Subscribe to Gizbot

ಆಂಡ್ರಾಯ್ಡ್-ಐಓಎಸ್ ನಡುವೆ ಕಾಂಟೆಕ್ಟ್ ವಿನಿಮಯ ಮಾಡಿಕೊಳ್ಳುವುದು ಹೇಗೆ..?

Posted By: manju

ಇಂದಿನ ದಿನದಲ್ಲಿ ಸ್ಮಾರ್ಟ್ ಫೋನ್ ಗಳನ್ನು ಕೆಲವೇ ದಿನಗಳಲ್ಲಿ ಬದಲಾವಣೆ ಮಾಡುವುದು ಹೆಚ್ಚಾಗುತ್ತಿದೆ. ಅದರಲ್ಲಿಯೂ ಆಂಡ್ರಾಯ್ಡ್ ನಿಂದ ಆಪಲ್ ಕಡೆಗೆ ಮುಖ ಮಾಡುವವರು ಸ್ಪಲ್ಪ ಮಂದಿಯಾದರೆ, ಇನ್ನು ಹಲವರು ಆಪಲ್ ನಿಂದ ಆಂಡ್ರಾಯ್ಡ್ ಕಡೆಗೆ ವಾಲುತ್ತಿದ್ದಾರೆ. ಅಲ್ಲದೇ ಇನ್ನು ಕೆಲವರು ಆಪಲ್ ಮತ್ತು ಆಂಡ್ರಾಯ್ಡ್ ಎರಡನ್ನು ಬಳಕೆ ಮಾಡುತ್ತಿರುವವರನ್ನು ಕಾಣಬಹುದಾಗಿದೆ.

ಆಂಡ್ರಾಯ್ಡ್-ಐಓಎಸ್ ನಡುವೆ ಕಾಂಟೆಕ್ಟ್ ವಿನಿಮಯ ಮಾಡಿಕೊಳ್ಳುವುದು ಹೇಗೆ..?

ಈ ಹಿನ್ನಲೆಯಲ್ಲಿ ಆಂಡ್ರಾಯ್ಡ್ ಫೋನಿನಲ್ಲಿರುವ ಕಾಂಟೆಕ್ಟ್ ಗಳನ್ನು ಆಪಲ್ ಫೋನಿಗೆ ಹೇಗೆ ವರ್ಗಾಹಿಸಿಕೊಳ್ಳುವುದು ಎಂಬುದನ್ನು ನಿಮಗೆ ತಿಳಿಸಿಕೊಡಲಿದ್ದೇವೆ ಇದರ ಸಹಾಯದಿಂದ ನೀವು ಸುಲಭವಾಗಿ ನಿಮ್ಮ ಕಾಂಟೆಕ್ಟ್ ಗಳನ್ನು ಒಂದು ಫೋನ್ ನಿಂದ ಇನ್ನೊಂದು ಫೋನ್ ಗೆ ವರ್ಗಾಹಿಸಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್ ಆಕೌಂಟ್ ಬಳಕೆ ಮಾಡಿಕೊಂಡು:

ಗೂಗಲ್ ಆಕೌಂಟ್ ಬಳಕೆ ಮಾಡಿಕೊಂಡು:

ಪ್ರತಿ ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಆಕೌಂಟ್ ಹೊಂದಿರುತ್ತಾರೆ, ಇದರಲ್ಲಿ ನಿಮ್ಮ ಕಾಂಟೆಕ್ಟ್ ಗಳನ್ನು ಸಿಂಕ್ ಮಾಡಿಕೊಳ್ಳಿ, ನಂತರದಲ್ಲಿ ನೀವು ಬಳಸುವ ಮತ್ತೊಂದು ಹೊಸ ಫೋನಿನಲ್ಲಿಯೂ ಗೂಗಲ್ ಆಕೌಂಟ್ ಓಪನ್ ಮಾಡಿಕೊಂಡು ಅದರಲ್ಲಿರುವ ಕಾಂಟೆಕ್ಟ್ ಗಳನ್ನು ಕಾಪಿ ಮಾಡಿಕೊಳ್ಳಿ.

ಐಕ್ಲೌಡ್ಸ್ ಬಳಕೆ ಮಾಡಿಕೊಂಡು:

ಐಕ್ಲೌಡ್ಸ್ ಬಳಕೆ ಮಾಡಿಕೊಂಡು:

ಆಪಲ್ ಐಕ್ಲೌಡ್ಸ್ ಸೇವೆಯಲ್ಲಿ ಸಹ ಕಾಂಟೆಕ್ಟ್ ಗಳನ್ನು ಸಿಂಕ್ ಮಾಡಿಕೊಂಡು ಒಂದು ಫೋನ್ ನಿಂದ ಮತ್ತೊಂದುಗೆ ಕಾಪಿ ಮಾಡಿಕೊಳ್ಳುವುದು ಸುಲಭವಾಗಿದೆ. ಇದರಿಂದಾಗಿ ಎರಡು ಫೋನ್ ಗಳಲ್ಲಿ ಐಕ್ಲೌಡ್ ಬಳಕೆ ಮಾಡಿಕೊಳ್ಳಬೇಕಾಗಿದೆ ಅಷ್ಟೆ. ಕಾಂಟೆಕ್ಟ್ ವರ್ಗಾಹಿಸುವುದು ಇಲ್ಲಿಯೂ ಸುಲಭವಾಗಿದೆ.

ಬೆರೆ ಆಪ್ ಗಳ ಬಳಕೆ:

ಬೆರೆ ಆಪ್ ಗಳ ಬಳಕೆ:

ಇದಲ್ಲದೇ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಮತ್ತು ಆಪಲ್ ಎರಡರಲ್ಲಿಯೂ ಬಳಕೆಯಾಗುವ VCF ಫೈಲ್ ಆಪ್ ಡೌನ್ ಲೋಡ್ ಮಾಡಿಕೊಂಡು ಎರಡು ಸ್ಮಾರ್ಟ್ ಫೋನಿನ ಕಾಂಟೆಕ್ಟ್ ಗಳನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ಸಮಯವು ಉಳಿತಾಯವಾಗಲಿದೆ.

ರೂ.20000ಕ್ಕೆ ಐಫೋನ್ 6: ಇಷ್ಟು ಕಡಿಮೆ ಬೆಲೆಗೆ ಇನ್ನೆಂದು ಇಲ್ಲ..!

ಐಟ್ಯೂನ್ಸ್ ಬಳಕೆ ಮಾಡಿಕೊಂಡು:

ಐಟ್ಯೂನ್ಸ್ ಬಳಕೆ ಮಾಡಿಕೊಂಡು:

ಇದಲ್ಲದೇ ಆಪಲ್ ನಲ್ಲಿರುವ ಐಟ್ಯೂನ್ಸ್ ಸೇವೆಯನ್ನು ಬಳಕೆ ಮಾಡಿಕೊಂಡು ಕಾಂಟೆಕ್ಟ್ ಗಳನ್ನು ವರ್ಗಾಹಿಸಿಕೊಳ್ಳಬಹುದಾಗಿದೆ ಇದು ಸಹ ಸುಲಭವಾಗಿದ್ದು, ಕಾಂಟೆಕ್ಟ್ ಗಳನ್ನು ಐಟ್ಯೂನ್ಸ್ ಗೆ ಸಿಂಕ್ ಮಾಡಿಕೊಂಡರೆ ಸಾಕು ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
your contacts are probably the most important piece of information, and often the first thing that is needed to be migrated to the new phone. Thankfully, if you're moving from an iOS device to an Android one, it's easy to have your contacts moved. Here are four ways to do it. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot