ಯಾವುದೇ ಶ್ರೇಣಿಯ ತರಂಗಾಂತಗಳ ಆಧಾರದಲ್ಲಿ ಉಚಿತವಾಗಿ ಅಪರಿಮಿತ ಆವರ್ತನಗಳನ್ನು ಬಳಸಿ ಇಂಟರ್ನೆಟ್‌ ಸಂಪರ್ಕ ವೇಗಗೊಳಿಸುತ್ತದೆ.

ಇಂಟರ್ನೆಟ್ ವೇಗ

ಇಂಟರ್ನೆಟ್ ವೇಗ

ಇಂಟರ್ನೆಟ್‌ ವೇಗದಲ್ಲಿ ಪ್ರತಿ ಆಪ್ಟಿಕಲ್‌ ಘಟಕದ ಮೇಲೆ ಡಾಟಾ ಬಳಕೆಯ ಬೆಲೆ ನಿರ್ಧಾರವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಹೆಚ್ಚಿನ ಡಾಟಾ ಜಾಲಗಳು.

ಹೆಚ್ಚಿನ ಡಾಟಾ ಜಾಲಗಳು.

ಸಾಂಪ್ರದಾಯಿಕ ನೆಟ್‌ವರ್ಕ್‌ಗಳಿಗೆ ಹೋಲಿಸಿದರೆ ಈ ನೆಟ್‌ವರ್ಕ್‌ ಹೆಚ್ಚಿನ ಇಂಟರ್ನೆಟ್ ಡಾಟಾ ಜಾಲಗಳನ್ನು ಹೊಂದಿದೆ.

ಹಣ ಉಳಿಸುವ ಫಿಲ್ಟರ್ ಡಿವೈಸ್

ಹಣ ಉಳಿಸುವ ಫಿಲ್ಟರ್ ಡಿವೈಸ್

ಫಿಲ್ಟರ್ ಡಿವೈಸ್ ಅಧಿಕವಾಗಿ ಹಣವನ್ನು ಉಳಿಸುವುದಲ್ಲದೇ ಸಿಸ್ಟಮ್‌ಗಳ ಬ್ಯಾಟರಿ ಎನರ್ಜಿಯನ್ನು ಸೇವ್‌ ಮಾಡುತ್ತದೆ. ಕಾರಣ ಇದು ಫೋಟೋನಿಕ್‌ ಚಿಪ್‌ನಿಂದ ಸಂಯೋಜನೆಯಾಗಿದೆ.

ಫಿಲ್ಟರ್ ಡಿವೈಸ್ ಸಂಶೋಧನೆ

ಫಿಲ್ಟರ್ ಡಿವೈಸ್ ಸಂಶೋಧನೆ

ಫಿಲ್ಟರ್ ಡಿವೈಸ್ ಸಂಶೋಧನೆಯನ್ನು ಸಿಲಿಕಾನ್‌ ಫೋಟೋನಿಕ್ ಸಹಾಯದಿಂದ ಸಂಶೋಧಿಸಿರುವುದರಿಂದ ಈ ರೀತಿಯ ಸಾಧನೆ ಮಾಡಲಾಗಿದೆ ಎಂದು ಕೆನಡಾ ಲಾವಲ್‌ ಇನ್‌ ಕ್ವೆಬೆಕ್‌ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಪಕರು ಹೇಳಿದ್ದಾರೆ.

ಫಿಲ್ಟರ್ ಪರೀಕ್ಷೆ

ಫಿಲ್ಟರ್ ಪರೀಕ್ಷೆ

ಫಿಲ್ಟರ್ ಡಿವೈಸ್ ಅಭಿವೃದ್ದಿ ನಂತರ ಪರೀಕ್ಷೆಗೆ ಒಳಪಡಿಸಿದಾಗ 670 GHz ಸ್ಪ್ಯಾಮ್‌ ಟ್ಯೂನಿಂಗ್ ಹೊಂದಿದೆ. ಆದರೆ ಸಾಂಪ್ರದಾಯಿಕವಾಗಿರುವ ಇತರೆ ಸಿಲಿಕಾನ್‌ ಫಿಲ್ಟರ್‌ಗಳು ಕೇವಲ 100 GHz ಸ್ಪ್ಯಾಮ್‌ ಟ್ಯೂನ್‌ ಹೊಂದುತ್ತವೆ.

1 THz ಗೆ ಅಭಿವೃದ್ದಿ

1 THz ಗೆ ಅಭಿವೃದ್ದಿ

ಸಂಶೋಧಕರು ಸ್ಪಾಮ್ ಟ್ಯೂನಿಂಗ್ 1 THz ಗೆ ಅಭಿವೃದ್ದಿ ಪಡಿಸಲು ಯೋಜನೆ ರೂಪಿಸುವಲ್ಲಿ ನಂಬಿಕೆ ಹೊಂದಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Internet experience will faster by smart filter. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot