ಆಂಡ್ರಾಯ್ಡ್ ನಲ್ಲಿ ಕ್ಯಾಮರಾ ಶಟರ್ ಸೌಂಡ್ ಆಫ್ ಮಾವುದು ಹೇಗೆ?

|

ಹೆಚ್ಚಿನ ಸ್ಮಾರ್ಟ್ ಫೋನ್ ಗಳು ಸುಳ್ಳು ಶಟರ್ ಸೌಂಡ್ ನ್ನು ಪಿಕ್ಚರ್ ಕ್ಲಿಕ್ಕಿಸಿದಾಗ ನೀಡುತ್ತದೆ. ಇದು ಕೆಲವೊಮ್ಮೆ ಕಿರಿಕಿರಿ ಅನ್ನಿಸುತ್ತದೆ. ಒಂದು ವೇಳೆ ಯಾರದ್ದೋ ಫೋಟೋವನ್ನು ಅವರಿಗೆ ಗೊತ್ತಿಲ್ಲದಂತೆ ಕ್ಲಿಕ್ಕಿಸಬೇಕು ಅಂದುಕೊಂಡಾಗ ಅಥವಾ ಒಂದಾದ ಮೇಲೆ ಒಂದರಂತೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳುವಾಗ ಈ ಶಬ್ದ ಕಿರಿಕಿರಿ ಅನ್ನಿಸುತ್ತದೆ.

ಆಂಡ್ರಾಯ್ಡ್ ನಲ್ಲಿ ಕ್ಯಾಮರಾ ಶಟರ್ ಸೌಂಡ್ ಆಫ್ ಮಾವುದು ಹೇಗೆ?

ಹಾಗಾದ್ರೆ ಈ ಶಟರ್ ಸೌಂಡ್ ನ್ನು ನಿಲ್ಲಿಸುವುದು ಹೇಗೆ? ಅದು ಸಾಧ್ಯವೆ ಎಂಬ ಪ್ರಶ್ನೆಗೆ ಉತ್ತರ ಹೆಚ್ಚಿನ ಡಿವೈಸ್ ಗಳಲ್ಲಿ ಅದು ಸಾಧ್ಯವಿದೆ. ಕೆಲವು ಡಿವೈಸ್ ಗಳಲ್ಲಿ ಸುಲಭ ಮತ್ತು ಸರಳವಾಗಿದ್ದರೆ ಇನ್ನೂ ಕೆಲವು ಬ್ರ್ಯಾಂಡ್ ಡಿವೈಸ್ ಗಳಲ್ಲಿ ಸ್ವಲ್ಪ ಶ್ರಮ ಪಡಬೇಕಾಗುತ್ತದೆ.

ಆದರೆ ಈ ಶಟರ್ ಸೌಂಡ್ ನ್ನು ಆಫ್ ಮಾಡುವುದು ಕೆಲವು ಪ್ರದೇಶಗಳಲ್ಲಿ ಕಾನೂನುಬಾಹಿರವಾಗಿದೆ. ಹಾಗಾಗಿ ನೀವಿರುವ ಪ್ರದೇಶದಲ್ಲಿ ಇದಕ್ಕೆ ಕಾನೂನು ಮಾನ್ಯತೆ ಇದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.

ಹಾಗಾದ್ರೆ ಯಾವ್ಯಾವ ಫೋನ್ ನಲ್ಲಿ ಶಟರ್ ಸೌಂಡ್ ಆಫ್ ಮಾಡುವುದು ಹೇಗೆ ಎಂಬ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ.

ಸ್ಟಾಕ್ ಆಂಡ್ರಾಯ್ಡ್ ನಲ್ಲಿ ಕ್ಯಾಮರಾ ಶಟರ್ ಸೌಂಡ್ ನ್ನು ಆಫ್ ಮಾಡುವುದು ಹೇಗೆ?

ಸ್ಟಾಕ್ ಆಂಡ್ರಾಯ್ಡ್ ನಲ್ಲಿ ಕ್ಯಾಮರಾ ಶಟರ್ ಸೌಂಡ್ ನ್ನು ಆಫ್ ಮಾಡುವುದು ಹೇಗೆ?

ಪಿಕ್ಸಲ್ 3 ಫೋನ್ ಗಳು ಸ್ಟಾಕ್ ಆಂಡ್ರಾಯ್ಡ್ ವರ್ಷನ್ ನಲ್ಲಿ ರನ್ ಆಗುತ್ತದೆ. ಕ್ಯಾಮರಾ ಶಟರ್ ಸೌಂಡ್ ನ್ನು ಡಿಸೇಬಲ್ ಮಾಡುವುದಕ್ಕೆ ಸ್ಟಾಕ್ ಆಂಡ್ರಾಯ್ಡ್ ನಲ್ಲಿ ಕ್ಯಾಮರಾ ಸೆಟ್ಟಿಂಗ್ ಇರುವುದಿಲ್ಲ.ಬದಲಾಗಿ ನೀವು ನಿಮ್ಮ ನೋಟಿಫಿಕೇಷನ್ಸ್/ಅಲರ್ಟ್ಸ್ ಪ್ರೊಫೈಲ್ ನ್ನು ಸೈಲೆಂಟ್ ಮಾಡಬೇಕು, ಡುನಾಟ್ ಡಿಸ್ಟರ್ಬ್ ಅಥವಾ ವೈಬ್ರೇಷನ್ ಮೋಡ್ ಗೆ ಹಾಕಬೇಕು. ಇದನ್ನು ಡಿವೈಸ್ ನ ಬದಿಯಲ್ಲಿರುವ ವಾಲ್ಯೂಮ್ ಕೀ ಸಹಾಯದಿಂದಲೂ ಮಾಡಬಹುದು ಅಥವಾ ಸೌಂಡ್ ಸೆಕ್ಷನ್ ಸೆಟ್ಟಿಂಗ್ಸ್ ಮೆನುವಿನಲ್ಲೂ ಮಾಡಬಹುದು.

ಸ್ಯಾಮ್ ಸಂಗ್ ನಲ್ಲಿ ಕ್ಯಾಮರಾ ಶಟರ್ ಸೌಂಡ್ ನ್ನು ಆಫ್ ಮಾಡುವುದು ಹೇಗೆ?

ಸ್ಯಾಮ್ ಸಂಗ್ ನಲ್ಲಿ ಕ್ಯಾಮರಾ ಶಟರ್ ಸೌಂಡ್ ನ್ನು ಆಫ್ ಮಾಡುವುದು ಹೇಗೆ?

ಹೊಸ ಸ್ಯಾಮ್ ಸಂಗ್ ಡಿವೈಸ್ ಗಳಲ್ಲಿ ಉದಾಹರಣೆಗೆ ಎಸ್8 ಮತ್ತು ಎಸ್9 ಗಳಲ್ಲಿ ನೀವು ಮಾಸ್ಟರ್ ವಾಲ್ಯೂಮ್ ಸೆಟ್ಟಿಂಗ್ಸ್ ನ್ನು ಬದಲಾಯಿಸಬೇಕು ಮತ್ತು ನಿಮ್ಮ ಫೋನ್ ವೈಬ್ರೇಟ್, ಡುನಾಟ್ ಡಿಸ್ಟರ್ಬ್ ಅಥವಾ ಸೈಲೆಂಟ್ ಮೋಡ್ ನಲ್ಲಿದ್ದಾಗ ಶಟರ್ ಸೌಂಡ್ ಕೂಡ ಟರ್ನ್ ಆಫ್ ಆಗಿರುತ್ತದೆ.

ಕೆಲವು ಹಳೆಯ ಸ್ಯಾಮ್ ಸಂಗ್ ಡಿವೈಸ್ ಗಳಲ್ಲಿ ನೀವು ಕ್ಯಾಮರಾ ಆಪ್ ನ ಕಾಗ್ ವೀಲ್ ನ್ನು ಹಿಟ್ ಮಾಡಬೇಕು ಮತ್ತು ನೀವು ಶಟರ್ ಸೌಂಡ್ ಆಯ್ಕೆಯನ್ನು ಗಮನಿಸುತ್ತೀರಿ ಅಲ್ಲಿ ಸ್ವಿಚ್ ಆಫ್ ಮಾಡಬೇಕು.

ಎಲ್ ಜಿ ಫೋನ್ ನಲ್ಲಿ ಕ್ಯಾಮರಾ ಶಟರ್ ಸೌಂಡ್ ನ್ನು ಆಫ್ ಮಾಡುವುದು ಹೇಗೆ?

ಎಲ್ ಜಿ ಫೋನ್ ನಲ್ಲಿ ಕ್ಯಾಮರಾ ಶಟರ್ ಸೌಂಡ್ ನ್ನು ಆಫ್ ಮಾಡುವುದು ಹೇಗೆ?

ಸ್ಟಾಕ್ ಆಂಡ್ರಾಯ್ಡ್ ನಂತೆಯೇ ಎಲ್ ಜಿ ಕ್ಯಾಮರಾ ಆಪ್ ನಲ್ಲಿ ಕ್ಯಾಮರಾ ಶಟರ್ ಸೌಂಡ್ ಆಯ್ಕೆ ಸೆಟ್ಟಿಂಗ್ಸ್ ನಲ್ಲಿ ಇರುವುದಿಲ್ಲ. ಬದಲಾಗಿ ನೀವು ನಿಮ್ಮ ಫೋನಿನ ಮಾಸ್ಟರ್ ವಾಲ್ಯೂಮ್ ಸೆಟ್ಟಿಂಗ್ ಬಳಸಿ ಕಂಟ್ರೋಲ್ ಮಾಡಿಕೊಳ್ಳಬೇಕು. ಸೈಲೆಂಟ್, ಡು ನಾಟ್ ಡಿಸ್ಟರ್ಬ್ ಅಥವಾ ವೈಬ್ರೇಟ್ ಮೋಡ್ ನಲ್ಲಿ ನಿಮ್ಮ ಫೋನ್ ಇದ್ದಾಗ ಫೋಟೋ ತೆಗೆಯುವ ಸೌಂಡ್ ಕೇಳಿಸುವುದಿಲ್ಲ.

ಹೆಚ್ ಟಿಸಿಯಲ್ಲಿ ಕ್ಯಾಮರಾ ಶಟರ್ ಸೌಂಡ್ ನ್ನು ಆಫ್ ಮಾಡುವುದು ಹೇಗೆ?

ಹೆಚ್ ಟಿಸಿಯಲ್ಲಿ ಕ್ಯಾಮರಾ ಶಟರ್ ಸೌಂಡ್ ನ್ನು ಆಫ್ ಮಾಡುವುದು ಹೇಗೆ?

ಹೊಸ ಹೆಚ್ ಟಿಸಿ ಯು11 ಮತ್ತು ಯು12+ ಸ್ಮಾರ್ಟ್ ಫೋನ್ ಗಳಲ್ಲಿ ಶಟರ್ ಸೌಂಡ್ ಆಫ್ ಮಾಡುವಿಕೆಯು ಆಂಡ್ರಾಯ್ಡ್ ಸ್ಟಾಕ್ ಡಿವೈಸ್ ಗಳಲ್ಲಿ ಮಾಡಿದಂತೆಯೇ ಮಾಡಬೇಕು, ನಿಮ್ಮ ಮಾಸ್ಟರ್ ವಾಲ್ಯೂಮ್ ಸೆಟ್ಟಿಂಗ್ಸ್ ನ್ನು ವೈಬ್ರೇಟ್, ಸೈಲೆಂಟ್ ಅಥವಾ ಡುನಾಟ್ ಡಿಸ್ಟರ್ಬ್ ಮೋಡ್ ಗೆ ಹಾಕಿದರೆ ಶಟರ್ ಸೌಂಡ್ ಸೈಲೆಂಟ್ ಆಗುತ್ತದೆ.

ಕೆಲವು ಹಳೆಯ ಹೆಚ್ ಟಿಸಿ ಮಾಡೆಲ್ ಗಳಲ್ಲಿ ಕ್ಯಾಮರಾ ಶಟರ್ ಸೌಂಡ್ ಡಿಸೇಬಲ್ ಮಾಡುವುದು ಒಂದು ರೀತಿಯಲ್ಲಿ ಕನ್ವೋಲ್ಯೂಟೆಡ್ ಪ್ರೊಸೆಸ್ ಆದರೂ ಅದು ಕೆಲಸ ಮಾಡುತ್ತದೆ.ನಿಮ್ಮ ಕ್ಯಾಮರಾ ಆಪ್ ನಲ್ಲಿ ಮೇಲ್ಬಾಗದ ಮಧ್ಯದಲ್ಲಿರುವ ಎರಡು ಲೈನ್ ನ್ನು ಡ್ರ್ಯಾಗ್ ಡೌನ್ ಮಾಡಿ. ನಿಮಗೆ ಹಲವು ರೀತಿಯ ಫೋಟೋ ಆಯ್ಕೆಗಳಿರುತ್ತದೆ. ಸೆಟ್ಟಿಂಗ್ಸ್ ಐಕಾನ್ ಸಿಗುವವರೆಗೆ ಎಡಭಾಗಕ್ಕೆ ಸ್ಕ್ರೋಲ್ ಮಾಡಿ. ಅದನ್ನು ಟ್ಯಾಪ್ ಮಾಡಿ ಶಟರ್ ಸೌಂಡ್ ನ್ನು ಅನ್ ಟಿಕ್ ಮಾಡಿ.

ಮೊಟರೊಲಾದಲ್ಲಿ ಕ್ಯಾಮರಾ ಶಟರ್ ಸೌಂಡ್ ನ್ನು ಆಫ್ ಮಾಡುವುದು ಹೇಗೆ?

ಮೊಟರೊಲಾದಲ್ಲಿ ಕ್ಯಾಮರಾ ಶಟರ್ ಸೌಂಡ್ ನ್ನು ಆಫ್ ಮಾಡುವುದು ಹೇಗೆ?

ಹೊಸ ಮೊಟರೊಲಾ ಫೋನ್ ಗಳಾದ ಮೊಟೋ ಜಿ4, ಜಿ5, ಜಿ6 ಗಳಲ್ಲಿ ಮಾಸ್ಟರ್ ಮಾಲ್ಯೂಮ್ ಕಂಟ್ರೋಲ್ ನಿಂದ ಶಟರ್ ಸೌಂಡ್ ನ್ನು ಕಂಟ್ರೋಲ್ ಮಾಡಬಹುದು. ಸೈಲೆಂಟ್, ಡು ನಾಟ್ ಡಿಸ್ಟರ್ಬ್, ಅಥವಾ ವೈಬ್ರೇಟ್ ಮೋಡ್ ಗೆ ಹಾಕಿದರೆ ಕ್ಯಾಮರಾ ಶಟರ್ ನಾಯ್ಸ್ ಇರುವುದಿಲ್ಲ.

ಕೆಲವು ಮೊಟರೊಲಾ ಫೋನ್ ಗಳಲ್ಲಿ ಸ್ಕ್ರೀನಿನ ಎಡಭಾಗಕ್ಕೆ ಸ್ಲೈಡ್ ನ್ನು ಬಳಸಿ. ಲೌಡ್ ಸ್ಪೀಕರ್ ಐಕಾನ್ ಶಟರ್ ಸೌಂಡ್ ನ್ನು ಸೂಚಿಸುತ್ತದೆ. ಅದನ್ನು ಟ್ಯಾಪ್ ಮಾಡುವ ಮೂಲಕ ಅನೇಬಲ್ ಮತ್ತು ಡಿಸೇಬಲ್ ಮಾಡಲು ಸಾಧ್ಯವಾಗುತ್ತದೆ.

ಒನ್ ಪ್ಲಸ್ ನಲ್ಲಿ ಕ್ಯಾಮರಾ ಶಟರ್ ಸೌಂಡ್ ನ್ನು ಆಫ್ ಮಾಡುವುದು ಹೇಗೆ?

ಒನ್ ಪ್ಲಸ್ ನಲ್ಲಿ ಕ್ಯಾಮರಾ ಶಟರ್ ಸೌಂಡ್ ನ್ನು ಆಫ್ ಮಾಡುವುದು ಹೇಗೆ?

ಒನ್ ಪ್ಲಸ್ ಡಿವೈಸ್ ನಲ್ಲಿ ನೀವು ಸ್ಕ್ರೀನಿನ ಎಡಬದಿಯನ್ನು ಸ್ವೈಪ್ ಮಾಡಿ. ಮತ್ತು ನಂತರ ಕಾಗ್ ವೀಲನ್ನು ಟ್ಯಾಪ್ ಮಾಡಿ,ಅದು ಬಲಭಾಗದಲ್ಲಿರುತ್ತದೆ(ಮೇಲೆ ಅಥವಾ ಕೆಳಗೆ). ನೀವು ಶಟರ್ ಸೌಂಡ್ ಆಯ್ಕೆಯನ್ನು ವಿಂಡೋದಲ್ಲಿ ಗಮನಿಸಬಹುದು ಮತ್ತು ತೆರೆಯಬಹುದು.ಈ ಆಯ್ಕೆಯನ್ನು ಆಫ್ ಮಾಡಿ.

ಹುವಾಯಿಲ್ಲಿ ಕ್ಯಾಮರಾ ಶಟರ್ ಸೌಂಡ್ ನ್ನು ಆಫ್ ಮಾಡುವುದು ಹೇಗೆ?

ಹುವಾಯಿಲ್ಲಿ ಕ್ಯಾಮರಾ ಶಟರ್ ಸೌಂಡ್ ನ್ನು ಆಫ್ ಮಾಡುವುದು ಹೇಗೆ?

ಹೊಸ ಹುವಾಯಿ ಡಿವೈಸ್ ಗಳಾದ ಹುವಾಯಿ ಮೇಟ್ 10 ಪ್ರೋ ದಲ್ಲಿ ಕ್ಯಾಮರಾ ಆಪ್ ನ್ನು ತೆರೆಯಿರಿ ಮತ್ತು ಸೆಟ್ಟಿಂಗ್ಸ್ ಮೆನುವನ್ನು ತೆರೆಯಲು ಎಡದಿಂದ ಸ್ವೈಪ್ ಮಾಡಿ. ಮ್ಯೂಟ್ ಸೆಟ್ಟಿಂಗ್ಸ್ ನ್ನು ತೆರೆದು ಅದನ್ನು ಆಫ್ ಮಾಡಿದರೆ ಕ್ಯಾಮರಾ ಶಟರ್ ಸೌಂಡ್ ಆಫ್ ಆಗುತ್ತದೆ.

ಕೆಲವು ಹಳೆಯ ಹುವಾಯಿ ಫೋನ್ ಗಳಲ್ಲಿ ಕೆಲವು ಹಂತಗಳನ್ನು ಇದು ತೆಗೆದುಕೊಳ್ಳುತ್ತದೆ.ಕ್ಯಾಮರಾ ಆಪ್ ಗೆ ತೆರಳಿ. ಮೆನು ಐಕಾನ್ ನ್ನು ಹಿಟ್ ಮಾಡಿ(ಮೂರು ಲೈನ್ ಗಳು) ಮತ್ತು ನಂತರ ಸೆಟ್ಟಿಂಗ್ಸ್ ಬಟನ್( ಕಾಗ್ ವೀಲ್) ನಂತರ ಮ್ಯೂಟ್ ಗೆ ತೆರಳಿ ಅನೇಬಲ್ ಮಾಡಿ. ಇದು ಕ್ಯಾಮರಾ ಸೌಂಡ್ ನ್ನು ಡಿಸೇಬಲ್ ಮಾಡುತ್ತದೆ.

ಹಾನರ್ ನಲ್ಲಿ ಕ್ಯಾಮರಾ ಶಟರ್ ಸೌಂಡ್ ನ್ನು ಆಫ್ ಮಾಡುವುದು ಹೇಗೆ?

ಹಾನರ್ ನಲ್ಲಿ ಕ್ಯಾಮರಾ ಶಟರ್ ಸೌಂಡ್ ನ್ನು ಆಫ್ ಮಾಡುವುದು ಹೇಗೆ?

ಹಾನರ್ ಡಿವೈಸ್ ಗಳಾದ ಹಾನರ್ 10 ಗಳಲ್ಲಿ ಕ್ಯಾಮರಾ ಆಪ್ ನಲ್ಲಿ ಗಿಯರ್ ಐಕಾನ್ ನ್ನು ಟ್ಯಾಪ್ ಮಾಡಿ ನಂತರ ಮ್ಯೂಟ್ ಆಯ್ಕೆಯನ್ನು ಆನ್ ಮಾಡಿ ಇದನ್ನು ಸಾಧಿಸಬಹುದು. ಅಥಾ ಮಾಸ್ಟರ್ ವಾಲ್ಯೂಮ್ ಕೀಗಳನ್ನು ಬಳಸಿಯೂ ಕೂಡ ಮಾಡಬಹುದು.

ಸೋನಿಯಲ್ಲಿ ಕ್ಯಾಮರಾ ಶಟರ್ ಸೌಂಡ್ ನ್ನು ಆಫ್ ಮಾಡುವುದು ಹೇಗೆ?

ಸೋನಿಯಲ್ಲಿ ಕ್ಯಾಮರಾ ಶಟರ್ ಸೌಂಡ್ ನ್ನು ಆಫ್ ಮಾಡುವುದು ಹೇಗೆ?

ಇತ್ತೀಚೆಗಿನ ಸೋನಿ ಡಿವೈಸ್ ಗಳು ಉದಾಹರಣೆಗೆ ಸೋನಿ ಎಕ್ಸ ಪೀರಿಯಾ ಎಕ್ಸ್ ಝಡ್2 ಗಳಲ್ಲಿ ಮಾಸ್ಟರ್ ವಾಲ್ಯೂಮ್ ಕೀ ಬಳಸಿ ಕ್ಯಾಮರಾ ಶಟರ್ ಸೌಂಡ್ ಆಫ್ ಮಾಡಬಹುದು. ಸೈಲೆಂಟ್, ವೈಬ್ರೇಟ್ ಅಥವಾ ಡು ನಾಟ್ ಡಿಸ್ಟರ್ಬ್ ಗೆ ಡಿವೈಸ್ ನ್ನು ಸೆಟ್ ಮಾಡಿ.

ಕೆಲವು ಹಳೆಯ ಸೋನಿ ಎಕ್ಸ್ ಪೀರಿಯಾ ಡಿವೈಸ್ ಗಳಲ್ಲಿ ಕ್ಯಾಮರಾ ಆಪ್ ಗೆ ತೆರಳಿ ಮೆನುವಿನ ಹ್ಯಾಮ್ ಬರ್ಗರ್ ಐಕಾನ್ ನ್ನು ಟ್ಯಾಪ್ ಮಾಡಿ ಮತ್ತು ಕಾಗ್ ವೀಲ್ ಗೆ ತೆರಳಿ ಸ್ಲೈಡರ್ ನಲ್ಲಿ ಸೌಂಡ್ ನ್ನು ಆಫ್ ಮಾಡಿದರೆ ಶಟರ್ ಸೌಂಡ್ ಡಿಸೇಬಲ್ ಆಗುತ್ತದೆ.

Best Mobiles in India

English summary
How to turn off the camera shutter sound on Android

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X