ವೆಬ್‌ಸೈಟ್‌ ಒಪನ್‌ ಆಗದಿದ್ದರೆ ಏನ್‌ ಮಾಡ್ತೀರಿ..? ಸಿಂಪಲ್‌ ಟಿಪ್ಸ್‌..!

By Gizbot Bureau
|

ವೆಬ್‌ ಬ್ರೌಸರ್‌ ಮುಂದೆ ಕುಳಿತಿದ್ದೇವೆ ಎಂದರೆ ಅದೆಷ್ಟು ಸೈಟ್‌ಗಳು ಒಂದೇ ಅವಧಿಯಲ್ಲಿ ಒಪನ್‌ ಆಗಿರುತ್ತಾವೋ ಗೊತ್ತಿಲ್ಲ. ಅದರಲ್ಲೂ ಅನಿಯಮಿತ ಅಂತರ್‌ಜಾಲ ಸಂಪರ್ಕವಿದ್ದರಂತೂ ಸೈಟ್‌ಗಳ ಸಂಖ್ಯೆ ಶತಕ ದಾಟಿದ್ರೂ ದಾಟಬಹುದು. ಆದರೂ, ಕೆಲವೊಂದು ವೆಬ್‌ಸೈಟ್‌ಗಳು ಒಪನ್‌ ಆಗುವುದಿಲ್ಲ. ಆ ವೆಬ್‌ಸೈಟ್‌ಗಳು ಒಪನ್‌ ಆಗದಿರುವುದಕ್ಕೆ ಹಲವು ಕಾರಣಗಳಿವೆ. ಸರ್ವರ್‌ ಸಮಸ್ಯೆ, ಅವಧಿ ಮುಗಿದ ಡೋಮೈನ್‌, ರಿಡೈರೆಕ್ಟ್‌ ಸಮಸ್ಯೆ, ಹಾಸ್ಟ್ ದೋಷ ಮುಂತಾದ ಅಂಶಗಳಿಂದ ಸೈಟ್‌ ಒಪನ್‌ ಆಗುವುದು ವಿಫಲವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಹೇಗೆ ಸಮಸ್ಯೆ ಬಗೆಹರಿಸಬೇಕು ಎಂಬುದಕ್ಕೆ ಸರಳ ಟಿಪ್ಸ್‌ ಇಲ್ಲಿದೆ.

ಸೈಟ್‌ನಲ್ಲಿನ ವಿಷಯದ ಸಮಸ್ಯೆ

ಸೈಟ್‌ನಲ್ಲಿನ ವಿಷಯದ ಸಮಸ್ಯೆ

ನೀವು ವೀಕ್ಷಿಸಲು ಬಯಸುತ್ತಿರುವ ವೆಬ್‌ಸೈಟ್‌ನಲ್ಲಿ ವಿಷಯದದ ಸಮಸ್ಯೆಗಳಿದ್ದರೆ ಆ ಸೈಟ್‌ ತೆರೆದುಕೊಳ್ಳುವುದಿಲ್ಲ. ಸೈಟ್‌ನಲ್ಲಿ ಅಶ್ಲೀಲ ಅಥವಾ ಕಾನೂನುಬಾಹಿರ ವಿಷಯಗಳನ್ನು ಪ್ರಸ್ತುತಪಡಿಸಿದ್ದರೆ ಸರ್ಕಾರ ಅಂತಹ ಸೈಟ್‌ಗಳನ್ನು ನಿರ್ಬಂಧಿಸಿರುತ್ತದೆ. ಪ್ರತಿವರ್ಷ ಬಹಳಷ್ಟು ವೆಬ್‌ಸೈಟ್‌ಗಳು ಈ ರೀತಿಯ ನಿರ್ಬಂಧವನ್ನು ಅನುಭವಿಸುತ್ತವೆ. ಈಗಿದ್ದರೂ ಬ್ಲಾಕ್‌ ಆದ ವೆಬ್‌ಸೈಟ್‌ಗಳನ್ನು ವೀಕ್ಷಿಸಲು ವಿಪಿಎನ್‌ ಬಳಸುವ ಕಾರ್ಯ ರೂಢಿಯಲ್ಲಿದ್ದು, ವಿಪಿಎನ್‌, ಪ್ರಾಕ್ಸಿ ಸರ್ವರ್, ಟಾರ್‌ ಬ್ರೌಸರ್‌ಗಳನ್ನು ನೀವು ಬಳಸಬಹುದಾಗಿದೆ.

ಸರ್ವರ್‌ ಸಮಸ್ಯೆ

ಸರ್ವರ್‌ ಸಮಸ್ಯೆ

ಸಾಮಾನ್ಯವಾಗಿ ವೆಬ್‌ಸೈಟ್‌ಗಳು ತಮ್ಮ ಡೇಟಾ ಉಳಿಸಲು ಮತ್ತು ಬಳಕೆದಾರರ ಮುಂದಿಡಲು ಹಾಸ್ಟಿಂಗ್‌ ಸರ್ವರ್‌ಗಳನ್ನು ಬಳಸುತ್ತವೆ. ಈ ಸರ್ವರ್‌ಗಳಲ್ಲಿ ಸಮಸ್ಯೆ ಸೃಷ್ಟಿಯಾದರೆ ವೆಬ್‌ಸೈಟ್‌ಗಳು ತೆರೆದುಕೊಳ್ಳುವುದಿಲ್ಲ. ಸರ್ವರ್‌ ಸಮಸ್ಯೆಗೆ ಹಲವು ಕಾರಣಗಳಿದ್ದು, ವಿದ್ಯುತ್‌ ಕೊರತೆ, ಡಿಡಿಒಎಸ್‌ ದಾಳಿ ಮತ್ತು ಹಾರ್ಡ್‌ವೆರ್‌ ತೊಂದರೆಗಳಿಂದ ಸರ್ವರ್‌ ಸಮಸ್ಯೆಗೆ ಸಿಲುಕಿಕೊಳ್ಳುತ್ತದೆ. ಈ ಸಮಯದಲ್ಲಿ ವೆಬ್‌ಸೈಟ್‌ ಮಾಲೀಕ ಸಮಸ್ಯೆ ಬಗೆಹರಿಸುವವರೆಗೂ ನೀವು ಕಾಯಬೇಕಾಗುತ್ತದೆ.

ಬ್ರೌಸರ್‌ ತೊಂದರೆ

ಬ್ರೌಸರ್‌ ತೊಂದರೆ

ನಿಮ್ಮ ಸ್ನೇಹಿತನಿಗೆ ಒಪನ್‌ ಆಗುತ್ತಿರುವ ಸೈಟ್‌, ನಿಮಗೆ ತೆರೆದುಕೊಳ್ಳುತ್ತಿಲ್ಲ ಎಂದರೆ ನೀವು ಬಳಸುತ್ತಿರುವ ವೆಬ್‌ ಬ್ರೌಸರ್‌ನ್ನು ದೂರಬಹುದಾಗಿದೆ. ಬ್ರೌಸರ್‌ನಲ್ಲಿರುವ ಕ್ಯಾಶೆ, ಕುಕೀಸ್‌ ಹಾಗೂ ಪ್ರಮಾಣಪತ್ರಗಳ ದೋಷಗಳು ಸೈಟ್‌ ಒಪನ್‌ ಆಗಲು ಅಡೆತಡೆಗಳಾಗಿರುತ್ತವೆ. ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿ, ನಿಮ್ಮ ಬ್ರೌಸರ್‌ನ್ನು ಮರು ಇನ್ಸ್ಟಾಲ್‌ ಮಾಡಿ. ಅದಲ್ಲದೇ ಸಮಸ್ಯೆ ಬ್ರೌಸರ್‌ದ್ದು ಹೌದೋ, ಇಲ್ಲವೋ ಎಂಬುದನ್ನು ತಿಳಿಯಲು ಸೈಟ್‌ನ್ನು ಬೇರೆ ಬ್ರೌಸರ್‌ನಲ್ಲಿಯೂ ಒಪನ್‌ ಮಾಡಿ ನೋಡಿ.

ಕಂಪ್ಯೂಟರ್‌ ಸಮಸ್ಯೆ

ಕಂಪ್ಯೂಟರ್‌ ಸಮಸ್ಯೆ

ನಿಮ್ಮ ಕಂಪ್ಯೂಟರ್‌ನಲ್ಲಿನ ಫೈರ್‌ವಾಲ್‌, ಆಂಟಿವೈರಸ್‌ ಸಾಫ್ಟ್‌ವೇರ್‌ ವೆಬ್‌ಸೈಟ್‌ಗಳನ್ನು ಬ್ಲಾಕ್‌ ಮಾಡಿರುವ ಸಾಧ್ಯತೆಯಿರುತ್ತದೆ. ಇದಕ್ಕಾಗಿ ಕಂಪ್ಯೂಟರ್‌ನಲ್ಲಿನ ಫೈರ್‌ವಾಲ್‌ ವ್ಯವಸ್ಥೆ ಮತ್ತು ಆಂಟಿವೈರಸ್‌ ಸಾಫ್ಟ್‌ವೇರ್‌ನ್ನು ಸ್ಥಗಿತಗೊಳಿಸಬೇಕಾಗುತ್ತದೆ.

ರೂಟರ್‌ ನ್ಯೂನತೆಗಳು

ರೂಟರ್‌ ನ್ಯೂನತೆಗಳು

ಇಂಟರ್‌ನೆಟ್‌ ಸಂಪರ್ಕಕ್ಕೆ ಮುಖ್ಯವಾಗಿ ರೂಟರ್‌ ಅವಶ್ಯವಾಗಿರುತ್ತದೆ. ನೀವು ಒಪನ್‌ ಮಾಡಲು ಬಯಸುವ ವೆಬ್‌ಸೈಟ್‌ ರೂಟರ್‌ ಜೊತೆ ಸಂಪರ್ಕ ಸಾಧಿಸುವಲ್ಲಿ ಯಾವುದಾದರೂ ಸಮಸ್ಯೆಗಳು ಉಂಟಾಗಿರುತ್ತವೆ. ಇದಕ್ಕಾಗಿ ರೂಟರ್‌ನ್ನು ರಿಸ್ಟಾರ್ಟ್‌ ಮಾಡಬೇಕು ಅಥವಾ ಮರುಸಂಯೋಜಿಸಬೇಕಾಗುತ್ತದೆ.

ಡಿಎನ್‌ಎಸ್‌ ಕ್ಯಾಶೆ ಸಮಸ್ಯೆ

ಡಿಎನ್‌ಎಸ್‌ ಕ್ಯಾಶೆ ಸಮಸ್ಯೆ

ಹಲವು ವಿಂಡೋಸ್‌ 10 ಬಳಕೆದಾರರು ಕೆಲವು ವೆಬ್‌ಸೈಟ್‌ಗಳನ್ನು ಲೋಡ್‌ ಮಾಡಲು ಆಗದೇ ಡಿಎನ್‌ಎಸ್‌ ಕ್ಯಾಶೆ ಸಮಸ್ಯೆಯನ್ನು ಎದುರಿಸಿದ್ದಾರೆ. ಈ ತೊಂದರೆ ನಿವಾರಿಸಲು ಡಿಎನ್‌ಎಸ್‌ ಕ್ಯಾಶೆಯನ್ನು ಫ್ಲಶ್‌ ಮಾಡಬೇಕಾಗಿರುತ್ತದೆ. ಇದನ್ನು ಮಾಡಲು Command Proft ಸಾಫ್ಟ್‌ವೇರ್‌ನ್ನು ಅಡ್ಮಿನ್‌ ಆಗಿ ಒಪನ್‌ ಮಾಡಿ. ನಂತರ ಅಲ್ಲಿ ipconfig /flushdns ಟೈಪ್‌ ಮಾಡಿ ಎಂಟರ್‌ ಕ್ಲಿಕ್‌ ಮಾಡಿ. ಇದಾದ ಮೇಳೆ ನಿಮ್ಮ ಪಿಸಿಯನ್ನು ರಿಸ್ಟಾರ್ಟ್‌ ಮಾಡಿದರೆ ಸಮಸ್ಯೆ ಬಗೆಹರಿದಿರುತ್ತೆ.

ವಿವಿಧ ಡಿಎನ್‌ಎಸ್‌ ಬಳಸಿ

ವಿವಿಧ ಡಿಎನ್‌ಎಸ್‌ ಬಳಸಿ

ಪ್ರತಿ ವೆಬ್‌ಸೈಟ್‌ ಡಿಎನ್‌ಎಸ್‌ ಸರ್ವರ್‌ ಸಹಾಯದಿಂದಲೇ ಇಂಟರ್‌ನೆಟ್‌ನಲ್ಲಿ ಹುಡುಕಲ್ಪಡುತ್ತವೆ. ಕೆಲವೊಂದು ಸಲ ಡಿಎನ್‌ಎಸ್‌ ಸರ್ವರ್‌ ನಿಮ್ಮ ಬ್ರೌಸರ್‌ನಿಂದ ಸಮರ್ಪಕ ಪ್ರತಿಕ್ರಿಯೆ ಪಡೆದಿಲ್ಲದಾಗ ವೆಬ್‌ಸೈಟ್‌ ಲೋಡ್‌ ಆಗುವುದಿಲ್ಲ. ಅದಲ್ಲದೇ ಡಿಎನ್‌ಎಸ್‌ ಸರ್ವರ್‌ ವೈಫಲ್ಯ ಕಂಡಾಗಲೂ ಸೈಟ್‌ ಲೋಡ್‌ ಆಗಲ್ಲ. ಇದಕ್ಕಾಗಿ ನೀವು ಮತ್ತೊಂದು ಡಿಎನ್‌ಎಸ್‌ ಸರ್ವರ್‌ಗೆ ವರ್ಗಾವಣೆಯಾಗಬೇಕಾಗಿರುತ್ತದೆ. ಇದಕ್ಕಾಗಿಯೇ ಅನೇಕ ಸಾರ್ವಜನಿಕ ಸರ್ವರ್‌ಗಳು ಲಭ್ಯವಿದ್ದು, ಗೂಗಲ್‌ ಪಬ್ಲಿಕ್‌ ಡಿಎನ್‌ಎಸ್‌ ಮತ್ತು ಒಪನ್‌ ಡಿಎನ್‌ಎಸ್‌ ಪ್ರಮುಖವಾಗಿವೆ.

ನೆಟ್‌ವರ್ಕ್‌ ಅಡಾಪ್ಟರ್‌ ನಿರ್ಬಂಧಿಸಿ

ನೆಟ್‌ವರ್ಕ್‌ ಅಡಾಪ್ಟರ್‌ ನಿರ್ಬಂಧಿಸಿ

ಪಿಸಿ ಮತ್ತು ಲ್ಯಾಪ್‌ಟಾಪ್‌ಗಳು ವೈಯರ್‌ ಮತ್ತು ವೈರಲೆಸ್‌ ನೆಟವರ್ಕ್‌ ಕಾರ್ಡ್‌ ಎರಡರ ಸಹಾಯದಿಂದಲೂ ಇಂಟರ್‌ನೆಟ್‌ ಸಂಪರ್ಕವನ್ನು ಹೊಂದುತ್ತವೆ. ನಿಮ್ಮ ಕಂಪ್ಯೂಟರ್‌ ಅಥವಾ ಲ್ಯಾಪಟಾಪ್‌ ಎರಡು ಕಾರ್ಡ್‌ಗಳನ್ನು ನಿರಂತರವಾಗಿ ಬಳಸಿದರೆ ಅನೇಕ ಸಮಸ್ಯೆಗಳು ಸೃಷ್ಟಿಯಾಗಿ ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವ ಸಾಧ್ಯತೆಯಿರುತ್ತದೆ. ಅದಕ್ಕಾಗಿ ಅಗತ್ಯವಿಲ್ಲದ ನೆಟ್‌ವರ್ಕ್‌ ಅಡಾಪ್ಟರ್‌ಗಳನ್ನು ಡಿಸೇಬಲ್‌ ಮಾಡಿ. ಇದಕ್ಕಾಗಿ ಒಪನ್‌ ನೆಟ್‌ವರ್ಕ್‌ ಮತ್ತು ಶೇರಿಂಗ್‌ ಸೆಂಟರ್‌ ಸಂಯೋಜನೆಗಳನ್ನು ಒಪನ್‌ ಮಾಡಿ ಮುಂದುವರೆಯಿರಿ.

Best Mobiles in India

English summary
How to 'Website Not Loading/Opening' issue in browser

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X