ಪವರ್ ಬ್ಯಾಂಕ್ ಬೇಕಾ..? ಬ್ಲಾಸ್ಟ್ ಆಗದಂತೆ ನೋಡಿಕೊಳ್ಳುವುದು ಹೇಗೆ..?

|

ಇಂದಿನ ದಿನದಲ್ಲಿ ಸ್ಮಾರ್ಟ್ ಫೋನ್ ಮಾರಾಟವು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು, ಬಳಕೆಯೂ ಹೆಚ್ಚಾಗುತ್ತಿದೆ. ಆದರೆ ಹೆಚ್ಚಿನ ಬ್ಯಾಟರಿ ಸಾಲುವುದಿಲ್ಲ ಎನ್ನುವ ಮಾತನ್ನು ಎಲ್ಲೇಡೆಯಿಂದ ಕೇಳಬಹುದಾಗಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಮಂದಿ ಪವರ್ ಬ್ಯಾಂಕ್ ಗಳಿಂದಲೇ ಸ್ಮಾರ್ಟ್ ಫೋನ್ ಗಳನ್ನು ಚಾರ್ಜ್ ಮಾಡುವ ಕ್ರಮಕ್ಕೆ ಆದ್ಯತೆಯನ್ನು ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪವರ್ ಬಳಕೆ ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಪವರ್ ಬ್ಯಾಂಕ್ ಬೇಕಾ..? ಬ್ಲಾಸ್ಟ್ ಆಗದಂತೆ ನೋಡಿಕೊಳ್ಳುವುದು ಹೇಗೆ..?

ಪವರ್ ಬ್ಯಾಂಕ್ ಬೇಡಿಕೆಯೂ ಹೆಚ್ಚಾಗುತ್ತಿದ್ದಂತೆ ಹಲವು ಮಾದರಿಯ ಪವರ್ ಬ್ಯಾಂಕ್ ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಆದರೆ ಇವುಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಗೆ ಯೋಗ್ಯವಾಗಿರುವುದಿಲ್ಲ ಮತ್ತು ನಿಮ್ಮ ಸ್ಮಾರ್ಟ್ ಫೋನಿಗೆ ಹಾನಿಯನ್ನು ಉಂಟುಮಾಡುತ್ತವೆ. ಈ ಹಿನ್ನಲೆಯಲ್ಲಿ ನಿಮಗೆ ಪವರ್ ಬ್ಯಾಂಕ್ ಬಳಕೆಯ ಕುರಿತು ಮಾಹಿತಿಯೂ ಇಲ್ಲಿದೆ.

ಪವರ್ ಬ್ಯಾಂಕ್ ಬಳಕೆ ಹೇಗೆ..?

ಪವರ್ ಬ್ಯಾಂಕ್ ಬಳಕೆ ಹೇಗೆ..?

ಎಲ್ಲಾ ಪವರ್ ಬ್ಯಾಂಕ್ ಗಳನ್ನು ಚಾರ್ಜ್ ಮಾಡಲು ಚಾರ್ಜ್ ಅನ್ನು ನೀಡಿರುವುದಿಲ್ಲ. ಈ ಹಿನ್ನಲೆಯಲ್ಲಿ ಅವುಗಳನ್ನು ಚಾರ್ಜ್ ಮಾಡಲು ಸರಿಯಾದ ಚಾರ್ಜರ್ ಮಾತ್ರ ಬಳಸಿ ಇಲ್ಲವಾದರೆ ನೀವು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಅಲ್ಲದೇ ನಿರ್ದಿಷ್ಟ ಸಮಯ ಮಾತ್ರ ಪವರ್ ಬ್ಯಾಂಕ್ ಚಾರ್ಜ್ ಮಾಡಿ, ತುಂಬ ಹೊತ್ತು ಚಾರ್ಜ್ ಮಾಡಿದರೆ ಸಮಸ್ಯೆಯಾಗಲಿದೆ.

ಜೇಬಿನಲ್ಲಿಟ್ಟು ಚಾರ್ಜ್ ಮಾಡಬೇಡಿ:

ಜೇಬಿನಲ್ಲಿಟ್ಟು ಚಾರ್ಜ್ ಮಾಡಬೇಡಿ:

ಇದಲ್ಲದೇ ಹೆಚ್ಚಿ ಮಂದಿ ತಮ್ಮ ಸ್ಮಾರ್ಟ್ ಫೋನ್ ಗಳನ್ನು ಚಾರ್ಜ್ ಮಾಡುವ ಸಂದರ್ಭದಲ್ಲಿ ಪ್ಯಾಂಟ್ ಜೇಬಿನಲ್ಲಿ ಇಲ್ಲವೇ ಶರ್ಟ್ ಜೇಬಿನಲ್ಲಿ ಇಟ್ಟು ಚಾರ್ಜ್ ಮಾಡುವುದು ಉತ್ತಮವಲ್ಲ. ಬೇರೆ ಹೊರ ಭಾಗದಲ್ಲಿ ಇಟ್ಟು ಚಾರ್ಜ್ ಮಾಡುವುದು ಉತ್ತಮ. ಅಲ್ಲದೇ ತೇವಾಂಶ ಇರುವ ಜಾಗದಲ್ಲಿ ಇಡಬೇಡಿ. ಅಲ್ಲದೇ ಹೆಚ್ಚಿನ ಶಾಖ ಇರುವ ಪ್ರದೇಶದಲ್ಲಿಯೂ ಇಡಬೇಡಿ.

ಪವರ್ ಬ್ಯಾಂಕ್ ಖರೀದಿಸುವುದು ಹೇಗೆ..?

ಪವರ್ ಬ್ಯಾಂಕ್ ಖರೀದಿಸುವುದು ಹೇಗೆ..?

ಪವರ್ ಬ್ಯಾಂಕ್ ಖರೀದಿಸುವ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ರೀಚಾರ್ಚ್ ಬ್ಯಾಟರಿಗಳ ಹೊಂದಿರುವ ಪವರ್ ಬ್ಯಾಂಕ್ ಅನ್ನು ಖರೀಸುವುದು ಅಗತ್ಯ. ಉತ್ತಮ ಗುಣಮಟ್ಟದ ಮತ್ತು ಬ್ರಾಂಡ್ ಕಂಪನಿಗಳು ಬಿಡುಗಡೆ ಮಾಡುವ ಪವರ್ ಬ್ಯಾಂಕ್ ಖರೀದಿಸುವುದು ಉತ್ತಮ. ಅಗ್ಗದ ಪವರ್ ಬ್ಯಾಂಕ್ ಗಳನ್ನು ಖರೀದಿಸುವುದು ಸುರಕ್ಷಿತವಲ್ಲ.

ಬೆಲೆ ಕಡಿಮೆ, ಬಾಳಿಕೆ ಕಡಿಮೆ:

ಬೆಲೆ ಕಡಿಮೆ, ಬಾಳಿಕೆ ಕಡಿಮೆ:

ಮಾರುಕಟ್ಟೆಯಲ್ಲಿ ಸಾಕಷ್ಟು ಪವರ್ ಬ್ಯಾಂಕ್ ಗಳು ಕಾಣಿಸಿಕೊಳ್ಳುತ್ತಿದೆ. ಬಳಕೆದಾರನ್ನು ಆಕರ್ಷಿಸುವಂತೆ ಕಡಿಮೆ ಬೆಲೆಗೆ ಪವರ್ ಬ್ಯಾಂಕ್ ಮಾರಾಟ ಮಾಡಲಾಗುತ್ತಿದೆ. ಆದರೆ ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡ ಸಂದರ್ಭದಲ್ಲಿ ಹಿಟ್ ಆಗಿ ಸ್ಫೋಟಗೊಳ್ಳುವ ಸಾಧ್ಯತೆಯೂ ಇರುತ್ತವೆ. ಹೀಗಾಗಿ ಬೆಲೆ ಕಡಿಮೆ ದೊರೆಯುವುದನ್ನು ಖರೀದಿಸುವುದು ಉತ್ತಮವಲ್ಲ.

Best Mobiles in India

English summary
how to use power bank. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X